Panipuri Business: ಈಕೆ ಬುಲೆಟ್ ರಾಣಿ; ಓದಿದ್ದು ಎಂಜಿನಿಯರಿಂಗ್, ಮಾರೋದು ಪಾನಿಪುರಿ

|

Updated on: Mar 15, 2023 | 2:39 PM

Viral Video of Panipuriwali: 21 ವರ್ಷದ ಬಿಟೆಕ್ ಪದವೀಧರೆ ತಾಪ್ಸಿ ಎಂಬಾಕೆ ಬುಲೆಟ್ ಮೂಲಕ ಪಾನಿಪುರಿ ಗಾಡಿಯನ್ನು ಎಳೆದು ಹೋಗುತ್ತಿರುವ ದೃಶ್ಯದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈಕೆಯ ಪಾನಿಪುರಿ ವ್ಯಾಪಾರ ಭರ್ಜರಿಯಾಗಿಯೂ ನಡೆಯುತ್ತಿದೆ...

Panipuri Business: ಈಕೆ ಬುಲೆಟ್ ರಾಣಿ; ಓದಿದ್ದು ಎಂಜಿನಿಯರಿಂಗ್, ಮಾರೋದು ಪಾನಿಪುರಿ
ಬಿಟೆಕ್ ಪಾನಿಪುರಿವಾಲಿ
Follow us on

ಮುಂಬೈ: ಇವತ್ತಿನ ದಿನಗಳಲ್ಲಿ ಓದುವುದಕ್ಕೂ, ಮಾಡುವ ಕೆಲಸಕ್ಕೂ ಸಂಬಂಧ ಇಲ್ಲ ಎನ್ನುವಂತಾಗಿದೆ. ಎಂಜಿನಿಯರಿಂಗ್ ಓದಿದ ಹಲವರು ಚಹಾ ಅಂಗಡಿ, ಪಾನಿಪುರಿ ಅಂಗಡಿ, ಅದೂ ಇದೂ ಸಣ್ಣಪುಟ್ಟ ಬ್ಯುಸಿನೆಸ್ ಮಾಡೋದನ್ನು ಕಾಣುತ್ತೇವೆ. ಕೆಲವರು ಇಂಥ ವೃತ್ತಿಗಳನ್ನು ಬಹಳ ವೃತ್ತಿಪರವಾಗಿ ಮಾಡಿ ಯಶಸ್ಸು ಕಂಡವರೂ ಇದ್ದಾರೆ. ಇನ್ನೂ ಕೆಲವರು ವಿವಿಧ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral in Social Media) ಆಗಿಹೋಗುತ್ತಾರೆ. ಎಂಬಿಎ ವೃತ್ತಿಪರ ಯುವಕರು ಸೇರಿ ನಡೆಸುತ್ತಿರುವ ಎಂಬಿಎ ಚಾಯ್​ವಾಲ ಅಂಗಡಿ (MBA Chaiwala) ಇತ್ತೀಚೆಗೆ ಸದ್ದು ಮಾಡಿತ್ತು. ಈಗ ಸೋಷಿಯಲ್ ಮೀಡಿಯಾದಲ್ಲಿ ಬಿ ಟೆಕ್ ಪಾನಿಪುರಿವಾಲಿ (BTech Panipuri Wali) ವೈರಲ್ ಆಗುತ್ತಿದ್ದಾಳೆ. ಈಕೆಯ ಹೆಸರು ತಾಪ್ಸೀ ಉಪಾಧ್ಯಾಯ್.

ತಾಪ್ಸಿ ಓದಿದ್ದು ಎಂಜಿನಿಯರಿಂಗ್. ಕೆಲಸ ಮಾಡೋದು ಪಾನಿ ಪುರಿ (Golgoppa) ಮಾರಾಟದ್ದು. ಇಷ್ಟು ಮಾತ್ರಕ್ಕೆ ಈಕೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಲ್ಲ. ಬಿ ಟೆಕ್ ಪದವಿ (B Tech) ಓದಿರುವ 21 ವರ್ಷದ ತಾಪ್ಸಿ ಉಪಾಧ್ಯಾಯ್ ಸೋಷಿಯಲ್ ಮೀಡಿಯಾದಲ್ಲಿ ಬಿಟೆಕ್ ಪಾನಿಪುರಿವಾಲಿ ಎಂತಲೇ ಹೆಸರು ಮಾಡಿದ್ದಾಳೆ. ಅಷ್ಟೇ ಅಲ್ಲ, ಈಕೆ ಮುಂಬೈನ ಬುಲೆಟ್ ರಾಣಿಯಾಗಿಯೂ ಮಿಂಚುತ್ತಿದ್ದಾಳೆ. ಈಕೆ ಬುಲೆಟ್ ಬೈಕ್ ರೈಡ್ ಮಾಡಿಕೊಂಡು ಹೋಗುವ ದೃಶ್ಯವೇ ಗಮ್ಮತ್ತಿನದ್ದು. ಬುಲೆಟ್ ಬೈಕಿ ಹಿಂಬದಿಗೆ ಪಾನಿಪುರಿ ಗಾಡಿಯನ್ನು ಸಿಕ್ಕಿಸಿಕೊಂಡು ಈಕೆ ಹೋಗುತ್ತಿದ್ದರೆ ಜನರ ಕುತೂಹಲದ ಕಣ್ಣುಗಳು ಈಕೆಯನ್ನು ನೋಡೋದೋ, ಬುಲೆಟ್ ಬೈಕನ್ನು ನೋಡೋದೋ, ಪಾನಿಪುರಿ ಗಾಡಿಯನ್ನು ನೋಡೋದು ಎಂದು ಗೊಂದಲಗೊಳ್ಳಬಹುದು.

ಇದನ್ನೂ ಓದಿInternational Consumer Day: ಇನ್ಷೂರೆನ್ಸ್ ಕ್ಲೈಮ್​ಗೆ ಆಸ್ಪತ್ರೆಗೆ ದಾಖಲಾಗಲೇಬೇಕಾ? ಗ್ರಾಹಕರ ವೇದಿಕೆ ಕೊಟ್ಟ ತೀರ್ಪಿದು

ಪಾನಿಪುರಿ ಗಾಡಿಯನ್ನು ಸಿಕ್ಕಿಸಲು ಅನುವಾಗುವ ರೀತಿಯಲ್ಲಿ ರಾಯಲ್ ಎನ್​ಫೀಲ್ಡ್​ನ ಬುಲೆಟ್ ಬೈಕನ್ನು (Royal Enfield Bullet) ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಿಕೊಂಡಿದ್ದಾರೆ ತಾಪ್ಸಿ ಉಪಾಧ್ಯಾಯ್. ಆದರೆ ಈಕೆಯ ಬುಲೆಟ್ ರೈಡಿಂಗ್ ಬಹಳ ಮಂದಿಯ ಗಮನ ಸೆಳೆದಿರುವುದಂತೂ ಹೌದು. ಇಂಥ ಒಂದು ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಈಗ ಬಹಳ ವೈರಲ್ ಆಗಿದೆ.


ತಾಪ್ಸಿ ಉಪಾಧ್ಯಾಯ್ ಮುಂಬೈನ ಆರ್ ಕೆ ಪುರಂನಲ್ಲಿ ಪಾನಿಪುರಿ ಸ್ಟಾಲ್ ಹಾಕಿದ್ದಾರೆ. ದಿನವೂ ನೂರಾರು ಜನರು ಇಲ್ಲಿಗೆ ಬಂದು ಗೋಲ್​ಗಪ್ಪ ಸವಿದು ಹೋಗುತ್ತಾರೆ. ಈಗಷ್ಟೇ ಎಂಜಿನಿಯರಿಂಗ್ ಮಾಡಿರುವ ಈ ಹುಡುಗಿ ಉದ್ಯೋಗವೃತ್ತಿ ಹುಡುಕುವ ಬದಲು ಪಾನಿಪುರಿ ಅಂಗಡಿಗೇ ಸೆಟ್ಲ್ ಆದರೂ ಅಚ್ಚರಿ ಇಲ್ಲ.

ಇದನ್ನೂ ಓದಿSamosa Shop: 30 ಲಕ್ಷ ಸಂಬಳದ ಕೆಲಸ ಬಿಟ್ಟು, ಮನೆ ಮಾರಿ ಸಮೋಸಾ ಮಾರುತ್ತಿರುವ ಬೆಂಗಳೂರಿನ ದಂಪತಿ; ಇವರ ಸಂಪಾದನೆ ಕೇಳಿದರೆ ಶಾಕ್ ಆಗುತ್ತೀರಿ…

ಲಾಭದಾಯಕ ಉದ್ದಿಮೆ

ಅದೇನೇ ಆದರೂ ಪಾನಿಪುರಿ ಭಾರೀ ಲಾಭ ತಂದುಕೊಡುವ ಉದ್ದಿಮೆ. ಸರಿಯಾದ ಜಾಗದಲ್ಲಿ ಅಂಗಡಿ ಇಟ್ಟು ಸರಿಯಾದ ರುಚಿಯಲ್ಲಿ ಪಾನಿಪುರಿ ಐಟಂ ಕೊಟ್ಟರೆ ವ್ಯಾಪಾರ ಸಮೃದ್ಧವಾಗಿ ಆಗುವುದು ನಿಶ್ಚಿತ. ಬಹಳ ಮಂದಿ ಪಾನಿಪುರಿ ಅಂಗಡಿಯನ್ನು ಪಾರ್ಟ್​ಟೈಮ್ ಕೆಲಸವಾಗಿಯೂ ಮಾಡಿಕೊಂಡಿದ್ದಾರೆ. ಬೆಳಗ್ಗೆ ಎಲ್ಲಿಯಾದರೂ ಫುಲ್​ಟೈಮ್ ಕೆಲಸ, ಸಂಜೆ ಪಾನಿಪುರಿ ಅಂಗಡಿ. ಇದು ಪ್ರಮುಖ ಸೆಕೆಂಡರಿ ಇನ್ಕಮ್ ಆಗಬಲ್ಲುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ