International Consumer Day: ಇನ್ಷೂರೆನ್ಸ್ ಕ್ಲೈಮ್​ಗೆ ಆಸ್ಪತ್ರೆಗೆ ದಾಖಲಾಗಲೇಬೇಕಾ? ಗ್ರಾಹಕರ ವೇದಿಕೆ ಕೊಟ್ಟ ತೀರ್ಪಿದು

Health Insurance Important Update: ಇನ್ಷೂರೆನ್ಸ್ ಹಣ ಪಡೆಯಲು ಆಸ್ಪತ್ರೆಗೆ ದಾಖಲಾಗಲೇಬೇಕು ಎಂದೇನಿಲ್ಲ. ವಡೋದರಾದ ಗ್ರಾಹಕರ ವೇದಿಕೆಯೊಂದು ಈ ನಿಟ್ಟಿನಲ್ಲಿ ವಿಮಾ ಗ್ರಾಹಕರ ಮೊಗದಲ್ಲಿ ಖುಷಿಕೊಡುವಂತಹ ತೀರ್ಪು ನೀಡಿದೆ.

International Consumer Day: ಇನ್ಷೂರೆನ್ಸ್ ಕ್ಲೈಮ್​ಗೆ ಆಸ್ಪತ್ರೆಗೆ ದಾಖಲಾಗಲೇಬೇಕಾ? ಗ್ರಾಹಕರ ವೇದಿಕೆ ಕೊಟ್ಟ ತೀರ್ಪಿದು
ಆಸ್ಪತ್ರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 15, 2023 | 12:55 PM

ನವದೆಹಲಿ: ಸಾಮಾನ್ಯವಾಗಿ ಇನ್ಷೂರೆನ್ಸ್ ಕಂಪನಿಗಳು (Insurance Companies) ತಮ್ಮ ಗ್ರಾಹಕರು ಆಸ್ಪತ್ರೆಗೆ ದಾಖಲಾದರೆ ಮಾತ್ರ ವಿಮೆ ಸೇವೆ ಒದಗಿಸುತ್ತವೆ. ಈಗೀಗ ಕೆಲವೊಂದು ಸ್ಕೀಮ್​​ಗಳು ಆಸ್ಪತ್ರೆಗೆ ದಾಖಲಾಗದೇ ಪಡೆಯಲಾಗುವ ವೈದ್ಯಕೀಯ ಚಿಕಿತ್ಸೆಗೆ ವಿಮೆ ಒದಗಿಸುತ್ತವೆ. ಆದರೂ ಕೂಡ ಬಹುತೇಕ ಪ್ರಕರಣಗಳಲ್ಲಿ ವಿಮೆ ಕ್ಲೈಮ್ ಮಾಡಲು ಆಸ್ಪತ್ರೆಗೆ ದಾಖಲಾಗುವುದು (Hospitalization) ಕಡ್ಡಾಯ ಇದೆ. ವಿಮಾ ಕಂಪನಿಗಳ ಈ ಧೋರಣೆ ಅಥವಾ ನೀತಿ ಬಗ್ಗೆ ಬಹಳ ಮಂದಿ ಗ್ರಾಹಕರು ಹತಾಶಗೊಳ್ಳುವುದು ಹೌದು. ಇವರಿಗೆ ಗ್ರಾಹಕರ ವೇದಿಕೆಯಲ್ಲಿ (Consumer Forums) ನ್ಯಾಯ ಸಿಗುತ್ತದೆ. ಗ್ರಾಹಕರ ವೇದಿಕೆಯೊಂದರಲ್ಲಿ ಇಂಥದ್ದೊಂದು ಪ್ರಕರಣ ಬಂದಿದ್ದು, ಇನ್ಷೂರೆನ್ಸ್ ಕಂಪನಿಗೆ ಚಳಿ ಬಿಡಿಸಲಾಗಿದೆ. ಗುಜರಾತ್ ರಾಜ್ಯದ ವಡೋದರಾ ಕನ್ಸೂಮರ್ ಫೋರಂ ಇಂಥ ಒಂದು ವ್ಯಾಜ್ಯಕ್ಕೆ ನ್ಯಾಯ ಒದಗಿಸಿದೆ. ವಡೋದರಾ ನಿವಾಸಿ ರಮೇಶ್ ಚಂದ್ರ ಜೋಷಿ ಅವರಿಗೆ ಚಿಕಿತ್ಸಾ ವೆಚ್ಚ ಭರಿಸುವಂತೆ ನ್ಯಾಷನಲ್ ಇನ್ಷೂರೆನ್ಸ್ ಕಂಪನಿಗೆ ಆದೇಶಿಸಿದೆ.

2017, ಆಗಸ್ಟ್ ತಿಂಗಳಲ್ಲಿ ರಮೇಶ್ ಚಂದ್ರ ಜೋಷಿ ನ್ಯಾಷನಲ್ ಇನ್ಷೂರೆನ್ಸ್ ಕಂಪನಿ ತನ್ನ ಕ್ಲೈಮ್ ತಿರಸ್ಕರಿಸಿದೆ ಎಂದು ದೂರು ಕೊಟ್ಟಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆ, ವಿಮಾ ಕಂಪನಿಯ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿತು.

ಇವತ್ತಿನ ಕಾಲಘಟ್ಟದಲ್ಲಿ ಹೊಸ ರೀತಿಯ ಚಿಕಿತ್ಸೆಗಳು ಲಭ್ಯ ಇವೆ. ಹೆಚ್ಚು ಪರಿಣಾಮಕಾರಿ ಔಷಧಗಳನ್ನು ತಯಾರಿಸಲಾಗುತ್ತಿದೆ. ಅನೇಕ ಸಂದರ್ಭಗಳಲ್ಲಿ ರೋಗಿಗಳಿಗೆ ಬಹಳ ಕ್ಷಿಪ್ರವಾಗಿ ಚಿಕಿತ್ಸೆ ಕೊಡಲಾಗುತ್ತದೆ. ಆಸ್ಪತ್ರೆಗೆ ದಾಖಲಾಗುವ ಅವಶ್ಯಕತೆ ಬರುವುದಿಲ್ಲ ಎಂದು ವಡೋದರಾದ ಗ್ರಾಹಕರ ವೇದಿಕೆ ಅಭಿಪ್ರಾಯಪಟ್ಟಿದೆ. ನಂತರ ರಮೇಶ್ ಚಂದ್ರ ಜೋಷಿ ಅವರ ಚಿಕಿತ್ಸಾ ವೆಚ್ಚವನ್ನು ಭರಿಸುವಂತೆ ವಿಮಾ ಸಂಸ್ಥೆಗೆ ಆದೇಶಿಸಿತು.

ಇದನ್ನೂ ಓದಿTCS: ಹೆಚ್ಚು ಅಮೆರಿಕನ್ನರಿಗೆ ಟಿಸಿಎಸ್ ಉದ್ಯೋಗ; ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಕಂಪನಿ; ಟಾಟಾ ಕಂಪನಿಯ ಇನ್ನೂ ಮಹತ್ವದ ಸಾಧನೆಗಳು ಇಲ್ಲಿವೆ

ಹೆಲ್ತ್ ಇನ್ಷೂರೆನ್ಸ್ ಕ್ಲೈಮ್ ಮಾಡುವುದು ಹೇಗೆ?

ವೈದ್ಯಕೀಯ ಇನ್ಷೂರೆನ್ಸ್ ಅನ್ನು ನೀವು ಹೊಂದಿದ್ದರೆ ಎರಡು ರೀತಿಯಲ್ಲಿ ವಿಮಾ ಸೌಲಭ್ಯ ಪಡೆಯಬಹುದು. ಕ್ಯಾಷ್​ಲೆಸ್ ಸೌಲಭ್ಯ ಬಳಸಬಹುದು. ಇದರಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ. ನೊಂದಣಿ ಮತ್ತು ಕೆಲ ಸರ್ಜಿಕಲ್ ವಸ್ತುಗಳ ವೆಚ್ಚ ಬಿಟ್ಟು ಬಹುತೇಕ ಉಳಿದವಕ್ಕೆ ರೋಗಿ ಹಣ ನೀಡುವ ಅವಶ್ಯಕತೆ ಇರುವುದಿಲ್ಲ. ಇನ್ಷೂರೆನ್ಸ್ ಕಾರ್ಡ್ ತೋರಿಸಿದರೆ ಸಾಕು, ಆಸ್ಪತ್ರೆಯವರು ಇನ್ಷೂರೆನ್ಸ್ ಕಂಪನಿಯನ್ನು ಸಂಪರ್ಕಿಸಿ ನಿಮಗೆ ಕ್ಯಾಷ್​ಲೆಸ್ ಚಿಕಿತ್ಸಾ ಸೌಲಭ್ಯ ಒದಗಿಸುತ್ತಾರೆ.

ಆಸ್ಪತ್ರೆಯಲ್ಲಿ ಕ್ಯಾಷ್​ಲೆಸ್ ಇಲ್ಲದಿದ್ದರೆ ವಿವಿಧ ದಾಖಲೆಗಳನ್ನು ನೀಡಬೇಕಾಗುತ್ತದೆ. ಇದು ಆಸ್ಪತ್ರೆಯಿಂದ ಡಿಸ್​ಚಾರ್ಜ್ ಆದ ಬಳಿಕ ಅಗತ್ಯ ದಾಖಲೆಗಳನ್ನು ಇನ್ಷೂರೆನ್ಸ್ ಕಂಪನಿಗೆ ಸಲ್ಲಿಸಬೇಕು. ಯಾವ್ಯಾವ ದಾಖಲೆಗಳು ಎಂಬುದು ಇಲ್ಲಿ ಕೆಳಗಿವೆ:

  • ಇನ್ಷೂರೆನ್ಸ್ ಕಾರ್ಡ್
  • ಕ್ಲೈಮ್ ಫಾರ್ಮ್
  • ವೈದ್ಯರ ಪ್ರಿಸ್ಕ್ರಿಪ್ಷನ್ಸ್
  • ವೈದ್ಯಕೀಯ ತಪಾಸಣಾ ದಾಖಲೆಗಳು
  • ಹಣ ಪಾವತಿಸಿದ ರಸೀದಿ ಸೇರಿದಂತೆ ಆಸ್ಪತ್ರೆ ಬಿಲ್​ಗಳು
  • ಔಷಧದ ರಸೀದಿಗಳು
  • ಡಿಸ್​ಚಾರ್ಜ್ ಸಮ್ಮರಿ

ಇದನ್ನೂ ಓದಿSamosa Shop: 30 ಲಕ್ಷ ಸಂಬಳದ ಕೆಲಸ ಬಿಟ್ಟು, ಮನೆ ಮಾರಿ ಸಮೋಸಾ ಮಾರುತ್ತಿರುವ ಬೆಂಗಳೂರಿನ ದಂಪತಿ; ಇವರ ಸಂಪಾದನೆ ಕೇಳಿದರೆ ಶಾಕ್ ಆಗುತ್ತೀರಿ…

ಈ ಎಲ್ಲಾ ದಾಖಲೆಗಳನ್ನು ಆಸ್ಪತ್ರೆಯವರೇ ನಿಮಗೆ ಜೋಡಿಸಿ ಕೊಡುತ್ತಾರೆ. ಅವುಗಳನ್ನು ಸ್ಕ್ಯಾನ್ ಮಾಡಿ ಆನ್​ಲೈನ್​ನಲ್ಲೇ ಸಲ್ಲಿಸುವ ಅವಕಾಶ ಇರುತ್ತದೆ. ಹಾಗೆಯೇ, ಆ ಎಲ್ಲಾ ದಾಖಲೆಗಳ ಜೆರಾಕ್ಸ್ ಮಾಡಿಸಿ ನಿಮ್ಮಲ್ಲಿ ಇಟ್ಟುಕೊಳ್ಳಬೇಕು. ಮೂಲ ಪ್ರತಿಗಳನ್ನು ಕೊರಿಯರ್ ಮೂಲಕ ಇನ್ಷೂರೆನ್ಸ್ ಕಂಪನಿ ನಿಗದಿಪಡಿಸಿದ ಏಜೆನ್ಸಿಯ ಕಚೇರಿಗೆ ಪೋಸ್ಟ್ ಮೂಲಕ ಕಳುಹಿಸಬೇಕು. ನಿಮ್ಮ ಕ್ಲೈಮ್ ಅರ್ಜಿಯಲ್ಲಿ ಬ್ಯಾಂಕ್ ಖಾತೆ ನಂಬರ್, ಪಾನ್ ನಂಬರ್ ಇತ್ಯಾದಿಯನ್ನು ನಮೂದಿಸಬೇಕಾಗುತ್ತದೆ. ನಿಮ್ಮ ಕ್ಲೈಮ್ ಹಣ ಸಂದಾಯವಾಗಲು 15ದಿನದಿಂದ ಕೆಲ ತಿಂಗಳೇ ಆಗಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ