ತೆಲಂಗಾಣದಲ್ಲಿ ಸರ್ಕಾರಿ ಸಂಸ್ಥೆಗಳಿಂದ 10,000 ಕೋಟಿ ರೂ ಹೂಡಿಕೆ: ಕಿಶನ್ ರೆಡ್ಡಿ

Union Minister Kishan Reddy calls for Central and State collaboration: ಕೇಂದ್​ರ ಸಾರ್ವಜನಿಕ ಉದ್ದಿಮೆಗಳು ತೆಲಂಗಾಣ ರಾಜ್ಯದಲ್ಲಿ 10,000 ಕೋಟಿ ರೂ ಹೂಡಿಕೆಗೆ ಬದ್ಧವಾಗಿವೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ತಿಳಿಸಿದ್ದಾರೆ. ಮುಂದಿನ ಮೂರು ವರ್ಷದಲ್ಲಿ ಕಲ್ಲಿದ್ದಲು ಕಂಪನಿಗಳಿಂದ ಈ ಹೂಡಿಕೆ ಆಗಲಿವೆ. ಇದಕ್ಕಾಗಿ ರಾಜ್ಯ ಸರ್ಕಾರ ಭೂಸ್ವಾಧೀನಪಡಿಸಿಕೊಟ್ಟು ನೆರವಾಗಲಿ ಎಂದು ಕಿಶನ್ ರೆಡ್ಡಿ ಕರೆ ನೀಡಿದ್ದಾರೆ. ಕೇಂದ್ರದ ಸಹಯೋಗದಲ್ಲಿ ತೆಲಂಗಾಣ ರಾಜ್ಯವು ಸುಸ್ಥಿರ ಅಭಿವೃದ್ಧಿಯಲ್ಲಿ ಮುಂಚೂಣಿಗೆ ಬರಬಹುದು ಎಂದಿದ್ದಾರೆ.

ತೆಲಂಗಾಣದಲ್ಲಿ ಸರ್ಕಾರಿ ಸಂಸ್ಥೆಗಳಿಂದ 10,000 ಕೋಟಿ ರೂ ಹೂಡಿಕೆ: ಕಿಶನ್ ರೆಡ್ಡಿ
ಕಿಶನ್ ರೆಡ್ಡಿ

Updated on: Jul 18, 2025 | 11:40 AM

ಹೈದರಾಬಾದ್, ಜುಲೈ 18: ಕೇಂದ್ರ ಸರ್ಕಾರಿ ಉದ್ದಿಮೆಗಳು (Central Public Sector Units) ಮುಂದಿನ ಮೂರು ವರ್ಷದಲ್ಲಿ ತೆಲಂಗಾಣದಲ್ಲಿ 10,000 ಕೋಟಿ ರೂ ಹೂಡಿಕೆ (Investment) ಮಾಡಲಿವೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಜಿ. ಕಿಶನ್ ರೆಡ್ಡಿ (Kishan Reddy) ಹೇಳಿದ್ದಾರೆ. ಕಲ್ಲಿದ್ದಲು ಸಚಿವಾಲಯದ ವ್ಯಾಪ್ತಿಗೆ ಬರುವ ಕೋಲ್ ಇಂಡಿಯಾ ಲಿಮಿಟೆಡ್, ಎನ್​ಎಲ್​ಸಿ ಇಂಡಿಯಾ ಲಿಮಿಟೆಡ್ ಇತ್ಯಾದಿ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ತೆಲಂಗಾಣದಲ್ಲಿ ನವೀಕರಣ ಇಂಧ ಯೋಜನೆಗಳು, ಸೌರ ಮತ್ತು ವಾಯು ಶಕ್ತಿ ಘಟಕಗಳು, ಪಂಪ್ಡ್ ಸ್ಟೋರೇಜ್ ಯೋಜನೆಗಳು (ಪಿಎಸ್​ಪಿ) ಮತ್ತು ಬ್ಯಾಟರಿ ಸ್ಟೋರೇಜ್ ಸಿಸ್ಟಂಗಳನ್ನು ಸ್ಥಾಪಿಸಲು ಸಜ್ಜಾಗಿವೆ ಎಂದು ಕಿಶನ್ ರೆಡ್ಡಿ ಹೇಳಿದ್ದಾರೆ. ಈ ಸಂಬಂಧ ಅವರು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರಿಗೆ ಪತ್ರ ಬರೆದಿದ್ದಾರೆ.

‘ತೆಲಂಗಾಣಕ್ಕೆ ನವೀಕರಣ ಇಂಧನ ಉತ್ಪಾದನಾ ಸಾಮರ್ಥ್ಯ ಇದೆ. ಕೇಂದ್ರ ಸರ್ಕಾರವೂ ಹಸಿರು ಶಕ್ತಿಗೆ ಹೆಚ್ಚು ಒತ್ತುಕೊಡುತ್ತಿದೆ. ಕೇಂದ್ರ ಮತ್ತು ರಾಜ್ಯದ ಸಹಯೋಗದಲ್ಲಿ ತೆಲಂಗಾಣದ ಆರ್ಥಿಕ ಬೆಳವಣಿಗೆ ಹೆಚ್ಚಿಸಲು, ಉದ್ಯೋಗ ಸೃಷ್ಟಿಸಲು ಅನುಕೂಲವಾಗುತ್ತದೆ. ಸುಸ್ಥಿರ ಅಭಿವೃದ್ಧಿಯಲ್ಲಿ ಈ ರಾಜ್ಯವು ಮುಂಚೂಣಿಯಲ್ಲಿರಲು ಸಾಧ್ಯವಾಗುತ್ತದೆ’ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಕೃಷಿ, ನವೀಕರಣ ಇಂಧನ ಕ್ಷೇತ್ರ ಬಲಪಡಿಸಲು 51,000 ರೂ ನೀಡಲು ಸಂಪುಟ ಸಮ್ಮತಿ

ತೆಲಂಗಾಣದಲ್ಲಿ ಕೇಂದ್ರೀಯ ಉದ್ದಿಮೆಗಳಿಂದ ಪ್ರಸ್ತಾಪಿಸಲಾಗಿರುವ ಕೆಲ ಹೂಡಿಕೆಗಳು

  1. ತೆಲಂಗಾಣದಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕಗಳ ಸ್ಥಾಪನೆ
  2. ಸುಧಾರಿತ ಬ್ಯಾಟರಿ ಎನರ್ಜಜಿ ಸ್ಟೋರೇಜ್ ಸಿಸ್ಟಂಗಳ ಅಳವಡಿಕೆ
  3. ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್​ಗಳಿಗೆ ಅಧ್ಯಯನ ಮತ್ತು ಅವುಗಳನ್ನು ಜಾರಿಗೊಳಿಸುವುದು
  4. ಕೇಂದ್ರ ಮತ್ತು ರಾಜ್ಯದ ಸರ್ಕಾರಿ ಉದ್ದಿಮೆಗಳು ಜಂಟಿಯಾಗಿ ಯೋಜನೆಗಳನ್ನು ನಡೆಸುವುದು; ಅಥವಾ ಕಲ್ಲಿದ್ದಲು ಕಂಪನಿಗಳೇ ಸ್ವತಂತ್ರವಾಗಿ ಯೋಜನೆಗಳನ್ನು ನಡೆಸುವುದು.

ಇದನ್ನೂ ಓದಿ: PM DDK Yojana: ಕೋಟ್ಯಂತರ ರೈತರ ಭವಿಷ್ಯ ಹೆಚ್ಚಿಸಬಲ್ಲ ಪಿಎಂ ಧನ-ಧಾನ್ಯ ಕೃಷಿ ಯೋಜನೆ; ಏನಿದು ಪಿಎಂಡಿಡಿಕೆವೈ?

ಈ ಮೇಲಿನ ಯೋಜನೆಗಳನ್ನು ಜಾರಿಗೆ ತರಲು ಭೂಸ್ವಾಧೀನ ಮಾಡಿಕೊಳ್ಳಬೇಕಾಗುತ್ತದೆ. ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಬೆಂಬಲ ನೀಡುವ ಅವಶ್ಯತೆ ಇದೆ ಎಂದು ಕಿಶನ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ