ಬೆಳೆಯುತ್ತಿರುವ ಬಾಹ್ಯಾಕಾಶ ಉದ್ಯಮ; ಎಲ್ ಅಂಡ್ ಟಿ ಇನ್ನಷ್ಟು ಹೆಜ್ಜೆ ಇರಿಸಲು ನಿರ್ಧಾರ

Indian aerospace industry attracts private players: ಭಾರತದ ಬಾಹ್ಯಾಕಾಶ ಉದ್ಯಮ ಗಮನಾರ್ಹವಾಗಿ ಬೆಳೆಯುತ್ತಿದ್ದು ಖಾಸಗಿ ಸಂಸ್ಥೆಗಳಿಗೆ ವಿಪುಲ ಅವಕಾಶಗಳಿವೆ. ಈಗಾಗಲೇ ಇಸ್ರೋ, ಎಚ್​ಎಎಲ್ ಇತ್ಯಾದಿ ಸಂಸ್ಥೆಗಳ ಜೊತೆ ಸೇರಿ ರಾಕೆಟ್ ನಿರ್ಮಾಣ, ಕ್ಷಿಪಣಿ ಬಿಡಿಭಾಗಗಳ ತಯಾರಿಕೆಯಲ್ಲಿ ತೊಡಗಿರುವ ಎಲ್ ಅಂಡ್ ಟಿ ಸಂಸ್ಥೆ, ಏರೋಸ್ಪೇಸ್ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ನಿರ್ಧರಿಸಿದೆ.

ಬೆಳೆಯುತ್ತಿರುವ ಬಾಹ್ಯಾಕಾಶ ಉದ್ಯಮ; ಎಲ್ ಅಂಡ್ ಟಿ ಇನ್ನಷ್ಟು ಹೆಜ್ಜೆ ಇರಿಸಲು ನಿರ್ಧಾರ
ರಾಕೆಟ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 01, 2024 | 6:43 PM

ನವದೆಹಲಿ, ನವೆಂಬರ್ 1: ಎಂಜಿನಿಯರಿಂಗ್ ಮತ್ತು ಡಿಫೆನ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾದ ಲಾರ್ಸನ್ ಅಂಡ್ ಟೌಬ್ರೋ ಇದೀಗ ತನ್ನ ಏರೋಸ್ಪೇಸ್ ವಿಭಾಗವನ್ನು ಬಲಪಡಿಸಲು ಯೋಜಿಸಿದೆ. ಭಾರತದ ಬಾಹ್ಯಾಕಾಶ ಉದ್ಯಮ ಬಹಳ ವೇಗದಲ್ಲಿ ಬೆಳೆಯುತ್ತಿದ್ದು ಖಾಸಗಿ ವಲಯಕ್ಕೆ ಬಹಳಷ್ಟು ಅವಕಾಶಗಳನ್ನು ಕಲ್ಪಿಸಿದೆ. ಅದನ್ನು ಸದುಪಯೋಗಪಡಿಸಿಕೊಳ್ಳಲು ನಿರ್ಧರಿಸಿರುವ ಎಲ್ ಅಂಡ್ ಟಿಗೆ ಅದರ ಎಂಜಿನಿಯರಿಂಗ್ ಕೌಶಲ್ಯ ಬಹಳ ಉಪಯೋಗಕ್ಕೆ ಬರಲಿದೆ.

ಎಲ್ ಅಂಡ್ ಟಿ ಭಾರತೀಯ ಏರೋಸ್ಪೇಸ್ ಉದ್ಯಮದಲ್ಲಿ ಸಾಕಷ್ಟು ವರ್ಷಗಳಿಂದ ತೊಡಗಿಸಿಕೊಂಡಿದೆ. ಸೆಟಿಲೈಟ್ ಉಡಾಯಿಸುವ ರಾಕೆಟ್​ಗಳನ್ನು 50 ವರ್ಷಗಳಿಂದಲೂ ಅದು ಇಸ್ರೋ ಜೊತೆ ಸೇರಿ ತಯಾರಿಸುತ್ತಿದೆ. ಭಾರತದ ಕ್ಷಿಪಣಿಗಳಿಗೆ ಬೇಕಾದ ಪ್ರಮುಖ ಬಿಡಿಭಾಗಗಳನ್ನು ಅದು ಬಹಳ ವರ್ಷಗಳಿಂದ ತಯಾರಿಸಿಕೊಡುತ್ತಾ ಬಂದಿದೆ. ಮಂಗಳ ಯಾನ ಮತ್ತು ಚಂದ್ರಯಾನ ಯೋಜನೆಗಳಿಗೆ ಬೇಕಾದ ಪ್ರಮುಖ ವಸ್ತುಗಳನ್ನೂ ಎಲ್ ಅಂಡ್ ಟಿ ಪೂರೈಸುತ್ತಾ ಬಂದಿದೆ.

ಇದನ್ನೂ ಓದಿ: ಅಕ್ಟೋಬರ್​ನಲ್ಲಿ 1.87 ಲಕ್ಷ ಕೋಟಿ ರೂ ಮೊತ್ತದ ಜಿಎಸ್​ಟಿ ಸಂಗ್ರಹ; ಆರು ತಿಂಗಳಲ್ಲೇ ಗರಿಷ್ಠ ಮಟ್ಟ

ಇದೀಗ ಕೇಂದ್ರ ಸರ್ಕಾರವು ಭಾರತದ ಬಾಹ್ಯಾಕಾಶ ಉದ್ಯಮವನ್ನು ಖಾಸಗಿಯವರಿಗೂ ಪೂರ್ಣವಾಗಿ ತೆರೆದಿದೆ. ರಾಕೆಟ್​​ಗಳನ್ನು ಸ್ವತಂತ್ರವಾಗಿ ಡಿಸೈನ್ ಮಾಡುವುದರಿಂದ ಹಿಡಿದು ನಿರ್ವಹಣೆ ಮಾಡುವವರೆಗೂ ಖಾಸಗಿ ಸಂಸ್ಥೆಗಳು ಸ್ವತಂತ್ರವಾಗಿವೆ. ಈಗಾಗಲೇ ಲಾಂಚಿಂಗ್ ವಾಹನಗಳ ತಯಾರಿಕೆಯಲ್ಲಿ ಪಳಗಿರುವ ಎಲ್ ಅಂಡ್ ಟಿ ಯಂತಹ ಎಂಜಿನಿಯರಿಂಗ್ ಸಂಸ್ಥೆಗಳಿಗೆ ಹೆಚ್ಚು ಅವಕಾಶ ಸಿಕ್ಕಿದೆ.

ಒಂದು ಅಂದಾಜು ಪ್ರಕಾರ ಈ ದಶಕದೊಳಗೆ ಭಾರತದ ವಾಣಿಜ್ಯಾತ್ಮಕ ಬಾಹ್ಯಾಕಾಶ ಉದ್ಯಮ 44 ಬಿಲಿಯನ್ ಡಾಲರ್ ಗಾತ್ರದ್ದಾಗಬಹುದು ಎನ್ನುವ ಅಂದಾಜಿದೆ. ಇದಕ್ಕೆ ಖಾಸಗಿ ಸಂಸ್ಥೆಗಳಿಂದ ಯಥೇಚ್ಛ ಹೂಡಿಕೆ ಅಗತ್ಯವಾಗಿದೆ. ಎಲ್ ಅಂಡ್ ಟಿಯಂತಹ ಒಳ್ಳೆಯ ಬುನಾದಿ ಇರುವ ಸಂಸ್ಥೆಗಳು ಈ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಳ್ಳುವ ಅವಶ್ಯಕತೆ ಇದೆ.

ಇದನ್ನೂ ಓದಿ: ರಷ್ಯಾಗೆ ಯುದ್ಧನೆರವು ಒದಗಿಸಿದ ಆರೋಪದ ಮೇಲೆ 400 ಜನರು ಮತ್ತು ಸಂಸ್ಥೆಗಳ ಮೇಲೆ ಅಮೆರಿಕ ನಿಷೇಧ; ಭಾರತೀಯರೂ ಪಟ್ಟಿಯಲ್ಲಿ

ಇಸ್ರೋ, ಎಚ್​​ಎಎಲ್, ಎಲ್ ಅಂಡ್ ಟಿ ಇತ್ಯಾದಿ ಸಂಸ್ಥೆಗಳು ಜೊತೆಯಾಗಿ ಸೇರಿ ಪಿಎಸ್​ಎಲ್​ವಿ ರಾಕೆಟ್ ತಯಾರಿಸುತ್ತಿವೆ. ಖಾಸಗಿಯಾಗಿ ನಿರ್ಮಿತವಾದ ಮೊದಲ ಪಿಎಸ್​ಎಲ್​ವಿ ರಾಕೆಟ್ ಅನ್ನು ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆ ಇದೆ. ಈ ಒಂದೊಂದು ಪಿಎಸ್​ಎಲ್​ವಿ ರಾಕೆಟ್​ಗೆ 200 ಕೋಟಿ ರೂ ವೆಚ್ಚವಾಗಬಹುದು.

ಹಾಗೆಯೇ, ಕಡಿಮೆ ತೂಕದ ವಸ್ತುಗಳನ್ನು ಹೊತ್ತೊಯ್ಯಬಲ್ಲ ಎಸ್​ಎಸ್​ಎಲ್​​ವಿ ರಾಕೆಟ್ ತಯಾರಿಕೆಯನ್ನೂ ಖಾಸಗೀಕರಣಗೊಳಿಸಲಾಗುತ್ತಿದೆ. ಈ ಎಸ್​ಎಸ್​ಎಲ್​ವಿ ರಾಕೆಟ್ ತಯಾರಿಕೆಗೆ ಎಲ್ ಅಂಡ್ ಟಿ ಪೂರ್ಣವಾಗಿ ಗಮನ ಕೊಡಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ಶೋಭಾ ಶೆಟ್ಟಿಗೆ ಈಗ ಉಗ್ರಂ ಮಂಜು ನೇರ ಟಾರ್ಗೆಟ್​; ಮುಖಕ್ಕೆ ಬಿತ್ತು ಕೆಸರು
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ವಕ್ಪ್ ಕಾಯ್ದೆಗೆ ತಿದ್ದುಪಡಿ ಬರುವವರೆಗೆ ಹೋರಾಟ ನಿಲ್ಲದು: ಶೋಭಾ ಕರಂದ್ಲಾಜೆ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಕೊಟ್ಟ ಮಾತಿನಂತೆ ಉಡುಗೊರೆ ಕಳಿಸಿದ ಕಿಚ್ಚ ಸುದೀಪ್, ಭಾವುಕಗೊಂಡ ಹನುಮಂತ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಸರ್ಕಾರಿ ನೌಕರರಿಗೆ ಅನ್ನಭಾಗ್ಯ ಸ್ಕೀಮಿನ ಅಕ್ಕಿ ಕೊಡಬೇಕಿಲ್ಲ: ಸಿದ್ದರಾಮಯ್ಯ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ
ಪರ್ತ್​ ಟೆಸ್ಟ್​ನಲ್ಲಿ ಸುಲಭ ಕ್ಯಾಚ್ ಕೈಚೆಲ್ಲಿದ ಕೊಹ್ಲಿ; ನೀವೇ ನೋಡಿ