ಜಾಗತಿಕ 500 ಅತಿ ಶ್ರೀಮಂತರಲ್ಲಿ ಅಮೆರಿಕದವರೇ ಸಿಂಹಪಾಲು; ಪಟ್ಟಿಯಲ್ಲಿದ್ದಾರೆ 25 ಭಾರತೀಯರು

|

Updated on: Jun 04, 2024 | 9:00 AM

Countrywise list in Bloomberg Billionaires Top 500: ಬ್ಲೂಮ್​ಬರ್ಗ್ ಸಂಸ್ಥೆ ನಿಯಮಿತವಾಗಿ ಪ್ರಕಟಿಸುವ ಟಾಪ್ 500 ಬಿಲಿಯನೇರ್​ಗಳ ಪಟ್ಟಿಯಲ್ಲಿ 25 ಭಾರತೀಯರು ಸ್ಥಾನ ಪಡೆದಿದ್ದಾರೆ. ಅಮೆರಿಕದ 189 ಜನರು ಇದರಲ್ಲಿದ್ದಾರೆ. ಚೀನಾದಲ್ಲಿ 50ಕ್ಕೂ ಹೆಚ್ಚು ಜನರು ಟಾಪ್ 500 ಶ್ರೀಮಂತರ ಸಾಲಿನಲ್ಲಿ ಇದ್ದಾರೆ. ಅಗ್ರಸ್ಥಾನಿಗರ ಬಳಿ 200 ಬಿಲಿಯನ್ ಡಾಲರ್​ಗೂ ಹೆಚ್ಚಿನ ಮೌಲ್ಯದ ಆಸ್ತಿ ಇದೆ. 500ನೇ ಸ್ಥಾನದಲ್ಲಿರುವ ವ್ಯಕ್ತಿ 5.79 ಬಿಲಿಯನ್ ಡಾಲರ್ ಆಸ್ತಿ ಹೊಂದಿದ್ದಾರೆ.

ಜಾಗತಿಕ 500 ಅತಿ ಶ್ರೀಮಂತರಲ್ಲಿ ಅಮೆರಿಕದವರೇ ಸಿಂಹಪಾಲು; ಪಟ್ಟಿಯಲ್ಲಿದ್ದಾರೆ 25 ಭಾರತೀಯರು
ಶ್ರೀಮಂತರು
Follow us on

ನವದೆಹಲಿ, ಜೂನ್ 2: ವಿಶ್ವದ ಅತೀ ಶ್ರೀಮಂತರು ಅತಿ ಹೆಚ್ಚು ಇರುವುದು ವಿಶ್ವದ ಹಿರಿಯಣ್ಣ ಎನಿಸಿರುವ ಅಮೆರಿಕದಲ್ಲೇ. ವಿಶ್ವದ ಅತಿದೊಡ್ಡ ಆರ್ಥಿಕತೆ ಎನಿಸಿರುವ ಅಮೆರಿಕದಲ್ಲಿ ಜಗತ್ತಿನ ಟಾಪ್ ಕಂಪನಿಗಳು ನೆಲಸಿವೆ. ಹೀಗಾಗಿ, ಸಹಜವಾಗಿ ಆ ದೇಶದಲ್ಲಿ ಶ್ರೀಮಂತರ ಸಂಖ್ಯೆ ಹೆಚ್ಚಿದೆ. ಬ್ಲೂಮ್​ಬರ್ಗ್​ನ ಅಗ್ರ 500 ಬಿಲಿಯನೇರ್ಸ್ ಪಟ್ಟಿಯಲ್ಲಿ (Bloomberg Billionaires Index) ಬರೋಬ್ಬರಿ 189 ಅಮೆರಿಕನ್ನರು ಸ್ಥಾನ ಪಡೆದಿದ್ದಾರೆ. ಅಮೆರಿಕದ ಬಳಿಕ ಚೀನಾದಲ್ಲಿ ಅತಿಹೆಚ್ಚು ಶ್ರೀಮಂತರಿದ್ದಾರೆ. ರಷ್ಯಾ ಮತ್ತು ಭಾರತದಲ್ಲಿ ಕ್ರಮವಾಗಿ 26 ಮತ್ತು ಶ್ರೀಮಂತರು ಟಾಪ್ 500 ಪಟ್ಟಿಯಲ್ಲಿದ್ದಾರೆ. ಹತ್ತು ಮತ್ತು ಹೆಚ್ಚಿನ ಜನರು ಈ ಪಟ್ಟಿಯಲ್ಲಿ ಹೊಂದಿರುವುದು 11 ದೇಶಗಳು. ಟಾಪ್ 100 ಪಟ್ಟಿಯಲ್ಲಿ ಭಾರತದ 12 ಮಂದಿ ಶ್ರೀಮಂತರು ಇರುವುದು ವಿಶೇಷ.

ಬ್ಲೂಮ್​ಬರ್ಗ್ 500 ಬಿಲಿಯನೇರ್ಸ್ ಪಟ್ಟಿ

  1. ಅಮೆರಿಕ: 189
  2. ಚೀನಾ: 53
  3. ರಷ್ಯಾ: 26
  4. ಭಾರತ: 25
  5. ಜರ್ಮನಿ: 19
  6. ಹಾಂಕಾಂಗ್: 17
  7. ಯುಕೆ: 14
  8. ಫ್ರಾನ್ಸ್: 13
  9. ಕೆನಡಾ: 12
  10. ಆಸ್ಟ್ರೇಲಿಯಾ: 10
  11. ಬ್ರೆಜಿಲ್: 10
  12. ಸ್ವೀಡನ್: 9
  13. ತೈವಾನ್: 8
  14. ಸ್ವಿಟ್ಜರ್​ಲ್ಯಾಂಡ್: 7
  15. ಇಟಲಿ: 7
  16. ಡೆನ್ಮಾರ್ಕ್: 6
  17. ಇಂಡೋನೇಷ್ಯಾ: 6
  18. ಜಪಾನ್: 5
  19. ಮೆಕ್ಸಿಕೋ: 5
  20. ಕೊಲಂಬಿಯಾ: 4
  21. ಚೆಕ್ ರಿಪಬ್ಲಿಕ್: 3
  22. ಐರ್ಲೆಂಡ್: 3
  23. ಇಸ್ರೇಲ್: 3
  24. ನೆದರ್​ಲ್ಯಾಂಡ್ಸ್: 3
  25. ಸೌದಿ ಅರೇಬಿಯಾ: 3
  26. ಸಿಂಗಾಪುರ್: 3
  27. ಸೌತ್ ಆಫ್ರಿಕಾ: 3
  28. ಸ್ಪೇನ್: 3
  29. ಆಸ್ಟ್ರಿಯಾ: 2
  30. ಈಜಿಪ್ಟ್: 2
  31. ಜಾರ್ಜಿಯಾ: 2
  32. ಗ್ರೀಸ್: 2
  33. ಕಜಕಸ್ತಾನ್: 2
  34. ಕೊರಿಯಾ: 2
  35. ಮೊನಾಕೋ: 2
  36. ಫಿಲಿಪ್ಪೈನ್ಸ್: 2
  37. ಥಾಯ್ಲೆಂಡ್: 2
  38. ಅರ್ಜೆಂಟೀನಾ: 1
  39. ಕೇಮ್ಯಾನ್ ಐಲೆಂಡ್ಸ್: 1
  40. ಚಿಲಿ: 1
  41. ಸೈಪ್ರಸ್: 1
  42. ಐಸಲ್ ಆಫ್ ಮ್ಯಾನ್: 1
  43. ಲೇಶೆನ್ಸ್​ಟೀನ್: 1
  44. ಮಲೇಷ್ಯಾ: 1
  45. ನ್ಯೂಜಿಲ್ಯಾಂಡ್: 1
  46. ನೈಜೀರಿಯಾ: 1
  47. ನಾರ್ವೇ: 1
  48. ಉಕ್ರೇನ್: 1
  49. ಯುಎಇ: 1
  50. ವಿಯಟ್ನಾಂ: 1

500ನೇ ಸ್ಥಾನ ಪಡೆದಿರುವ ಅಮೆರಿಕದ ಜೇಮ್ಸ್ ಕಾಕ್ಸ್ ಚೇಂಬರ್ಸ್ ಅವರ ಆಸ್ತಿ ಮೌಲ್ಯ 5.79 ಬಿಲಿಯನ್ ಡಾಲರ್. ಅಗ್ರಸ್ಥಾನದಲ್ಲಿರುವ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ಆಸ್ತಿಮೌಲ್ಯ 207 ಬಿಲಿಯನ್ ಡಾಲರ್.

ಇದನ್ನೂ ಓದಿ: ವಿಶ್ವದಲ್ಲೇ ಅತಿಹೆಚ್ಚು ಆಸ್ತಿಹೆಚ್ಚಳ ಕಂಡ ಗೌತಮ್ ಅದಾನಿ ಈಗ ಅಂಬಾನಿಗಿಂತಲೂ ಶ್ರೀಮಂತ; ಇಲ್ಲಿದೆ ಪಟ್ಟಿ

ಟಾಪ್-500 ಶ್ರೀಮಂತರ ಪಟ್ಟಿಯಲ್ಲಿ ಭಾರತೀಯರು

  1. ಗೌತಮ್ ಅದಾನಿ
  2. ಮುಕೇಶ್ ಅಂಬಾನಿ
  3. ಶಾಪೂರ್ ಮಿಸ್ಟ್ರಿ
  4. ಸಾವಿತ್ರಿ ಜಿಂದಾಲ್
  5. ಶಿವ್ ನಾದರ್
  6. ಅಜೀಮ್ ಪ್ರೇಮ್​ಜಿ
  7. ದಿಲೀಪ್ ಶಾಂಘವಿ
  8. ಸುನೀಲ್ ಮಿಟ್ಟಲ್
  9. ಕುಮಾರ್ ಬಿರ್ಲಾ
  10. ಲಕ್ಷ್ಮೀ ಮಿಟ್ಟಲ್
  11. ಸೈರಸ್ ಪೂನಾವಾಲ
  12. ರಾಧಾಕೃಷ್ಣ ದಮಾನಿ
  13. ಕೆಪಿ ಸಿಂಗ್
  14. ರವಿ ಜೈಪುರಿಯಾ
  15. ಉದಯ್ ಕೋಟಕ್
  16. ಮಂಗಲ್ ಪ್ರಭಾತ್ ಲೋಧಾ
  17. ನುಸ್ಲಿ ವಾಡಿಯಾ
  18. ಪಂಕಜ್ ಪಟೇಲ್
  19. ವಿಕ್ರಮ್ ಲಾಲ್
  20. ರಾಹುಲ್ ಭಾಟಿಯಾ
  21. ಮುರಳಿ ದಿವಿ
  22. ಬೇಣು ಬಾಂಗುರ್
  23. ಸುಧೀರ್ ಮೆಹ್ತಾ
  24. ಸಮಿರ್ ಮೆಹ್ತಾ
  25. ರಾಕೇಶ್ ಗಂಗವಾಲ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ