Richest: ಇಲಾನ್ ಮಸ್ಕ್​ರನ್ನು ಮೀರಿಸಿದ ಬರ್ನಾರ್ಡ್ ಆರ್ನಾಲ್ಟ್; ಕುತೂಹಲ ಮೂಡಿಸಿದ ಶ್ರೀಮಂತಿಕೆ ರೇಸ್

|

Updated on: Jan 28, 2024 | 2:49 PM

Bernard Arnault vs Elon Musk: ಫ್ರೆಂಚ್ ಉದ್ಯಮಿ ಹಾಗೂ ಎಲ್​ಎಚ್​ಎಂವಿ ಸಿಇಒ ಬರ್ನಾರ್ಡ್ ಆರ್ನಾಲ್ಟ್ ವಿಶ್ವದ ಅತಿ ಶ್ರೀಮಂತನೆಂಬ ಸ್ಥಾನವನ್ನು ಮತ್ತೆ ಏರಿದ್ದಾರೆ. ಕಳೆದ ವಾರ ಇಲಾನ್ ಮಸ್ಕ್ ಅವರ ಆಸ್ತಿಮೌಲ್ಯ ಕರಗಿದರೆ, ಆರ್ನಾಲ್ಟ್ ಆಸ್ತಿಮೌಲ್ಯ ಹೆಚ್ಚಾಗಿದೆ. ಕಳೆದ 14 ತಿಂಗಳಲ್ಲಿ ಎರಡನೇ ಬಾರಿ ಇಲಾನ್ ಮಸ್ಕ್ ಅವರನ್ನು ಶ್ರೀಮಂತಿಕೆಯಲ್ಲಿ ಆರ್ನಾಲ್ಟ್ ಹಿಂದಿಕ್ಕಿದ್ದಾರೆ.

Richest: ಇಲಾನ್ ಮಸ್ಕ್​ರನ್ನು ಮೀರಿಸಿದ ಬರ್ನಾರ್ಡ್ ಆರ್ನಾಲ್ಟ್; ಕುತೂಹಲ ಮೂಡಿಸಿದ ಶ್ರೀಮಂತಿಕೆ ರೇಸ್
ಆರ್ನಾಲ್ಟ್ ಬೆರ್ನಾರ್ಡ್
Follow us on

ಇಲಾನ್ ಮಸ್ಕ್ ಬಹಳ ಕಾಲದಿಂದ ವಿಶ್ವದ ಅತೀ ಶ್ರೀಮಂತ ಎಂಬ ದಾಖಲೆಗೆ ಬಾಜನರಾಗುತ್ತಾ ಬಂದಿದ್ದರು. ಇದೀಗ ಅವರ ಸ್ಥಾನವನ್ನು ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ (Bernard Arnault) ತುಂಬಿದ್ದಾರೆ. ಫೋರ್ಬ್ಸ್​ನ ಪಟ್ಟಿ (Forbe’s Richest Persons List) ಪ್ರಕಾರ ಇಲಾನ್ ಮಸ್ಕ್ ಈಗ ವಿಶ್ವದ ನಂಬರ್ ಒನ್ ಶ್ರೀಮಂತರಾಗಿ ಉಳಿದಿಲ್ಲ. ಅವರೀಗ ಎರಡನೇ ಸ್ಥಾನಕ್ಕೆ ಇಳಿದಿದ್ದಾರೆ. ಮೊದಲ ಸ್ಥಾನವನ್ನು ಆರ್ನಾಲ್ಟ್ ಅಲಂಕರಿಸಿದ್ದಾರೆ. ಒಂದೆಡೆ ಇಲಾನ್ ಮಸ್ಕ್ (Elon Musk) ಅವರ ಷೇರುಸಂಪತ್ತು ಗಣನೀಯವಾಗಿ ಇಳಿದಿದೆ. ಇನ್ನೊಂದೆಡೆ ಬರ್ನಾರ್ಡ್ ಆರ್ನಾಲ್ಟ್ ಅವರ ಷೇರುಸಂಪತ್ತು ಅಷ್ಟೇ ಹೆಚ್ಚಾಗಿದೆ.

ಫೋರ್ಬ್ಸ್ ಪಟ್ಟಿ ಪ್ರಕಾರ ಬರ್ನಾರ್ಡ್ ಆರ್ನಾಲ್ಟ್ ಮತ್ತವರ ಕುಟುಂಬದವರ ಒಟ್ಟು ಆಸ್ತಿ 207.8 ಬಿಲಿಯನ್ ಡಾಲರ್​ನಷ್ಟಿದೆ. ಇಲಾನ್ ಮಸ್ಕ್ ಅವರ ಆಸ್ತಿಮೌಲ್ಯ 204.5 ಬಿಲಿಯನ್ ಡಾಲರ್ ಇದೆ.

ಬರ್ನಾರ್ಡ್ ಆರ್ನಾಲ್ಟ್ ಮತ್ತು ಇಲಾನ್ ಮಸ್ಕ್ ನಡುವಿನ ಶ್ರೀಮಂತಿಕೆ ರೇಸ್ ಬಹಳ ಕುತೂಹಲ ಮೂಡಿಸುವಂಥದ್ದು. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಸಂದರ್ಭದಲ್ಲಿ ಮಸ್ಕ್ ಅವರೇ ನಂಬರ್ ಒನ್ ಸ್ಥಾನ ಕಾಯ್ದುಕೊಂಡಿದ್ದಾರೆ. ಆದರೆ, ಆರ್ನಾಲ್ಟ್ ಕೆಲ ಬಾರಿ ಮುಂದೋಡಿರುವುದುಂಟು. 2022ರ ಡಿಸೆಂಬರ್​ನಲ್ಲಿ ಮತ್ತು 2023ರ ಜೂನ್ ತಿಂಗಳಲ್ಲಿ ಬರ್ನಾರ್ಡ್ ಆರ್ನಾಲ್ಟ್ ನಂಬರ್ ಒನ್ ಸ್ಥಾನಕ್ಕೆ ಹೋಗಿದ್ದರು.

ಇದನ್ನೂ ಓದಿ: Rana Talwar Passes Away: ರಾಣಾ ತಲ್ವಾರ್ ನಿಧನ; ಜಾಗತಿಕ ಬ್ಯಾಂಕೊಂದರ ಮುಖ್ಯಸ್ಥರಾದ ಮೊದಲ ಭಾರತೀಯ ಇವರು

ಫ್ರಾನ್ಸ್ ದೇಶದ ಉದ್ಯಮಿಯಾದ ಬರ್ನಾರ್ಡ್ ಆರ್ನಾಲ್ಟ್ ಅವರು ಎಲ್​ಎಂವಿಎಚ್ ಎಂಬ ಲಕ್ಷುರಿ ವಸ್ತುಗಳ ಕಂಪನಿಯ ಸಿಇಒ ಆಗಿದ್ದಾರೆ. ಬಹಳ ದುಬಾರಿ ಹಾಗೂ ಉಚ್ಚ ಗುಣಮಟ್ಟದ ಲೂಯಿಸ್ ವ್ಯೂಟನ್ ಸೇರಿದಂತೆ ವಿವಿಧ ಬ್ರ್ಯಾಂಡ್​ಗಳ ಅಡಿಯಲ್ಲಿ ಹಲವು ಐಷಾರಾಮಿ ವಸ್ತುಗಳನ್ನು ಇವರ ಕಂಪನಿ ತಯಾರಿಸಿ ಮಾರುತ್ತದೆ.

ಆರ್ನಾಲ್ಟ್ ಬೆರ್ನಾರ್ಡ್ ಅವರ ಎಲ್​ವಿಎಂಎಚ್ ಸಂಸ್ಥೆಗೆ ಸೇರಿದ ಚೆವಲ್ ಬ್ಲ್ಯಾಂಕ್ ಎಂಬ ಲಕ್ಷುರಿ ಹೋಟೆಲ್​ನಲ್ಲಿ ಇಲಾನ್ ಮಸ್ಕ್ ಅವರಿಗೆ ಇತ್ತೀಚೆಗೆ ಆತಿಥ್ಯ ವಹಿಸಲಾಗಿತ್ತು. ವಿಶ್ವದ ಇಬ್ಬರು ಅತಿ ಶ್ರೀಮಂತರ ಭೋಜನ ಭೇಟಿ ಅದು. ಪ್ಯಾರಿಸ್​ನಲ್ಲಿರುವ ಈ ಹೋಟೆಲ್​ಗೆ ಇಲಾನ್ ಮಸ್ಕ್ ತಮ್ಮ ತಾಯಿ ಜೊತೆ ಹೋಗಿದ್ದರು. ಬೆರ್ನಾರ್ಡ್ ಆರ್ನಾಲ್ಟ್ ತಮ್ಮ ಇಬ್ಬರು ಮಕ್ಕಳನ್ನು ಕರೆದೊಯ್ದಿದ್ದರು.

74 ವರ್ಷದ ಆರ್ನಾಲ್ಟ್ ತಮಗಿಂತ 23 ವರ್ಷ ಕಿರಿಯರಾದ ಇಲಾನ್ ಮಸ್ಕ್ ಅವರನ್ನು ವಿಶೇಷ ಬಿಸಿನೆಸ್ ಮ್ಯಾನ್ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: Forex: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ ಮತ್ತಷ್ಟು ಇಳಿಕೆ; 616.14 ಬಿಲಿಯನ್ ಡಾಲರ್ ತಲುಪಿದ ಫಾರೆಕ್ಸ್ ರಿಸರ್ವ್ಸ್

ಫೋರ್ಬ್ಸ್ ಪಟ್ಟಿ ಪ್ರಕಾರ ಮುಕೇಶ್ ಅಂಬಾನಿ 11ನೇ ಸ್ಥಾನದಲ್ಲಿದ್ದರೆ ಗೌತಮ್ ಅದಾನಿ 16ನೇ ಸ್ಥಾನದಲ್ಲಿದ್ದಾರೆ. ಕಳೆದ ವಾರ ರಿಲಾಯನ್ಸ್ ಸೇರಿದಂತೆ ಪ್ರಮುಖ ಕಂಪನಿಗಳ ಷೇರುಮೌಲ್ಯ ಕಡಿಮೆ ಆಗಿದ್ದರಿಂದ ಅಂಬಾನಿ ಮತ್ತು ಅದಾನಿ ಷೇರುಸಂಪತ್ತು ತುಸು ತಗ್ಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ