Perplexity AI: ಏರ್ಟೆಲ್ ಬಳಕೆದಾರರಿಗೆ 17,000 ರೂ ಮೌಲ್ಯದ ಪರ್ಪ್ಲೆಕ್ಸಿಟಿ ಪ್ರೋ ಸಬ್ಸ್ಕ್ರಿಪ್ಷನ್ ಉಚಿತ ಲಭ್ಯ
Bharti Airtel collaboration with Perplexity AI: ಏರ್ಟೆಲ್ ಗ್ರಾಹಕರಿಗೆ ಭರ್ಜರಿ ಆಫರ್ವೊಂದು ಸಿಕ್ಕಿದೆ. 17,000 ರೂ ಮೌಲ್ಯದ 12 ತಿಂಗಳ ಪರ್ಪ್ಲೆಕ್ಸಿಟಿ ಪ್ರೋ ಸಬ್ಸಕ್ರಿಪ್ಷನ್ ಉಚಿತವಾಗಿ ಸಿಗುತ್ತದೆ. ಏರ್ಟೆಲ್ ಥ್ಯಾಂಕ್ಸ್ ಆ್ಯಪ್ನಲ್ಲಿ ಇದನ್ನು ಪಡೆಯಬಹುದು. 36 ಕೋಟಿ ಏರ್ಟೆಲ್ ಬಳಕೆದಾರರೆಲ್ಲರಿಗೂ ಇದು ಸಿಗುತ್ತದೆ. ವಿವಿಧ ಅಡ್ವಾನ್ಸ್ಡ್ ಎಐ ಮಾಡಲ್ಗಳ ಸೇವೆ ಪರ್ಪ್ಲೆಕ್ಸಿಟಿ ಪ್ರೋನಲ್ಲಿ ಲಭ್ಯ ಇರುತ್ತದೆ.

ನವದೆಹಲಿ, ಜುಲೈ 17: ಭಾರತದಲ್ಲಿ ಎಐ ಟೂಲ್ಗಳು ನಿಧಾನವಾಗಿ ಜನಪ್ರಿಯವಾಗತೊಡಗಿವೆ. ಹೆಚ್ಚಿನ ಜನರು ಈಗಲೂ ಕೂಡ ಬೇಸಿಕ್ ವರ್ಷನ್ ಎಐ ಟೂಲ್ಗಳನ್ನು ಬಳಸುತ್ತಿದ್ದಾರೆ. ಸುಧಾರಿತ ಎಐ ಟೂಲ್ಗಳಿಗೆ (Advanced AI tools) ಸಬ್ಸ್ಕ್ರಿಪ್ಷನ್ ಶುಲ್ಕ ಇರುವುದರಿಂದ ಹೆಚ್ಚಿನ ಜನರು ಮೂಲ ಆವೃತ್ತಿಗಳನ್ನು ಬಳಸುತ್ತಿದ್ದಾರೆ. ಇದೇ ವೇಳೆ, ಏರ್ಟೆಲ್ ಸಂಸ್ಥೆ ತನ್ನ ಗ್ರಾಹಕರಿಗೆ ಎಐ ಪ್ರೋ ಮಾಡಲ್ ಅನ್ನು ಉಚಿತವಾಗಿ ಸಿಗುವಂತೆ ಮಾಡಿದೆ. ಏರ್ಟೆಲ್ ಗ್ರಾಹಕರು ಪರ್ಪ್ಲೆಕ್ಸಿಟಿ ಪ್ರೋ (Perplexity Pro) ಮಾಡಲ್ ಅನ್ನು ಒಂದು ವರ್ಷಕ್ಕೆ ಸಬ್ಸ್ಕ್ರಿಪ್ಷನ್ ಪಡೆಯಬಹುದು. ಅದೂ ಉಚಿತವಾಗಿ.
ಈ ಅಡ್ವಾನ್ಸ್ಡ್ ಎಐ ಮಾಡಲ್ನ 12 ತಿಂಗಳ ಸಬ್ಸ್ಕ್ರಿಪ್ಷನ್ ದರ 17,000 ರೂ ಇದೆ. ಏರ್ಟೆಲ್ ಗ್ರಾಹಕರು ಇಷ್ಟು ದೊಡ್ಡ ಮೌಲ್ಯದ ಸಾಧನವನ್ನು ಒಂದು ವರ್ಷ ಕಾಲ ಉಚಿತವಾಗಿ ಬಳಸಬಹುದಾಗಿದೆ.
ಏರ್ಟೆಲ್ ಗ್ರಾಹಕರು Perplexity Pro ಅನ್ನು ಹೇಗೆ ಪಡೆಯುವುದು?
ಏರ್ಟೆಲ್ ಗ್ರಾಹಕರು ಏರ್ಟೆಲ್ ಥ್ಯಾಂಕ್ಸ್ ಆ್ಯಪ್ನಲ್ಲಿ ಈ ಆಫರ್ ಪಡೆಯಬಹುದು. ಆ್ಯಪ್ನಲ್ಲಿ ರಿವಾರ್ಡ್ಸ್ ಅಂಡ್ ಒಟಿಟಿ ಎನ್ನುವ ಸೆಕ್ಷನ್ ಒತ್ತಿದರೆ ಈ ಆಫರ್ ಅನ್ನು ಕಾಣಬಹುದು. ನಿಮ್ಮ ಇಮೇಲ್ ಐಡಿ ಹಾಕಿ ನೊಂದಾಯಿಸಿಕೊಳ್ಳಬಹುದು. ಬಹಳ ಸರಳವಾಗಿ ನೀವು Perplexity Pro ಅನ್ನು ಪಡೆಯಬಹುದು.
ಇದನ್ನೂ ಓದಿ: ಟೋಲ್ ಬಂದಾಗ ಕೈಯಲ್ಲಿ ಟ್ಯಾಗ್ ಹಿಡಿದು ತೋರಿಸ್ತಾರಾ? ಬ್ಲ್ಯಾಕ್ಲಿಸ್ಟ್ ಆಗಲಿದೆ ನಿಮ್ಮ ಫಾಸ್ಟ್ಯಾಗ್
ಹಲವು ಅಡ್ವಾನ್ಸ್ಡ್ ಮಾಡಲ್ಗಳ ಅಗ್ರಿಗೇಟರ್ ಈ Perplexity Pro
Perplexity Pro ನಲ್ಲಿ ಕೆಲ ಪ್ರಮುಖ ಅಡ್ವಾನ್ಸ್ಡ್ ಎಐ ಮಾಡಲ್ಗಳನ್ನು ಒಳಗೊಂಡಿರಲಾಗುತ್ತದೆ. ಪರ್ಪ್ಲೆಕ್ಸಿಟಿಯ ಸೋನಾರ್ ಮತ್ತು ಆರ್1 1776, ಆಂಥ್ರೋಪಿಕ್ನ ಕ್ಲಾಡ್ 4.0 ಸಾನೆಟ್ ಮತ್ತು ಸಾನೆಟ್ ಥಿಂಕಿಂಗ್ ಹಾಗೂ ಓಪಸ್ ಥಿಂಕಿಂಗ್, ಓಪನ್ಎಐನ ಜಿಪಿಟಿ 4.1, ಒ3 ಮತ್ತು ಒ3 ಪ್ರೋ, ಗೂಗಲ್ನ ಜೆಮಿನಿ 2.5 ಪ್ರೋ, ಎಕ್ಸ್ಎಐನ ಗ್ರೋಕ್-4 ಇತ್ಯಾದಿ ಹೊಚ್ಚ ಹೊಸ ಹಾಗೂ ಶಕ್ತಿಶಾಲಿ ಎಐ ಮಾಡಲ್ಗಳನ್ನು ಬಳಸಲು ಅವಕಾಶ ಇರುತ್ತದೆ.
Perplexity Pro ಅನ್ನು ಹೇಗೆ ಸದುಪಯೋಗಪಡಿಸಿಕೊಳ್ಳುವುದು?
ನೀವು ಯಾವುದೇ ಮಾಹಿತಿಯನ್ನಾದರೂ ಕೇಳಿದರೆ ಕ್ಷಣ ಮಾತ್ರದಲ್ಲಿ ನಿಮಗೆ ಉತ್ತರ ಸಿಗುತ್ತದೆ. ಬಹಳ ಆಳವಾದ ಸಂಶೋಧನೆಯ ಕೆಲಸಗಳನ್ನೂ ತ್ವರಿತವಾಗಿ ಇದು ಮಾಡಬಲ್ಲುದು.
ಇದನ್ನೂ ಓದಿ: ಹಾಲಿನ ಮಾರುಕಟ್ಟೆ ತೆರೆದುಬಿಟ್ಟರೆ ಭಾರತೀಯ ರೈತರಿಗೆ ಲಕ್ಷ ಕೋಟಿ ನಷ್ಟ? ಎಸ್ಬಿಐ ವರದಿಯಲ್ಲಿ ಆತಂಕ
ನೀವು ವಿವರಿಸಿದ ರೀತಿಯಲ್ಲಿ ಇಮೇಜ್ ಜನರೇಟ್ ಮಾಡುತ್ತದೆ. ಕೋಡಿಂಗ್ ಮಾಡಿಕೊಡಬಲ್ಲುದು. ಸರಳವಾದ ವೆಬ್ ಆ್ಯಪ್ಗಳನ್ನು ತಯಾರಿಸಿಕೊಡಬಲ್ಲುದು.
ಭಾಷಣ, ಪ್ರೆಸೆಂಟೇಶನ್, ರಿಪೋರ್ಟ್, ಪ್ಲಾನಿಂಗ್ ಹೀಗೆ ನಾನಾ ರೀತಿಯ ಕೆಲಸಗಳನ್ನು ಎಐ ಮಾಡಲ್ಗಳಿಂದ ಮಾಡಿಸಬಹುದು. ನೂರಾರು ಪುಟಗಳಷ್ಟಿರುವ ಪಿಡಿಎಫ್ ಫೈಲ್ಗಳಲ್ಲಿರುವ ಮಾಹಿತಿಯಲ್ಲಿ ಮುಖ್ಯಾಂಶಗಳನ್ನು ಇದು ಹೆಕ್ಕಿ ತೆಗೆದು ನಿಮಗೆ ನೀಡಬಲ್ಲುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Thu, 17 July 25