ಬಿಎಲ್​ಎಸ್ ಪಾಲಿಮರ್ಸ್ ಐಪಿಒ; ಇವತ್ತು ಕೊನೆಯ ದಿನ; 1.7 ಕೋಟಿ ಷೇರು ವಿತರಣೆ, 60ಕ್ಕೂ ಅಧಿಕ ಪಟ್ಟು ಸಬ್​ಸ್ಕ್ರಿಪ್ಷನ್ಸ್

ದೆಹಲಿ ಮೂಲದ ಬಿಎಲ್​ಎಸ್ ಪಾಲಿಮರ್ಸ್ ಸಂಸ್ಥೆಯ ಐಪಿಒ ಅಕ್ಟೋಬರ್ 27ರಂದು ಆರಂಭಗೊಂಡು ಅಕ್ಟೋಬರ್ 29ರವರೆಗೂ ಇದೆ. ಇವತ್ತು ಕೊನೆಯ ದಿನಾಂಕವಾಗಿದೆ. ಬಹಳ ಬೇಡಿಕೆಯಲ್ಲಿರುವ ಕೈಗಾರಿಕಾ ರಾಸಾಯನಿಕ ಕ್ಷೇತ್ರದ ಈ ಸಂಸ್ಥೆ ಉತ್ತಮ ಆದಾಯ ಮತ್ತು ಲಾಭ ಹೊಂದಿದೆ. ಈ ಐಪಿಒದಲ್ಲಿ ರೀಟೇಲ್ ವಿಭಾಗದಲ್ಲಿ ಕನಿಷ್ಠ ಹೂಡಿಕೆ 15,000 ರೂ ಇದೆ. ಗರಿಷ್ಠ ಹೂಡಿಕೆ 1.96 ಲಕ್ಷ ರೂ ಇದೆ.

ಬಿಎಲ್​ಎಸ್ ಪಾಲಿಮರ್ಸ್ ಐಪಿಒ; ಇವತ್ತು ಕೊನೆಯ ದಿನ; 1.7 ಕೋಟಿ ಷೇರು ವಿತರಣೆ, 60ಕ್ಕೂ ಅಧಿಕ ಪಟ್ಟು ಸಬ್​ಸ್ಕ್ರಿಪ್ಷನ್ಸ್
ಷೇರು ಮಾರುಕಟ್ಟೆ
Image Credit source: Getty Images

Updated on: Oct 29, 2026 | 12:08 PM

ಮುಂಬೈ, ಅಕ್ಟೋಬರ್ 29: ಕೈಗಾರಿಕಾ ರಾಸಾಯನಿಕ ಕ್ಷೇತ್ರದ ಬಿಎಲ್​ಎಸ್ ಪಾಲಿಮರ್ಸ್ ಸಂಸ್ಥೆಯ ಐಪಿಒ ನಡೆಯುತ್ತಿದ್ದು, ಇಂದು ಕೊನೆಯ ದಿನವಾಗಿದೆ. ಅಕ್ಟೋಬರ್ 27ಕ್ಕೆ ಆರಂಭವಾಗಿ ಅಕ್ಟೋಬರ್ 29ರವರೆಗೆ ಈ ಐಪಿಒ ಸಬ್ಸ್​ಕ್ರಿಷನ್​ಗೆ ತೆರೆದುಕೊಂಡಿರುತ್ತದೆ. ರೀಟೇಲ್ ಹೂಡಿಕೆ ವಿಭಾಗದಲ್ಲಿ 60 ಪಟ್ಟು ಹೆಚ್ಚು ಸಬ್​ಸ್ಕ್ರಿಪ್ಷನ್ ಬಂದಿದೆ. ಅಂದರೆ, ಒಂದು ಹುದ್ದೆಗೆ 60ಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಸಿದಷ್ಟು ಉತ್ತಮ ಸ್ಪಂದನೆಯನ್ನು ಈ ಐಪಿಒ ಪಡೆಯುತ್ತಿದೆ.

ಬಿಎಲ್​ಎಸ್ ಪಾಲಿಮರ್ಸ್ ಐಪಿಒ ವಿವರ

  • ಒಟ್ಟು ಬಂಡವಾಳ ನಿರೀಕ್ಷೆ: 255 ಕೋಟಿ ರೂ
  • ಒಟ್ಟು ಷೇರುಗಳ ವಿತರಣೆ: ಹೊಸ 1.19 ಕೋಟಿ ಈಕ್ವಿಟಿ ಷೇರುಗಳು
  • ಐಪಿಒ ದಿನಾಂಕ: ಅಕ್ಟೋಬರ್ 27ರಿಂದ 29ರವರೆಗೆ
  • ಐಪಿಒ ಷೇರುದರ: ಪ್ರತೀ ಷೇರಿಗೆ 142-150 ರೂ
  • ರೀಟೇಲ್​ನಲ್ಲಿ ಕನಿಷ್ಠ ಹೂಡಿಕೆ: 100 ಷೇರುಗಳ 1 ಲಾಟ್ (15,000 ರೂ)
  • ರೀಟೇಲ್ ಗರಿಷ್ಠ ಹೂಡಿಕೆ: 13 ಲಾಟ್ (1.95 ಲಕ್ಷ ರೂ)
  • ಅಲಾಟ್ಮೆಂಟ್ ದಿನಾಂಕ: ಅಕ್ಟೋಬರ್ 30ಕ್ಕೆ
  • ಲಿಸ್ಟ್ ಆಗುವ ದಿನಾಂಕ: ನವೆಂಬರ್ 3ಕ್ಕೆ

ಇದನ್ನೂ ಓದಿ: Amazon Layoffs: ಮೈಕ್ರೋಸಾಫ್ಟ್​ನಲ್ಲಿ ಬ್ಲಡ್​ಬಾತ್; ಇನ್ನೋಡಾಟಾ ಬಳಿಕ ಅಮೇಜಾನ್​ನಲ್ಲಿ ದಿಢೀರ್ ಲೇ ಆಫ್; ಕಂಗಾಲಾದ ಟೆಕ್ಕಿಗಳು

ಐಪಿಒದಲ್ಲಿ ಸಿಗುವ ಬಂಡವಾಳವನ್ನು ಹೇಗೆ ವ್ಯಯಿಸುತ್ತದೆ ಬಿಎಲ್​ಎಸ್ ಪಾಲಿಮರ್ಸ್?

ಈ ಐಪಿಒದಿಂದ 255 ಕೋಟಿ ರೂ ಬಂಡವಾಳ ಸಂಗ್ರಹಿಸುವ ಉದ್ದೇಶ ಇದೆ. ಬಿಎಲ್​ಎಸ್ ಪಾಲಿಮರ್ಸ್ ಸಂಸ್ಥೆ ಗೋವಾದಲ್ಲಿರುವ ತನ್ನ ಮ್ಯಾನುಫ್ಯಾಕ್ಚರಿಂಗ್ ಘಟಕವನ್ನು ವಿಸ್ತರಿಸಲು ಈ ಬಂಡವಾಳವನ್ನು ಬಳಸಲಿದೆ. ಇದರಲ್ಲಿ ಕೆಲ ಉತ್ಪನ್ನಗಳ ಉತ್ಪಾದನೆ ಹೆಚ್ಚಿಸುವುದೂ ಒಳಗೊಂಡಿದೆ. ಇದರ ಜೊತೆಗೆ ವರ್ಕಿಂಗ್ ಕ್ಯಾಪಿಟಲ್ ಆಗಿ 90 ಕೋಟಿ ರೂ ಅನ್ನು ಬಳಸಲಿದೆ.

ಬಿಎಲ್​ಎಸ್ ಪಾಲಿಮರ್ಸ್ ಏನನ್ನು ಉತ್ಪಾದಿಸುತ್ತದೆ?

ವಿವಿಧ ಕೈಗಾರಿಕಾ ಬಳಕೆಗೆ ಬೇಕಾಗುವ ಪಾಲಿಮರ್ ಸಂಯುಕ್ತಗಳನ್ನು ತಯಾರಿಸುತ್ತದೆ. ಇವು ಕಚ್ಚಾ ವಸ್ತುಗಳಾಗಿದ್ದು, ವಿದ್ಯುತ್, ಟೆಲಿಕಮ್ಯೂನಿಕೇಶನ್ಸ್, ರೈಲ್ವೆ ಸೆಕ್ಟರ್​ಗಳಲ್ಲಿ ಶೀತಿಂಗ್, ಜಾಕೆಟಿಂಗ್, ವೈರ್ ಮತ್ತು ಕೇಬಲ್​ಗಳ ಇನ್ಸುಲೇಶನ್ ಇತ್ಯಾದಿ ಕಾರ್ಯಗಳಿಗೆ ಬಳಕೆ ಆಗುತ್ತದೆ.

ಅಂಡರ್​ಗ್ರೌಂಡ್ ಆಯಿಲ್ ಪೈಪ್​ಲೈನ್, ಗ್ಯಾಸ್ ಮತ್ತು ನೀರಿನ ಪೈಪ್​ಲೈನ್​ಗಳು ತುಕ್ಕು ಹಿಡಿಯದಂತೆ ತಡೆಯಲು ಇದರ ಪಾಲಿಮರ್ ಸಂಯುಕ್ತಗಳನ್ನು ಕೋಟಿಂಗ್ ರೀತಿಯಲ್ಲಿ ಬಳಸಲಾಗುತ್ತದೆ. ಹೀಗೆ ಇನ್ನೂ ಹಲವು ರೀತಿಯಲ್ಲಿ ಪಾಲಿಮರ್​ಗಳನ್ನು ಬಳಸಲಾಗುತ್ತದೆ.

2025-26ರ ಹಣಕಾಸು ವರ್ಷದಲ್ಲಿ ಬಿಎಲ್​ಎಸ್ ಪಾಲಿಮರ್ಸ್​ನ ಆದಾಯ 349 ಕೋಟಿ ರೂ ಇದ್ದರೆ, ನಿವ್ವಳ ಲಾಭ 27 ಕೋಟಿ ರೂ ಇದೆ.

ಇದನ್ನೂ ಓದಿ: ಷೇರು ಬಜಾರಿಗೆ ಜಿಯೋ ಪ್ಲಾಟ್​ಫಾರ್ಮ್ಸ್ ಭರ್ಜರಿ ಪದಾರ್ಪಣೆ; ಮಾರ್ಕೆಟ್ ಕ್ಯಾಪ್​ನಲ್ಲಿ ರಿಲಯನ್ಸ್ ಕಂಪನಿಗಳೇ ನಂ. 1, ನಂ. 2

ಶೇ. 34ರಷ್ಟಿದೆ ಬಿಎಲ್​ಎಸ್ ಪಾಲಿಮರ್ಸ್​ನ ಜಿಎಂಪಿ

ಬಿಎಲ್​ಎಸ್ ಪಾಲಿಮರ್ಸ್ ಐಪಿಒದ ಗ್ರೇ ಮಾರ್ಕೆಟ್ ಪ್ರೀಮಿಯಮ್ ಅಥವಾ ಜಿಎಂಪಿ ಸದ್ಯ ಶೇ. 34ರಷ್ಟು ಓಡುತ್ತಿದೆ. ಅಂದರೆ, ಇದರ ಪ್ರಸಕ್ತ ಶೇರುಬೆಲೆಗೆ ಎಷ್ಟು ಹೆಚ್ಚು ಬೆಲೆ ಕೊಡಲು ಹೂಡಿಕೆದಾರರು ಸಿದ್ಧ ಇದ್ದಾರೆ ಎಂಬುದನ್ನು ಇದು ತೋರಿಸುತ್ತದೆ. ಜಿಯೋ ಪ್ಲಾಟ್​ಫಾರ್ಮ್ಸ್ ಸಂಸ್ಥೆ ಶೇ. 23ರಷ್ಟು ಜಿಎಂಪಿ ಹೊಂದಿತ್ತು. ಲಿಸ್ಟ್ ಆದಾಗಲೂ ಶೇ. 21ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಿತ್ತು. ಬಿಎಲ್​ಎಸ್ ಪಾಲಿಮರ್ಸ್ ಕೂಡ ಶೇ. 34ರಷ್ಟು ಹೆಚ್ಚು ಬೆಲೆಗೆ ಲಿಸ್ಟ್ ಆದರೆ ಅಚ್ಚರಿ ಇಲ್ಲ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us