
ನವದೆಹಲಿ, ಆಗಸ್ಟ್ 8: ಭಾರತದ ಎಐ ಕಂಪನಿಯೊಂದು (Artificial Intelligence) ಎಲ್ಲರೂ ಒಮ್ಮೆ ತಿರುಗಿ ನೋಡುವಂತೆ ಇಂಟರ್ನ್ಶಿಪ್ ಆಫರ್ ಮಾಡಿದೆ. ಎರಡು ಇಂಟರ್ನ್ಶಿಪ್ ಕೆಲಸಗಳ ಅವಕಾಶ ಇದೆ. ತಿಂಗಳಿಗೆ 1 ಲಕ್ಷ ರೂನಿಂದ 2 ಲಕ್ಷ ರೂವರೆಗೆ ಸ್ಟೈಪೆಂಡ್ ನೀಡಲಾಗುತ್ತಿದೆ. ಪೂಚ್ ಎಐ (Puch AI) ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ಆಗಿರುವ ಸಿದ್ಧಾರ್ಥ್ ಭಾಟಿಯಾ (Siddharth Bhatia) ತಮ್ಮ ಎಕ್ಸ್ ಅಕೌಂಟ್ನಲ್ಲಿ ಮೊನ್ನೆ ಪೋಸ್ಟ್ ಹಾಕಿದ್ದಾರೆ. ಡಿಗ್ರಿ ಮಾಡದೇ ಇದ್ದವರೂ ಈ ಕೆಲಸಕ್ಕೆ ಪ್ರಯತ್ನಿಸಬಹುದಂತೆ.
ಇದನ್ನೂ ಓದಿ: ಪಿಎಂ ಕಿಸಾನ್ ಸಂಪದ ಯೋಜನೆ: ಸರ್ಕಾರದಿಂದ ಹೆಚ್ಚುವರಿ 1,920 ಕೋಟಿ ರೂ ಪುಷ್ಟಿ
ಈ ಮೇಲಿನ ಮಾಹಿತಿ ನೋಡಿದ ಎಂಥವರಿಗೂ ಆಕರ್ಷಕ ಎನಿಸುತ್ತದೆ. ಸಿಇಒ ಸಿದ್ಧಾರ್ಥ್ ಭಾಟಿಯಾ ನಿಜಕ್ಕೂ ಇಂಥದ್ದೊಂದು ಆಫರ್ ಮಾಡಿದ್ದಾರೆ. ಆದರೆ, ಕೆಲಸ ಏನು, ಎತ್ತ ಎನ್ನುವ ವಿವರ ನೀಡಿಲ್ಲ. ಕಳೆದ ತಿಂಗಳು ಒಬ್ಬ ಹೈಸ್ಕೂಲರ್ (8ರಿಂದ 12ನೇ ತರಗತಿ) ವ್ಯಕ್ತಿಯೊಬ್ಬರನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದಾಗಿ ಹೇಳಿದ್ದಾರೆ. ಹೀಗಾಗಿ, ಇವರು ಕೆಲಸ ಕಲಿಯುವ ಧೋರಣೆ ಮತ್ತು ಗ್ರಹಿಕಾ ಸಾಮರ್ಥ್ಯ ಉತ್ತಮವಾಗಿರುವ ವ್ಯಕ್ತಿಯನ್ನು ಇಂಟರ್ನ್ಶಿಪ್ಗೆ ಸೇರಿಸಿಕೊಳ್ಳಲು ನೋಡುತ್ತಿರಬಹುದು.
ಪೂಚ್ ಎಐ ಅನ್ನು ಯಾಕೆ ಸೇರಲು ಬಯಸುತ್ತೀರಿ ಎಂಬಿತ್ಯಾದಿ ವಿವರವನ್ನು ಸಿದ್ಧಾರ್ಥ್ ಭಾಟಿಯಾ ಅವರ ಪೋಸ್ಟ್ಗೆ ಕಾಮೆಂಟ್ ಮೂಲಕ ತಿಳಿಸಬೇಕೆಂದು ಕೋರಲಾಗಿದೆ.
ಹಾಗೆಯೇ, ಪೂಚ್ ಎಐನಲ್ಲಿ ಹ್ಯಾಕಥಾನ್ ನಡೆಸಲಾಗುತ್ತಿದ್ದು, ಅದರಲ್ಲಿ ಟಾಪ್10ನಲ್ಲಿ ಸ್ಥಾನ ಪಡೆದವರಿಗೆ ಸಿಇಒ ಹಾಗೂ ಸಂಸ್ಥಾಪಕರೊಂದಿಗೆ ಸಂದರ್ಶನ ಇರುತ್ತದೆ. ಅಲ್ಲಿ ಇಂಟರ್ನ್ಶಿಪ್ಗೆ ಆಯ್ಕೆಯಾಗುವ ಅವಕಾಶ ಇರುತ್ತದೆ.
ಈ ಇಂಟರ್ನ್ಶಿಪ್ಗೆ ಅರ್ಹತೆ ಇದ್ದವರು ನಿಮಗೆ ತಿಳಿದಿದ್ದರೆ ಅವರನ್ನು ಎಕ್ಸ್ನಲ್ಲಿ ಟ್ಯಾಗ್ ಮಾಡಬಹುದು. ಟ್ಯಾಗ್ ಆದವರು ಒಂದು ವೇಳೆ ಇಂಟರ್ನ್ಶಿಪ್ಗೆ ಆಯ್ಕೆಯಾಗಿದ್ದೇ ಆದಲ್ಲಿ, ಟ್ಯಾಗ್ ಮಾಡಿವರಿಗೆ, ಅಥವಾ ರೆಫರ್ ಮಾಡಿದವರಿಗೆ ಐಫೋನ್ ಬಹುಮಾನ ನೀಡುವುದಾಗಿ ಸಿದ್ಧಾರ್ಥ್ ತಿಳಿಸಿದ್ದಾರೆ.
ಸಿದ್ಧಾರ್ಥ್ ಭಾಟಿಯಾ ಅವರ ಪೋಸ್ಟ್
🚨 We’re Hiring! 🚨
Join @puch_ai to build AI for a Billion+ people.
💰 Stipend: ₹1L–2L/month
🗓️ Start: Whenever you’re ready
📍 Remote
🚀 PPOs for top performers
🎓 No degree needed. We hired a high schooler last month.Open Roles:
1. AI Engineering Intern (Full-time)
2.…— Siddharth Bhatia (@siddharthb_) August 6, 2025
ಪೂಚ್ ಎಐ ಸಿಇಒ ಹಾಕಿರುವ ಈ ಪೋಸ್ಟ್ಗೆ ಭರ್ಜರಿ ಸ್ಪಂದನೆ ಬಂದಿದೆ. ಹೆಚ್ಚಿನವರು ಇಂಟರ್ನ್ಶಿಪ್ಗೆ ಪ್ರಯತ್ನಿಸುತ್ತಿರುವವರೇ ಆಗಿದ್ದಾರೆ. ಎಲ್ಲಾ ಪೋಸ್ಟ್ಗೂ ಭಾಟಿಯಾ ಸಂಯಮದಿಂದ ಉತ್ತರಿಸುತ್ತಿದ್ದಾರೆ. ಪ್ರಶ್ನೆಗಳಿಗೆ ಸಮಾಧಾನ ನೀಡುತ್ತಿದ್ದಾರೆ, ಮರು ಪ್ರಶ್ನೆಗಳನ್ನೂ ಹಾಕುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 10:59 am, Fri, 8 August 25