ಪತಿಯಿಂದ ಖರೀದಿಸಿದ ಆಸ್ತಿಗೆ ಪತ್ನಿ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದಾ? ತೆರಿಗೆ ಪ್ರಾಧಿಕಾರದ ಮಹತ್ವದ ತೀರ್ಪು

Wife buys Rs 7.5 crore property from husband, claims tax exemption: ಮಹಿಳೆಯೊಬ್ಬರು ತಮ್ಮ ಪತಿಯಿಂದ ಆಸ್ತಿ ಖರೀದಿಸಲು ಮಾಡಿದ ವೆಚ್ಚಕ್ಕೆ ಟ್ಯಾಕ್ಸ್ ಎಕ್ಸೆಂಪ್ಷನ್​ಗೆ ಪ್ರಯತ್ನಿಸಿದ್ದಾರೆ. ಆದರೆ, ಐಟಿ ಇಲಾಖೆ ಈ ಕ್ಲೇಮ್ ರಿಜೆಕ್ಟ್ ಮಾಡಿದೆ. ಆ ಮಹಿಳೆ, ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರಕ್ಕೆ ಹೋಗಿ ನ್ಯಾಯ ಪಡೆಯುವಲ್ಲಿ ಸಫಲಳಾಗಿದ್ದಾಳೆ. ಈ ಪ್ರಕರಣದ ಮಾಹಿತಿ ಇಲ್ಲಿದೆ.

ಪತಿಯಿಂದ ಖರೀದಿಸಿದ ಆಸ್ತಿಗೆ ಪತ್ನಿ ಟ್ಯಾಕ್ಸ್ ಎಕ್ಸೆಂಪ್ಷನ್ ಪಡೆಯಬಹುದಾ? ತೆರಿಗೆ ಪ್ರಾಧಿಕಾರದ ಮಹತ್ವದ ತೀರ್ಪು
ಆದಾಯ ತೆರಿಗೆ
Image Credit source: Getty Images

Updated on: Aug 21, 2026 | 3:54 PM

ಮುಂಬೈ, ಆಗಸ್ಟ್ 21: ತಮ್ಮ ಪತಿಯಿಂದ ಖರೀದಿಸಿದ ಆಸ್ತಿಗೆ ಮಹಿಳೆಯೊಬ್ಬಳು ತೆರಿಗೆ ವಿನಾಯಿತಿಗೆ ಕ್ಲೇಮ್ ಸಲ್ಲಿಸಿದ ಪ್ರಕರಣದಲ್ಲಿ ಆದಾಯ ತೆರಿಗೆ ಮೇಲ್ಮನವಿ ಪ್ರಾಧಿಕಾರದ (ITAT) ಮುಂಬೈ ಪೀಠವು ಮಹತ್ವದ ತೀರ್ಪು ನೀಡಿದೆ. ಮಹಿಳೆಯ ಟ್ಯಾಕ್ಸ್ ಎಕ್ಸೆಂಪ್ಷನ್ ಕ್ಲೇಮ್ ಅನ್ನು ತಿರಸ್ಕರಿಸಿದ್ದ ಆದಾಯ ತೆರಿಗೆ ಇಲಾಖೆ ನಿರ್ಧಾರವನ್ನು ಪ್ರಾಧಿಕಾರವು ರದ್ದು ಮಾಡಿದೆ. ತೆರಿಗೆ ವಂಚಿಸುವ ಉದ್ದೇಶದಿಂದ ಗಂಡ ಮತ್ತು ಹೆಂಡತಿ ಮಧ್ಯೆ ರಹಸ್ಯ ಹೊಂದಾಣಿಕೆ ಆಗಿದೆ ಎನ್ನುವ ಇಲಾಖೆ ಅಭಿಪ್ರಾಯವನ್ನು ತೆರಿಗೆ ಮೇಲ್ಮನವಿ ಪ್ರಾಧಿಕಾರ ಅಲ್ಲಗಳೆದಿದೆ. ಆ ಒಂದು ಸಂದೇಹ ಮಾತ್ರದಿಂದಲೇ ತೆರಿಗೆ ವಿನಾಯಿತಿ ಅವಕಾಶ ನಿರಾಕರಿಸುವುದು ಸರಿಯಲ್ಲ ಎಂದಿದೆ.

ಪ್ರಕರಣದ ಹಿನ್ನೆಲೆ

ಮಹಿಳೆಯೊಬ್ಬರು ತಮ್ಮ ಪತಿಯ ಒಡೆತನದ ಸಂಸ್ಥೆಯಿಂದ (Sole Proprietorship) ಮುಂಬೈನ ಜುಹೂ ಪ್ರದೇಶದಲ್ಲಿದ್ದ ₹7.5 ಕೋಟಿ ಮೌಲ್ಯದ ವಸತಿ ಆಸ್ತಿಯನ್ನು (Residential Property) ಖರೀದಿಸಿದ್ದರು. ನಂತರ, ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 54F ಅಡಿಯಲ್ಲಿ ಬಂಡವಾಳ ಲಾಭದ ಮೇಲಿನ (Capital Gains) ತೆರಿಗೆ ವಿನಾಯಿತಿಗಾಗಿ ₹7 ಕೋಟಿ ಹಕ್ಕು ಮಂಡಿಸಿದ್ದರು.

ಇದನ್ನೂ ಓದಿ: 10 ಲಕ್ಷ ಟನ್ ಸಕ್ಕರೆ ಆಮದಿಗೆ ಸರ್ಕಾರ ಅನುಮತಿ; ಕುಸಿಯುತ್ತಿರುವ ಶುಗರ್ ಕಂಪನಿಗಳ ಷೇರುಬೆಲೆ

ಆದಾಯ ತೆರಿಗೆ ಇಲಾಖೆಯ ಆಕ್ಷೇಪಣೆ

ತೆರಿಗೆ ಅಧಿಕಾರಿಯು ಈ ವಹಿವಾಟನ್ನು ತೆರಿಗೆ ವಂಚಿಸುವ ಉದ್ದೇಶದಿಂದ ಗಂಡ ಮತ್ತು ಹೆಂಡತಿ ನಡುವೆ ಮಾಡಿಕೊಂಡ “ರಹಸ್ಯ ಒಪ್ಪಂದ” (Colourable Device) ಎಂದು ಪರಿಗಣಿಸಿ, ಸೆಕ್ಷನ್ 54F ವಿನಾಯಿತಿಯನ್ನು ರದ್ದುಗೊಳಿಸಿದ್ದರು. ಜೊತೆಗೆ ₹7 ಕೋಟಿಯನ್ನು ಆಕೆಯ ತೆರಿಗೆಗೆ ಒಳಪಡುವ ಆದಾಯಕ್ಕೆ ಸೇರಿಸಿದ್ದರು.

ಪತಿಯ ಶಾರ್ಟ್-ಟರ್ಮ್ ಕ್ಯಾಪಿಟಲ್ ಗೇನ್

ಪತಿಯು ಈ ಆಸ್ತಿ ಮಾರಾಟದಿಂದ ಬಂದ ₹4.8 ಕೋಟಿ ಕ್ಯಾಪಿಟಲ್ ಗೇನ್ ಅನ್ನು ತಮ್ಮ ಉದ್ಯಮದ ನಷ್ಟಕ್ಕೆ (Business Losses) ಪ್ರತಿಯಾಗಿ ಸರಿದೂಗಿಸಿಕೊಂಡಿದ್ದರು. ಈ ವಿಚಾರದ ಬಗ್ಗೆ ಆದಾಯ ತೆರಿಗೆಗೆ ಸಂದೇಹ ಬಂದು, ಪತ್ನಿಯ ಟ್ಯಾಕ್ಸ್ ಎಕ್ಸೆಂಪ್ಷನ್ ಕ್ಲೇಮ್ ಅನ್ನು ತಿರಸ್ಕರಿಸಿತ್ತು.

ಪತ್ನಿ 2020-21ರ ಹಣಕಾಸು ವರ್ಷದಲ್ಲಿ ಅನ್​ಲಿಸ್ಟೆಡ್ ಷೇರುಗಳ ಮಾರಾಟದಿಂದ 8.31 ಕೋಟಿ ರೂ ಬಂಡವಾಳ ಲಾಭ ಪಡೆದಿದ್ದರು. ಈ ಎಲ್​ಟಿಸಿಜಿಗೆ ಪ್ರತಿಯಾಗಿ, ಆ ಹಣವನ್ನು ವಾಸಸ್ಥಳದ ಆಸ್ತಿಯಲ್ಲಿ ಮಾಡಿದ ಹೂಡಿಕೆಗೆ ಸರಿದೂಗಿಸಲು 54ಎಫ್ ಸೆಕ್ಷನ್ ಮೂಲಕ ಪ್ರಯತ್ನಿಸಿದ್ದಾರೆ. ಈ ರೆಸಿಡೆನ್ಷಿಯಲ್ ಪ್ರಾಪರ್ಟಿಯಲ್ಲಿ ಮಾಡಿದ ಹೂಡಿಕೆಗೆ 7 ಕೋಟಿ ರೂಗೆ ಅವರು ಟ್ಯಾಕ್ಸ್ ಎಕ್ಸೆಂಪ್ಷನ್​ಗೆ ಕ್ಲೇಮ್ ಮಾಡಿದ್ದಾರೆ. ಆ ವರ್ಷ ಅವರು ತಮ್ಮ ಟ್ಯಾಕ್ಸಬಲ್ ಇನ್ಕಮ್ 1.9 ಕೋಟಿ ರೂ ಮಾತ್ರವೆಂದು ತಿಳಿಸಿದ್ದರು. ಗಂಡನಿಂದ ಆಸ್ತಿ ಖರೀದಿಸಲು ಬಳಸಿದ ಹಣದ ಮೂಲವನ್ನೂ ಅವರು ತೋರಿಸಿದ್ದರು.

ಐಟಿ ಇಲಾಖೆ ಈ ಟ್ಯಾಕ್ಸ್ ಎಕ್ಸೆಂಪ್ಷನ್ ಕ್ಲೇಮ್ ರಿಜೆಕ್ಟ್ ಮಾಡಲು ಪ್ರಮುಖ ಕಾರಣವಾಗಿದ್ದು, ಆ ಆಸ್ತಿಯನ್ನು ಗಂಡನಿಂದ ಖರೀದಿಸಿದ ವಿಚಾರ. ಹಾಗೆಯೇ, ಪತಿಯು ಪತ್ನಿಗೆ ಮನೆ ಮಾರಿ ಬಂದ ಲಾಭವನ್ನು ತಮ್ಮ ಬ್ಯುಸಿನೆಸ್​ನಲ್ಲಾದ ನಷ್ಟಕ್ಕೆ ಸರಿದೂಗಿಸಿದ್ದು ಐಟಿ ಇಲಾಖೆ ಕ್ಲೇಮ್ ರಿಜೆಕ್ಟ್ ಮಾಡಲು ಇನ್ನೊಂದು ಕಾರಣ.

ಇದನ್ನೂ ಓದಿ: ಭಾರತೀಯ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಚಿತ ಎಐ ಪ್ಲಸ್ ಪ್ಲಾನ್; ಏನಿದರಿಂದ ಲಾಭ? ಕ್ಲೇಮ್ ಹೇಗೆ?

ITAT ತೀರ್ಪು: ಆದಾಯ ತೆರಿಗೆ ಇಲಾಖೆಯ ಕ್ರಮವನ್ನು ITAT ತಿರಸ್ಕರಿಸಿದೆ. ಕೇವಲ ಸಂಶಯದ ಆಧಾರದ ಮೇಲೆ ತೆರಿಗೆ ವಿನಾಯಿತಿಯನ್ನು ತಡೆಯಲು ಸಾಧ್ಯವಿಲ್ಲ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ. ಅದಕ್ಕೆ ನೀಡಿದ ಕಾರಣಗಳು ಇಂತಿವೆ:

  • ಖರೀದಿಸಿದ ಆಸ್ತಿಯು ಆಕೆ ವಾಸಿಸುತ್ತಿದ್ದ ಮನೆಗಿಂತ ಭಿನ್ನವಾಗಿತ್ತು.
  • ಈ ಆಸ್ತಿಯನ್ನು ಆಕೆಯ ಭವಿಷ್ಯದ ಭದ್ರತೆಗಾಗಿ ಮತ್ತು ಬಾಡಿಗೆಗೆ ನೀಡುವ ಉದ್ದೇಶದಿಂದ ಖರೀದಿಸಲಾಗಿತ್ತು.
  • ಆಸ್ತಿ ಖರೀದಿಗೆ ಬಳಸಿದ ಹಣದ ಮೂಲ ಸರಿಯಾಗಿತ್ತು.
  • ವಹಿವಾಟು ಕಾನೂನು ಚೌಕಟ್ಟಿನೊಳಗೆ ನಡೆದಿದ್ದರೆ, ಸ್ವಂತ ಪತಿಯಿಂದಲೇ ಆಸ್ತಿ ಖರೀದಿಸಿದರೂ ಸಹ ಸೆಕ್ಷನ್ 54F ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಲು ಆಕೆಗೆ ಸಂಪೂರ್ಣ ಹಕ್ಕಿದೆ ಎಂದು ಪ್ರಾಧಿಕಾರ ತಿಳಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us