AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಶ್ವದ ಪ್ರಬಲ ಉದ್ಯಮಿ ಲಕ್ಷ್ಮಿ ಮಿಟ್ಟಲ್ ದೇಶ ಬಿಟ್ಟು ಹೋಗುವಂತೆ ಮಾಡಿದ ಬ್ರಿಟನ್​ನ ಹೊಸ ಟ್ಯಾಕ್ಸ್ ನಿಯಮಗಳೇನು?

Reasons why Lakshmi Mittal leaving UK: ಭಾರತ ಮೂಲದ ಉಕ್ಕು ಉದ್ಯಮಿ ಲಕ್ಷ್ಮೀ ಮಿಟ್ಟಲ್ ಅವರು ಬ್ರಿಟನ್ ದೇಶ ಬಿಟ್ಟು ಬೇರೆಡೆ ಹೋಗಲು ನಿರ್ಧರಿಸಿದ್ದಾರೆ. ಬ್ರಿಟನ್ ಸರ್ಕಾರದ ಪ್ರಸ್ತಾಪಿತ ಹೊಸ ಕಾನೂನಿಗೆ ವ್ಯಗ್ರಗೊಂಡು ಲಕ್ಷ್ಮೀ ಮಿಟ್ಟಲ್ ಈ ನಿರ್ಧಾರಕ್ಕೆ ಬಂದಿರುವುದು ತಿಳಿದುಬಂದಿದೆ. ನಾನ್-ಡಾಮಿಸೈಲ್ ಸಿಸ್ಟಂ ತೆಗೆದುಹಾಕಲಿರುವುದು, ಇನ್​ಹೆರಿಟೆನ್ಸ್ ಟ್ಯಾಕ್ಸ್ ಏರಿಸಲಿರುವುದು ಇತ್ಯಾದಿ ಕಾರಣ ಎನ್ನಲಾಗಿದೆ.

ವಿಶ್ವದ ಪ್ರಬಲ ಉದ್ಯಮಿ ಲಕ್ಷ್ಮಿ ಮಿಟ್ಟಲ್ ದೇಶ ಬಿಟ್ಟು ಹೋಗುವಂತೆ ಮಾಡಿದ ಬ್ರಿಟನ್​ನ ಹೊಸ ಟ್ಯಾಕ್ಸ್ ನಿಯಮಗಳೇನು?
ಲಕ್ಷ್ಮೀ ಮಿಟ್ಟಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 24, 2025 | 7:24 PM

Share

ಮಿಟ್ಟಲ್ ಕುಟುಂಬದ ಹೆಸರು ಭಾರತೀಯರಿಗೆ ಚಿರಪರಿಚಿತ. ಲಕ್ಷ್ಮೀ ಮಿಟ್ಟಲ್ (Lakshmi Mittal) ಹೆಸರು ಭಾರತೀಯರಿಗಿಂತ ಬ್ರಿಟನ್ ಜನರಿಗೆ ಚಿರಪರಿಚಿತ. ಮೂರು ದಶಕಗಳಿಂದ ಯುನೈಟೆಡ್ ಕಿಂಗ್ಡಂನ ಶ್ರೀಮಂತ ಉದ್ಯಮಿಗಳ ಸಾಲಿನಲ್ಲಿ ಕಾಣಿಸುತ್ತಾ ಬಂದವರು ಲಕ್ಷ್ಮೀ ಮಿಟ್ಟಲ್. ವಿಶ್ವದ ಅತಿದೊಡ್ಡ ಉಕ್ಕು ಉದ್ಯಮಿಗಳಲ್ಲಿ ಒಬ್ಬರು. ವಿಶ್ವದ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬರು. ಇಂತಿಪ್ಪ ಲಕ್ಷ್ಮೀ ಮಿಟ್ಟಲ್ ಬ್ರಿಟನ್ ದೇಶ ಬಿಟ್ಟು ಹೋಗಲು ನಿರ್ಧರಿಸಿದ್ದಾರೆ. ಬ್ರಿಟನ್​ನ ಪ್ರಸ್ತಾಪಿತ ಹೊಸ ಟ್ಯಾಕ್ಸ್ ಸಿಸ್ಟಂನಿಂದಾಗಿ ಅವರು ಬೇರೆಡೆ ನೆಲೆ ಕಂಡುಕೊಳ್ಳುತ್ತಿದ್ದಾರೆ.

ಬ್ರಿಟನ್​ನ ಹೊಸ ಟ್ಯಾಕ್ಸ್ ಕಾನೂನಿನಲ್ಲಿ ಏನಂಥದ್ದಿದೆ..?

ಬ್ರಿಟನ್​ನಲ್ಲಿ ಬಹಳ ವರ್ಷಗಳಿಂದ ನಾನ್-ಡಾಮಿಸೈಲ್ ಟ್ಯಾಕ್ಸ್ (Non-domiciled status) ಕಾನೂನು ಇದೆ. ಇದರ ಪ್ರಕಾರ, ಬ್ರಿಟನ್ ನಿವಾಸಿಗಳು ಆ ದೇಶದಲ್ಲಿ ಗಳಿಸಿದ ಆದಾಯಕ್ಕೆ ಮಾತ್ರವೇ ತೆರಿಗೆ ಪಾವತಿಸಬೇಕು. ಬೇರೆ ದೇಶಗಳಿಂದ ಗಳಿಸಿದ ಆದಾಯಕ್ಕೆ ತೆರಿಗೆ ಬಾಧ್ಯತೆ ಹೊಂದಿರುವುದಿಲ್ಲ. ಈಗ ಈ ನಾನ್-ಡಾಮಿಸೈಲ್ ಟ್ಯಾಕ್ಸ್ ಸ್ಟೇಟಸ್ ಅನ್ನು ತೆಗೆದುಹಾಕಲು ಬ್ರಿಟನ್ ಸರ್ಕಾರ ಪ್ರಸ್ತಾಪಿಸಿದೆ.

ಇದನ್ನೂ ಓದಿ: ಕೋವಿಡ್ ಪೂರ್ವದ ಮಟ್ಟ ಮುಟ್ಟಲು ಪರದಾಡುತ್ತಿರುವ ಶಕ್ತಿಶಾಲಿ ದೇಶಗಳ ಮಧ್ಯೆ ಭಾರತದ ಮಿಂಚಿನ ಓಟ

ಲಕ್ಷ್ಮೀನಿವಾಸ್ ಮಿಟ್ಟಲ್ ಅವರ ಉದ್ಯಮವು ವಿಶ್ವದ ಹಲವೆಡೆ ಬ್ಯುಸಿನೆಸ್ ಹೊಂದಿದ್ದು, ಎಲ್ಲೆಡೆಯಿಂದ ಆದಾಯ ಗಳಿಸುತ್ತಿದೆ. ಆಯಾ ದೇಶಗಳಲ್ಲಿ ತೆರಿಗೆ ಕಟ್ಟಿ, ಬ್ರಿಟನ್​ನಲ್ಲೂ ಒಟ್ಟಿಗೆ ತೆರಿಗೆ ಕಟ್ಟಬೇಕಾಗುತ್ತದೆ. ಲಕ್ಷ್ಮೀ ಮಿಟ್ಟಲ್ ಬ್ರಿಟನ್ ತೊರೆಯಲು ಇದಕ್ಕಿಂತಲೂ ದೊಡ್ಡ ಕಾರಣವಿದೆ. ಅದು ಇನ್​ಹೆರಿಟೆನ್ಸ್ ಟ್ಯಾಕ್ಸ್. 3,25,000 ಪೌಂಡ್ (33 ಕೋಟಿ ರೂಗಿಂತ ಹೆಚ್ಚು) ಮೌಲ್ಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದರೆ ಶೇ. 40ರಷ್ಟು ಇನ್ಹೆರಿಟೆನ್ಸ್ ಟ್ಯಾಕ್ಸ್ ಕಟ್ಟಬೇಕು. ಮುಂಬರುವ ದಿನಗಳಲ್ಲಿ ಈ ಟ್ಯಾಕ್ಸ್ ಅನ್ನು ಇನ್ನೂ ಏರಿಸುವ ಸಾಧ್ಯತೆ ಇದೆ. ಇದು ಲಕ್ಷ್ಮೀ ಮಿಟ್ಟಲ್ ಹಾಗೂ ಇತರ ಅನೇಕ ಶ್ರೀಮಂತರನ್ನು ಬ್ರಿಟನ್ ಬಿಟ್ಟು ಹೋಗುವಂತೆ ಮಾಡಿದೆ.

ಅಪ್ಪಟ ಗ್ಲೋಬಲ್ ಬ್ಯುಸಿನೆಸ್​ಮ್ಯಾನ್ ಲಕ್ಷ್ಮೀ ಮಿಟ್ಟಲ್

ಲಕ್ಷ್ಮೀ ಮಿಟ್ಟಲ್ ಹುಟ್ಟಿದ್ದು ರಾಜಸ್ಥಾನದಲ್ಲಿ. ಬೆಳೆದಿದ್ದು ಕೋಲ್ಕತಾದಲ್ಲಿ. ಇವರ ಮೊದಲ ಸ್ಟೀಲ್ ಫ್ಯಾಕ್ಟರಿ ಇಂಡೋನೇಷ್ಯಾದಲ್ಲಿ ಶುರುವಾಗಿದ್ದು. ಅಲ್ಲಿಂದ ಹಿಂದಿರುಗಿ ನೋಡಿದ್ದೇ ಇಲ್ಲ. 1995ರಲ್ಲಿ ಬ್ರಿಟನ್ ದೇಶದ ಪ್ರಜೆಯಾಗುತ್ತಾರೆ. ಯೂರೋಪ್​ನ ಅಗ್ರಮಾನ್ಯ ಸ್ಟೀಲ್ ತಯಾರಕರಾದ ಆಕ್ಸಿಲರ್ ಅನ್ನು ಮಿಟ್ಟಲ್ ಸ್ಟೀಲ್ ಖರೀದಿಸುತ್ತದೆ. ಅಲ್ಲಿಂದ ಲಕ್ಷ್ಮೀ ಮಿಟ್ಟಲ್ ಅವರು ಬ್ರಿಟನ್​ನ ಕುಬೇರರ ಸಾಲಿಗೆ ಸೇರುತ್ತಾರೆ. ರಾಜಕೀಯವಾಗಿಯೂ ಪ್ರಭಾವಿಯಾಗುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲೂ ಲಕ್ಷ್ಮೀ ಮಿಟ್ಟಲ್ ಪ್ರಭಾವ ಕಾಣುತ್ತಾ ಬರುತ್ತದೆ. ಪ್ರತಿಷ್ಠಿತ ಬ್ಯುಲ್ಡಿಂಗ್​ಗಳು ಮಿಟ್ಟಲ್ ನೆನಪು ಮಾಡಿಸುತ್ತವೆ.

ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ

ಲಕ್ಷ್ಮೀ ಮಿಟ್ಟಲ್ ಈಗ ಎಲ್ಲಿಗೆ ಹೋಗುತ್ತಾರೆ?

ಲಕ್ಷ್ಮೀ ಮಿಟ್ಟಲ್ ಅವರು ಈಗಾಗಲೇ ಸ್ವಿಟ್ಜರ್​ಲ್ಯಾಂಡ್ ದೇಶದ ಟ್ಯಾಕ್ಸ್ ರೆಸಿಡೆಂಟ್ ಆಗಿದ್ದಾರೆ. ದುಬೈಗೆ ಹೋಗಿ ನೆಲಸುವ ಸಾಧ್ಯತೆ ಇದೆ. ಸ್ವಿಟ್ಜರ್​ಲ್ಯಾಂಡ್ ಮತ್ತು ದುಬೈ ಎರಡೂ ಕೂಡ ಶ್ರೀಮಂತರ ಪಾಲಿಗೆ ಸ್ವರ್ಗ ಎನಿಸಿವೆ. ದುಬೈನ ಪ್ರತಿಷ್ಠಿತ ಎಮಿರೇಟ್ಸ್ ಹಿಲ್ಸ್​ನಲ್ಲಿ ಮಿಟ್ಟಲ್ ಅವರು ಒಂದು ಭವ್ಯವಾದ ಮ್ಯಾನ್ಷನ್ ಹೊಂದಿದ್ದಾರೆ. ಹಲವು ರಿಯಲ್ ಎಸ್ಟೇಟ್ ಆಸ್ತಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ