ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಬೆಲೆ ಸತತ ನಾಲ್ಕನೇ ಬಾರಿ ಏರಿಕೆ; ಬೆಂಗಳೂರಿನಲ್ಲಿ 61 ರೂ ಹೆಚ್ಚಳ
Commercial LPG cylinder prices hiked for 4th time: ದೇಶದಲ್ಲಿ ಸತತ ನಾಲ್ಕನೇ ಬಾರಿ ಕಮರ್ಷಿಯಲ್ ಗ್ಯಾಸ್ ಬೆಲೆಗಳು ಏರಿವೆ. 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 61 ರೂನಷ್ಟು ಏರಿ, 1,879 ರೂ ತಲುಪಿದೆ. 47.5 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 4,695 ರೂ ತಲುಪಿದೆ.
ನವದೆಹಲಿ, ನವೆಂಬರ್ 1: ತೈಲ ಮಾರುಕಟ್ಟೆ ಕಂಪನಿಗಳು ಈ ತಿಂಗಳು ಕೂಡ ವಾಣಿಜ್ಯಾತ್ಮಕ ಎಲ್ಪಿಜಿ ಗ್ಯಾಸ್ ಬೆಲೆ ಹೆಚ್ಚಳ ಮಾಡಿವೆ. ಬೆಂಗಳೂರಿನಲ್ಲಿ 19 ಕಿಲೋ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 61 ರೂ ಹೆಚ್ಚಳವಾಗಿದೆ. ಇದು ಸತತ ನಾಲ್ಕನೇ ತಿಂಗಳು ಕಮರ್ಷಿಯಲ್ ಸಿಲಿಂಡರ್ ಬೆಲೆಯಲ್ಲಿ ಆಗಿರುವ ಹೆಚ್ಚಳ. ಅಕ್ಟೋಬರ್ನಲ್ಲಿ 1,818 ರೂ ಇದ್ದ ಇದರ ಬೆಲೆ ಈಗ 1,879 ರೂ ತಲುಪಿದೆ.
ಇನ್ನು, 47.5 ಕಿಲೋ ತೂಕದ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ ಬೆಲೆ 154 ರೂನಷ್ಟು ಹೆಚ್ಚಳವಾಗಿದೆ. ಇದರ ಒಂದು ಸಿಲಿಂಡರ್ ಬೆಲೆ 4,695 ರೂ ಆಗಿದೆ. ಇನ್ನು, ಐದು ಕಿಲೋ ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ 15 ರೂನಷ್ಟು ಏರಿಕೆ ಆಗಿದೆ. ಆದರೆ, ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಏರಿಕೆ ಆಗಿಲ್ಲ. ಗೃಹಬಳಕೆಯ 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 805.50 ರೂ ಇದೆ. ಐದು ಕಿಲೋ ಗೃಹ ಬಳಕೆ ಸಿಲಿಂಡರ್ ಬೆಲೆ 300.50 ರೂನಲ್ಲಿ ಮುಂದುವರಿದಿದೆ.
ಇದನ್ನೂ ಓದಿ: ಪಿಎಂ ಸೂರ್ಯಘರ್ ಯೋಜನೆ ಸೂಪರ್ ಹಿಟ್; 6 ತಿಂಗಳಲ್ಲಿ 50 ಪರ್ಸೆಂಟ್ ಹೆಚ್ಚಾದ ಗೃಹ ಸೋಲಾರ್ ವಿದ್ಯುತ್; ಸ್ಕೀಮ್ ಪಡೆಯುವುದು ಹೇಗೆ?
ಗೃಹಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆ ಕೊನೆಯ ಬಾರಿ ಹೆಚ್ಚಳವಾಗಿದ್ದು 2023ರ ಮಾರ್ಚ್ ತಿಂಗಳಲ್ಲಿ. ಆಗ 14.2 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 1,105 ರೂಗೆ ಏರಿತ್ತು. ಅದಾದ ಬಳಿಕ ವಿವಿಧ ಹಂತಗಳಲ್ಲಿ ಇಳಿಕೆಯಾಗಿ 805.50 ರೂಗೆ ಬಂದಿದೆ. ಆದರೆ, ಕಮರ್ಷಿಯಲ್ ಸಿಲಿಂಡರ್ಗಳ ಬೆಲೆ ಮಾತ್ರ ಬಹುತೇಕ ನಿರಂತರವಾಗಿ ಏರಿಕೆ ಆಗುತ್ತಿದೆ.
ನವೆಂಬರ್ 1ರಿಂದ ಬೆಂಗಳೂರಿನಲ್ಲಿ ಇರುವ ಎಲ್ಪಿಜಿ ದರ ಇದು…
ಗೃಹಬಳಕೆ 14.2 ಕಿಲೋ ಗ್ಯಾಸ್ ಬೆಲೆ: 805.50 ರೂ
ಗೃಹ ಬಳಕೆ 5 ಕಿಲೋ ಗ್ಯಾಸ್ ಬೆಲೆ: 300.50 ರೂ
ಕಮರ್ಷಿಯಲ್ 19 ಕಿಲೋ ಗ್ಯಾಸ್ ಬೆಲೆ: 1,879 ರೂ
ಕಮರ್ಷಿಯಲ್ 47.5 ಕಿಲೋ ಗ್ಯಾಸ್ ಬೆಲೆ: 4,695 ರೂ
ಇದನ್ನೂ ಓದಿ: ಇಂದಿನಿಂದ UPI ನಿಯಮಗಳಲ್ಲಿ ದೊಡ್ಡ ಬದಲಾವಣೆ: ಗೂಗಲ್ ಪೇ, ಫೋನ್ ಪೇ ಬಳಕೆದಾರರು ತಪ್ಪದೆ ಓದಿ
ಬೇರೆ ಪ್ರಮುಖ ನಗರಗಳಲ್ಲಿ ಹೊಸ ಕಮರ್ಷಿಯಲ್ 19 ಕಿಲೋ ಗ್ಯಾಸ್ ದರ ಎಷ್ಟಿದೆ?
ದೆಹಲಿ: 1,802 ರೂ
ಮುಂಬೈ: 1,754.50 ರೂ
ಕೋಲ್ಕತಾ: 1,911.50 ರೂ
ಚೆನ್ನೈ: 1,964.50 ರೂ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ