ಬ್ಯಾಂಕ್ ರಜೆ
ಬೆಂಗಳೂರು, ನವೆಂಬರ್ 9: ಇದೀಗ ಹಬ್ಬದ ಸೀಸನ್ನ ಉತ್ತುಂಗಕ್ಕೆ ಬಂದಿದ್ದೇವೆ. ನಾಳೆಯಿಂದ ದೀಪಾವಳಿ ಹಬ್ಬ ಶುರುವಾಗುತ್ತದೆ. ದೇಶಾದ್ಯಂತ ಬಹಳ ವ್ಯಾಪಕವಾಗಿ ನಡೆಯುವ ಬೆಳಕಿನ ಹಬ್ಬ ದೀಪಾವಳಿ ಸಂದರ್ಭದಲ್ಲಿ ರಜೆಗಳ ಸುಗ್ಗಿ ಇದೆ. ಆರ್ಬಿಐ ವೇಳಾಪಟ್ಟಿ ಪ್ರಕಾರ ದೀಪಾವಳಿ ಹಬ್ಬದ ಸಂದರ್ಭದಲ್ಲಿ (Deepavali festival) ಆರು ದಿನ ರಜೆಗಳಿವೆ. ನವೆಂಬರ್ 10ರಿಂದ ಆರಂಭವಾಗಿ ನವೆಂಬರ್ 15ರವರೆಗೂ ನಿರಂತರವಾಗಿ ಆರು ದಿನ ರಜೆಗಳಿವೆ. ಇದರಲ್ಲಿ ಎರಡನೇ ಶನಿವಾರ ಮತ್ತು ಭಾನುವಾರದ ರಜೆಗಳೂ ಒಳಗೊಂಡಿವೆ. ಸತತ ಆರು ದಿನ ರಜೆ (bank holidays) ಎಲ್ಲೆಡೆ ಇಲ್ಲ. ಕರ್ನಾಟಕದಲ್ಲಿ ಬ್ಯಾಂಕುಗಳಿಗೆ ನವೆಂಬರ್ 14ಕ್ಕೆ ದೀಪಾವಳಿ ಹಬ್ಬಕ್ಕೆ ರಜೆ ಇದೆ. ಗುಜರಾತ್, ಮಹಾರಾಷ್ಟ್ರ ಮತ್ತು ಸಿಕ್ಕಿಂ ರಾಜ್ಯಗಳಲ್ಲೂ ಇದೇ ದಿನ ರಜೆ ಇದೆ.
ಇನ್ನು, ಮಹಾರಾಷ್ಟ್ರ, ಉತ್ತರಪ್ರದೇಶ, ರಾಜಸ್ಥಾನ, ಉತ್ತರಾಖಂಡ್ ಮೊದಲಾದ ಕೆಲ ರಾಜ್ಯಗಲ್ಲಿ ನವೆಂಬರ್ 13ಕ್ಕೆ ರಜೆ ಇದೆ. ಸಿಕ್ಕಿಂ ರಾಜ್ಯದ ಬ್ಯಾಂಕುಗಳಿಗೆ ನವೆಂಬರ್ 11ರಂದು ಆರಂಭವಾಗಿ ನವೆಂಬರ್ 15ರವರೆಗೂ ಸತತ ಐದು ದಿನ ರಜೆ ಇದೆ. ನವೆಂಬರ್ 10ರಿಂದ ಆರಂಭವಾಗಿ ಈ ತಿಂಗಳು ಬ್ಯಾಂಕುಗಳ ರಜಾದಿನಗಳ ಪಟ್ಟಿಯನ್ನು ಇಲ್ಲಿ ನೋಡಬಹುದು.
ಇದನ್ನೂ ಓದಿ: Bank Holidays: ನವೆಂಬರ್ ತಿಂಗಳಲ್ಲಿ ಭಾರತದಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ; ಕರ್ನಾಟಕದಲ್ಲಿ ಎಷ್ಟು?; ಇಲ್ಲಿದೆ ಪಟ್ಟಿ
- ನವೆಂಬರ್ 10, ಶುಕ್ರವಾರ: ವಂಗಲ ಹಬ್ಬ (ಮೇಘಾಲಯ ರಾಜ್ಯದಲ್ಲಿ ಬ್ಯಾಂಕುಗಳಿಗೆ ರಜೆ)
- ನವೆಂಬರ್ 11: ಎರಡನೇ ಶನಿವಾರ
- ನವೆಂಬರ್ 12: ಭಾನುವಾರ
- ನವೆಂಬರ್ 13, ಸೋಮವಾರ: ಗೋವರ್ಧನ ಪೂಜೆ, ದೀಪಾವಳಿ ಹಬ್ಬ (ತ್ರಿಪುರಾ, ಸಿಕ್ಕಿಂ, ಉತ್ತರಾಖಂಡ್, ಮಣಿಪುರ, ರಾಜಸ್ಥಾನ, ಮಹಾರಾಷ್ಟ್ರ ಮತ್ತು ಉತ್ತರಪ್ರದೇಶದಲ್ಲಿ ಬ್ಯಾಂಕುಗಳಿಗೆ ರಜೆ).
- ನವೆಂಬರ್ 14, ಮಂಗಳವಾರ: ದೀಪಾವಳಿ ಹಬ್ಬ (ಕರ್ನಾಟಕ, ಗುಜರಾತ್, ಮಹಾರಾಷ್ಟ್ರ, ಸಿಕ್ಕಿಂ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ.)
- ನವೆಂಬರ್ 15, ಬುಧವಾರ: ದೀಪಾವಳಿ, ಚಿತ್ರಗುಪ್ತ ಜಯಂತಿ, ನಿಂಗೋಲ್ ಚಕ್ಕೋಬಾ, ಭ್ರತೃದ್ವಿತೀಯಾ ಆಚರಣೆ (ಸಿಕ್ಕಿಂ, ಮಣಿಪುರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ ಮತ್ತು ಹಿಮಾಚಲಪ್ರದೇಶದಲ್ಲಿ ಬ್ಯಾಂಕುಗಳಿಗೆ ರಜೆ)
- ನವೆಂಬರ್ 19: ಭಾನುವಾರದ ರಜೆ
- ನವೆಂಬರ್ 20, ಸೋಮವಾರ: ಆರ್ಘ್ಯ (ಬಿಹಾರ ಮತ್ತು ರಾಜಸ್ಥಾನದಲ್ಲಿ ಬ್ಯಾಂಕುಗಳಿಗೆ ರಜೆ)
- ನವೆಂಬರ್ 23, ಮಂಗಳವಾರ: ಸೆಂಗ್ ಕುತ್ಸ್ನೆಮ್, ಇಗಾಸ್ ಬಾಗವಾಲ್ ಹಬ್ಬ (ಉತ್ತರಾಖಂಡ್ ಮತ್ತು ಸಿಕ್ಕಿಂ ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ).
- ನವೆಂಬರ್ 25: ನಾಲ್ಕನೇ ಶನಿವಾರದ ರಜೆ
- ನವೆಂಬರ್ 26: ಭಾನುವಾರದ ರಜೆ
- ನವೆಂಬರ್ 27, ಸೋಮವಾರ: ಗುರು ನಾನಕ್ ಜಯಂತಿ, ಕಾರ್ತಿಕ ಪೂರ್ಣಮಾ ಮತ್ತು ರಾಹಸ್ ಪೂರ್ಣಿಮಾ ಹಬ್ಬ ಪ್ರಯುಕ್ತ ಮಧ್ಯಪ್ರದೇಶ, ಒಡಿಶಾ, ತ್ರಿಪುರಾ, ಮಿಜೋರಾಂ, ಮಹಾರಾಷ್ಟ್ರ, ಚಂಡೀಗಡ, ಉತ್ತರಾಖಂಡ್, ತೆಲಂಗಾಣ, ರಾಜಸ್ಥಾನ, ಜಮ್ಮು, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ದೆಹಲಿ, ಬಿಹಾರ, ಜಾರ್ಖಂಡ್ ಮತ್ತು ಹಿಮಾಚಲಪ್ರದೇಶಗಳಲ್ಲಿ ಬ್ಯಾಂಕುಗಳಿಗೆ ರಜೆ.
- ನವೆಂಬರ್ 30, ಗುರುವಾರ: ಕನಕದಾಸ ಜಯಂತಿ (ಕರ್ನಾಟಕದಲ್ಲಿ ರಜೆ)
ಇದನ್ನೂ ಓದಿ: ವಿಸ್ತಾರ ಏರ್ಲೈನ್ಸ್ನಿಂದ ಫೆಸ್ಟಿವಲ್ ಆಫರ್; ಕೇವಲ 1,999 ರೂನಿಂದ ಟಿಕೆಟ್ ಬೆಲೆ ಶುರು; ನವೆಂಬರ್ 9ರವರೆಗೆ ಅವಕಾಶ
ಕರ್ನಾಟಕದಲ್ಲಿ ನವೆಂಬರ್ 10ರ ನಂತರ ಬ್ಯಾಂಕುಗಳಿಗೆ ಇರುವ ರಜೆಗಳು
- ನವೆಂಬರ್ 11: ಎರಡನೇ ಶನಿವಾರ
- ನವೆಂಬರ್ 12: ಭಾನುವಾರ
- ನವೆಂಬರ್ 14, ಮಂಗಳವಾರ: ದೀಪಾವಳಿ ಹಬ್ಬ
- ನವೆಂಬರ್ 19: ಭಾನುವಾರದ ರಜೆ
- ನವೆಂಬರ್ 25: ನಾಲ್ಕನೇ ಶನಿವಾರದ ರಜೆ
- ನವೆಂಬರ್ 26: ಭಾನುವಾರದ ರಜೆ
- ನವೆಂಬರ್ 30, ಗುರುವಾರ: ಕನಕದಾಸ ಜಯಂತಿ
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ