AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದಲ್ಲೇ ಅತಿಹೆಚ್ಚು ಆಸ್ತಿಹೆಚ್ಚಳ ಕಂಡ ಗೌತಮ್ ಅದಾನಿ ಈಗ ಅಂಬಾನಿಗಿಂತಲೂ ಶ್ರೀಮಂತ; ಇಲ್ಲಿದೆ ಪಟ್ಟಿ

Gautam Adani number one rich Indian: ಗೌತಮ್ ಅದಾನಿ ಮಾಲಕತ್ವದ ಅದಾನಿ ಗ್ರೂಪ್ ಕಂಪನಿಗಳ ಷೇರು ಮೌಲ್ಯ ಕಳೆದ ವಾರ ಗಣನೀಯವಾಗಿ ಹೆಚ್ಚಳವಾದ ಬೆನ್ನಲ್ಲೇ ಅವರ ಆಸ್ತಿಮೌಲ್ಯ ಬಹಳ ಏರಿದೆ. ಶ್ರೀಮಂತಿಕೆಯಲ್ಲಿ ಮುಕೇಶ್ ಅಂಬಾನಿಯನ್ನು ಅದಾನಿ ಮತ್ತೊಮ್ಮೆ ಮೀರಿಸಿದ್ದಾರೆ. ಈಗ ಗೌತಮ್ ಅದಾನಿ ಷೇರುಸಂಪತ್ತು 111 ಬಿಲಿಯನ್ ಡಾಲರ್ ಗಡಿ ಮುಟ್ಟಿದೆ. ಮುಕೇಶ್ ಅಂಬಾನಿ ಆಸ್ತಿಮೌಲ್ಯ 109 ಬಿಲಿಯನ್ ಡಾಲರ್. ಬ್ಲೂಮ್​ಬರ್ಗ್​ನ ಟಾಪ್ 500 ಬಿಲಿಯನೇರ್ಸ್ ಪಟ್ಟಿಯಲ್ಲಿ ಭಾರತದ 25 ಮಂದಿ ಇದ್ದಾರೆ.

ವಿಶ್ವದಲ್ಲೇ ಅತಿಹೆಚ್ಚು ಆಸ್ತಿಹೆಚ್ಚಳ ಕಂಡ ಗೌತಮ್ ಅದಾನಿ ಈಗ ಅಂಬಾನಿಗಿಂತಲೂ ಶ್ರೀಮಂತ; ಇಲ್ಲಿದೆ ಪಟ್ಟಿ
ಗೌತಮ್ ಅದಾನಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 02, 2024 | 2:20 PM

Share

ನವದೆಹಲಿ, ಜೂನ್ 2: ಉದ್ಯಮಿ ಗೌತಮ್ ಅದಾನಿ ಮತ್ತೊಮ್ಮೆ ಭಾರತದ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ. ಬ್ಲೂಮ್​​ಬರ್ಗ್ ಬಿಲಿಯನೇರ್ಸ್ಸ್​ನ (Bloomberg Billionaires Index) ಇತ್ತೀಚಿನ ಪಟ್ಟಿಯಲ್ಲಿ ಮುಕೇಶ್ ಅಂಬಾನಿಯನ್ನು ಅದಾನಿ (Gautam Adani) ಹಿಂದಿಕ್ಕಿದ್ದಾರೆ. ಈ ಪಟ್ಟಿಯಲ್ಲಿ ಅದಾನಿ 11ನೇ ಸ್ಥಾನ ಪಡೆದಿದ್ದಾರೆ. ಮುಕೇಶ್ ಅಂಬಾನಿ (Mukesh Ambani) 12ನೇ ಸ್ಥಾನದಲ್ಲಿದ್ದಾರೆ. ಫ್ರೆಂಚ್ ಉದ್ಯಮಿ ಬರ್ನಾರ್ಡ್ ಆರ್ನಾಲ್ಟ್ ವಿಶ್ವದ ಅತೀ ಶ್ರೀಮಂತನ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಗೌತಮ್ ಅದಾನಿ 2022ರಲ್ಲಿ ಹಿಂಡನ್ಬರ್ಗ್ ರಿಸರ್ಚ್​ನ ಸ್ಫೋಟಕ ವರದಿ ಬರುವ ಮುನ್ನ ವಿಶ್ವದ ಅಗ್ರ ಮೂವರಲ್ಲಿ ಒಬ್ಬರಾಗಿದ್ದರು. ಅದಾನಿ ಗ್ರೂಪ್​ನಿಂದ ಅಕ್ರಮಗಳಾಗಿವೆ ಎಂದು ಆರೋಪಿಸಿ ಹಿಂಡನ್ಬರ್ಗ್ ರಿಸರ್ಚ್ ವರದಿ ಪ್ರಕಟಿಸಿದ ಬೆನ್ನಲ್ಲೇ ಗ್ರೂಪ್​ನ ವಿವಿಧ ಲಿಸ್ಟೆಡ್ ಕಂಪನಿಗಳ ಷೇರುಗಳು ಪ್ರಪಾತಕ್ಕೆ ಬಿದ್ದು ಅದಾನಿ ಆಸ್ತಿಮೌಲ್ಯ ಬಹಳ ಕುಂದಿಹೋಗಿತ್ತು.

ಆದರೂ ಕೂಡ ಅದಾನಿ ಗ್ರೂಪ್​ನ ಬಿಸಿನೆಸ್ ಸ್ಥಿರವಾಗಿ ಸಾಗುತ್ತಿದ್ದು, ಇನ್ನಷ್ಟು ವಿಸ್ತರಣೆ ಮಾಡುವ ಸನ್ನಾಹದಲ್ಲಿದೆ. ಷೇರು ಮಾರುಕಟ್ಟೆಯಲ್ಲಿ ಅದಾನಿ ಗ್ರೂಪ್​ನ ಕಂಪನಿಗಳ ಷೇರಿಗೆ ಬೇಡಿಕೆ ಹೆಚ್ಚುತ್ತಿದೆ. ಜೆಫರೀಸ್ ಎಂಬ ಬ್ರೋಕರೇಜ್ ಸಂಸ್ಥೆ ಅದಾನಿ ಸಂಸ್ಥೆಗೆ ಸಕಾರಾತ್ಮಕ ವರದಿ ಕೊಟ್ಟ ಬೆನ್ನಲ್ಲೇ ಈ ವಾರ ಅದರ ಎಲ್ಲಾ ಷೇರುಗಳು ಮೌಲ್ಯ ಹೆಚ್ಚಿಸಿಕೊಂಡಿವೆ. ಇದರೊಂದಿಗೆ ಗೌತಮ್ ಅದಾನಿ ಅವರ ಆಸ್ತಿ ಮೌಲ್ಯವೂ ಹೆಚ್ಚಾಗಿದೆ.

ಇದನ್ನೂ ಓದಿ: ಮೋದಿಕೇರ್ ಮುಖ್ಯಸ್ಥ ಸಮೀರ್ ಕೈಬೆರಳು ಮುರಿದುಹಾಕಿಸಿದ್ರಾ ಹೆತ್ತ ತಾಯಿ? ಮತ್ತೊಂದು ಬಿಸಿನೆಸ್ ಫ್ಯಾಮಿಲಿ ಹಾದಿರಂಪ, ಬೀದಿರಂಪ; ಏನಿದು ವ್ಯಾಜ್ಯ?

ವಿಶ್ವದಲ್ಲೇ ಅತಿಹೆಚ್ಚು ಆಸ್ತಿಮೌಲ್ಯ ಹೆಚ್ಚಳ ಅದಾನಿಯದ್ದು…

ಬ್ಲೂಮ್​ಬರ್ಗ್ ಬಿಲಿಯನೇರ್ಸ್​ನ ಹಿಂದಿನ ಪಟ್ಟಿಗೆ ಹೋಲಿಸಿದರೆ ಅದಾನಿ ಆಸ್ತಿ ಮೌಲ್ಯ 5.45 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ವಿಶ್ವದ ಯಾವ ಉದ್ಯಮಿಯ ಆಸ್ತಿ ಈ ವೇಳೆ ಇಷ್ಟು ಪ್ರಮಾಣದಲ್ಲಿ ಏರಿದ್ದಿಲ್ಲ. ವಾರನ್ ಬಫೆಟ್ ಮತ್ತು ಫ್ರಾಂಕಾಯ್ಸ್ ಮೆಯೆರ್ಸ್ ಮಾತ್ರವೇ 1 ಬಿಲಿಯನ್ ಡಾಲರ್​ನಷ್ಟು ಆಸ್ತಿಮೌಲ್ಯ ಹೆಚ್ಚಿಸಿಕೊಂಡಿದ್ದು.

ವಿಶ್ವದ ಅತಿ ಶ್ರೀಮಂತರು, ಬ್ಲೂಮ್​ಬರ್ಗ್ ಪಟ್ಟಿ:

  1. ಬರ್ನಾರ್ಡ್ ಆರ್ನಾಲ್ಟ್, ಫ್ರಾನ್ಸ್: 207 ಬಿಲಿಯನ್ ಡಾಲರ್
  2. ಇಲಾನ್ ಮಸ್ಕ್, ಅಮೆರಿಕ: 203 ಬಿಲಿಯನ್ ಡಾಲರ್
  3. ಜೆಫ್ ಬೇಜೋಸ್, ಅಮೆರಿಕ: 199 ಬಿಲಿಯನ್ ಡಾಲರ್
  4. ಮಾರ್ಕ್ ಜುಕರ್ಬರ್ಗ್, ಅಮೆರಿಕ: 166 ಬಿಲಿಯನ್ ಡಾಲರ್
  5. ಲಾರಿ ಪೇಜ್, ಅಮೆರಿಕ: 153 ಬಿಲಿಯನ್ ಡಾಲರ್
  6. ಬಿಲ್ ಗೇಟ್ಸ್, ಅಮೆರಿಕ: 152 ಬಿಲಿಯನ್ ಡಾಲರ್
  7. ಸೆರ್ಗೀ ಬ್ರಿನ್, ಅಮೆರಿಕ: 145 ಬಿಲಿಯನ್ ಡಾಲರ್
  8. ಸ್ಟೀವ್ ಬಾಲ್ಮರ್, ಅಮೆರಿಕ: 144 ಬಿಲಿಯನ್ ಡಾಲರ್
  9. ವಾರನ್ ಬಫೆಟ್, ಅಮೆರಿಕ: 137 ಬಿಲಿಯನ್ ಡಾಲರ್
  10. ಲ್ಯಾರಿ ಎಲಿಸನ್, ಅಮೆರಿಕ: 132 ಬಿಲಿಯನ್ ಡಾಲರ್
  11. ಗೌತಮ್ ಅದಾನಿ, ಭಾರತ: 111 ಬಿಲಿಯನ್ ಡಾಲರ್
  12. ಮುಕೇಶ್ ಅಂಬಾನಿ, ಭಾರತ: 109 ಬಿಲಿಯನ್ ಡಾಲರ್
  13. ಮೈಕೇಲ್ ಡೆಲ್, ಅಮೆರಿಕ: 107 ಬಿಲಿಯನ್ ಡಾಲರ್
  14. ಕಾರ್ಲಸ್ ಸ್ಲಿಮ್, ಮೆಕ್ಸಿಕೋ: 100 ಬಿಲಿಯನ್ ಡಾಲರ್
  15. ಫ್ರಾಂಕೋಯ್ಡ್ ಬೆಟನ್​ಕೋರ್ಟ್ ಮೆಯೆರ್ಸ್, ಫ್ರಾನ್ಸ್: 99.6 ಬಿಲಿಯನ್ ಡಾಲರ್

ಇದನ್ನೂ ಓದಿ: Personal Finance: ತುರ್ತು ಸಾಲ ಎಂದರೇನು? ಅರ್ಜೆಂಟಾಗಿ ಪಾಸ್‌ಬುಕ್ ಲೋನ್ ಸಿಗುತ್ತದಾ?

ಭಾರತದ ಟಾಪ್ 10 ಬಿಲಿಯನೇರ್ಸ್

  1. ಗೌತಮ್ ಅದಾನಿ
  2. ಮುಕೇಶ್ ಅಂಬಾನಿ
  3. ಶಾಪೂರ್ ಮಿಸ್ಟ್ರಿ
  4. ಸಾವಿತ್ರಿ ಜಿಂದಾಲ್
  5. ಶಿವ ನಾದರ್
  6. ಅಜೀಮ್ ಪ್ರೇಮ್​ಜಿ
  7. ದಿಲೀಪ್ ಶಾಂಘ್ವಿ
  8. ಸುನೀಲ್ ಮಿಟ್ಟಲ್
  9. ಕುಮಾರ್ ಬಿರ್ಲಾ
  10. ಲಕ್ಷ್ಮೀ ಮಿಟ್ಟಲ್

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು