PM Kisan: 14ನೇ ಕಂತು ಯಾವಾಗ ಬಿಡುಗಡೆ? ರಾಜ್ಯ ಸರ್ಕಾರದ ಹಣ ಎಂದು? ಹಿಂದಿನ ಕಂತು ಸಿಗದವರು ಏನು ಮಾಡಬೇಕು?

Karnataka Contribution for PM Kisan: ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ವರ್ಷಕ್ಕೆ 3 ಕಂತುಗಳ ಹಣ ಬಿಡುಗಡೆ ಮಾಡಿದರೆ ಕರ್ನಾಟಕ ಸರ್ಕಾರ ಪ್ರತ್ಯೇಕವಾಗಿ ವರ್ಷಕ್ಕೆ 2 ಕಂತು ಹಣ ನೀಡುತ್ತದೆ. ಈವರೆಗೆ 6 ಬಾರಿ ಹಣ ಬಿಡುಗಡೆ ಮಾಡಿರುವ ಕರ್ನಾಟಕ ಇದೇ ಮಾರ್ಚ್ ತಿಂಗಳಲ್ಲಿ 7ನೇ ಕಂತನ್ನು ರಿಲೀಸ್ ಮಾಡುವ ನಿರೀಕ್ಷೆ ಇದೆ.

PM Kisan: 14ನೇ ಕಂತು ಯಾವಾಗ ಬಿಡುಗಡೆ? ರಾಜ್ಯ ಸರ್ಕಾರದ ಹಣ ಎಂದು? ಹಿಂದಿನ ಕಂತು ಸಿಗದವರು ಏನು ಮಾಡಬೇಕು?
ಪಿಎಂ ಕಿಸಾನ್ ಯೋಜನೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Mar 14, 2023 | 4:01 PM

ಬೆಂಗಳೂರು: ಬಹಳ ಜನಪ್ರಿಯವಾಗಿರುವ ಪಿಎಂ ಕಿಸಾನ್ ಸಮ್ಮಾನಿ ನಿಧಿ ಯೋಜನೆ(PM Kisan Samman Nidhi Yojana) ಅಡಿಯಲ್ಲಿ ಕೇಂದ್ರ ಸರ್ಕಾರ ಈವರೆಗೂ 13 ಕಂತುಗಳ ಹಣ ಬಿಡುಗಡೆ ಮಾಡಿದೆ. ಇದೇ ಫೆಬ್ರುವರಿ 27ರಂದು 13ನೇ ಕಂತಿನ ಹಣ ಬಿಡುಗಡೆ ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಬೆಳಗಾವಿಯ ಕಾರ್ಯಕ್ರಮವೊಂದರಲ್ಲಿ ಘೋಷಣೆ ಮಾಡಿದರು. 13ನೇ ಕಂತಿನ ಹಣ ಬಿಡುಗಡೆಯಾಗುವುದು ತುಸು ವಿಳಂಬವಾದ ಹಿನ್ನೆಲೆಯಲ್ಲಿ ಮುಂದಿನ ಕಂತಿನ ಹಣ ಯಾವಾಗ ಬಿಡುಗಡೆ ಆಗಬಹುದು ಎಂಬ ಕಾತರತೆ ಈ ಯೋಜನೆಯ ಫಲಾನುಭವಿಗಳಲ್ಲಿ ಮನೆಮಾಡಿದೆ.

ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ನವೆಂಬರ್ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಬೇಕಿತ್ತು. 14ನೇ ಕಂತಿನ ಹಣ 2023, ಏಪ್ರಿಲ್​ನಿಂದ ಜುಲೈ ತಿಂಗಳಲ್ಲಿ ಯಾವಾಗ ಬೇಕಾದರೂ ಬಿಡುಗಡೆ ಆಗಬಹುದು. ಸರ್ಕಾರ ಅಧಿಕೃತ ಘೋಷಣೆ ಮಾಡಿಲ್ಲ. ಈವರೆಗೂ ಕಂತುಗಳು ಬಿಡುಗಡೆ ಆದ ಇತಿಹಾಸ ಗಮನಿಸಿ ಮುಂದಿನ ರಿಲೀಸ್ ಡೇಟ್ ಅಂದಾಜಿಸಬಹುದು.

ಪಿಎಂ ಕಿಸಾನ್ ಯೋಜನೆಯಲ್ಲಿ ಕೇಂದ್ರ ಸರ್ಕಾರ ವರ್ಷಕ್ಕೆ 3 ಕಂತುಗಳಲ್ಲಿ ಒಟ್ಟು 6,000 ರೂ ಹಣವನ್ನು ಫಲಾನುಭವಿ ರೈತರ ಖಾಗೆಗಳಿಗೆ ನೇರವಾಗಿ ವರ್ಗಾವಣೆ ಮಾಡುತ್ತದೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ ರೈತರಿಗೆ 2,000 ರೂ ಸಿಗುತ್ತದೆ. ಇದರ ಜೊತೆಗೆ ಕರ್ನಾಟಕದ ರೈತರಿಗೆ ಡಬಲ್ ಧಮಾಕ ಎಂಬಂತೆ, ರಾಜ್ಯ ಸರ್ಕಾರ ಕೂಡ ಈ 3 ಕಂತುಗಳ ಜೊತೆಗೆ ತಾನೂ ಪ್ರತ್ಯೇಕವಾಗಿ 2 ಕಂತುಗಳ ಹಣವನ್ನು ಬಿಡುಗಡೆ ಮಾಡುತ್ತದೆ. ಅಂದರೆ, ಕರ್ನಾಟಕದ ರೈತರಿಗೆ ಒಟ್ಟು 5 ಕಂತುಗಳಲ್ಲಿ 10,000 ರೂ ಸಿಗುತ್ತದೆ. ಕರ್ನಾಟಕ ಸರ್ಕಾರ ವರ್ಷಕ್ಕೆ 2 ಬಾರಿ ಹಣ ಬಿಡುಗಡೆ ಮಾಡುತ್ತದೆ. ಈವರೆಗೆ ರಾಜ್ಯ ಸರ್ಕಾರ 6 ಕಂತುಗಳ ಹಣ ರಿಲೀಸ್ ಮಾಡಿದೆ. 2022 ಆಗಸ್ಟ್ ತಿಂಗಳ ಬಳಿಕ ರಾಜ್ಯ ಸರ್ಕಾರದಿಂದ ಫಲಾನುಭವಿಗಳಿಗೆ ಹಣ ಬಿಡುಗಡೆ ಆಗಿಲ್ಲ. ಇದೇ ಮಾರ್ಚ್ ತಿಂಗಳಲ್ಲಿ ಕರ್ನಾಟಕದ 7ನೇ ಕಂತು ಬಿಡುಗಡೆ ಆಗುವ ನಿರೀಕ್ಷೆ ಇದೆ.

13ನೇ ಕಂತಿನ ಹಣ ಸಿಗದಿದ್ದವರು ಏನು ಮಾಡಬೇಕು?

ಫೆಬ್ರುವರಿ ತಿಂಗಳ ಅಂತ್ಯದಲ್ಲಿ ಬಿಡುಗಡೆಯಾದ 13ನೇ ಕಂತಿನ ಹಣ ಸಿಗದ ರೈತರು ತಮ್ಮ ಸಮೀಪದ ರೈತ ಕೇಂದ್ರಗಳಿಗೆ ಹೋಗಿ ಮಾಹಿತಿ ಪಡೆಯಬಹುದು. ಅಥವಾ ಪಿಎಂ ಕಿಸಾನ್ ಯೋಜನೆ ಸಂಬಂಧ ಇರುವ ಹೆಲ್ಪ್​ಡೆಸ್ಕ್​ನಲ್ಲಿ ದೂರು ದಾಖಲಿಸಬಹುದು.

ಇದನ್ನೂ ಓದಿSBI Sarvottam Scheme: ಪಿಪಿಎಫ್, ಎನ್​ಎಸ್​ಸಿ ಇತ್ಯಾದಿಗಿಂತ ಎಸ್​ಬಿಐನ ಈ ಸ್ಕೀಮ್​ನಲ್ಲಿ ರಿಟರ್ನ್ಸ್ ಹೆಚ್ಚು

ಹೆಲ್ಪ್​ಲೈನ್ ನಂಬರ್: 011-24300606 ಮತ್ತು 155261

ಟಾಲ್ ಫ್ರೀ ನಂಬರ್: 18001155266

ಇಮೇಲ್: pmkisan-ict@gov.in ಅಥವಾ pmkisan-funds@gov.in

ಇಲ್ಲಿ ರೈತರು ದೂರು ನೀಡಬಹುದು.

ಆದರೆ, ದೂರು ಕೊಡುವ ಮುನ್ನ ರೈತರು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯಾ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಪಟ್ಟಿಯಲ್ಲಿ ಹೆಸರಿದ್ದೂ ಖಾತೆಗೆ ಹಣ ಬಂದಿಲ್ಲವೆಂದರೆ ಮಾತ್ರ ದೂರು ದಾಖಲಿಸಲು ಸಾಧ್ಯ.

ಬೆನಿಫಿಷಿಯರಿ ಲಿಸ್ಟ್​ನಲ್ಲಿ ತಮ್ಮ ಹೆಸರು ಇಲ್ಲದವರು ಸಮೀಪದ ರೈತ ಕೇಂದ್ರಕ್ಕೆ ಹೋಗಿ ವಿಚಾರಿಸಬಹುದು. ಯಾವ ಕಾರಣಕ್ಕೆ ಫಲಾನುಭವಿಗಳ ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿದೆ ಎಂಬುದು ಗೊತ್ತಾಗಬೇಕು. ಕೆವೈಸಿ ಅಪ್​ಡೇಟ್ ಆಗದ ಕಾರಣಕ್ಕೆ 50 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಹೆಸರು ಈ ಬಾರಿ ಕೈಬಿಟ್ಟುಹೋಗಿರುವುದು ತಿಳಿದುಬಂದಿದೆ. ಇಂಥ ಸಂದರ್ಭದಲ್ಲಿ ರೈತರು ಸೂಕ್ತ ದಾಖಲೆಗಳೊಂದಿಗೆ ಕೆವೈಸಿ ಅಪ್​ಡೇಟ್ ಮಾಡುವ ಅವಕಾಶ ಇರುತ್ತದೆ. ಪಿಎಂ ಕಿಸಾನ್ ಪೋರ್ಟಲ್​ಗೆ ಹೋಗಿ ಆನ್​ಲೈನ್​ನಲ್ಲೇ ಇ ಕೆವೈಸಿ ಭರ್ತಿ ಮಾಡಬಹುದು. ಅಥವಾ ಮೌಖಿಕವಾಗಿ ಸಮೀಪದ ಕಚೇರಿಗೆ ಹೋಗಿಯೂ ಕೆವೈಸಿ ಅಪ್​ಡೇಟ್ ಮಾಡಿಸಬಹುದು.

ಇದನ್ನೂ ಓದಿMutual Fund: ಮ್ಯೂಚುವಲ್ ಫಂಡ್​ಗಳಿಗೆ ನೆಚ್ಚಿನ ಮತ್ತು ಲಾಭದ ಕುದುರೆಗಳಾಗಿರುವ ಷೇರುಗಳಿವು…

ಫಲಾನುಭವಿಗಳ ಪಟ್ಟಿ ನೋಡುವುದು ಹೀಗೆ:

ಪಿಎಂ ಕಿಸಾನ್ ಯೋಜನೆಯ ಪೋರ್ಟಲ್​ಗೆ ಹೋದರೆ ವಿವಿಧ ಸೇವೆಗಳ ಆಯ್ಕೆ ಕಾಣಬಹುದು. ಅದರಲ್ಲಿ ಬೆನಿಫಿಷಿಯರಿ ಲಿಸ್ಟ್ ಕ್ಲಿಕ್ ಮಾಡಿದರೆ ಫಲಾನುಭವಿಗಳ ಪಟ್ಟಿ ವೀಕ್ಷಿಸಬಹುದು. ರಾಜ್ಯ, ಜಿಲ್ಲೆ, ತಾಲೂಕು, ಗ್ರಾಮ ಇತ್ಯಾದಿ ಆಯ್ಕೆ ಮಾಡಿದರೆ, ಆ ಗ್ರಾಮದಲ್ಲಿನ ಎಲ್ಲಾ ಕಿಸಾನ್ ಯೋಜನೆ ಫಲಾನುಭವಿಗಳ ಪಟ್ಟಿ ತೆರೆದುಕೊಳ್ಳುತ್ತದೆ.

ಹಾಗೆಯೇ, ಕರ್ನಾಟಕ ಸರ್ಕಾರ ನೀಡುವ ಪಿಎಂ ಕಿಸಾನ್ ಯೋಜನೆಯ ಪ್ರತ್ಯೇಕ ಕಂತುಗಳ ವಿವರ ನೋಡಬಯಸುವವರು ಕೆಕಿಸಾನ್ ಪೋರ್ಟಲ್​ಗೆ ಭೇಟಿ ನೀಡಬಹುದು. ಅಲ್ಲಿ ಫಲಾನುಭವಿಗಳಾದವರು ನೊಂದಣಿ ಮಾಡಿಕೊಂಡರೆ ಪೇಮೆಂಟ್ ಸ್ಟೇಟಸ್ ನೋಡುವ ಆಯ್ಕೆ ಸಿಗುತ್ತದೆ. ಪೇಮೆಂಟ್ ಸ್ಟೇಟಸ್ ಕ್ಲಿಕ್ ಮಾಡಿದರೆ ಫಲಾನುಭವಿಗೆ ಖಾತೆಗೆ ಯಾವ್ಯಾವಾಗ ಹಣ ಜಮೆಯಾಗಿದೆ ಎಂಬ ವಿವರ ಲಭ್ಯವಾಗುತ್ತದೆ.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ