Big Salary: ಎಐ, ಚ್ಯಾಟ್​ಜಿಪಿಟಿ ಗೊತ್ತಿದ್ದವರಿಗೆ ಭರ್ಜರಿ ಡಿಮ್ಯಾಂಡ್; ಕೋಟಿಗಟ್ಟಲೆ ಸಂಬಳ ಕೊಡಲು ಕಾರ್ಪೊರೇಟ್ ಕಂಪನಿಗಳು ತಯಾರು

Demand For ChatGPT Experts: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡವರಿಗೆ ಕಾರ್ಪೊರೇಟ್ ವಲಯದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಈಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಎಐನ ತಜ್ಞರಿಗೆ ದೊಡ್ಡದೊಡ್ಡ ಸಂಬಳದ ಪ್ಯಾಕೇಜ್ ಕೊಡಲು ಕಂಪನಿಗಳು ಸಿದ್ಧ ಇವೆಯಂತೆ.

Big Salary: ಎಐ, ಚ್ಯಾಟ್​ಜಿಪಿಟಿ ಗೊತ್ತಿದ್ದವರಿಗೆ ಭರ್ಜರಿ ಡಿಮ್ಯಾಂಡ್; ಕೋಟಿಗಟ್ಟಲೆ ಸಂಬಳ ಕೊಡಲು ಕಾರ್ಪೊರೇಟ್ ಕಂಪನಿಗಳು ತಯಾರು
ಚ್ಯಾಟ್ ಜಿಪಿಟಿ

Updated on: Jun 27, 2023 | 6:17 PM

ನವದೆಹಲಿ: ಚ್ಯಾಟ್​ಜಿಪಿಟಿ ಅಪ್ಲಿಕೇಶನ್ (ChatGPT) ಬಂದ ಬಳಿಕ ಹೆಚ್ಚಿನ ಜನರ ಕಿವಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್​ನತ್ತ ನಿಮಿರಿದೆ. ಮುಂದಿನ ವರ್ಷಗಳಲ್ಲಿ ಎಐ ಹಲವು ಕ್ಷೇತ್ರಗಳಲ್ಲಿ ಬಹಳಷ್ಟು ಉದ್ಯೋಗಗಳನ್ನು ಕಸಿದುಕೊಳ್ಳುತ್ತದೆ ಎಂದು ವಿಶ್ವದ ಕೆಲ ತಜ್ಞರು ಹೇಳುತ್ತಿದ್ದಾರೆ. ಮತ್ತಿನ್ನೂ ಕೆಲವರು ಎಐ ತಂತ್ರಜ್ಞಾನ (AI Technology) ಆವಿಷ್ಕಾರಗೊಂಡಂತೆಲ್ಲಾ ಹೊಸ ಮಾದರಿಯ ಉದ್ಯೋಗಗಳ ಸೃಷ್ಟಿಯಾಗುತ್ತದೆ ಎಂದು ಹೇಳುತ್ತಾರೆ. ಇದರ ನಡುವೆ ವಿವಿಧ ಕಾರ್ಪೊರೇಟ್ ಕಂಪನಿಗಳ ಉದ್ಯೋಗಿಗಳು ಕೆಲಸ ಹೋಗುವ ಭೀತಿಯಲ್ಲೇ ಕೆಲಸ ಮಾಡುತ್ತಿರುವುದು ಕಂಡುಬರುತ್ತಿದೆ. ಇದೇ ವೇಳೆ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ಬಗ್ಗೆ ತಿಳಿದುಕೊಂಡವರಿಗೆ ಕಾರ್ಪೊರೇಟ್ ವಲಯದಲ್ಲಿ ಬೇಡಿಕೆ ಸೃಷ್ಟಿಯಾಗಿದೆ. ಈಗಿನ್ನೂ ಪ್ರವರ್ಧಮಾನಕ್ಕೆ ಬರುತ್ತಿರುವ ಎಐನ ತಜ್ಞರಿಗೆ ದೊಡ್ಡದೊಡ್ಡ ಸಂಬಳದ ಪ್ಯಾಕೇಜ್ ಕೊಡಲು ಕಂಪನಿಗಳು ಸಿದ್ಧ ಇವೆ ಎಂದು ಇತ್ತೀಚಿನ ಅಧ್ಯಯನವೊಂದರಿಂದ ತಿಳಿದುಬಂದಿದೆ.

ರೆಸ್ಯೂಮ್​ಬಿಲ್ಡರ್ ಎಂಬ ಸಂಸ್ಥೆ ಇತ್ತೀಚೆಗೆ ನಡೆಸಿದ ಅಧ್ಯಯನದ ಪ್ರಕಾರ ಶೇ. 91ರಷ್ಟು ಕಂಪನಿಗಳು ಚ್ಯಾಟ್​ಜಿಪಿಟಿ ಬಗ್ಗೆ ಒಳ್ಳೆಯ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಹುಡುಕಾಟ ನಡೆಸುತ್ತಿವೆಯಂತೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ನಾನಾ ಸ್ತರಗಳಲ್ಲಿ ಒಂದು ವ್ಯವಹಾರಕ್ಕೆ ಸಹಾಯಕವಾಗುವುದರಿಂದ ಎಐ ತಜ್ಞರಿಗೆ ಒಳ್ಳೆಯ ಬೇಡಿಕೆ ಇದೆ.

ಇದನ್ನೂ ಓದಿHDFC Merger: ಜುಲೈ 1ರಂದು ಎಚ್​ಡಿಎಫ್​ಸಿ ವಿಲೀನ; 13ಕ್ಕೆ ಷೇರುಪೇಟೆಗಳಿಂದ ಹೊರಕ್ಕೆ; ಎಚ್​ಡಿಎಫ್​ಸಿ ಜಾಗಕ್ಕೆ ಅದಾನಿ ಎಂಟರ್​ಪ್ರೈಸಸ್, ಎಲ್​ಟಿಐ ಮೈಂಡ್​ಟ್ರೀಗೆ ಮಣೆಸಾಧ್ಯತೆ

ಮತ್ತೊಂದು ವರದಿ ಪ್ರಕಾರ ಲಿಂಕ್ಡ್​ಇನ್​ನಲ್ಲಿರುವ ವಿವಿಧ ಕಂಪನಿಗಳು ಚ್ಯಾಟ್ ಜಿಪಿಟಿ ತಜ್ಞರಿಗೆ 1,85,000 ಡಾಲರ್​ವರೆಗೂ ಸಂಬಳ ಕೊಡಲು ಸಿದ್ದ ಇವೆಯಂತೆ. ಅಂದರೆ ವರ್ಷಕ್ಕೆ ಒಂದೂವರೆ ಕೋಟಿ ರೂವರೆಗೂ ಸಂಬಳದ ಆಫರ್ ಇದೆ.

ರೆಸ್ಯೂಮ್​ಬಿಲ್ಡರ್ ಸಂಸ್ಥೆ ಲಿಂಕ್ಡ್​ಇನ್​ನಲ್ಲಿ 1,187 ಕಂಪನಿಗಳ ಸಮೀಕ್ಷೆ ಮಾಡಿದೆ. ಅವುಗಳ ಪೈಕಿ ಶೇ. 91ರಷ್ಟು ಕಂಪನಿಗಳು ಚ್ಯಾಟ್​ಜಿಪಿಟಿ ಅನುಭವ ಹೊಂದಿರುವ ಉದ್ಯೋಗಿಗಳನ್ನು ನೇಮಕ ಮಾಡಲು ತುದಿಗಾಲಿನಲ್ಲಿವೆ. ಶೇ. 30ರಷ್ಟು ಕಂಪನಿಗಳಿಗೆ ಈ ತಜ್ಞರು ತೀರಾ ತುರ್ತಾಗಿ ಬೇಕಾಗಿದ್ದಾರಂತೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ