ಅಕ್ಟೋಬರ್​ನಲ್ಲಿ 1.87 ಲಕ್ಷ ಕೋಟಿ ರೂ ಮೊತ್ತದ ಜಿಎಸ್​ಟಿ ಸಂಗ್ರಹ; ಆರು ತಿಂಗಳಲ್ಲೇ ಗರಿಷ್ಠ ಮಟ್ಟ

2024 October GST collections: ಸತತ ಎಂಟನೇ ತಿಂಗಳು ಭಾರತದಲ್ಲಿ ಜಿಎಸ್​​ಟಿ ಸಂಗ್ರಹ 1.7 ಲಕ್ಷ ಕೋಟಿ ರೂ ಗಡಿ ದಾಟಿದೆ. ಸರ್ಕಾರದಿಂದ ನವೆಂಬರ್ 1ರಂದು ಬಿಡುಗಡೆ ಆದ ಅಂಕಿ ಅಂಶದ ಪ್ರಕಾರ ಅಕ್ಟೋಬರ್ ತಿಂಗಳಲ್ಲಿ 1.87 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿದೆ. ಏಪ್ರಿಲ್​ನಲ್ಲಿ 2.1 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹವಾಗಿತ್ತು. ಅದು ಬಿಟ್ಟರೆ ಒಂದು ತಿಂಗಳಲ್ಲಿ ಅತಿಹೆಚ್ಚು ಜಿಎಸ್​ಟಿ ಸಿಕ್ಕಿರುವುದು ಅಕ್ಟೋಬರ್​ನಲ್ಲೇ.

ಅಕ್ಟೋಬರ್​ನಲ್ಲಿ 1.87 ಲಕ್ಷ ಕೋಟಿ ರೂ ಮೊತ್ತದ ಜಿಎಸ್​ಟಿ ಸಂಗ್ರಹ; ಆರು ತಿಂಗಳಲ್ಲೇ ಗರಿಷ್ಠ ಮಟ್ಟ
ಜಿಎಸ್​​ಟಿ
Follow us
|

Updated on: Nov 01, 2024 | 5:41 PM

ನವದೆಹಲಿ, ನವೆಂಬರ್ 1: ಭಾರತದಲ್ಲಿ ಸರಕು ಮತ್ತು ಸೇವಾ ತೆರಿಗೆಗಳ ಭರ್ಜರಿ ಫಸಲು ಮುಂದುವರಿದಿದೆ. ಅಕ್ಟೋಬರ್ ತಿಂಗಳಲ್ಲಿ ದೇಶಾದ್ಯಂತ 1.87 ಲಕ್ಷ ಕೋಟಿ ರೂ ಮೊತ್ತದ ಜಿಎಸ್​ಟಿ ತೆರಿಗೆಗಳು ಸರಕಾರಕ್ಕೆ ಸಲ್ಲಿಕೆ ಆಗಿವೆ. ಕಳೆದ ಆರು ತಿಂಗಳಲ್ಲೇ ಅತಿ ಹೆಚ್ಚು ಸಂಗ್ರಹವಾದ ಜಿಎಸ್​ಟಿ ಮೊತ್ತ ಇದಾಗಿದೆ. ಕಳೆದ ಎಂಟು ತಿಂಗಳಿಂದಲೂ ಪ್ರತೀ ತಿಂಗಳು ಕನಿಷ್ಠ 1.7 ಲಕ್ಷ ಕೋಟಿ ರೂನಷ್ಟಾದರೂ ಜಿಎಸ್​ಟಿ ಸಂಗ್ರಹವಾಗುತ್ತಿರುವುದು ಗಮನಾರ್ಹದ ಸಂಗತಿ.

2024ರ ಸೆಪ್ಟೆಂಬರ್ ತಿಂಗಳಲ್ಲಿ ಜಿಎಸ್​ಟಿ ಸಂಗ್ರಹ 1,73,240 ಕೋಟಿ ರೂ ಇತ್ತು. 2023ರ ಅಕ್ಟೋಬರ್ ತಿಂಗಳಲ್ಲಿ 1.72 ಲಕ್ಷ ಕೋಟಿ ರೂನಷ್ಟು ಜಿಎಸ್​ಟಿ ಸಂಗ್ರಹ ಆಗಿತ್ತು. ಮಾಸಿಕ ಲೆಕ್ಕದಲ್ಲಿ ಜಿಎಸ್​ಟಿ ಸಂಗ್ರಹ ಶೇ. 8.1ರಷ್ಟು ಹೆಚ್ಚಾಗಿದೆ. ವರ್ಷವಾರು ಲೆಕ್ಕದಲ್ಲಿ ಶೇ. 8.9ರಷ್ಟು ಹೆಚ್ಚಳವಾಗಿದೆ.

ಇದನ್ನೂ ಓದಿ: ಕಮರ್ಷಿಯಲ್ ಎಲ್​ಪಿಜಿ ಗ್ಯಾಸ್ ಬೆಲೆ ಸತತ ನಾಲ್ಕನೇ ಬಾರಿ ಏರಿಕೆ; ಬೆಂಗಳೂರಿನಲ್ಲಿ 61 ರೂ ಹೆಚ್ಚಳ

2024ರ ಏಪ್ರಿಲ್ ತಿಂಗಳಲ್ಲಿ ಜಿಎಸ್​​ಟಿ ಸಂಗ್ರಹ 2.1 ಲಕ್ಷ ಕೋಟಿ ರೂನಷ್ಟಿತ್ತು. ಅದು ಇದೂವರೆಗಿನ ಸಾರ್ವಕಾಲಿಕ ಗರಿಷ್ಠ ಮಟ್ಟ ಎನಿಸಿದೆ. ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್ ಆದ ಏಪ್ರಿಲ್​ನಿಂದ ಜೂನ್​ವರೆಗಿನ ಅವಧಿಯಲ್ಲಿ ಸರಾಸರಿ ಮಾಡಿಕ ತೆರಿಗೆ ಸಂಗ್ರಹ 1.86 ಲಕ್ಷ ಕೋಟಿ ರೂ ಇತ್ತು. ಎರಡನೇ ತ್ರೈಮಾಸಿಕವಾದ ಜುಲೈನಿಂದ ಸೆಪ್ಟೆಂಬರ್​ನ ಅವಧಿಯಲ್ಲಿ ಸರಾಸರಿ ಮಾಸಿಕ ತೆರಿಗೆ ಸಂಗ್ರಹ 1.77 ಲಕ್ಷ ಕೋಟಿ ರೂಗೆ ಇಳಿಕೆ ಆಗಿದೆ. ಆದರೆ, ಕಳೆದ ಎಂಟು ತಿಂಗಳಿಂದ ಪ್ರತೀ ತಿಂಗಳು ಕನಿಷ್ಠ 1.7 ಲಕ್ಷ ಕೋಟಿ ರೂ ಜಿಎಸ್​ಟಿ ಸಂಗ್ರಹ ಆಗುತ್ತಿದೆ.

ತೆರಿಗೆ ಹೆಚ್ಚಳದ ನಡುವೆಯೂ ಚಿಂತೆಗೀಡು ಮಾಡುವ ಹಿನ್ನಡೆಯ ಅಂಶಗಳೂ ಇವೆ…

ಎರಡನೇ ಕ್ವಾರ್ಟರ್​ನಲ್ಲಿ ಸರಾಸರಿ ಮಾಸಿಕ ಜಿಎಸ್​​ಡಿ ಸಂಗ್ರಹ ಕಡಿಮೆ ಆಗಿರುವುದು ಗ್ರಾಹಕ ವೆಚ್ಚ ಮಂದಗೊಂಡಿರುವ ಸಂಕೇತ ಎಂದು ಭಾವಿಸಲಾಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಇತ್ತೀಚಿನ ತಿಂಗಳುಗಳಲ್ಲಿ ಗ್ರಾಹಕ ಅನುಭೋಗ ಪ್ರಮಾಣ ಕಡಿಮೆ ಆಗಿರುವುದು ಕಂಡು ಬರುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆ ಸೂಪರ್ ಹಿಟ್; 6 ತಿಂಗಳಲ್ಲಿ 50 ಪರ್ಸೆಂಟ್ ಹೆಚ್ಚಾದ ಗೃಹ ಸೋಲಾರ್ ವಿದ್ಯುತ್; ಸ್ಕೀಮ್ ಪಡೆಯುವುದು ಹೇಗೆ?

ಈ ಬಾರಿ ಹಬ್ಬದ ಸೀಸನ್​ನಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆಯುವುದರಿಂದ ಜಿಎಸ್​ಟಿ ಸಂಗ್ರಹ ಹೆಚ್ಚಾಗಬಹುದಾದರೂ ಒಟ್ಟಾರೆಯಾಗಿ ಮುಂಬರುವ ದಿನಗಳಲ್ಲಿ ಎಚ್ಚರಿಕೆಯಿಂದಿರಬೇಕಾಗಬಹುದು ಎಂದು ಹೇಳಲಾಗುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ದರ್ಶನ್ ಆಸ್ಪತ್ರೆಗೆ ಬಂದಾಗಲೂ ಕಡಿಮೆ ಆಗಲಿಲ್ಲ ಅಭಿಮಾನಿಗಳ ಅಬ್ಬರ
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!
ನೋಟೀಸ್ ವಾಪಸ್ಸು ಪಡೆಯುತ್ತೇವೆಂದು ಸಿಎಂ ಹೇಳಿದರೂ ಮುಗಿಯದ ತಗಾದೆ!
ನನ್ನ ಮಗ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ನನಗೆ ಒಂದೇ: ಜಮೀರ್ ಅಹ್ಮದ್
ನನ್ನ ಮಗ ಮತ್ತು ನಿಖಿಲ್ ಕುಮಾರಸ್ವಾಮಿ ಇಬ್ಬರೂ ನನಗೆ ಒಂದೇ: ಜಮೀರ್ ಅಹ್ಮದ್
ಭಟ್ಕಳ: ಮುಸ್ಲಿಂ ಜನಪ್ರತಿನಿಧಿಯಿಂದ ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ
ಭಟ್ಕಳ: ಮುಸ್ಲಿಂ ಜನಪ್ರತಿನಿಧಿಯಿಂದ ಭುವನೇಶ್ವರಿ ಭಾವಚಿತ್ರಕ್ಕೆ ಅಗೌರವ
ಕೊಹ್ಲಿ ಸಲಹೆ, ಸುಂದರ್ ಮ್ಯಾಜಿಕಲ್ ಸ್ಪಿನ್; ಕಿವೀಸ್ ನಾಯಕ ಔಟ್
ಕೊಹ್ಲಿ ಸಲಹೆ, ಸುಂದರ್ ಮ್ಯಾಜಿಕಲ್ ಸ್ಪಿನ್; ಕಿವೀಸ್ ನಾಯಕ ಔಟ್
ನಾಯಕನಾದವನು ಕಣ್ಣೀರು ಒರೆಸಬೇಕೇ ಹೊರತು ಹಾಕಬಾರದು: ಯೋಗೇಶ್ವರ್
ನಾಯಕನಾದವನು ಕಣ್ಣೀರು ಒರೆಸಬೇಕೇ ಹೊರತು ಹಾಕಬಾರದು: ಯೋಗೇಶ್ವರ್
ಕುಚಿಕು ಫ್ರೆಂಡ್ಸ್; ವೈರತ್ವ ಮರೆತು ಮುದ್ದಾಡುತ್ತಿರುವ ನಾಯಿ-ಕೋತಿ
ಕುಚಿಕು ಫ್ರೆಂಡ್ಸ್; ವೈರತ್ವ ಮರೆತು ಮುದ್ದಾಡುತ್ತಿರುವ ನಾಯಿ-ಕೋತಿ
ಸೋನಿಯ, ರಾಹುಲ್ ಗಾಂಧಿಯಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ: ಸೋಮಣ್ಣ
ಸೋನಿಯ, ರಾಹುಲ್ ಗಾಂಧಿಯಾಗದ ಕೆಲಸವನ್ನು ಖರ್ಗೆ ಮಾಡಿದ್ದಾರೆ: ಸೋಮಣ್ಣ
ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಅಮೆರಿಕದಲ್ಲಿ ದೀಪಾವಳಿ ಆಚರಿಸಿದ ಸಂಭ್ರಮಿಸಿದ ಕಮಲಾ ಹ್ಯಾರಿಸ್
ಕರ್ನಾಟಕದಂತೆ ಬೇರೆ ರಾಜ್ಯಕ್ಕೆ ತನ್ನ ಧ್ವಜ, ನಾಡಗೀತೆ ಇಲ್ಲ: ಶಿವಕುಮಾರ್
ಕರ್ನಾಟಕದಂತೆ ಬೇರೆ ರಾಜ್ಯಕ್ಕೆ ತನ್ನ ಧ್ವಜ, ನಾಡಗೀತೆ ಇಲ್ಲ: ಶಿವಕುಮಾರ್