ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಂಗಳವಾರದಂದು (ಏಪ್ರಿಲ್ 13, 2021) ಭರ್ಜರಿ ಏರಿಕೆ ದಾಖಲಿಸಿವೆ. ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 194 ಪಾಯಿಂಟ್ ಮೇಲೇರಿ, 14,504 ಪಾಯಿಂಟ್ನೊಂದಿಗೆ ದಿನದ ವಹಿವಾಟು ಕೊನೆಗೊಳಿಸಿತು. ಇನ್ನು ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು 660.68 ಪಾಯಿಂಟ್ ಹೆಚ್ಚಳವಾಗಿ, 48,544.06ರಲ್ಲಿ ದಿನದ ಕೊನೆಗೆ ವ್ಯವಹಾರ ಮುಗಿಸಿತು. ನಿಫ್ಟಿ ಬ್ಯಾಂಕ್ ಸೂಚ್ಯಂಕವು 979.60 ಪಾಯಿಂಟ್ಗಳ ಗಳಿಕೆ ಕಂಡು, 31,771.60 ಪಾಯಿಂಟ್ನೊಂದಿಗೆ ವ್ಯವಹಾರ ಚುಕ್ತಾ ಮಾಡಿತು. ಈ ದಿನದ ವಹಿವಾಟಿನಲ್ಲಿ 1938 ಕಂಪೆನಿಯ ಷೇರುಗಳ ಬೆಲೆ ಹೆಚ್ಚಳವಾದರೆ, 926 ಕಂಪೆನಿಯ ಷೇರುಗಳ ಬೆಲೆಯಲ್ಲಿ ಇಳಿಕೆ ಆಯಿತು. ಇನ್ನು 182 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕವು ಶೇ 1.46ರಷ್ಟು ಮೇಲೇರಿತು. ಇನ್ನು ಸ್ಮಾಲ್ಕ್ಯಾಪ್ ಸೂಚ್ಯಂಕವು ಶೇ 1.21ರಷ್ಟು ಹೆಚ್ಚಳವಾಯಿತು. ಸೋಮವಾರದಂದು ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದ್ದ ಷೇರು ಮಾರುಕಟ್ಟೆಯಲ್ಲಿ ಶೇಕಡಾ 40ರಷ್ಟು ಚೇತರಿಕೆ ಕಾಣಿಸಿಕೊಳ್ಳಲು ಇಂದಿನ ಏರಿಕೆಯು ಕಾರಣ ಆಯಿತು. ಕೊರೊನಾ ಬಿಕ್ಕಟ್ಟು ನಿಯಂತ್ರಣಕ್ಕಾಗಿ ಸರ್ಕಾರದಿಂದ ವೇಗವಾಗಿ ಲಸಿಕೆ ಹಾಕುವ ಕಾರ್ಯಕ್ಕೆ ಚಾಲನೆ ದೊರೆತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರಲ್ಲಿ ಭರವಸೆ ಮೂಡಿದೆ.
ನಿಫ್ಟಿಯಲ್ಲಿ ಏರಿಕೆ ಕಂಡ ಟಾಪ್ 5 ಕಂಪೆನಿಯ ಷೇರುಗಳು
ಮಹೀಂದ್ರಾ ಅಂಡ್ ಮಹೀಂದ್ರಾ- ಶೇ 7.95
ಬಜಾಜ್ ಫಿನ್ಸರ್ವ್- ಶೇ 7.02
ಟಾಟಾ ಮೋಟಾರ್ಸ್- ಶೇ 5.69
ಬಜಾಜ್ ಫೈನಾನ್ಸ್- ಶೇ 4.83
ಮಾರುತಿ ಸುಜುಕಿ- ಶೇ 4.53
ನಿಫ್ಟಿಯಲ್ಲಿ ಇಳಿಕೆ ಕಂಡ ಟಾಪ್ 5 ಕಂಪೆನಿಯ ಷೇರುಗಳು
ಡಾ ರೆಡ್ಡೀಸ್ ಲ್ಯಾಬ್ಸ್- ಶೇ 4.40
ಟಿಸಿಎಸ್- ಶೇ 4.39
ಟೆಕ್ ಮಹೀಂದ್ರಾ- ಶೇ 3.65
ವಿಪ್ರೋ- ಶೇ 3.16
ಎಚ್ಸಿಎಲ್ ಟೆಕ್- ಶೇ 2.58
ಇದನ್ನೂ ಓದಿ: Penny Stocks: ಕೊರೊನಾ ಆತಂಕವಿದ್ದರೂ ಬಂಗಾರದ ಫಸಲು ನೀಡಿದ ಚಿಲ್ಲರೆ ಬೆಲೆಯ ಷೇರುಗಳು ಇವು..
(Closing Bell: On April 13, 2021, Indian stock market index Sensex, nifty gains. Here are the top gainers and losers of nifty.)