AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TCS: ಹೆಚ್ಚು ಅಮೆರಿಕನ್ನರಿಗೆ ಟಿಸಿಎಸ್ ಉದ್ಯೋಗ; ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಕಂಪನಿ; ಟಾಟಾ ಕಂಪನಿಯ ಇನ್ನೂ ಮಹತ್ವದ ಸಾಧನೆಗಳು ಇಲ್ಲಿವೆ

America's Best Large Employer: ಭಾರತದ ಸಾಫ್ಟ್​ವೇರ್ ಸರ್ವಿಸ್ ಕಂಪನಿ ಟಿಸಿಎಸ್ (Tata Consultancy Services) ಅಮೆರಿಕದಲ್ಲಿ ಮಿಂಚುತ್ತಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುತ್ತಿರುವ ಐಟಿ ಸರ್ವಿಸ್ ಕಂಪನಿಗಳ ಪಟ್ಟಿಗೆ ಟಿಸಿಎಸ್ ಸೇರಿದೆ. ಅಮೆರಿಕದ ಅತಿದೊಡ್ಡ ಹಾಗೂ ಅತ್ಯುತ್ತಮ ಉದ್ಯೋಗದಾತರ ಫೋರ್ಬ್ಸ್ ಪಟ್ಟಿಯಲ್ಲಿ (America's Best Large Employers) ಟಾಟಾ ಕನ್ಸಲ್ಟೆನ್ಸಿ ಸ್ಥಾನ ಪಡೆದಿದೆ. ಭಾರತದ ಸಾಫ್ಟ್​ವೇರ್ ಸರ್ವಿಸ್ ಸಂಸ್ಥೆಯೊಂದು ಇಂಥ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು ಎನ್ನಲಾಗಿದೆ.

TCS: ಹೆಚ್ಚು ಅಮೆರಿಕನ್ನರಿಗೆ ಟಿಸಿಎಸ್ ಉದ್ಯೋಗ; ಫೋರ್ಬ್ಸ್ ಪಟ್ಟಿಯಲ್ಲಿ ಭಾರತೀಯ ಕಂಪನಿ; ಟಾಟಾ ಕಂಪನಿಯ ಇನ್ನೂ ಮಹತ್ವದ ಸಾಧನೆಗಳು ಇಲ್ಲಿವೆ
ಟಿಸಿಎಸ್
ಸುಗ್ಗನಹಳ್ಳಿ ವಿಜಯಸಾರಥಿ
| Edited By: |

Updated on:Oct 08, 2026 | 12:21 PM

Share

ನವದೆಹಲಿ: ಭಾರತದ ಸಾಫ್ಟ್​ವೇರ್ ಸರ್ವಿಸ್ ಕಂಪನಿ ಟಿಸಿಎಸ್ (Tata Consultancy Services) ಅಮೆರಿಕದಲ್ಲಿ ಮಿಂಚುತ್ತಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಉದ್ಯೋಗ ನೀಡುತ್ತಿರುವ ಐಟಿ ಸರ್ವಿಸ್ ಕಂಪನಿಗಳ ಪಟ್ಟಿಗೆ ಟಿಸಿಎಸ್ ಸೇರಿದೆ. ಅಮೆರಿಕದ ಅತಿದೊಡ್ಡ ಹಾಗೂ ಅತ್ಯುತ್ತಮ ಉದ್ಯೋಗದಾತರ ಫೋರ್ಬ್ಸ್ ಪಟ್ಟಿಯಲ್ಲಿ (America’s Best Large Employers) ಟಾಟಾ ಕನ್ಸಲ್ಟೆನ್ಸಿ ಸ್ಥಾನ ಪಡೆದಿದೆ. ಭಾರತದ ಸಾಫ್ಟ್​ವೇರ್ ಸರ್ವಿಸ್ ಸಂಸ್ಥೆಯೊಂದು ಇಂಥ ಮೈಲಿಗಲ್ಲು ಮುಟ್ಟಿದ್ದು ಇದೇ ಮೊದಲು ಎನ್ನಲಾಗಿದೆ. ಉದ್ಯೋಗಿ ಸ್ನೇಹಿ ವಾತಾವರಣಕ್ಕೆ (Employee Friendly Environment) ಹೆಸರಾಗಿರುವ ಟಿಸಿಎಸ್ ಅಮೆರಿಕದಲ್ಲಿ 45,000ಕ್ಕೂ ಹೆಚ್ಚು ಮಂದಿಯನ್ನು ನೇಮಕ ಮಾಡಿಕೊಂಡಿದೆ. ಜಗತ್ತಿನ ವಿವಿಧ ದೇಶಗಳ ವಿವಿಧ ಕ್ಷೇತ್ರಗಳಲ್ಲಿ ಫೋರ್ಬ್ಸ್ (Forbes) ನಾನಾ ಪಟ್ಟಿಗಳನ್ನು ಪ್ರತೀ ವರ್ಷವೂ ಪ್ರಕಟಿಸುತ್ತಿರುತ್ತದೆ. ಅತಿಹೆಚ್ಚು ಪ್ರಭಾವ ಬೀರುವ ವ್ಯಕ್ತಿತ್ವಗಳು, ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳು, ಅತೀ ಹೆಚ್ಚು ಸಂಬಳ ಪಡೆಯುವ ಸಿಇಒಗಳು, ಅತ್ಯುತ್ತಮ ಸ್ಟಾರ್ಟಪ್​ಗಳು ಹೀಗೆ ವಿವಿಧ ಫೋರ್ಬ್ಸ್ ಪಟ್ಟಿ ನಿರೀಕ್ಷಿಸಬಹುದು.

ಅಮೆರಿಕದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ ತಯಾರಿಸುವ ಮುನ್ನ ಫೋರ್ಬ್ಸ್ ಸಂಸ್ಥೆ 1,000ಕ್ಕೂ ಹೆಚ್ಚು ಉದ್ಯೋಗಿಗಳಿರುವ ಅಮೆರಿಕದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 45,000 ಉದ್ಯೋಗಿಗಳನ್ನು ಸ್ವತಂತ್ರವಾಗಿ ಸಮೀಕ್ಷೆ ಮಾಡಿದೆ. ಫೋರ್ಬ್ಸ್ ಇಂಥ 500 ಪ್ರಮುಖ ಕಂಪನಿಗಳನ್ನು ಪಟ್ಟಿ ಮಾಡಿದೆ. ಇದರಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಸಂಸ್ಥೆ 486ನೇ ಸ್ಥಾನದಲ್ಲಿದೆ. ಆದರೂ ಭಾರತೀಯ ಕಂಪನಿಯೊಂದು ಯಾವುದೇ ವರ್ಷದಲ್ಲಿ ಈ ಪಟ್ಟಿಯಲ್ಲಿರುವುದು ಗಮನಾರ್ಹ ಸಂಗತಿ.

ಟಿಸಿಎಸ್ ಕಳೆದ 3 ವರ್ಷದಲ್ಲಿ ಅಮೆರಿಕದಲ್ಲಿ 21 ಸಾವಿರಕ್ಕೂ ಹೆಚ್ಚು ಮಂದಿಗೆ ನೌಕರಿ ಒದಗಿಸಿದೆ. ಆ ದೇಶದಲ್ಲಿ 45 ಸಾವಿರಕ್ಕೂ ಹೆಚ್ಚು ಮಂದಿ ಉದ್ಯೋಗಿಗಳು ಟಿಸಿಎಸ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಲ್ಲೂ ಟಿಸಿಎಸ್ ಬಹಳ ದೊಡ್ಡ ಸಂಖ್ಯೆಯಲ್ಲಿ ಉದ್ಯೋಗ ಒದಗಿಸುವ ಕಂಪನಿಯಾಗಿದೆ.

ಇದನ್ನೂ ಓದಿ: PM Kisan: 14ನೇ ಕಂತು ಯಾವಾಗ ಬಿಡುಗಡೆ? ರಾಜ್ಯ ಸರ್ಕಾರದ ಹಣ ಎಂದು? ಹಿಂದಿನ ಕಂತು ಸಿಗದವರು ಏನು ಮಾಡಬೇಕು?

ಟಿಸಿಎಸ್ ಅತಿಹೆಚ್ಚು ಉದ್ಯೋಗ ನೀಡಿರುವುದಲ್ಲದೇ ಕಂಪನಿಯಲ್ಲಿ ಉತ್ತಮ ಕೆಲಸದ ವಾತಾವರಣಕ್ಕೂ ಹೆಸರುವಾಸಿಯಾಗಿದೆ. ಆರ್ಥಿಕ ಹಿನ್ನಡೆ ಸಂದರ್ಭದಲ್ಲೂ ಟಿಸಿಎಸ್ ಉದ್ಯೋಗಕಡಿತಕ್ಕೆ ಕೈಹಾಕಿದ್ದು ಕಡಿಮೆ. ಉದ್ಯೋಗಿಗಳು ಬಹಳ ಖುಷಿಯಿಂದ ಕೆಲಸ ಮಾಡುವ ಕಂಪನಿಗಳಲ್ಲಿ ಟಿಸಿಎಸ್ ಕೂಡ ಒಂದು.

ಇತರ ಮೈಲಿಗಲ್ಲುಗಳು

ಅಮೆರಿಕದಲ್ಲಿ ಟಿಸಿಎಸ್ ಸಂಸ್ಥೆಗೆ ವಿಶೇಷ ಸ್ಥಾನ ಇದೆ. ವಿಶ್ವದ ಅತಿ ಪ್ರಮುಖ ಸಂಸ್ಥೆಗಳಲ್ಲಿ ಅದೂ ಒಂದೆನಿಸಿರುವುದು ಹೌದು. ಇದರಲ್ಲಿರುವ ಉದ್ಯೋಗಿ ಸ್ನೇಹಿ ವಾತಾವರಣ ಉದ್ಯಮ ವಲಯದ ಗಮನ ಸೆಳೆದಿದೆ. ಬಹಳಷ್ಟು ಉದ್ಯೋಗಾಕಾಂಕ್ಷಿಗಳ ಕನಸಿನ ಕಂಪನಿಯಾಗಿ ಮಾರ್ಪಡಿಸಿದೆ.

2023ರಲ್ಲಿ ಫಾರ್ಚೂನ್ ಮ್ಯಾಗಝಿನ್ ವಿಶ್ವದ ಅತ್ಯಂತ ಮೆಚ್ಚುಗೆಯ ಕಂಪನಿಗಳ ಪಟ್ಟಿಯಲ್ಲಿ (Best Regarded Companies) ಟಿಸಿಎಸ್ ಅನ್ನು ಸೇರಿಸಿರುವುದು ವಿಶೇಷ.

ಕರಿಯರ್​ಬ್ಲಿಸ್ ಎಂಬ ಸಂಸ್ಥೆಯು 2023ರ ಟಾಪ್ 50 ಖುಷಿ ಕಂಪನಿಗಳ ಪಟ್ಟಿಯಲ್ಲಿ (Top 50 Happiest Companies) ಟಿಸಿಎಸ್ ಅನ್ನು ಒಳಗೊಂಡಿದೆ.

ಇದನ್ನೂ ಓದಿ: Mutual Fund: ಮ್ಯೂಚುವಲ್ ಫಂಡ್​ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…

ಫೋರ್ಬ್ಸ್​ನ ಹಿಂದಿನ ಪಟ್ಟಿಗಳಲ್ಲೂ ಟಿಸಿಎಸ್

ಅಮೆರಿಕದ ಅತ್ಯುತ್ತಮ ದೊಡ್ಡ ಉದ್ಯೋಗದಾತ (Employers) ಕಂಪನಿಗಳ ಪಟ್ಟಿ 2023ವರ್ಷದ್ದು. ಫೋರ್ಬ್ಸ್​ನ 2022ರ ಅಮೆರಿಕದ ಅತ್ಯುತ್ತಮ ಉದ್ಯೋಗದಾತರ ಪಟ್ಟಿಯಲ್ಲಿ ಟಿಸಿಎಸ್ ಸ್ಥಾನ ಪಡೆದಿತ್ತು. ಇದಲ್ಲದೇ ಫೋರ್ಬ್ಸ್ ಪಟ್ಟಿಯಲ್ಲಿ ಟಿಸಿಎಸ್ ಕಾಣಿಸಿಕೊಂಡ ನಿದರ್ಶನಗಳು ಈ ಕೆಳಗಿವೆ:

  • ವಿಶ್ವದ ಅತ್ಯುತ್ತಮ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಸಂಸ್ಥೆಗಳ ಪಟ್ಟಿ (2022)
  • ಕೆನಡಾದ ಅತ್ಯುತ್ತಮ ವೈವಿಧ್ಯ ಉದ್ಯೋಗದಾರರು (2022)
  • ಗ್ಲೋಬಲ್ 2000 ಪಟ್ಟಿ (2022)
  • ಅಮೆರಿಕದ ಅತ್ಯುತ್ತಮ ಮ್ಯಾನೇಜ್ಮೆಂಟ್ ಕನ್ಸಲ್ಟಿಂಗ್ ಸಂಸ್ಥೆಗಳ ಪಟ್ಟಿ (2022)
  • ಕೆನಡಾದ ಅತ್ಯುತ್ತಮ ಉದ್ಯೋಗದಾತರ ಪಟ್ಟಿ (2022)
  • ಟಾಪ್ 100 ಡಿಜಿಟಲ್ ಕಂಪನಿಗಳ ಪಟ್ಟಿ (2019)
  • ಅತಿ ಹೆಚ್ಚು ಗೌರವ ಪಡೆದಿರುವ ಕಂಪನಿಗಳ ಪಟ್ಟಿ (2019)
  • ಹೊಸ ಉದ್ಯೋಗಿಗಳಿಗೆ ಅತ್ಯುತ್ತಮ ಕಂಪನಿಗಳ ಪಟ್ಟಿ (2018)
  • ಅತಿದೊಡ್ಡ ಬಹುರಾಷ್ಟ್ರೀಯ ಸಾಧಕರ ಪಟ್ಟಿ (2017)
  • ವಿಶ್ವದ ಅತ್ಯುತ್ತಮ ಉದ್ಯೋಗದಾರರ ಪಟ್ಟಿ (2017)
  • ವಿಶ್ವದ ಅತಿ ನಾವೀನ್ಯ ಕಂಪನಿಗಳ ಪಟ್ಟಿ (2016)
  • ಏಷ್ಯಾದ ಫ್ಯಾಬ್ 50 ಕಂಪನಿಗಳ ಪಟ್ಟಿ (2015)

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:33 pm, Tue, 14 March 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
ಮಧ್ಯರಾತ್ರಿ ಪಟಾಕಿ ಹೊಡೆದ ಆರೋಪ: ರಮ್ಯಾಗೆ ಫನ್ ವರ್ಲ್ಡ್ ಪ್ರತಿಕ್ರಿಯೆ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
‘ಪ್ರೇಮದ ಊರಲಿ’ ಸಿನಿಮಾ ನೋಡಲು ಬಂದ ಮಹಿಳೆಯರ ಜಗಳ: ವಿಡಿಯೋ
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
'ಪ್ರೇಮದ ಊರಲಿ' ಕ್ರೇಜ್: ಟಿಕೆಟ್​​​ಗಾಗಿ ಪರಸ್ಪರ ಬಡಿದಾಡಿಕೊಂಡ ಮಹಿಳೆಯರು!
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ತುಮಕೂರು ಶಿರಾದಲ್ಲಿ ಸಾಲಕ್ಕೆ ಚಹಾ ನೀಡಿಲ್ಲವೆಂದು ಬಿಹಾರದ ಯುವಕರ ಅಟ್ಟಹಾಸ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್​​ನಿಂದ ಆಮಿಷ ಆರೋಪ
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ದಸರಾ ಮುಕ್ತಾಯ, ಇಂದೇ ಕಾಡಿಗೆ ವಾಪಸಾಗುತ್ತಾ ಗಜಪಡೆ?
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ತುಮಕೂರು ವಿಶ್ವವಿದ್ಯಾಲಯದ ಜ್ಞಾನಸಿರಿ ಕ್ಯಾಂಪಸ್ ಬಳಿ ಚಿರತೆ ಪ್ರತ್ಯಕ್ಷ
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಯೂಟ್ಯೂಬ್ ನೋಡಿ ಮೊಬೈಲ್ ಕಳವು ಮಾಡುತ್ತಿದ್ದ ಕಳ್ಳ ಅರೆಸ್ಟ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಸಿಎಂ ದೆಹಲಿ ಭೇಟಿಯ ಹಿಂದಿರುವ ಅಸಲಿ ಕಾರಣ ಬಿಚ್ಚಿಟ್ಟ ಡಿಸಿಎಂ ಪರಮೇಶ್ವರ್
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ
ಅ. 26ಕ್ಕೆ ಕಬ್ಬು ಬೆಳೆಗಾರರು, ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ: ಸಿಎಂ