Sensex Record: ಇದೇ ಮೊದಲು… ಸೆನ್ಸೆಕ್ಸ್ 64,000, ನಿಫ್ಟಿ 19,000 ಅಂಕಗಳ ಮಟ್ಟಕ್ಕೆ ಏರಿಕೆ; 1.84 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳ

|

Updated on: Jun 28, 2023 | 4:32 PM

BSE Sensex 64,000 Pts First Time: ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 64,000 ಅಂಕಗಳ ಮಟ್ಟ ಮುಟ್ಟಿದೆ. ಎನ್​ಎಸ್​ಇಯ ನಿಫ್ಟಿ ಸೂಚ್ಯಂಕ 19,000 ಅಂಕಗಳ ಮಟ್ಟವನ್ನು ಮೊದಲ ಬಾರಿಗೆ ದಾಟಿದೆ.

Sensex Record: ಇದೇ ಮೊದಲು... ಸೆನ್ಸೆಕ್ಸ್ 64,000, ನಿಫ್ಟಿ 19,000 ಅಂಕಗಳ ಮಟ್ಟಕ್ಕೆ ಏರಿಕೆ; 1.84 ಲಕ್ಷ ಕೋಟಿ ಹೆಚ್ಚುವರಿ ಬಂಡವಾಳ
ಷೇರು ಮಾರುಕಟ್ಟೆ
Follow us on

ನವದೆಹಲಿ: ಭಾರತದ ಷೇರು ಮಾರುಕಟ್ಟೆ (Indian Stock Markets) ಜೂನ್ 28ರಂದು ನವೋತ್ಸಾಹದಿಂದ ಪುಟಿದೆದ್ದಂತೆ ಕಾಣುತ್ತಿದೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ (BSE Sensex) 600 ಅಂಕಗಳಷ್ಟು ಗಳಿಸಿ 64,050 ಮಟ್ಟ ಮುಟ್ಟಿತ್ತು. ಬಿಎಸ್ಇ ಇತಿಹಾಸದಲ್ಲೇ ಸೆನ್ಸೆಕ್ಸ್ 64,000 ಅಂಕಗಳ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು. ಇನ್ನು ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಕೂಡ ಇಂದು ಸುಮಾರು 200 ಅಂಕಗಳಷ್ಟು ಗಳಿಸಿ 19,011 ಅಂಕಗಳ ಮಟ್ಟ ತಲುಪಿತು. ಎನ್​ಎಸ್​ಇ ಇತಿಹಾಸದಲ್ಲೂ ನಿಫ್ಟಿ ಸೂಚ್ಯಂಕ 19,000 ಅಂಕಗಳ ಗಡಿ ದಾಟಿದ್ದು ಇದೇ ಪ್ರಥಮ.

ಬಾಂಬೆ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ (ಬಿಎಸ್​ಇ) ಇಂದು ಒಂದೇ ದಿನ 1.84 ಲಕ್ಷ ಕೋಟಿ ರೂನಷ್ಟು ಬಂಡವಾಳ ಸಂಗ್ರಹ ಹೆಚ್ಚಾಗಿದೆ. ಇದರೊಂದಿಗೆ ಬಿಎಸ್​ಇ ಮಾರ್ಕೆಟ್ ಕ್ಯಾಪ್ (ಮಾರುಕಟ್ಟೆ ಬಂಡವಾಳ) 293.97 ಲಕ್ಷಕೋಟಿ ರೂ ಆಗಿದೆ. ರಿಲಾಯನ್ಸ್ ಇಂಡಸ್ಟ್ರೀಸ್, ಎಚ್​ಡಿಎಫ್​ಸಿ, ಎಚ್​ಡಿಎಫ್​ಸಿ ಬ್ಯಾಂಕ್, ಇನ್ಫೋಸಿಸ್, ಟಿಸಿಎಸ್, ಅದಾನಿ ಎಂಟರ್​ಪ್ರೈಸಸ್ ಕಂಪನಿಗಳ ಷೇರುಗಳಿಗೆ ಒಳ್ಳೆಯ ಬೇಡಿಕೆ ಕುದುರಿದ್ದು ಈ ದಾಖಲೆ ಹೆಚ್ಚಳಕ್ಕೆ ಕಾರಣವಾಗಿದೆ. ಅದಾನಿ ಗ್ರೂಪ್​ನ ಬಹುತೇಕ ಷೇರುಗಳು ಬೆಲೆ ಹೆಚ್ಚಿಸಿಕೊಂಡಿವೆ.

ಇದನ್ನೂ ಓದಿBSE Record: ಭಾರತದ ಒಟ್ಟು ಷೇರುಸಂಪತ್ತು 292 ಲಕ್ಷ ಕೋಟಿ ರೂಗೆ ಏರಿಕೆ; ಇದು ಹೊಸ ದಾಖಲೆ

153 ಷೇರುಗಳು ವರ್ಷದ ಗರಿಷ್ಠ ಮಟ್ಟದಲ್ಲಿ

ಇವತ್ತು ಷೇರುಪೇಟೆಯಲ್ಲಿ ಬಹಳಷ್ಟು ಷೇರುಗಳತ್ತ ಹೂಡಿಕೆದಾರರು ಮುಗಿಬಿದ್ದಿರುವುದುಂಟು. ಏಂಜೆಲ್ ಒನ್, ಅರಬಿಂದೋ ಫಾರ್ಮಾ, ಎಬಿ ಕ್ಯಾಪಿಟಲ್, ಡಾಕ್ಟರ್ ರೆಡ್ಡೀಸ್ ಸೇರಿದಂತೆ ಬಿಎಸ್​ಇಯಲ್ಲಿರುವ 153 ಕಂಪನಿಗಳ ಷೇರುಗಳ ಬೆಲೆ ಒಂದು ವರ್ಷದ ಗರಿಷ್ಠ ಮಟ್ಟ ಮುಟ್ಟಿದೆ.

ಅಷ್ಟೇ ಅಲ್ಲ, ಬಿಎಸ್​ಇಯಲ್ಲಿ ಲಿಸ್ಟ್ ಆಗಿರುವ 3,511 ಕಂಪನಿಗಳ ಪೈಕಿ 1,861 ಷೇರುಗಳು ಬೆಲೆ ಹೆಚ್ಚಿಸಿಕೊಂಡಿವೆ. 1,502 ಷೇರುಗಳ ಬೆಲೆ ಇಳಿಕೆಯಾಗಿದೆ. 148 ಕಂಪನಿಗಳ ಷೇರುಗಳು ಇಂದು ಬಿಕರಿಯಾಗಿಲ್ಲ.

ಇದನ್ನೂ ಓದಿ: Mahila Samman Scheme: ಮಹಿಳಾ ಸಮ್ಮಾನ್ ಉಳಿತಾಯ ಪತ್ರ ಅಂಚೆ ಕಚೇರಿ ಮಾತ್ರವಲ್ಲ ಈ 16 ಬ್ಯಾಂಕುಗಳಲ್ಲೂ ಲಭ್ಯ

ಬ್ಯಾಂಕ್ ನಿಫ್ಟಿ ಮೊದಲ ಬಾರಿಗೆ 44,500 ಅಂಕಗಳ ಮಟ್ಟ

ಬಿಎಸ್​ಇ ಮತ್ತು ಎನ್​ಎಸ್​ಇಯಲ್ಲಿ ವಿವಿಧ ಕ್ಷೇತ್ರಗಳ ಕಂಪನಿಗಳನ್ನು ಒಳಗೊಂಡಿರುವ ವಿವಿಧ ಸೂಚ್ಯಂಕಗಳೂ ಗಮನಾರ್ಹವಾಗಿ ವೃದ್ಧಿಸಿವೆ. ಬ್ಯಾಂಕ್ ನಿಫ್ಟಿಯಂತೂ ಹೊಸ ದಾಖಲೆ ಬರೆದಿದೆ. ಬ್ಯಾಂಕ್ ನಿಫ್ಟಿ ಸೂಚ್ಯಂಕ 44,508.40 ಅಂಕಗಳಿಗೆ ಏರಿದೆ. ಅದು 44,500 ಮಟ್ಟ ಮುಟ್ಟಿದ್ದು ಇದೇ ಮೊದಲು. ಮೇ 30ರಂದು 44,498.60ಅಂಕಗಳಿಗೆ ಬ್ಯಾಂಕ್ ನಿಫ್ಟಿ ಏರಿದ್ದು ದಾಖಲೆಯಾಗಿತ್ತು. ಈಗ ಆ ದಾಖಲೆಯನ್ನೂ ಮುರಿಯಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Wed, 28 June 23