ನವದೆಹಲಿ, ಡಿಸೆಂಬರ್ 1: ಸರ್ಕಾರಿ ಪಿಂಚಣಿದಾರರು ತಡೆರಹಿತವಾಗಿ ಪಿಂಚಣಿ ಪಡೆಯುವುದನ್ನು ಮುಂದುವರಿಸಲು ಪ್ರತೀ ವರ್ಷ ಜೀವ ಪ್ರಮಾಣಪತ್ರ ಸಲ್ಲಿಸಬೇಕು. ನವೆಂಬರ್ 30ರವರೆಗೆ ಗಡುವು ಇದೆ. ನವೆಂಬರ್ನಲ್ಲಿ ಸರ್ಕಾರದಿಂದ ಸ್ಪೆಷಲ್ ಕೆಂಪೇನ್ ನಡೆಸಲಾಗಿತ್ತು. ಈ ವೇಳೆ ಡಿಜಿಟಲ್ ಮೂಲಕ ಒಂದು ಕೋಟಿಗೂ ಅಧಿಕ ಲೈಫ್ ಸರ್ಟಿಫಿಕೇಟ್ಗಳು ಜನರೇಟ್ ಆಗಿವೆ. ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಕಳೆದ ವಾರ ಈ ಮಾಹಿತಿ ನೀಡಿದ್ದಾರೆ.
ನವೆಂಬರ್ 1ರಿಂದ 30ವರೆಗೆ ಭಾರತದ 800 ಪಟ್ಟಣ, ನಗರಗಳಲ್ಲಿ ಈ ವಿಶೇಷ ಅಭಿಯಾನ ನಡೆದಿದೆ. ಹಿರಿಯ ನಾಗರಿಕರು ಬ್ಯಾಂಕುಗಳಲ್ಲಿ ಅಥವಾ ಪಿಂಚಣಿ ಕೇಂದ್ರಗಳಲ್ಲಿ ಉದ್ದುದ್ದ ಕ್ಯೂಗಳಲ್ಲಿ ನಿಲ್ಲುವುದನ್ನು ತಪ್ಪಿಸಲು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಸೌಲಭ್ಯವನ್ನು ಸರ್ಕಾರ ಮಾಡಿದೆ. ಪಿಂಚಣಿದಾರರಿಗೆ ಸರ್ಟಿಫಿಕೇಟ್ ಪಡೆಯುವ ಕಾರ್ಯವನ್ನು ಬಹಳ ಸರಳಗೊಳಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರೂ ಕೂಡ ಇತ್ತೀಚಿನ ತಮ್ಮ 116ನೇ ಎಪಿಸೋಡ್ನ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಇ-ಜೀವ ಪ್ರಮಾಣಪತ್ರದ ಸ್ಪೆಷಲ್ ಕೆಂಪೇನ್ ಬಗ್ಗೆ ಮಾತನಾಡಿದ್ದರು.
ಇದನ್ನೂ ಓದಿ: ಇಂಡೋನೇಷ್ಯಾ, ಫಿಲಿಪ್ಪೈನ್ಸ್ ಇತ್ಯಾದಿ ಆಗ್ನೇಯ ಏಷ್ಯನ್ ದೇಶಗಳ ಜೊತೆ ಭಾರತದ ವ್ಯಾಪಾರ ಸಂಬಂಧ ಇನ್ನಷ್ಟು ಗಟ್ಟಿ
‘ಈ ವಿಶೇಷ ಅಭಿಯಾನದಂತಹ ಪ್ರಯತ್ನಗಳಿಂದಾಗಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯುತ್ತಿರುವವರ ಸಂಖ್ಯೆ 80 ಲಕ್ಷ ದಾಟಿದೆ. ಇದರಲ್ಲಿ 80 ವರ್ಷ ವಯಸ್ಸು ದಾಟಿದವರೇ 2 ಲಕ್ಷಕ್ಕೂ ಅಧಿಕ ಇದ್ದಾರೆ’ ಎಂದು ಪ್ರಧಾನಿಗಳು ತಮ್ಮ ಮನ್ ಕೀ ಬಾತ್ನಲ್ಲಿ ತಿಳಿಸಿದ್ದರು. ಕಳೆದ ವಾರವಷ್ಟೇ (ನವೆಂಬರ್ 26) ಒಟ್ಟು ಡಿಜಿಟಲ್ ಲೈಫ್ ಸರ್ಟಿಫಿಕೇಟ್ಗಳನ್ನ ಪಡೆದವರ ಸಂಖ್ಯೆ ಒಂದು ಕೋಟಿ ದಾಟಿದೆ. ನಿನ್ನೆ ಸರ್ಟಿಫಿಕೇಟ್ ಪಡೆಯಲು ಕೊನೆಯ ದಿನವಾಗಿದ್ದು, ಒಟ್ಟಾರೆ ಸಂಖ್ಯೆ ಎಷ್ಟಿದೆ ಎನ್ನುವ ಮಾಹಿತಿ ನಾಳೆ ಸೋಮವಾರ (ಡಿ. 2) ಸಿಗುವ ಸಾಧ್ಯತೆ ಇದೆ.
ಈ ರೀತಿ ಡಿಜಿಟಲ್ ಲೈಫ್ ಸರ್ಟಿಫೀಕೇಟ್ ಅಭಿಯಾನ ನಡೆದಿರುವುದು ಇದು ನಾಲ್ಕನೇ ವರ್ಷ. ಕಳೆದ ವರ್ಷ ನಡೆದ ಮೂರನೇ ಅಭಿಯಾನಕ್ಕೆ ಹೋಲಿಸಿದರೆ ಈ ಬಾರಿ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆದವರ ಸಂಖ್ಯೆ ಎರಡು ಪಟ್ಟು ಹೆಚ್ಚಿದೆ.
ಇದನ್ನೂ ಓದಿ: ಪೇಟೆಂಟ್, ಟ್ರೇಡ್ಮಾರ್ಕ್, ಇಂಡಸ್ಟ್ರಿಯಲ್ ಡಿಸೈನ್ನಲ್ಲಿ ಗಮನಾರ್ಹ ಬೆಳವಣಿಗೆ ಸಾಧಿಸಿರುವ ಭಾರತ
ಒಂದು ಕೋಟಿ ಡಿಜಿಟಲ್ ಲೈಫ್ ಸರ್ಟಿಕೇಟ್ಗಳಲ್ಲಿ ಶೇ 30ರಷ್ಟವನ್ನು ಫೇಸ್ ಅಥೆಂಟಿಕೇಶನ್ ಮೂಲಕ ನೀಡಲಾಗಿರುವುದು ತಿಳಿದುಬಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ