Jio Airfiber Plans: ಬೆಂಗಳೂರು ಸೇರಿ 8 ನಗರಗಳಲ್ಲಿ ಜಿಯೋ ಏರ್​ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್​ಗಳ ಬೆಲೆ

ವೈರ್ಲೆಸ್ ಬ್ರಾಡ್​ಬ್ಯಾಂಡ್ ಇಂಟರ್ನೆಟ್ ಒದಗಿಸುವ ಜಿಯೋ ಏರ್​ಫೈಬರ್ ಸೇವೆಯನ್ನು ಆರಂಭಿಸಲಾಗಿದೆ. ಸದ್ಯಕ್ಕೆ ಬೆಂಗಳೂರು, ಹೈದರಾಬಾದ್, ಮುಂಬೈ, ದೆಹಲಿ ಸೇರಿದಂತೆ ಎಂಟು ನಗರಗಳಲ್ಲಿ ಈ ಸೇವೆ ಲಭ್ಯ ಇದೆ. ವಯರ್ ಕನೆಕ್ಟಿವಿಟಿ ಇಲ್ಲದೇ ಗಾಳಿ ತರಂಗಗಳ ಮೂಲಕ ಇಂಟರ್ನೆಟ್ ಸರ್ವಿಸ್ ಒದಗಿಸುತ್ತದೆ ಜಿಯೋ ಏರ್​ಫೈಬರ್. 599 ರೂನಿಂದ ಆರಂಭವಾಗಿ 3,999 ರೂನವರೆಗೂ ವಿವಿಧ ಪ್ಲಾನ್​ಗಳನ್ನು ಜಿಯೋ ಆಫರ್ ಮಾಡಿದೆ.

Jio Airfiber Plans: ಬೆಂಗಳೂರು ಸೇರಿ 8 ನಗರಗಳಲ್ಲಿ ಜಿಯೋ ಏರ್​ಫೈಬರ್ ಚಾಲನೆ; ಇಲ್ಲಿದೆ ಅದರ ವಿವಿಧ ಪ್ಲಾನ್​ಗಳ ಬೆಲೆ
ಜಿಯೋ ಏರ್​ಫೈಬರ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 19, 2023 | 5:48 PM

ನವದೆಹಲಿ, ಸೆಪ್ಟೆಂಬರ್ 19: ಈ ಹಿಂದೆ ಘೋಷಿಸಲಾದಂತೆ ರಿಲಾಯನ್ಸ್ ಜಿಯೋ (Reliance Jio) ಸಂಸ್ಥೆ ಗಣೇಶ ಚತುರ್ಥಿ ದಿನದಂದು ಜಿಯೋ ಏರ್​ಫೈಬರ್ (Jio AirFiber) ಸೇವೆಯನ್ನು ಅನಾವರಣಗೊಳಿಸಿದೆ. ಸದ್ಯ ಬೆಂಗಳೂರು ಸೇರಿದಂತೆ ಎಂಟು ನಗರಗಳಲ್ಲಿ ಜಿಯೋ ತನ್ನ ಏರ್​ಫೈಬರ್ ಸೇವೆ ಆರಂಭಿಸಿದೆ. ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೋಲ್ಕತಾ, ಮುಂಬೈ ಮತ್ತು ಪುಣೆಗಳಲ್ಲಿ ಸದ್ಯಕ್ಕೆ ಜಿಯೋ ಏರ್​ಫೈಬರ್ ಲಭ್ಯ ಇದೆ. ತಿಂಗಳಿಗೆ 599 ರೂನಿಂದ ಪ್ರಾರಂಭವಾಗಿ 3,999 ರೂವರೆಗೂ ವಿವಿಧ ಪ್ಲಾನ್​ಗಳನ್ನು ಜಿಯೋ ಏರ್​ಫೈಬರ್​ನಲ್ಲಿ ಆಫರ್ ಮಾಡಲಾಗಿದೆ. ಜಿಯೋಫೈಬರ್​ನಲ್ಲಿ ಲಭ್ಯ ಇರುವ ಬಹುತೇಕ ಫೀಚರ್​ಗಳು ಏರ್​ಫೈಬರ್​ನಲ್ಲೂ ಸಿಗುತ್ತವೆ. ಒಂದು ಜಿಬಿವರೆಗೂ ಭರಪೂರ ಇಂಟರ್ನೆಟ್ ವೇಗ ಸಿಗುತ್ತದೆ.

ಏನಿದು ಏರ್​ಫೈಬರ್?

ಇದು ವೈರ್ಲೆಸ್ ಬ್ರಾಡ್​ಬ್ಯಾಂಡ್ ಇಂಟರ್ನೆಟ್ ಸೇವೆ. ಗಾಳಿ ಮೂಲಕ ಇಂಟರ್ನೆಟ್ ಕನೆಕ್ಟಿವಿಟಿ ಪಡೆಯಬಹುದು. ಫೈಬರ್ ಬ್ರಾಡ್​ಬ್ಯಾಂಡ್​ನನಷ್ಟೇ ವೇಗದ ಇಂಟರ್ನೆಟ್ ಅನ್ನು ಏರ್​ಫೈಬರ್​ನಲ್ಲೂ ಪಡೆಯಬಹುದು.​ 1 ಜಿಬಿಯವರೆಗಿನ ಇಂಟರ್ನೆಟ್ ವೇಗ ಇರುತ್ತದೆ.

ಫೈಬರ್ ಬ್ರಾಡ್​ಬ್ಯಾಂಡ್ ಕೇಬಲ್ ಅನ್ನು ಎಳೆಸಲು ಕಷ್ಟವಾಗುವುದಿದ್ದರೆ ಏರ್​ಫೈಬರ್ ಪರ್ಯಾಯ ಆಯ್ಕೆಯಾಗಿರುತ್ತದೆ.

ಇದನ್ನೂ ಓದಿ: ವಾಟ್ಸಾಪ್ ಚಾನಲ್ಸ್ ಪ್ರವೇಶಿಸಿದ ಪ್ರಧಾನಿ ನರೇಂದ್ರ ಮೋದಿ; ಇಲ್ಲಿದೆ ಅವರ ಚಾನಲ್ ಲಿಂಕ್; ಏನಿದು ಹೊಸ ವಾಟ್ಸಾಪ್ ಫೀಚರ್?

ಜಿಯೋ ಏರ್​ಫೈಬರ್ ಪ್ಲಾನ್​ಗಳ ಬೆಲೆ ಎಷ್ಟು?

ಜಿಯೋ ಏರ್​ಫೈಬರ್​ನಲ್ಲಿ ಉತ್ತಮ ಇಂಟರ್ನೆಟ್ ಸ್ಪೀಡ್ ಜೊತೆಗೆ 550ಕ್ಕೂ ಹೆಚ್ಚು ಡಿಜಿಟಲ್ ಚಾನಲ್ಸ್, 14ಕ್ಕೂ ಹೆಚ್ಚು ಒಟಿಟಿ ಆ್ಯಪ್​ಗಳು ಸಿಗುತ್ತವೆ. ಇದರ ಪ್ಲಾನ್​ಗಳು 599 ರೂನಿಂದ ಆರಂಭವಾಗುತ್ತದೆ. ಇದಕ್ಕೆ 30 ಎಂಬಿಪಿಎಸ್ ಸ್ಪೀಡ್​ನ ಇಂಟರ್ನೆಟ್ ಕನೆಕ್ಷನ್ ಸಿಗುತ್ತದೆ. 3,000 ರೂ ಪ್ಲಾನ್​ನಲ್ಲಿ 1 ಜಿಬಿಪಿಎಸ್ ಸ್ಪೀಡ್ ಸಿಗುತ್ತದೆ.

  • 599 ರೂ ಪ್ಲಾನ್: 30 ಎಂಬಿಪಿಎಸ್ ಇಂಟರ್ನೆಟ್
  • 899 ರೂ ಪ್ಲಾನ್: 100 ಎಂಬಿಪಿಎಸ್ ಇಂಟರ್ನೆಟ್
  • 1,199 ರೂ ಪ್ಲಾನ್: 100 ಎಂಬಿಪಿಎಸ್ ಇಂಟರ್ನೆಟ್
  • 1,499 ರೂ ಪ್ಲಾನ್: 300 ಎಂಬಿಪಿಎಸ್ ಸ್ಪೀಡ್
  • 2,499 ರೂ ಪ್ಲಾನ್: 300 ಎಂಬಿಪಿಎಸ್ ಸ್ಪೀಡ್
  • 3,999 ರೂ ಪ್ಲಾನ್: 1,000 ಎಂಬಿಪಿಎಸ್ ಸ್ಪೀಡ್

ಇದನ್ನೂ ಓದಿ: ಹಣ್ಣಿನ ಜ್ಯೂಸ್​ನಲ್ಲಿ ಹಣ್ಣಿಲ್ಲ; ಇದು ಗ್ರಾಹಕರಿಗೆ ಮಾಡುವ ವಂಚನೆ; ಅಮೆರಿಕದಲ್ಲಿ ಸ್ಟಾರ್​ಬಕ್ಸ್ ವಿರುದ್ಧ ಕೇಸ್

ಇನ್ನೊಂದೆಡೆ, ಜಿಯೋ ಫೈಬರ್ ಪ್ಲಾನ್​ಗಳು 399 ರೂನಿಂದ ಆರಂಭವಾಗಿ 3,999 ರೂವರೆಗೂ ಇವೆ. ಜಿಯೋ ಏರ್​ಫೈಬರ್ ಕನೆಕ್ಷನ್ ಪಡೆಯಬೇಕೆನ್ನುವವರು 60008-60008 ನಂಬರ್​ಗೆ ವಾಟ್ಸಾಪ್ ಮೂಲಕ ಮಿಸ್ಡ್ ಕಾಲ್ ಕೊಡಬಹುದು. ಜಿಯೋ ವೆಬ್​ಸೈಟ್ ಅಥವಾ ಜಿಯೋ ಸ್ಟೋರ್​ಗೆ ಹೋಗಿಯೂ ಈ ಸೇವೆ ಪಡೆಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ