ಮ್ಯಾನುಫ್ಯಾಕ್ಚರಿಂಗ್​ಗೆ ಸರ್ಕಾರದಿಂದ ಮತ್ತಷ್ಟು ಬಲ; ಕ್ರೀಡಾ ಸಾಮಗ್ರಿ ಮತ್ತು ಕಂಟೇನರ್ ತಯಾರಿಕೆಗೆ 11,856 ಕೋಟಿ ರೂ ಅನುದಾನ

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಕ್ಯಾಬಿನೆಟ್ ಸಭೆಯಲ್ಲಿ ಕೆಲ ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕಂಟೇನರ್ ಮ್ಯಾನುಫ್ಯಾಕ್ಚರಿಂಗ್ ಪ್ರೊಮೋಶನ್ ಸ್ಕೀಮ್​ಗೆ 10,000 ಕೋಟಿ ರೂ ಅನುದಾನ ನೀಡಲಾಗುತ್ತಿದೆ. ಖೇಲೋ ಇಂಡಿಯಾ ಕ್ರೀಡಾ ಸರಕುಗಳ ತಯಾರಿಕಾ ಸ್ಕೀಮ್​ಗೆ 1,856 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗುತ್ತಿದೆ. ಈ ಯೋಜನೆಗಳು ದೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಮ್ಯಾನುಫ್ಯಾಕ್ಚರಿಂಗ್​ಗೆ ಸರ್ಕಾರದಿಂದ ಮತ್ತಷ್ಟು ಬಲ; ಕ್ರೀಡಾ ಸಾಮಗ್ರಿ ಮತ್ತು ಕಂಟೇನರ್ ತಯಾರಿಕೆಗೆ 11,856 ಕೋಟಿ ರೂ ಅನುದಾನ
ನರೇಂದ್ರ ಮೋದಿ
Image Credit source: Narendra Modi's Youtube

Updated on: Oct 28, 2026 | 5:35 PM

ನವದೆಹಲಿ, ಅಕ್ಟೋಬರ್ 28: ಕೇಂದ್ರ ಸರ್ಕಾರ ದೇಶದಲ್ಲಿ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಅನ್ನು ಬಲಪಡಿಸಲು ಮತ್ತಷ್ಟು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸಂಪುಟ ಇಂದು ಅನುಮೋದಿಸಿದ ಕ್ರಮಗಳಲ್ಲಿ ಎರಡು ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿದ್ದಾಗಿದೆ. ಹಡಗುಗಳಲ್ಲಿ ಸರಕಗಳನ್ನು ಸಾಗಿಸಲು ಬಳಸುವ ಕಂಟೇನರ್​ಗಳ ಮ್ಯಾನುಫ್ಯಾಕ್ಚರಿಂಗ್ ಮತ್ತು ಕ್ರೀಡಾ ಸಾಮಗ್ರಿಗಳ ಮ್ಯಾನುಫ್ಯಾಕ್ಚರಿಂಗ್​ಗೆ ಭಾರೀ ಹಣ ಬಿಡುಗಡೆ ಮಾಡಲು ಸಂಪುಟದಿಂದ ಅನುಮೋದನೆ ಸಿಕ್ಕಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿನಡೆದ ಕೇಂದ್ರ ಸಂಪುಟ ಸಭೆಯು ಕಂಟೇನರ್ ಮ್ಯಾನುಫ್ಯಾಕ್ಚರಿಂಗ್ ಪ್ರೊಮೋಶನ್ ಸ್ಕೀಮ್ ಹಾಗೂ ಖೇಲೋ ಇಂಡಿಯಾ ಸ್ಪೋರ್ಟ್ಸ್ ಗೂಡ್ಸ್ ಮ್ಯಾನುಫ್ಯಾಕ್ಚರಿಂಗ್ ಸ್ಕೀಮ್​ಗಳಿಗೆ ತಲಾ 10,000 ಕೋಟಿ ರೂ ಹಾಗೂ 1,856.67 ಕೋಟಿ ರೂ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ದೀಪಾವಳಿ ಗಿಫ್ಟ್; ತುಟ್ಟಿಭತ್ಯೆ ಶೇ. 60ರಿಂದ 63ಕ್ಕೆ ಏರಿಕೆ

ಕ್ರೀಡಾ ಸರಕುಗಳ ತಯಾರಿಕೆಗೆ ಇರುವ ಈ ಸ್ಕೀಮ್​ಗೆ 1,856.67 ಕೋಟಿ ರೂ ಬಿಡುಗಡೆ ಮಾಡಲಾಗುತ್ತದೆ. ಇದು 2033-34ರವರೆಗೂ ಜಾರಿಯಲ್ಲಿರುತ್ತದೆ. ಕ್ರೀಡಾ ಸರಕುಗಳ ತಯಾರಿಕಾ ವಲಯಗಳನ್ನು ಅಭಿವೃದ್ಧಿಪಡಿಸಿ, ಕ್ಲಸ್ಟರ್ ಆಧಾರಿತ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಂ ಬೆಳವಣಿಗೆಗೆ ಉತ್ತೇಜಿಸುವ ಉದ್ದೇಶ ಹೊಂದಿದೆ. ಹೊಸ ಹೂಡಿಕೆಗಳನ್ನು ಆಕರ್ಷಿಸುವುದು ಈ ಸ್ಕೀಮ್​ನ ಗುರಿಯಾಗಿರುತ್ತದೆ.

ಬಹಳಷ್ಟು ಎಂಎಸ್​ಎಂಇಗಳು ಈ ಸ್ಕೀಮ್​ನಿಂದ ಲಾಭ ಮಾಡಬಹುದು. ಈ ಕ್ಷೇತ್ರದಲ್ಲಿ ಸಂಶೋಧನೆ, ತಂತ್ರಜ್ಞಾನ, ನಾವೀನ್ಯತೆಗೆ ಪ್ರಾಮುಖ್ಯ ಕೊಡುವ ನಿಟ್ಟಿನಲ್ಲಿ ಹೂಡಿಕೆಗಳಾಗುವ ನಿರೀಕ್ಷೆ ಇದೆ.

ಕಂಟೇನರ್ ಮ್ಯಾನುಫ್ಯಾಕ್ಚರಿಂಗ್​ಗೆ 10,000 ಕೋಟಿ ರೂ

10,000 ಕೋಟಿ ರೂ ಬಜೆಟ್​ನಲ್ಲಿ ಕಂಟೇನರ್ ಮ್ಯಾನುಫ್ಯಾಕ್ಚರಿಂಗ್ ಪ್ರೊಮೋಶನ್ ಸ್ಕೀಮ್​ಗೆ ಅನುಮೋದನೆ ನೀಡಲಾಗಿದೆ. ಈ ಅನುದಾನವು 2039-40ರವರೆಗೂ ಚಾಲ್ತಿಯಲ್ಲಿರುತ್ತದೆ.

ಇದನ್ನೂ ಓದಿ: ನವೆಂಬರ್ ತಿಂಗಳಲ್ಲಿ ದೀಪಾವಳಿ, ಕನಕದಾಸ ಜಯಂತಿ ಇತ್ಯಾದಿ ಹಬ್ಬ ಹರಿದಿನ; 15 ದಿನಗಳವರೆಗೆ ಬ್ಯಾಂಕ್ ರಜೆ

ಈ ಸ್ಕೀಮ್ ಅಡಿ ತಯಾರಕರು ಪಡೆಯುವ ಸಾಲಕ್ಕೆ ಶೇ. 3ರಷ್ಟು ಬಡ್ಡಿ ರಿಯಾಯಿತಿ ಸಿಗುತ್ತದೆ. ಜಾಗತಿಕ ಶಿಪ್ಪಿಂಗ್ ಸ್ಟ್ಯಾಂಡರ್ಡ್​ನಲ್ಲಿ ತಯಾರಿಸಲಾಗುವ ಕಂಟೇನರ್​ಗಳಿಗೆ ಹಣಕಾಸು ನೆರವು ನೀಡಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:35 pm, Wed, 28 October 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us