Savings: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನ ಲಾಭ ತಿಳಿಯಿರಿ

Mahila Samman Saving Certificate: ಕಳೆದ ಬಾರಿಯ ಬಜೆಟ್​ನಲ್ಲಿ ಆರಂಭಿಸಿದ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಒಂದು ಉತ್ತಮ ಠೇವಣಿ ಯೋಜನೆ. 2 ವರ್ಷದ ಠೇವಣಿಯಲ್ಲಿ ವರ್ಷಕ್ಕೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಎಲ್ಲಾ ವಯಸ್ಸಿನ ಹೆಣ್ಮಕ್ಕಳು ಈ ಸ್ಕೀಮ್ ಪಡೆಯಬಹುದು.

Savings: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನ ಲಾಭ ತಿಳಿಯಿರಿ
ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 28, 2024 | 6:47 PM

ಸರ್ಕಾರ ಹೆಣ್ಮಕ್ಕಳಿಗೆ ಹಲವು ಸ್ಕೀಮ್​ಗಳನ್ನು ಆರಂಭಿಸಿದೆ. ಅದರಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ (Mahila Samman Saving Certificate) ಅಥವಾ ಮಹಿಳೆಯರ ಉಳಿತಾಯ ಪ್ರಮಾಣಪತ್ರವೂ ಒಂದು. ಕಳೆದ ಬಾರಿಯ ಬಜೆಟ್​ನಲ್ಲಿ (union budget 2023) ಇದನ್ನು ಘೋಷಿಸಲಾಗಿತ್ತು. ಯಾವುದೇ ವಯಸ್ಸಿನ ಮಹಿಳೆಯರು ಈ ಸ್ಕೀಮ್ ಅಡಿಯಲ್ಲಿ ಖಾತೆ ತೆರೆಯಬಹುದು. ಎರಡು ವರ್ಷ ಕಾಲ ಈ ಸ್ಕೀಮ್ ಲಭ್ಯ ಇರುತ್ತದೆ. ಅಂದರೆ ಈ ಯೋಜನೆಯಲ್ಲಿ ಖಾತೆ ತೆರೆಯಬಯಸುವವರಿಗೆ 2025ರ ಮಾರ್ಚ್ 31ರವರೆಗೂ ಮಾತ್ರವೇ ಕಾಲಾವಕಾಶ ಇದೆ.

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಬಡ್ಡಿದರ, ಅವಧಿ ಇತ್ಯಾದಿ ವಿವರ

ಯಾವುದೇ ವಯಸ್ಸಿನ ಹೆಣ್ಮಕ್ಕಳು ಈ ಸ್ಕೀಮ್ ಅಡಿಯಲ್ಲಿ ಖಾತೆ ತೆರೆಯಬಹುದು. ಅಪ್ರಾಪ್ತ ಬಾಲಕಿಯಾಗಿದ್ದರೆ ಆಕೆಯ ಹೆಸರಿನಲ್ಲಿ ಕುಟುಂಬದ ಹಿರಿಯ ಸದಸ್ಯರು ಉಳಿತಾಯಪತ್ರ ತೆರೆಯಬಹುದು.

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಎಂಬುದು ವಿಶೇಷ ಎಫ್​ಡಿ ಯೋಜನೆ. ಎರಡು ವರ್ಷದ ಅವಧಿಯ ಠೇವಣಿ. ಇದಕ್ಕೆ ಶೇ. 7.5ರಷ್ಟು ಬಡ್ಡಿ ಸಿಗುತ್ತದೆ. ಇವತ್ತು ಉಳಿತಾಯಪತ್ರ ಪಡೆದರೆ ಸರಿಯಾಗಿ ಮುಂದಿನ ಎರಡು ವರ್ಷಕ್ಕೆ ಮೆಚ್ಯೂರ್ ಆಗುತ್ತದೆ.

ಇದನ್ನೂ ಓದಿ: Crore in 5 Years: ಸ್ಟೆಪಪ್ ಮ್ಯಾಜಿಕ್ ತಿಳಿಯಿರಿ; ಕೇವಲ 5 ವರ್ಷದಲ್ಲಿ 1 ಕೋಟಿ ಗಳಿಸಲು ಎಷ್ಟು ಹೂಡಿಕೆ ಬೇಕು?

ಒಂದು ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್​ಗೆ ಕನಿಷ್ಠ ಹೂಡಿಕೆ 1,000 ರೂ ಆಗಿದೆ. ಗರಿಷ್ಠ 2 ಲಕ್ಷ ರೂ ಇದೆ. ಒಬ್ಬ ಮಹಿಳೆ ಒಂದಕ್ಕಿಂತ ಹೆಚ್ಚು ಉಳಿತಾಯಪತ್ರಗಳನ್ನು ಪಡೆಯಬಹುದು. ಆದರೆ, ಅವುಗಳೆಲ್ಲವುಗಳಿಂದ ಒಟ್ಟು ಗರಿಷ್ಠ ಹೂಡಿಕೆ 2 ಲಕ್ಷ ರೂ ಮೀರಬಾರದು. ಎರಡು ಲಕ್ಷ ರೂನ ಉಳಿತಾಯಪತ್ರ ಪಡೆದರೆ ಎರಡು ವರ್ಷದ ಬಳಿಕ 2.15 ಲಕ್ಷ ರೂಗಿಂತ ತುಸು ಹೆಚ್ಚು ಹಣ ರಿಟರ್ನ್ ಸಿಗುತ್ತದೆ.

ತೆರಿಗೆ ಲಾಭ ಇರುತ್ತದೆ

ಮಾಮೂಲಿಯ ಫಿಕ್ಸೆಡೆ ಡೆಪಾಸಿಟ್ ಪ್ಲಾನ್​ಗಳಲ್ಲಿ ಬಡ್ಡಿ ಹಣಕ್ಕೆ ಟಿಡಿಎಸ್ ಕಡಿತ ಇರುತ್ತದೆ. ಹಾಗೆಯೇ, ಪೋಸ್ಟ್ ಆಫೀಸ್ ಉಳಿತಾಯ ಯೋಜನೆಯಲ್ಲಿ ಒಂದು ವರ್ಷದಲ್ಲಿ 40,000 ರೂಗಿಂತ ಹೆಚ್ಚು ಬಡ್ಡಿ ಆದಾಯ ಇದ್ದರೆ ಇನ್ಕಮ್ ಟ್ಯಾಕ್ಸ್ ಕಾಯ್ದೆಯ ಸೆಕ್ಷನ್ 194ಎ ಅಡಿಯಲ್ಲಿ ಟಿಡಿಎಸ್ ಕಡಿತ ಆಗುತ್ತದೆ. ಆದರೆ, ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್​ನಲ್ಲಿ ಗರಿಷ್ಠ ಹೂಡಿಕೆ 2 ಲಕ್ಷ ರೂ ಇರುವುದರಿಂದ ಬಡ್ಡಿ ಆದಾಯ 40,000 ರೂಗಿಂತ ಕಡಿಮೆ ಇರುತ್ತದೆ. ಹೀಗಾಗಿ ಟಿಡಿಎಸ್ ಕಡಿತದ ಸಾಧ್ಯತೆಯೇ ಇರುವುದಿಲ್ಲ.

ಇದನ್ನೂ ಓದಿ: LIC New Policy: ಎಲ್​ಐಸಿ ಜೀವನ್ ಧಾರಾ-2 ಪಾಲಿಸಿ ಇಂದು ಬಿಡುಗಡೆ; ಇದರ ಅನುಕೂಲಗಳೇನು, ವಿವರ ತಿಳಿಯಿರಿ

ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫೀಕೇಟ್ ಪಡೆಯುವುದು ಹೇಗೆ?

ಅಂಚೆ ಕಚೇರಿ ಹಾಗೂ ಕೆಲ ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಪಡೆಯಬಹುದು. ಪೋಸ್ಟ್ ಆಫೀಸ್​ನ ಯಾವುದೇ ಕಚೇರಿಗೆ ಹೋಗಿ ಅಲ್ಲಿ ಸಂಬಂಧಿಸಿದ ಅರ್ಜಿ ಭರ್ತಿ ಮಾಡಿ ಆಧಾರ್, ಪ್ಯಾನ್ ಇತ್ಯಾದಿ ಕೆವೈಸಿ ದಾಖಲೆಗಳನ್ನು ಒದಗಿಸಿ ಸರ್ಟಿಫಿಕೇಟ್ ಪಡೆಯಬಹುದು.

ಎಲ್ಲಾ ಬ್ಯಾಂಕುಗಳಲ್ಲೂ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ ಸಿಗುವುದಿಲ್ಲ. ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮಹಿಳಾ ಸಮ್ಮಾನ್ ಉಳಿತಾಯಪತ್ರ ಪಡೆಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್