ವಿಸ್ತಾರ ಏರ್ಲೈನ್ಸ್​ನಿಂದ ಫೆಸ್ಟಿವಲ್ ಆಫರ್; ಕೇವಲ 1,999 ರೂನಿಂದ ಟಿಕೆಟ್ ಬೆಲೆ ಶುರು; ನವೆಂಬರ್ 9ರವರೆಗೆ ಅವಕಾಶ

Vistara Airlines Festival Offer: ವಿಸ್ತಾರ ಏರ್ಲೈನ್ಸ್ ಸಂಸ್ಥೆ ಈ ಹಬ್ಬದ ಸೀಸನ್​ಗೆ ಅತ್ಯಂತ ಕಡಿಮೆ ಬೆಲೆಗೆ ಟಿಕೆಟ್ ದರಗಳನ್ನು ಆಫರ್ ಮಾಡಿದೆ. ಅದರ ಟಿಕೆಟ್ ಬೆಲೆ 1,999 ರೂನಿಂದ ಆರಂಭವಾಗುತ್ತದೆ. ನವೆಂಬರ್ 7ರಂದೇ ಈ ಆಫರ್ ಶುರುವಾಗಿದ್ದು ಗುರುವಾರ ಮಧ್ಯರಾತ್ರಿವರೆಗೂ ಇದೆ. ನವೆಂಬರ್ 7, ಮಂಗಳವಾರ ರಾತ್ರಿ 12 ಗಂಟೆಯಿಂದ 3 ದಿನಗಳ ಕಾಲ, ಅಂದರೆ ನವೆಂಬರ್ 9ರ ರಾತ್ರಿ 11:59ರವರೆಗೂ ಈ ವಿಸ್ತಾರದ ಆಫರ್ ಇದೆ.

ವಿಸ್ತಾರ ಏರ್ಲೈನ್ಸ್​ನಿಂದ ಫೆಸ್ಟಿವಲ್ ಆಫರ್; ಕೇವಲ 1,999 ರೂನಿಂದ ಟಿಕೆಟ್ ಬೆಲೆ ಶುರು; ನವೆಂಬರ್ 9ರವರೆಗೆ ಅವಕಾಶ
ವಿಸ್ತಾರ ಏರ್ಲೈನ್ಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 08, 2023 | 7:02 PM

ನವದೆಹಲಿ, ನವೆಂಬರ್ 8: ಐರಾವತ ಬಸ್ಸಿನ ಪ್ರಯಾಣ ದರದಲ್ಲಿ ವಿಮಾನ ಪ್ರಯಾಣ ಮಾಡುವ ಅವಕಾಶ ಸಿಕ್ಕಿದೆ. ವಿಸ್ತಾರ ಏರ್ಲೈನ್ಸ್ ಸಂಸ್ಥೆ (Vistara Airlines) ಈ ಹಬ್ಬದ ಸೀಸನ್​ಗೆ ಅತ್ಯಂತ ಕಡಿಮೆ ಬೆಲೆಗೆ ಟಿಕೆಟ್ ದರಗಳನ್ನು ಆಫರ್ ಮಾಡಿದೆ. ಅದರ ಟಿಕೆಟ್ ಬೆಲೆ 1,999 ರೂನಿಂದ ಆರಂಭವಾಗುತ್ತದೆ. ನವೆಂಬರ್ 7ರಂದೇ ಈ ಆಫರ್ ಶುರುವಾಗಿದ್ದು ಗುರುವಾರ ಮಧ್ಯರಾತ್ರಿವರೆಗೂ ಇದೆ. ನವೆಂಬರ್ 7, ಮಂಗಳವಾರ ರಾತ್ರಿ 12 ಗಂಟೆಯಿಂದ 3 ದಿನಗಳ ಕಾಲ, ಅಂದರೆ ನವೆಂಬರ್ 9ರ ರಾತ್ರಿ 11:59ರವರೆಗೂ ಈ ವಿಸ್ತಾರದ ಆಫರ್ ಇದೆ. ಎಕನಾಮಿ ಕ್ಲಾಸ್, ಪ್ರೀಮಿಯಮ್ ಮತ್ತು ಬಿಸಿನೆಸ್ ಕ್ಲಾಸ್ ಈ ವರ್ಗದ ಪ್ರಯಾಣಕ್ಕೂ ಡಿಸ್ಕೌಂಟ್ ನೀಡಲಾಗಿದೆ.

ಏರ್ ವಿಸ್ತಾರ ಸಂಸ್ಥೆಯ ವೆಬ್​ಸೈಟ್ ಸೇರಿದಂತೆ ಎಲ್ಲಾ ಪ್ಲಾಟ್​ಫಾರ್ಮ್​ಗಳಲ್ಲೂ ಈ ಡಿಸ್ಕೌಂಟ್ ಸೇಲ್ ಇದೆ. ವಿಸ್ತಾರದ ಮೊಬೈಲ್ ಆ್ಯಪ್​ಗಳು, ಏರ್ಪೋರ್ಟ್ ಟಿಕೆಟ್ ಅಫೀಸ್, ಕಾಲ್ ಸೆಂಟರ್, ಆನ್ಲೈನ್ ಟ್ರಾವೆಲ್ ಏಜೆನ್ಸಿ, ಟ್ರಾವೆಲ್ ಏಜೆಂಟ್ ಇತ್ಯಾದಿ ಮೂಲಕವೂ ಟಿಕೆಟ್ ಬುಕ್ ಮಾಡಬಹುದು.

ಇದನ್ನೂ ಓದಿ: ಶ್ರೀಲಂಕಾದಲ್ಲಿ ಅದಾನಿ ನೇತೃತ್ವದ ಡಬ್ಲ್ಯುಸಿಟಿ ಪೋರ್ಟ್ ಟರ್ಮಿನಲ್ ಪ್ರಾಜೆಕ್ಟ್​ಗೆ ಅಮೆರಿಕದ ಹಣಕಾಸು ನೆರವು

ಆದರೆ, ಈ ಡಿಸ್ಕೌಂಟ್ ದರದಲ್ಲಿ ಟಿಕೆಟ್ ಬುಕ್ ಮಾಡಲು ವೋಚರ್​ಗಳನ್ನು ಬಳಸಲು ಆಗುವುದಿಲ್ಲ. ಕಾರ್ಪೊರೆಟ್ ಡಿಸ್ಕೌಂಟ್ ಇತ್ಯಾದಿಗಳು ಇದಕ್ಕೆ ಅನ್ವಯ ಆಗುವುದಿಲ್ಲ ಎನ್ನಲಾಗಿದೆ.

ಸೀಮಿತ ಸಂಖ್ಯೆಯಲ್ಲಿ ಸೀಟುಗಳು

ಫೆಸ್ಟಿವಲ್ ಆಫರ್ ನವೆಂಬರ್ 9ರವರೆಗೂ ಮಾತ್ರ ಇದೆ. 2024ರ ಏಪ್ರಿಲ್ 10ರವರೆಗಿನ ಯಾವುದೇ ದಿನದ ಪ್ರಯಾಣಕ್ಕೂ ಟಿಕೆಟ್ ಬುಕ್ ಮಾಡಬಹುದು. ಗಮನಿಸಬೇಕಾದ ಸಂಗತಿ ಎಂದರೆ, ಈ ಡಿಸ್ಕೌಂಟ್ ಆಫರ್ ಇರುವ ಸೀಟುಗಳ ಸಂಖ್ಯೆ ಸೀಮಿತ ಇದೆ.

ಇದನ್ನೂ ಓದಿ: ‘ಕೆಲಸ ಬಿಡಿ, 4 ಲಕ್ಷ ಹಣ ಪಡೆಯಿರಿ’- ಅಮೇಜಾನ್ ಉದ್ಯೋಗಿಗಳಿಗೆ ಪೇ ಟು ಕ್ವಿಟ್ ಆಫರ್; ವರ್ಕೌಟ್ ಆಗುತ್ತಾ ಈ ತಂತ್ರ?

ಬುಕ್ ಮಾಡಲು ಲಿಂಕ್: www.airvistara.com/in/en/festive-sale

ಗಮನಿಸಿ: ಎಲ್ಲಾ ಮಾರ್ಗಗಳಿಗೂ ಫ್ಲೈಟ್ ದರ 1,999 ರೂನಿಂದ ಆರಂಭವಾಗುವುದಿಲ್ಲ. ಮುಂಬೈನಿಂದ ಗೋವಾ ಇತ್ಯಾದಿ ಕಿರು ಮಾರ್ಗಗಳಲ್ಲಿ ಈ ದರ ಅನ್ವಯ ಆಗುತ್ತದೆ. ಬೆಂಗಳೂರಿನಿಂದ ಚೆನ್ನೈಗೆ ಫ್ಲೈಟ್ ದರ 5,000 ರೂ ಮೇಲ್ಪಟ್ಟು ಇದೆ.

ಏರ್ ವಿಸ್ತಾರ ಸಂಸ್ಥೆ ಭಾರತದ ಟಾಟಾ ಸನ್ಸ್ ಪ್ರೈ ಲಿ ಮತ್ತು ಸಿಂಗಾಪುರ್ ಏರ್ಲೈನ್ಸ್ ಲಿ ಸಂಸ್ಥೆಯ ಜಂಟಿ ವ್ಯವಹಾರವಾಗಿದೆ. ಇದರಲ್ಲಿ ಟಾಟಾ ಸನ್ಸ್ ಬಳಿ ಶೇ. 51ರಷ್ಟು ಪಾಲಿದ್ದರೆ ಸಿಂಗಾಪುರ್ ಏರ್ಲೈನ್ಸ್ ಶೇ. 49ರಷ್ಟು ಪಾಲು ಹೊಂದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Wed, 8 November 23

Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ