AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC Merger: ಜುಲೈ 1ರಂದು ಎಚ್​ಡಿಎಫ್​ಸಿ ವಿಲೀನ; 13ಕ್ಕೆ ಷೇರುಪೇಟೆಗಳಿಂದ ಹೊರಕ್ಕೆ; ಎಚ್​ಡಿಎಫ್​ಸಿ ಜಾಗಕ್ಕೆ ಅದಾನಿ ಎಂಟರ್​ಪ್ರೈಸಸ್, ಎಲ್​ಟಿಐ ಮೈಂಡ್​ಟ್ರೀಗೆ ಮಣೆಸಾಧ್ಯತೆ

Adani Enterprises May Replace HDFC In Sensex: ಎಚ್​ಡಿಎಫ್​ಸಿ ವಿಲೀನದ ಬಳಿಕ ಎಚ್​ಡಿಎಫ್​ಸಿ ಬ್ಯಾಂಕ್ 18 ಲಕ್ಷ ಕೋಟಿ ರೂ ಮೊತ್ತದ ಕಂಪನಿಯಾಗಿ ಹಿಗ್ಗಲಿದೆ. ಎಚ್​ಡಿಎಫ್​ಸಿ ಷೇರುದಾರರು ಬ್ಯಾಂಕ್​ನಲ್ಲಿ ಶೇ. 41ರಷ್ಟು ಪಾಲು ಹೊಂದಿರಲಿದ್ದಾರೆ.

HDFC Merger: ಜುಲೈ 1ರಂದು ಎಚ್​ಡಿಎಫ್​ಸಿ ವಿಲೀನ; 13ಕ್ಕೆ ಷೇರುಪೇಟೆಗಳಿಂದ ಹೊರಕ್ಕೆ; ಎಚ್​ಡಿಎಫ್​ಸಿ ಜಾಗಕ್ಕೆ ಅದಾನಿ ಎಂಟರ್​ಪ್ರೈಸಸ್, ಎಲ್​ಟಿಐ ಮೈಂಡ್​ಟ್ರೀಗೆ ಮಣೆಸಾಧ್ಯತೆ
ಎಚ್​ಡಿಎಫ್​ಸಿ ಬ್ಯಾಂಕ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2023 | 4:57 PM

Share

ನವದೆಹಲಿ: ದೇಶದ ಇತಿಹಾಸದಲ್ಲೇ ಅತಿದೊಡ್ಡ ಕಾರ್ಪೊರೇಟ್ ಖರೀದಿ ಒಪ್ಪಂದ ಎಂದು ಪರಿಗಣಿತವಾಗುತ್ತಿರುವ ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕುಗಳ ವಿಲೀನ (HDFC- HDFC Bank Merger) ಪ್ರಕ್ರಿಯೆ ಜುಲೈ 1ಕ್ಕೆ ಜಾರಿಯಾಗಲಿದೆ. ಅಂದರೆ ಜುಲೈ 1ರಿಂದ ಎಚ್​ಡಿಎಫ್​ಸಿ ಮಾಯವಾಗಲಿದ್ದು, ಎಚ್​ಡಿಎಫ್​ಸಿ ಬ್ಯಾಂಕ್ ಮಾತ್ರವೇ ಉಳಿದಿರುತ್ತದೆ. ಎಚ್​ಡಿಎಫ್​ಸಿ ಮಂಡಳಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಮಂಡಳಿ ಸದಸ್ಯರು ಜೂನ್ 30ಕ್ಕೆ ಒಟ್ಟು ಸೇರಲಿದ್ದು, ವಿಲೀನಕ್ಕೆ ಅನುಮೋದನೆ ಕೊಡಲಿದ್ದಾರೆ. ಈ ವಿಚಾರವನ್ನು ಎಚ್​ಡಿಎಫ್​ಸಿ ಛೇರ್ಮನ್ ದೀಪಕ್ ಪರೇಖ್ ಮಾಧ್ಯಮಗಳಿಗೆ ಇಂದು ತಿಳಿಸಿದ್ದಾರೆ.

ಇದಾದ ಬಳಿಕ, ಜುಲೈ 13ಕ್ಕೆ ಎಚ್​ಡಿಎಫ್​ಸಿ ಸಂಸ್ಥೆ ಷೇರುಪೇಟೆಗಳಿಂದ ಹೊರಬೀಳುತ್ತದೆ. ಅಂದರೆ ಅದರ ಷೇರು ಡೀಲಿಸ್ಟ್ ಆಗುತ್ತದೆ. ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕ ಹಾಗೂ ಎನ್​ಎಸ್​ಇ ನಿಫ್ಟಿ ಸೂಚ್ಯಂಕದಿಂದ ಎಚ್​ಡಿಎಫ್​ಸಿ ಡೀಲಿಸ್ಟ್ ಆಗುತ್ತದೆ. ಆ ಇಂಡೆಕ್ಸ್​ಗಳಲ್ಲಿ ಎಚ್​ಡಿಎಫ್​ಸಿ ಬದಲು ಬೇರೆ ಕಂಪನಿಗಳ ಷೇರುಗಳನ್ನು ಒಳಗೊಳ್ಳುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, 30 ಆಯ್ದ ಷೇರುಗಳಿರುವ ಸೆನ್ಸೆಕ್ಸ್​ನಲ್ಲಿ ಎಚ್​ಡಿಎಫ್​ಸಿ ಜಾಗಕ್ಕೆ ಅದಾನಿ ಎಂಟರ್​ಪ್ರೈಸಸ್ ಸಂಸ್ಥೆಯನ್ನು ಭರ್ತಿ ಮಾಡಲಾಗಬಹುದು. ನಿಫ್ಟಿ50 ಸೂಚ್ಯಂಕದಲ್ಲಿ ಅದರ ಸ್ಥಾನಕ್ಕೆ ಎಲ್​ಟಿಐ ಮೈಂಡ್​ಟ್ರೀ ಬರುವ ಸಾಧ್ಯತೆ ಇದೆ.

ಇದನ್ನೂ ಓದಿAdani Prediction: ಭಾರತದ ಆರ್ಥಿಕತೆ: 2030ಕ್ಕೆ ನಂ. 3, 2050ಕ್ಕೆ ನಂ. 2- ಗೌತಮ್ ಅದಾನಿ ಭವಿಷ್ಯ

ಎಚ್​ಡಿಎಫ್​ಸಿ ಮತ್ತು ಬ್ಯಾಂಕ್ ವಿಲೀನದಿಂದ ಬೃಹತ್ ಸಂಸ್ಥೆ

ಎಚ್​ಡಿಎಫ್​ಸಿ ಸಂಸ್ಥೆ ಮೂಲತಃ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಸಾಲ ಕೊಡುವ ಸಂಸ್ಥೆ. ಎಚ್​ಡಿಎಫ್​ಸಿ ಬ್ಯಾಂಕ್​ಗೆ ಇದು ಮಾತೃ ಸಂಸ್ಥೆ. ತನ್ನ ಅಂಗಸಂಸ್ಥೆಯೊಂದಿಗೆ ಎಚ್​ಡಿಎಫ್​ಸಿ ವಿಲೀನಗೊಳ್ಳುತ್ತಿದೆ. ಏಪ್ರಿಲ್ 4ರಂದು ಎಚ್​ಡಿಎಫ್​ಸಿಯನ್ನು ಖರೀದಿಸಲು ಎಚ್​ಡಿಎಫ್​ಸಿ ಬ್ಯಾಂಕ್ ಒಪ್ಪಿಕೊಂಡಿತ್ತು. ಇದು ಬರೋಬ್ಬರಿ 40 ಬಿಲಿಯನ್ ಡಾಲರ್ (3.27 ಲಕ್ಷ ಕೋಟಿ ರೂ) ಮೊತ್ತದ ಒಪ್ಪಂದವಾಗಿದೆ. ವಿಲೀನಗೊಂಡ ಬಳಿಕ ಎಚ್​ಡಿಎಫ್​ಸಿ ಬ್ಯಾಂಕ್​ನ ಒಟ್ಟು ಆಸ್ತಿ ಮೌಲ್ಯ 18 ಲಕ್ಷ ಕೋಟಿ ರೂ ಆಗಲಿದೆ.

ಇನ್ನೂ ಒಂದು ಸಂಗತಿ ಎಂದರೆ ವಿಲೀನದ ಬಳಿಕ ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಶೇ. 100ರಷ್ಟು ಸಾರ್ವಜನಿಕ ಷೇರುದಾರರ ಪಾಲು ಇರಲಿದೆ. ಎಚ್​ಡಿಎಫ್​ಸಿ ಮತ್ತು ಎಚ್​ಡಿಎಫ್​ಸಿ ಬ್ಯಾಂಕ್ ಎರಡೂ ಕೂಡ ಷೇರುಪೇಟೆಯಲ್ಲಿ ಲಿಸ್ಟ್ ಆಗಿದ್ದರಿಂದ ಷೇರುಹಂಚಿಕೆ ಸೂತ್ರ ಜಾರಿ ಮಾಡಲಾಗಿದೆ. ಅದರಂತೆ ಎಚ್​ಡಿಎಫ್​ಸಿಯ 25 ಷೇರಿಗೆ ಪ್ರತಿಯಾಗಿ ಎಚ್​ಡಿಎಫ್​ಸಿ ಬ್ಯಾಂಕ್​ನ 42 ಷೇರುಗಳು ಸಿಗುತ್ತವೆ. ಈ ಹೊಸ ಷೇರುಗಳು ಜುಲೈ 3ನೇ ವಾರದಂದು ಷೇರುಪೇಟೆಗಳಲ್ಲಿ ಲಿಸ್ಟ್ ಆಗಲಿವೆ. ವಿಲೀನದ ಬಳಿಕ ಎಚ್​ಡಿಎಫ್​ಸಿಯ ಷೇರುದಾರರು ಎಚ್​​ಡಿಎಫ್​ಸಿ ಬ್ಯಾಂಕ್​ನ ಶೇ. 40ಕ್ಕಿಂತ ಹೆಚ್ಚಿನ ಪಾಲು ಹೊಂದಲಿರುವುದು ವಿಶೇಷ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ಬಾರ್​ಗೆ ನುಗ್ಗಿದ ಕೊಬ್ಬರಿ ಹೋರಿ, ಮದ್ಯಪ್ರಿಯರು ಕಕ್ಕಾಬಿಕ್ಕಿ!
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ರಾಯಚೂರಲ್ಲೂ ಘರ್ಜಿಸಿದ ಜೆಸಿಬಿಗಳು: 20ಕ್ಕೂ ಅಧಿಕ ಮನೆಗಳ ತೆರವು
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಅಪಾರ್ಟ್ಮೆಂಟ್​​ನಲ್ಲಿ ಸಿಲುಕಿಕೊಂಡ ಬೆಕ್ಕನ್ನು ಕಾಪಾಡಿದ ಅಗ್ನಿಶಾಮಕ ದಳ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಬಿಗ್ ಬಾಸ್​​ನಿಂದ ಹೊರ ಬರಲು ಅದುವೇ ಕಾರಣವಾಯ್ತು; ಸೂರಜ್ ಬೇಸರ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಹುಟ್ಟೂರಿನಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಹೆಚ್.ಡಿ.ದೇವೇಗೌಡ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಿಲ್ಲದ ಹಿಂಸಾಚಾರ, ಹಿಂದೂಗಳ ಮನೆಗಳಿಗೆ ಬೆಂಕಿ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ