ನವದೆಹಲಿ, ನವೆಂಬರ್ 3: ದೇಶದಲ್ಲಿ ವಿದ್ಯುತ್ ಬಳಕೆ ಪ್ರಮಾಣ ಅಕ್ಟೋಬರ್ನಲ್ಲಿ ಅಲ್ಪ ಪ್ರಮಾಣದಲ್ಲಿ ಹೆಚ್ಚಿದೆ. ಕಲ್ಲಿದ್ದಲು ಉತ್ಪಾದನೆ ಅಕ್ಟೋಬರ್ ತಿಂಗಳಲ್ಲಿ ಗಣನೀಯವಾಗಿ ಹೆಚ್ಚಿದೆ. ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಆರು ತಿಂಗಳ ಅವಧಿಯಲ್ಲಿ ದೇಶದಲ್ಲಿ ಕಬ್ಬಿಣ ಅದಿರು ಉತ್ಪಾದನೆ ಏರಿಕೆ ಆಗಿದೆ. ಕಬ್ಬಿಣ ಅದಿರು ಮಾತ್ರವಲ್ಲ ಮ್ಯಾಂಗನೀಸ್, ಅದಿರು ಅಲುಮಿನಿಯಮ್, ಸಂಸ್ಕರಿತ ತಾಮ್ರ ಇತ್ಯಾದಿಯ ಉತ್ಪಾದನೆ ಹೆಚ್ಚಾಗಿದೆ. ಇವೆಲ್ಲವೂ ಆರ್ಥಿಕತೆಯ ಬೆಳವಣಿಗೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದರ ಸೂಚಕವಾಗಿದೆ.
ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ 14,047 ಕೋಟಿ ಯುನಿಟ್ನಷ್ಟು ವಿದ್ಯುತ್ ಬಳಕೆ ಇದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ವಿದ್ಯುತ್ ಬಳಕೆಯಲ್ಲಿ ಶೇ. 1ರಷ್ಟು ಹೆಚ್ಚಳವಾಗಿದೆ.
ಇದನ್ನೂ ಓದಿ: ಖರ್ಗೆ ಕಣ್ಣಿಗೆ ‘ಕಾಲ್ತುಳಿತ’ ಕಾಣುತ್ತೆ ಹೊರತು ಕಾರ್ಮಿಕ ಸಂಖ್ಯೆ ಹೆಚ್ಚಾಗಿದ್ದು ಕಾಣಲ್ಲ: ಸಚಿವ ಹರ್ದೀಪ್ ಸಿಂಗ್
ಕಲ್ಲಿದ್ದಲು ಉತ್ಪಾದನೆ ಪ್ರಮಾಣ ಅಕ್ಟೋಬರ್ನಲ್ಲಿ 84.45 ಮಿಲಿಯನ್ ಟನ್ನಷ್ಟಾಗಿದೆ. ಹಿಂದಿನ ವರ್ಷದ ಅಕ್ಟೋಬರ್ನಲ್ಲಿ 78.57 ಎಂಟಿಯಷ್ಟು ಕಲ್ಲಿದ್ದಲು ಉತ್ಪಾದನೆ ಆಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಉತ್ಪಾದನಾ ಪ್ರಮಾಣ ಶೇ. 7.4ರಷ್ಟು ಹೆಚ್ಚಾದಂತಾಗಿದೆ.
ಏಪ್ರಿಲ್ನಿಂದ ಅಕ್ಟೋಬರ್ವರೆಗಿನ ಏಳು ತಿಂಗಳ ಅವಧಿಯಲ್ಲಿ 537.45 ಮಿಲಿಯನ್ ಟನ್ನಷ್ಟು ಕಲ್ಲಿದ್ದಲು ಉತ್ಪಾದನೆ ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಲ್ಲಿದ್ದಲು ಉತ್ಪಾದನೆ 506.56 ಎಂಟಿಯಷ್ಟಿತ್ತು. ಉತ್ಪಾದನೆಯಲ್ಲಿ ಶೇ. 6.1ರಷ್ಟು ಏರಿಕೆ ಆಗಿತ್ತು.
ದೇಶದಲ್ಲಿ ಈ ಹಣಕಾಸು ವರ್ಷದ ಮೊದಲಾರ್ಧದಲ್ಲಿ (ಏಪ್ರಿಲ್ನಿಂದ ಸೆಪ್ಟೆಂಬರ್) 135 ಮಿಲಿಯನ್ ಟನ್ನಷ್ಟು ಕಬ್ಬಿಣ ಅದಿರಿನ ಉತ್ಪಾದನೆ ಆಗಿದೆ. ಹಿಂದಿನ ವರ್ಷದ ಈ ಅವಧಿಗೆ ಹೋಲಿಸಿದರೆ ಉತ್ಪಾದನಾ ಪ್ರಮಾಣ ಶೇ. 5.5ರಷ್ಟು ಹೆಚ್ಚಾಗಿದೆ.
ಇದನ್ನೂ ಓದಿ: ಬೆಳೆಯುತ್ತಿರುವ ಬಾಹ್ಯಾಕಾಶ ಉದ್ಯಮ; ಎಲ್ ಅಂಡ್ ಟಿ ಇನ್ನಷ್ಟು ಹೆಜ್ಜೆ ಇರಿಸಲು ನಿರ್ಧಾರ
ಮ್ಯಾಂಗನೀಸ್ ಅದಿರಿನ ಉತ್ಪಾದನೆಯು ಈ ಅವಧಿಯಲ್ಲಿ ಶೇ. 6.2ರಷ್ಟು ಹೆಚ್ಚಾಗಿ 1.7 ಮಿಲಿಯನ್ ಟನ್ ಮುಟ್ಟಿದೆ. ಅಲೂಮಿನಿಯಮ್ ಲೋಹದ ಉತ್ಪಾದನೆ 20.90 ಲಕ್ಷ ಟನ್ ಇದೆ. ಸಂಸ್ಕರಿತ ತಾಮ್ರದ ಉತ್ಪಾದನೆ ಎರಡೂವರೆ ಲಕ್ಷ ಟನ್ಗೆ ಏರಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ