BSNL Recharge Plans: 269 ರೂ, 769 ರೂ; ಬಿಎಸ್​ಎನ್​ಎಲ್​ನಿಂದ 2 ಹೊಸ ರೀಚಾರ್ಜ್ ಪ್ಲಾನ್​ಗಳು

|

Updated on: Feb 28, 2023 | 4:10 PM

BSNL STV Rs 269, Rs 769 Plans: ಬಿಎಸ್ಸೆನ್ನೆಲ್ ತಾನು ಇತ್ತೀಚೆಗೆ ಪರಿಚಯಿಸಿದ್ದ 71 ರೂ, 104 ರೂ, 135 ರೂ ಮತ್ತು 395 ರೂಗಳ ರೀಚಾರ್ಜ್ ಪ್ಯಾಕುಗಳನ್ನು ಹಿಂಪಡೆದುಕೊಂಡಿದೆ. ರೀಚಾರ್ಜ್ ಲಿಸ್ಟ್​ನಲ್ಲಿ 269 ಮತ್ತು 769 ರೂಗಳ ಎರಡು ಹೊಸ ಪ್ಲಾನ್​ಗಳನ್ನು ಸೇರಿಸಲಾಗಿದೆ.

BSNL Recharge Plans: 269 ರೂ, 769 ರೂ; ಬಿಎಸ್​ಎನ್​ಎಲ್​ನಿಂದ 2 ಹೊಸ ರೀಚಾರ್ಜ್ ಪ್ಲಾನ್​ಗಳು
ಬಿಎಸ್​ಎನ್​ಎಲ್
Follow us on

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ (BSNL) ಸಂಸ್ಥೆ ಎರಡು ಹೊಸ ರೀಚಾರ್ಜ್ ಪ್ಲಾನ್​ಗಳನ್ನು ಪರಿಚಯಿಸಿದೆ. ಹಿಂದೆ ಇದ್ದ ನಾಲ್ಕು ಹೊಸ ರೀಚಾರ್ಜ್ ಪ್ಯಾಕ್​ಗಳನ್ನು ನಿಲ್ಲಿಸಿ, ಈಗ 269 ಮತ್ತು 769 ರೂಗಳ ಎರಡು ಹೊಸ ರೀಚಾರ್ಜ್ ಪ್ಯಾಕುಗಳನ್ನು (BSNL New Recharge Packs) ಗ್ರಾಹಕರಿಗೆ ಆಫರ್ ಮಾಡಿದೆ. ಜಿಯೋ, ಏರ್​ಟೆಲ್, ವೊಡಾಫೋನ್ ಕಂಪನಿಗಳ ಪೈಪೋಟಿಯಲ್ಲಿ ಹಿಂದುಳಿದಿರುವ ಬಿಎಸ್​ಎನ್​ಎಲ್ ಇದೀಗ ಮೈಕೊಡವಿ ರೇಸ್​ಗೆ ಕುದುರಿಕೊಳ್ಳುತ್ತಿರುವಂತೆ ತೋರುತ್ತಿದೆ. ಇನ್ನೂ 3ಜಿಯಲ್ಲಿರುವ ಬಿಎಸ್​ಎನ್​ಎಲ್ ಈ ವರ್ಷ ದೇಶಾದ್ಯಂತ 4ಜಿ ನೆಟ್ವರ್ಕ್ ಅಳವಡಿಸಲು ಮುಂದಾಗಿದೆ.

ಇದೇ ವೇಳೆ ಬಿಎಸ್ಸೆನ್ನೆಲ್ ತಾನು ಇತ್ತೀಚೆಗೆ ಪರಿಚಯಿಸಿದ್ದ 71 ರೂ, 104 ರೂ, 135 ರೂ ಮತ್ತು 395 ರೂಗಳ ರೀಚಾರ್ಜ್ ಪ್ಯಾಕುಗಳನ್ನು ಹಿಂಪಡೆದುಕೊಂಡಿದೆ ಎಂದು ವರದಿಗಳು ಹೇಳುತ್ತಿವೆ. ಬಿಎಸ್ಸೆನ್ನೆಲ್​ನಿಂದ ಅಧಿಕೃತ ಮಾಹಿತಿ ಪ್ರಕಟವಾಗಿಲ್ಲವಾದರೂ ಅದರ ರೀಚಾರ್ಜ್ ಲಿಸ್ಟ್​ನಲ್ಲಿ ಈ ನಾಲ್ಕು ಪ್ಯಾಕುಗಳು ಇಲ್ಲ. ಅದಕ್ಕೆ ಬದಲಾಗಿ 269 ಮತ್ತು 769 ರೂಗಳ ಎರಡು ಹೊಸ ರೀಚಾರ್ಜ್ ಪ್ಲಾನ್​ಗಳನ್ನು ಪಟ್ಟಿಗೆ ಸೇರಿಸಲಾಗಿದೆ.

269 ರೂ ಪ್ಲಾನ್ ವಿಶೇಷತೆ

ಹಬ್ಬದ ಧಮಾಕ ಆಫರ್ ಆಗಿ ಬಿಎಸ್ಸೆನ್ನೆಲ್ ಎಸ್​ಟಿವಿ 269 ರೂ ಮತ್ತು ಎಸ್​ಟಿವಿ 769 ರೂ ರೀಚಾರ್ಜ್ ಪ್ಲಾನ್​ಗಳನ್ನು ತಂದಿದೆ. 269 ರೂ ಪ್ಲಾನ್​ನಲ್ಲಿ ದಿನಕ್ಕೆ 2ಜಿಬಿ ಡಾಟಾ, ದಿನಕ್ಕೆ 100 ಮೆಸೇಜ್​ಗಳನ್ನು ಬಳಸಬಹುದು. ಇದರ ಜೊತೆಗೆ ಬಿಎಸ್​ಎನ್​ಎಲ್ ಟ್ಯೂನ್, ಜಿಂಗ್ ಆ್ಯಪ್, ಎರೋಸ್ ನೌ ಆ್ಯಪ್ ಇತ್ಯಾದಿ ಸೌಲಭ್ಯಗಳೂ ಒಳಗೊಂಡಿವೆ. ಇದರ ವ್ಯಾಲಿಡಿಟಿ 30 ದಿನಗಳಿವೆ.

ಇದನ್ನೂ ಓದಿApple Jobs: ಆ್ಯಪಲ್ ಕರಾಮತ್ತು; ಕರ್ನಾಟಕ ಸೇರಿ ವಿವಿಧೆಡೆ 19 ತಿಂಗಳಲ್ಲಿ 1 ಲಕ್ಷ ನೇರ ಉದ್ಯೋಗ

769 ರೂ ಪ್ಲಾನ್:

ಬಿಎಸ್​ಎನ್​ಎಲ್ ಎಸ್​ಟಿವಿ 769 ರೂ ರೀಚಾರ್ಜ್ ಪ್ಲಾನ್​ನ ವ್ಯಾಲಿಡಿಟಿ 90 ದಿನಗಳಾಗಿದ್ದು, ಇದರಲ್ಲಿಯೂ ದಿನಕ್ಕೆ 2ಜಿಬಿ, 100 ಮೆಸೇಜ್​ಗಳ ಸೌಲಭ್ಯ ಇರುತ್ತದೆ. ಬಿಎಸ್​ಎನ್​ಎಲ್ ಟ್ಯೂನ್, ಲೋಕ್​ಧನ್ ಅಪ್ಲಿಕೇಶನ್, ಜಿಂಗ್ ಆ್ಯಪ್, ಎರೋಸ್ ನೌ ಮೊದಲಾದವನ್ನೂ ಬಳಸಬಹುದು.

ನಾಲ್ಕು ಪ್ಲಾನ್ ಕೈಬಿಟ್ಟಿದ್ದು ಯಾಕೆ?

71 ರೂ 104 ರೂ, 135 ರೂ ಮತ್ತು 395 ರೂಗಳ ರೀಚಾರ್ಜ್ ಪ್ಲಾನ್​ಗಳನ್ನು ಬಿಎಸ್​ಎನ್​ಎಲ್ ಕೈಬಿಟ್ಟಿದ್ದಕ್ಕೆ ಕಾರಣ ಗೊತ್ತಾಗಿಲ್ಲ. ಇವು ಅಷ್ಟು ಜನಪ್ರಿಯತೆ ಮತ್ತು ಬೇಡಿಕೆ ಹೊಂದಿರಲಿಲ್ಲ ಎನ್ನಲಾಗಿದೆ. 4ಜಿ ನೆಟ್ವರ್ಕ್ ಅಳವಡಿಕೆ ಪೂರ್ಣವಾದ ಬಳಿಕ ಬಿಎಸ್​ಎನ್​ಎಲ್ ಇನ್ನಷ್ಟು ಆಕರ್ಷಕ ರೀಚಾರ್ಜ್ ಪ್ಲಾನ್​ಗಳನ್ನು ಹೊರತರುವ ನಿರೀಕ್ಷೆ ಇದೆ. ಮುಂದಿನ ವರ್ಷ ಬಿಎಸ್ಸೆನ್ನೆಲ್ 5ಜಿ ನೆಟ್ವರ್ಕ್ ಅಳವಡಿಕೆ ಮಾಡುತ್ತಿದೆ. ಅಷ್ಟರಲ್ಲಿ ತನ್ನ ಹಿಂದಿನ ಮಾರುಕಟ್ಟೆ ಸ್ವಾಮ್ಯವನ್ನು ಮರಳಿ ಕಂಡುಕೊಳ್ಳುವುದು ಬಿಎಸ್ಸೆನ್ನೆಲ್​ನ ಗುರಿಯಾಗಿದೆ.

ಇನ್ನಷ್ಟು ವ್ಯವಹಾರಗಳ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ