Bank Holidays: ಡಿಸೆಂಬರ್ ತಿಂಗಳಲ್ಲಿ ವಿವಿಧೆಡೆ 18 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ

Bank holidays list on 2025 December: ಆರ್​ಬಿಐ ಕ್ಯಾಲೆಂಡರ್ ಪ್ರಕಾರ 2025ರ ಡಿಸೆಂಬರ್ ತಿಂಗಳಲ್ಲಿ ಒಟ್ಟು 18 ದಿನಗಳು ಬ್ಯಾಂಕುಗಳಿಗೆ ರಜೆ ಇದೆ. ಇದರಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಒಂದು ಸಾರ್ವತ್ರಿಕ ರಜೆಯೂ ಸೇರಿದೆ. ಹಾಗೆಯೇ, ಆರು ಶನಿವಾರ ಮತ್ತು ಭಾನುವಾರದ ರಜೆಗಳಿವೆ. ಗೋವಾ ವಿಮೋಚನಾ ದಿನ ಹಾಗೂ ಕೆಲ ಪುಣ್ಯತಿಥಿಗಳು ಡಿಸೆಂಬರ್​ನಲ್ಲಿ ಇವೆ. ಕರ್ನಾಟಕದಲ್ಲಿ ಒಟ್ಟು 7 ದಿನ ಮಾತ್ರ ರಜೆ ಇರುವುದು.

Bank Holidays: ಡಿಸೆಂಬರ್ ತಿಂಗಳಲ್ಲಿ ವಿವಿಧೆಡೆ 18 ದಿನ ಬ್ಯಾಂಕ್ ರಜೆ; ಇಲ್ಲಿದೆ ಪಟ್ಟಿ
ಬ್ಯಾಂಕ್ ರಜಾದಿನ

Updated on: Nov 25, 2025 | 12:02 PM

ನವದೆಹಲಿ, ನವೆಂಬರ್ 25: ಹಬ್ಬಗಳ ಸೀಸನ್ ಮುಗಿದಿದ್ದರೂ ವರ್ಷಾಂತ್ಯದ ತಿಂಗಳಾದ ಡಿಸೆಂಬರ್​ನಲ್ಲಿ ರಜಾ ದಿನಗಳಿಗೆ ಬರವಿದ್ದಂತಿಲ್ಲ. ಆರ್​ಬಿಐ (RBI) ಕ್ಯಾಲೆಂಡರ್ ಪ್ರಕಾರ ದೇಶದ ವಿವಿಧೆಡೆ ಬ್ಯಾಂಕುಗಳಿಗೆ ಒಟ್ಟು 18 ದಿನಗಳವರೆಗೆ ರಜೆ (Bank holidays) ಇದೆ. ಇದರಲ್ಲಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಒಳಗೊಂಡಿವೆ. ಈ ಡಿಸೆಂಬರ್​ನಲ್ಲಿ ಕ್ರಿಸ್ಮಸ್ ಹಬ್ಬಕ್ಕೆ ಸಾರ್ವತ್ರಿಕ ರಜೆ ಇದೆ. ಉಳಿದಂತೆ ಬೇರೆ ಬೇರೆ ದಿನಗಳು ಪ್ರಾದೇಶಿಕ ರಜೆಗಳಿವೆ. ಈಶಾನ್ಯ ರಾಜ್ಯಗಳಲ್ಲಿ ಹೆಚ್ಚಿನ ಕಡೆ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 20ರಿಂದಲೇ ರಜೆಗಳು ಶುರುವಾಗುತ್ತವೆ. ಮೇಘಾಲಯ ರಾಜ್ಯದಲ್ಲಂತೂ ಡಿಸೆಂಬರ್ 18ರಿಂದ 30ರವರೆಗೆ ಮೂರು ದಿನ ಹೊರತುಪಡಿಸಿ ಉಳಿದ ದಿನಗಳು ರಜೆ ಇದೆ. ಮಿಝೋರಾಮ್, ನಾಗಾಲ್ಯಾಂಡ್, ಸಿಕ್ಕಿಂ ರಾಜ್ಯಗಳಲ್ಲೂ ಬ್ಯಾಂಕ್ ರಜಾದಿನಗಳು ಡಿಸೆಂಬರ್​ನಲ್ಲಿ ಬಹಳ ಇವೆ. ಕರ್ನಾಟಕದಲ್ಲಿ ಶನಿವಾರ ಮತ್ತು ಭಾನುವಾರದ ರೆಗ್ಯುಲರ್ ರಜೆಗಳ ಹೊರತಾಗಿ ಇರುವುದು ಡಿ. 25ರ ಕ್ರಿಸ್ಮಸ್​ನಂದು ಮಾತ್ರವೇ.

ಡಿಸೆಂಬರ್ ತಿಂಗಳಲ್ಲಿ ವಿವಿಧೆಡೆ ಬ್ಯಾಂಕ್ ರಜಾದಿನಗಳು

  • ಡಿ. 1, ಸೋಮವಾರ: ರಾಜ್ಯ ಉದ್ಘಾಟನೆ ದಿನ (ಅರುಣಾಚಲ ಪ್ರದೇಶ ಮತ್ತು ನಾಗಾಲ್ಯಾಂಡ್ ರಾಜ್ಯಗಳಲ್ಲಿ ರಜೆ)
  • ಡಿ. 3, ಬುಧವಾರ: ಸೇಂಟ್ ಕ್ಸೇವಿಯರ್ ಫೀಸ್ಟ್ (ಗೋವಾದಲ್ಲಿ ರಜೆ)
  • ಡಿ. 7: ಭಾನುವಾರದ ರಜೆ
  • ಡಿ. 12, ಶುಕ್ರವಾರ: ಪಾ ಟೋಗನ್ ನೆಂಗಜಿಂಜ ಸಾಂಗ್ಮ ಪುಣ್ಯತಿಥಿ (ಮೇಘಾಲಯ ರಾಜ್ಯದಲ್ಲಿ ರಜೆ
  • ಡಿ. 13: ಎರಡನೇ ಶನಿವಾರದ ರಜೆ
  • ಡಿ. 14: ಭಾನುವಾರ ರಜೆ
  • ಡಿ. 18, ಗುರುವಾರ: ಉ ಸೋಸೋ ಥಾಮ್ ಪುಣ್ಯತಿಥಿ (ಮೇಘಾಲಯ ರಾಜ್ಯದಲ್ಲಿ ರಜೆ)
  • ಡಿ. 19, ಶುಕ್ರವಾರ: ಗೋವಾ ವಿಮೋಚನಾ ದಿನ (ಗೋವಾದಲ್ಲಿ ರಜೆ)
  • ಡಿ. 20, ಶನಿವಾರ: ಲೂಸೂಂಗ್, ನಾಮಸೂಂಗ್ ಉತ್ಸವ (ಸಿಕ್ಕಿಂನಲ್ಲಿ ರಜೆ)
  • ಡಿ. 21: ಭಾನುವಾರದ ರಜೆ
  • ಡಿ. 22, ಸೋಮವಾರ: ಲೂಸೂಂಗ್, ನಾಮಸೂಂಗ್ ಉತ್ಸವ (ಸಿಕ್ಕಿಂನಲ್ಲಿ ರಜೆ)
  • ಡಿ. 24, ಬುಧವಾರ: ಕ್ರಿಸ್ಮಸ್ ಈವ್ (ಮಿಝೋರಾಮ್, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ರಜೆ)
  • ಡಿ. 25, ಗುರುವಾರ: ಕ್ರಿಸ್ಮಸ್ ಹಬ್ಬ (ಎಲ್ಲೆಡೆ ರಜೆ)
  • ಡಿ. 26, ಶುಕ್ರವಾರ: ಕ್ರಿಸ್ಮಸ್ ಉತ್ಸವ (ಮಿಝೋರಾಮ್, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳಲ್ಲಿ ರಜೆ)
  • ಡಿ. 27: ನಾಲ್ಕನೇ ಶನಿವಾರದ ರಜೆ
  • ಡಿ. 28: ಭಾನುವಾರದ ರಜೆ
  • ಡಿ. 30, ಮಂಗಳವಾರ: ಉ ಕಿಯಾಂಗ್ ನಂಗ್​ಬಾ ಪುಣ್ಯ ತಿಥಿ (ಮೇಘಾಲಯ ರಾಜ್ಯದಲ್ಲಿ ರಜೆ)
  • ಡಿ. 31, ಬುಧವಾರ: ಹೊಸ ವರ್ಷಾಚರಣೆ, ಇಮೋಯ್ನು ಇರಾಟ್ಪ (ಮಿಝೋರಾಂ ಮತ್ತು ಮಣಿಪುರ್ ರಾಜ್ಯಗಳಲ್ಲಿ ರಜೆ)

ಇದನ್ನೂ ಓದಿ: ವಿಶ್ವದ ಪ್ರಬಲ ಉದ್ಯಮಿ ಲಕ್ಷ್ಮಿ ಮಿಟ್ಟಲ್ ದೇಶ ಬಿಟ್ಟು ಹೋಗುವಂತೆ ಮಾಡಿದ ಬ್ರಿಟನ್​ನ ಹೊಸ ಟ್ಯಾಕ್ಸ್ ನಿಯಮಗಳೇನು?

ಕರ್ನಾಟಕದಲ್ಲಿ ಡಿಸೆಂಬರ್​ನಲ್ಲಿ ಬ್ಯಾಂಕ್ ರಜಾದಿನಗಳು

  • ಡಿ. 7: ಭಾನುವಾರದ ರಜೆ
  • ಡಿ. 13: ಎರಡನೇ ಶನಿವಾರದ ರಜೆ
  • ಡಿ. 14: ಭಾನುವಾರ ರಜೆ
  • ಡಿ. 21: ಭಾನುವಾರದ ರಜೆ
  • ಡಿ. 25, ಗುರುವಾರ: ಕ್ರಿಸ್ಮಸ್ ಹಬ್ಬ (ಎಲ್ಲೆಡೆ ರಜೆ)
  • ಡಿ. 27: ನಾಲ್ಕನೇ ಶನಿವಾರದ ರಜೆ
  • ಡಿ. 28: ಭಾನುವಾರದ ರಜೆ

ರಜಾದಿನಗಳಲ್ಲಿ ಬ್ಯಾಂಕ್ ಕಚೇರಿಗಳು ಬಾಗಿಲು ಬಂದ್ ಆಗಿದ್ದರೂ ಆನ್​ಲೈನ್ ಬ್ಯಾಂಕಿಂಗ್ ಸದಾ ತೆರೆದಿರುತ್ತದೆ. ಜನರು ನೆಟ್​ಬ್ಯಾಂಕಿಂಗ್ ಉಪಯೋಗಿಸಿ ಹೆಚ್ಚಿನ ಬ್ಯಾಂಕಿಂಗ್ ಚಟುವಟಿಕೆ ಮಾಡಬಹುದು. ಕ್ಯಾಷ್ ಅಗತ್ಯ ಇದ್ದವರಿಗೆ ಎಟಿಎಂಗಳು ಸದಾ ತೆರೆದೇ ಇರುತ್ತವೆ. ಆದರೆ, ಚೆಕ್ ನೀಡುವುದು, ದೊಡ್ಡ ಮೊತ್ತದ ಆರ್​ಟಿಜಿಎಸ್ ಇತ್ಯಾದಿ ನಡೆಸಲು ಕಚೇರಿಗೆ ಹೋಗಬೇಕಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ