AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋವಿಡ್ ಪೂರ್ವದ ಮಟ್ಟ ಮುಟ್ಟಲು ಪರದಾಡುತ್ತಿರುವ ಶಕ್ತಿಶಾಲಿ ದೇಶಗಳ ಮಧ್ಯೆ ಭಾರತದ ಮಿಂಚಿನ ಓಟ

How India's economy recovering from 2020 covid shock: 2020ರಲ್ಲಿ ಕೋವಿಡ್ ಬಂದ ಬಳಿಕ ಅನೇಕ ಆರ್ಥಿಕತೆಗಳು ನೆಲಕಚ್ಚಿದ್ದವು. ಅದಾದ ಬಳಿಕ ಚೇತರಿಕೆ ಕಾಣುತ್ತಿವೆ. ಈ ಚೇತರಿಕೆಯ ಹಾದಿಯಲ್ಲಿ ಭಾರತವೇ ಅತಿವೇಗವಾಗಿ ಬೆಳೆಯುತ್ತಿದೆ. 2019ರಿಂದ 2025ರವರೆಗೂ ಭಾರತ, ಅಮೆರಿಕ, ಚೀನಾ, ರಷ್ಯಾ ಮತ್ತು ಯೂರೋಪ್​ನ ಬೆಳವಣಿಗೆಯನ್ನು ಹಾರ್ವರ್ಡ್ ಪ್ರೊಫೆಸರ್ ದಾಖಲಿಸಿದ್ದಾರೆ.

ಕೋವಿಡ್ ಪೂರ್ವದ ಮಟ್ಟ ಮುಟ್ಟಲು ಪರದಾಡುತ್ತಿರುವ ಶಕ್ತಿಶಾಲಿ ದೇಶಗಳ ಮಧ್ಯೆ ಭಾರತದ ಮಿಂಚಿನ ಓಟ
ಭಾರತದ ಆರ್ಥಿಕ ಬೆಳವಣಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 23, 2025 | 8:48 PM

Share

ನವದೆಹಲಿ, ನವೆಂಬರ್ 23: ಕೋವಿಡ್ ಬಂದಾಗ ಅತ್ಯಂತ ದೊಡ್ಡ ಕುಸಿತ ಕಂಡ ಆರ್ಥಿಕತೆಗಳಲ್ಲಿ ಭಾರತವೂ ಒಂದು. ಆದರೆ, ಕೋವಿಡ್ ಬಳಿಕ ಅತಿ ವೇಗವಾಗಿ ತಿರುಗಿ ನಿಂತ ಆರ್ಥಿಕತೆ (GDP) ಎಂದರೆ ಭಾರತವೇ ಎಂದು ಅನೇಕ ಆರ್ಥಿಕ ತಜ್ಞರು ಹೇಳುತ್ತಲೇ ಬಂದಿದ್ದಾರೆ. ಹಾರ್ವರ್ಡ್ ಯೂನಿವರ್ಸಿಟಿಯ ಆರ್ಥಿಕ ತಜ್ಞರಾದ ಜೇಸನ್ ಫರ್ಮನ್ ಅವರು ಪ್ರಮುಖ ಆರ್ಥಿಕತೆಗಳ ಬೆಳವಣಿಗೆಯ ಚಿತ್ರಣವನ್ನು ಗ್ರಾಫಿಕ್ಸ್ ರೂಪದಲ್ಲಿ ತೆರೆದಿಟ್ಟಿದ್ದಾರೆ.

ಹಾರ್ವರ್ಡ್ ಪ್ರೊಫೆಸರ್ ತಮ್ಮ ಎಕ್ಸ್ ಅಕೌಂಟ್​ನಲ್ಲಿ ಪ್ರಸ್ತುತಪಡಿಸಿರುವ ಗ್ರೋತ್ ಚಾರ್ಟ್ ನಿಜಕ್ಕೂ ಕುತೂಹಲ ಕೆರಳಿಸುವಂತಿದೆ. ಕೋವಿಡ್ ಪೂರ್ವದಿಂದ ಭಾರತ, ರಷ್ಯಾ, ಚೀನಾ, ಯೂರೋಪ್ ಮತ್ತು ಅಮೆರಿಕ ದೇಶಗಳ ಆರ್ಥಿಕ ಬೆಳವಣಿಗೆ ಹೇಗೆ ಸಾಗಿದೆ ಎಂಬುದನ್ನು ಈ ಗ್ರಾಫಿಕ್ಸ್ ಕಣ್ಣಿಗೆ ಕಟ್ಟುವಂತೆ ವ್ಯಕ್ತಪಡಿಸುತ್ತದೆ.

ಇದನ್ನೂ ಓದಿ: ಅತೀ ಕಡಿಮೆ ರುಪಾಯಿ ಮೌಲ್ಯ; ಡಾಲರ್ ಎದುರು ಕನಿಷ್ಠ ಮಟ್ಟಕ್ಕೆ ಕುಸಿದ ರುಪಾಯಿ

ಭಾರತ ಬಿಟ್ಟು ಉಳಿದ ಈ ಪ್ರಮುಖ ಆರ್ಥಿಕತೆಗಳು ಕೋವಿಡ್ ಪೂರ್ವದ ಮಟ್ಟವನ್ನು ದಾಟಲು ತೊಡರಾಡುತ್ತಿವೆ. ಆಧರೆ, ಭಾರತ ಮಾತ್ರ ಅಮೋಘವಾಗಿ ಮತ್ತು ಸ್ಥಿರವಾಗಿ ಬೆಳೆಯುತ್ತಿರುವುದನ್ನು ಇದು ತೋರಿಸುತ್ತದೆ.

ಜೇಸನ್ ಅವರ ಎಕ್ಸ್ ಪೋಸ್ಟ್

ಕುತೂಹಲ ಎಂದರೆ, ಈ ಐದು ದೊಡ್ಡ ಆರ್ಥಿಕತೆಗಳ ಪೈಕಿ ಕೋವಿಡ್ ಸಾಂಕ್ರಾಮಿಕ ಕಾಲಘಟ್ಟವಾದ 2020ರಲ್ಲಿ ಭಾರತವೇ ಅತಿಹೆಚ್ಚು ಆರ್ಥಿಕ ಕುಸಿತ ಕಂಡಿದ್ದು. 2022ರ ನಂತರ ಭಾರತವು ಎಲ್ಲರನ್ನೂ ಮೀರಿಸಿ ಬೆಳೆಯುತ್ತಿದೆ. 2024ರಲ್ಲಿ ಕೋವಿಡ್ ಮಟ್ಟಕ್ಕಿಂತ ಶೇ. 3ರಷ್ಟು ಮೇಲೆ ಹೋಗಿದೆ. 2025ರ ಮೂರನೇ ಕ್ವಾರ್ಟರ್ ಅಂತ್ಯವಾದ ಸೆಪ್ಟೆಂಬರ್​ನಲ್ಲಿ ರಿಯಲ್ ಜಿಡಿಪಿ ದರ ಕೋವಿಡ್ ಮಟ್ಟಕ್ಕಿಂತ ಶೇ. 5ರಷ್ಟು ಮೇಲಿತ್ತು.

ಇದನ್ನೂ ಓದಿ: ಪಿಎಫ್ ಅರ್ಹತೆಗೆ ವೇತನ ಮಿತಿ 15,000 ರೂನಿಂದ 25,000 ರೂಗೆ ಏರಿಸಲು ಸರ್ಕಾರದಿಂದ ಚಿಂತನೆ

ಜೇಸನ್ ಫರ್ಮನ್ ಅವರು ಭಾರತದ ಮುಂದಿನ ಆರ್ಥಿಕತೆಯ ಹಾದಿ ಇದೇ ರೀತಿ ಸುಗಮವಾಗಿರುತ್ತದೆ ಎಂದು ನಿರೀಕ್ಷಿಸಿದ್ದಾರೆ. ಹಲವು ಏಜೆನ್ಸಿಗಳೂ ಕೂಡ ಇದೇ ಬೆಳವಣಿಗೆಯನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಮೂಡೀಸ್, ಐಸಿಆರ್​ಎ ಮೊದಲಾದ ಅಂತಾರಾಷ್ಟ್ರೀಯ ಏಜೆನ್ಸಿಗಳು ಭಾರತದ ಜಿಡಿಪಿ ದರ ಶೇ. 7 ಅನ್ನು ದಾಟಬಹುದು ಎಂದು ಅಂದಾಜು ಮಾಡಿವೆ. ಆರ್​ಬಿಐ ಮೊದಲಾದ ಸಂಸ್ಥೆಗಳು ಕೂಡ ಶೇ. 7ರ ಆಸುಪಾಸಿನ ಬೆಳವಣಿಗೆಯನ್ನು ನಿರೀಕ್ಷಿಸಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ಕನ್ನಡ ಚಿತ್ರರಂಗಕ್ಕೆ 93ರ ಸಂಭ್ರಮ: ಒಂದೇ ವೇದಿಕೆಯಲ್ಲಿ ಸೆಲೆಬ್ರಿಟಿಗಳು
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ದರ್ಶನ್ ಜೊತೆ ‘ಭೀಮ ತೀರದಲ್ಲಿ’ ಸಿನಿಮಾ ಯಾಕೆ ಮಾಡಲಿಲ್ಲ? ಸಿಕ್ತು ಉತ್ತರ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್​ನ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೆ ಬಾಂಬ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಇರಾನ್‌ನ ಸುಪ್ರೀಂ ಲೀಡರ್ ಆಯ್ಕೆ ಸಮಿತಿ ಕಟ್ಟಡದ ಮೇಲೆ ಇಸ್ರೇಲ್ ದಾಳಿ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಖಮೇನಿ ಸಾವಿನ ಕುರಿತಾದ ಪ್ರತಿಭಟನೆಗಳನ್ನು ಖಂಡಿಸಿದ ಮುಂಬೈನ ಶಿಯಾ ನಾಯಕ
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
ಚಂದ್ರ ಗ್ರಹಣದ ದಿನವೇ ಗದಗದಲ್ಲಿ ಸಪ್ತಪದಿ ತುಳಿದ 19 ಜೋಡಿಗಳು
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
‘ಭೀಮಾ ತೀರದಲ್ಲಿ’ ರೀ-ರಿಲೀಸ್: ಮಾಹಿತಿ ಹಂಚಿಕೊಂಡ ನಿರ್ಮಾಪಕ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ಸಂಚರಿಸುತ್ತಿದ್ದಾಗಲೇ ಬಸ್​​​​ನ ಇಂಜಿನ್‌ನಲ್ಲಿ ಕಾಣಿಸಿಕೊಂಡ ಬೆಂಕಿ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ
ಪ್ರಧಾನಿ ಮುಂದೆ ಕಠಿಣ ಸವಾಲುಗಳು: ಮೋದಿ ಬಗ್ಗೆ ಪಂಡಿತರ ಸ್ಫೋಟಕ ಭವಿಷ್ಯ