AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಶದ ಭದ್ರತೆಗೆ ಕ್ವಾಂಟಮ್ ಕವಚ; ಡಿಆರ್​ಡಿಒದಿಂದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ ಸಿಸ್ಟಂನ ಪ್ರಯೋಗ ಯಶಸ್ವಿ; ಏನಿದು QKD?

DRDO completes military field trial of Quantum Key Distribution (QKD) system: ಫೈಬರ್ ಆಧಾರಿತ ಕ್ವಾಂಟಂ ಕೀ ಡಿಸ್ಟ್ರಿಬ್ಯೂಷನ್ ಸಿಸ್ಟಂನ ಫೀಲ್ಡ್ ಟ್ರಯಲ್​ಗಳನ್ನು ಡಿಆರ್​ಡಿಒ ಯಶಸ್ವಿಯಾಗಿ ಮಾಡಿದೆ. ಡಿಆರ್​ಡಿಒ ಹಾಗೂ ಅದರ ಇಂಡಸ್ಟ್ರಿ ಪಾರ್ಟ್ನರ್ ಆದ Taqbit Labs ಜೊತೆಗೂಡಿ ಈ ಯಶಸ್ವಿ ಪ್ರಯೋಗ ಮಾಡಿವೆ. ಕ್ವಾಂಟಮ್ ಕಂಪ್ಯೂಟರ್​ಗಳಿಂದ ಸಿಸ್ಟಂಗಳ ಹ್ಯಾಕ್ ಮಾಡುವುದನ್ನು ತಪ್ಪಿಸಲು ಈ ಕ್ಯುಕೆಡಿ ಪಾತ್ರ ಬಹಳ ಮುಖ್ಯ.

ದೇಶದ ಭದ್ರತೆಗೆ ಕ್ವಾಂಟಮ್ ಕವಚ; ಡಿಆರ್​ಡಿಒದಿಂದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಶನ್ ಸಿಸ್ಟಂನ ಪ್ರಯೋಗ ಯಶಸ್ವಿ; ಏನಿದು QKD?
ಕ್ವಾಂಟಮ್ QKD ಸಿಸ್ಟಂ ಪ್ರಯೋಗImage Credit source: Instagram @dpi.drdo
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jul 15, 2026 | 3:51 PM

Share

ನವದೆಹಲಿ, ಜುಲೈ 15: ಭವಿಷ್ಯವು ಕ್ವಾಂಟಮ್ ಕಾಲ. ಅದು ನೀಡುವ ಲಾಭ ಬಹಳ ದೊಡ್ಡದು. ಹಾಗೆಯೇ, ಎದುರಾಗುವ ಸವಾಲುಗಳು ಬಹಳ ದೊಡ್ಡವು ಮತ್ತು ಸಂಕೀರ್ಣವಾದುವು. ಇದನ್ನು ಎದುರಿಸಲು ರಕ್ಷಣಾ ಕ್ಷೇತ್ರದ ಸಂಶೋಧನಾ ಸಂಸ್ಥೆಯಾದ ಡಿಆರ್​ಡಿಒ ಇರಿಸಿದ ಒಂದು ಮಹತ್ವದ ಹೆಜ್ಜೆ ಯಶಸ್ವಿಯಾಗಿದೆ. ದೇಶದ ತಂತ್ರಾತ್ಮಕ ಸಂವಹನ ಜಾಲವನ್ನು (Strategic Communication Networks) ಭವಿಷ್ಯದ ಸವಾಲುಗಳಿಗೆ ತಕ್ಕಂತೆ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಜಾಗತಿಕ ಮಟ್ಟದ ಸಾಧನೆಯೊಂದನ್ನು ಡಿಆರ್​ಡಿಒ ಮಾಡಿದೆ. ಮಿಲಿಟರಿ ಕ್ಷೇತ್ರದಲ್ಲಿ ಅತ್ಯಂತ ಸುರಕ್ಷಿತ ಮತ್ತು ಸುಧಾರಿತ ತಂತ್ರಜ್ಞಾನವಾದ ಫೈಬರ್ ಆಧಾರಿತ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD – Quantum Key Distribution) ಸಿಸ್ಟಂನ ಫೀಲ್ಡ್ ಟ್ರಯಲ್​ಗಳನ್ನು (Military Field Trials) ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಬೆಂಗಳೂರಿನ ‘ಟಾಕ್‌ಬಿಟ್ ಲ್ಯಾಬ್ಸ್’ ಜೊತೆ ಕೈಜೋಡಿಸಿದ ಡಿಆರ್‌ಡಿಒ

ಈ ಹಿಂದೆ ಪ್ರಯೋಗಾಲಯ ಮಟ್ಟದಲ್ಲಿ ನಡೆಸಿದ ಯಶಸ್ವಿ ಪರೀಕ್ಷೆಗಳು ಮತ್ತು ಹಳೆಯ ಪ್ರಯೋಗಗಳ ಅನುಭವವನ್ನು ಬಳಸಿಕೊಂಡು, ಡಿಆರ್‌ಡಿಒ ವಿಜ್ಞಾನಿಗಳ ತಂಡವು ಬೆಂಗಳೂರು ಮೂಲದ ‘ಟಾಕ್‌ಬಿಟ್ ಲ್ಯಾಬ್ಸ್’ (Taqbit Labs) ಸಂಸ್ಥೆ ಜೊತೆಗೂಡಿ ಈ ಅತ್ಯಾಧುನಿಕ ಸಿಸ್ಟಂ ಅನ್ನು ವಿನ್ಯಾಸಗೊಳಿಸಿದೆ. ದೇಶದ ಅತ್ಯಂತ ಸೂಕ್ಷ್ಮ ಹಾಗೂ ರಹಸ್ಯ ಸಂವಹನ ಜಾಲಗಳನ್ನು ಸುರಕ್ಷಿತವಾಗಿಡಲು ಈ ಸುಧಾರಿತ ವ್ಯವಸ್ಥೆಯನ್ನು ಈಗ ಯಶಸ್ವಿಯಾಗಿ ಉತ್ಪನ್ನ ರೂಪಕ್ಕೆ (Productized) ತರಲಾಗಿದೆ. ಟಾಕ್‌ಬಿಟ್ ಲ್ಯಾಬ್ಸ್ ಡಿಆರ್​ಡಿಒದ ಇಂಡಸ್ಟ್ರಿಯಲ್ ಪಾರ್ಟ್ನರ್ ಸಂಸ್ಥೆಯಾಗಿದೆ.

ಇದನ್ನೂ ಓದಿ: ರಷ್ಯಾ ತೈಲ ಖರೀದಿ: ಭಾರತ ಮತ್ತು ಚೀನಾ ವಿರುದ್ಧ ಶೇ. 100 ಸುಂಕ ವಿಧಿಸಲು ಅಮೆರಿಕ ಮುಂದು; ಬಂತು ಹೊಸ ವಿಧೇಯಕ

ಏನಿದು QKD ತಂತ್ರಜ್ಞಾನ? ಇದರ ಮಹತ್ವವೇನು?

ಸಾಮಾನ್ಯವಾಗಿ ಇಂಟರ್ನೆಟ್ ಅಥವಾ ಸಂವಹನ ಜಾಲಗಳಲ್ಲಿ ಕಳುಹಿಸುವ ಸಂದೇಶಗಳನ್ನು ಹ್ಯಾಕರ್‌ಗಳು ಮಧ್ಯದಲ್ಲೇ ಕದ್ದು ಓದುವ ಅಪಾಯವಿರುತ್ತದೆ. ಆದರೆ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD) ತಂತ್ರಜ್ಞಾನವು ಭೌತಶಾಸ್ತ್ರದ ಕ್ವಾಂಟಮ್ ತತ್ವಗಳ ಆಧಾರದ ಮೇಲೆ ಕೆಲಸ ಮಾಡುತ್ತದೆ.

ಇದು ಸಂವಹನಕ್ಕೆ ಅತ್ಯಂತ ಸುರಕ್ಷಿತವಾದ ‘ಡಿಜಿಟಲ್ ಕೀ’ಗಳನ್ನು ಸೃಷ್ಟಿಸುತ್ತದೆ. ಒಂದು ವೇಳೆ ಯಾರಾದರೂ ಮಧ್ಯದಲ್ಲಿ ಈ ಸಂವಹನವನ್ನು ಕದಿಯಲು ಅಥವಾ ಹ್ಯಾಕ್ ಮಾಡಲು ಪ್ರಯತ್ನಿಸಿದರೆ, ಕ್ವಾಂಟಮ್ ಕಣಗಳ ಗುಣಲಕ್ಷಣ ಬದಲಾಗಿ ತಕ್ಷಣವೇ ಸಿಗ್ನಲ್ ಕಡಿತಗೊಳ್ಳುತ್ತದೆ ಮತ್ತು ಹ್ಯಾಕಿಂಗ್ ಯತ್ನ ಪತ್ತೆಯಾಗುತ್ತದೆ.

ಭವಿಷ್ಯದ ಸೈಬರ್ ದಾಳಿಯ ಸವಾಲುಗಳನ್ನು ಎದುರಿಸಲು ಸಜ್ಜು

ಮುಂದಿನ ದಿನಗಳಲ್ಲಿ ಕ್ವಾಂಟಮ್ ಕಂಪ್ಯೂಟರ್‌ಗಳು ಬರಲಿವೆ. ಇವು ಪ್ರಸ್ತುತ ಜಗತ್ತಿನಲ್ಲಿರುವ ಅತ್ಯಂತ ಕಠಿಣ ಪಾಸ್‌ವರ್ಡ್ ಮತ್ತು ಭದ್ರತಾ ಕೋಡ್‌ಗಳನ್ನು ಕೆಲವೇ ಸೆಕೆಂಡುಗಳಲ್ಲಿ ಮುರಿಯಬಲ್ಲ ಸಾಮರ್ಥ್ಯ ಹೊಂದಿರುತ್ತವೆ. ಅಂತಹ ‘ಕ್ವಾಂಟಮ್ ಯುಗ’ದಲ್ಲಿ ಎದುರಾಗಲಿರುವ ಸೈಬರ್ ಭೀತಿಗಳಿಂದ ಭಾರತದ ರಾಷ್ಟ್ರೀಯ ಸಂವಹನ ಮೂಲಸೌಕರ್ಯವನ್ನು ರಕ್ಷಿಸಲು ಈ ತಂತ್ರಜ್ಞಾನ ನೆರವಾಗಲಿದೆ.

ಇದನ್ನೂ ಓದಿ: ಭಾರತದಲ್ಲಿ ಬೆಳೆಯುತ್ತಿರುವ ಡೇಟಾ ಸೆಂಟರ್​ಗಳಿಂದ ಭರ್ಜರಿ ಉದ್ಯೋಗ ಸೃಷ್ಟಿ; 4 ವರ್ಷದಲ್ಲಿ 1 ಲಕ್ಷ ಎಂಜಿನಿಯರುಗಳಿಗೆ ಉದ್ಯೋಗಾವಕಾಶ

ಡಿಆರ್​ಡಿಒ ಅಭಿವೃದ್ಧಿಪಡಿಸಿರುವ ಈ ಸಿಸ್ಟಂ ಸಂಪೂರ್ಣ ದೇಶೀಯವಾಗಿ ಡಿಸೈನ್ ಪಡೆದಿದೆ. ಭಾರತದಲ್ಲಿ ಬೃಹತ್ ಪ್ರಮಾಣದ ಮಲ್ಟಿ-ಹಾಪ್ ಕ್ವಾಂಟಮ್ ನೆಟ್‌ವರ್ಕ್‌ಗಳನ್ನು (Multi-hop Quantum Networks) ನಿರ್ಮಿಸಲು ಗಟ್ಟಿ ಅಡಿಪಾಯ ಹಾಕಿದೆ ಎಂದು ಡಿಆರ್‌ಡಿಒ ಹೆಮ್ಮೆಯಿಂದ ತಿಳಿಸಿದೆ.

ಡಿಆರ್​ಡಿಒ ಇನ್ಸ್​ಟಾ ಪೋಸ್ಟ್

View this post on Instagram

A post shared by DRDO (@dpi.drdo)

ಕ್ವಾಂಟಂ ಟೆಲಿಪೋರ್ಟೇಶನ್ ಮತ್ತು ಎಂಟ್ಯಾಗಲ್ಮೆಂಟ್ ಸ್ವಾಪಿಂಗ್​ನಿಂದ ಕ್ವಾಂಟಮ್ ಮಾಹಿತಿಯನ್ನು ಕಳುಹಿಸುವ ಮೂಲಕ ಫೋಟೋನ್ ಪ್ರಸರಣ ಅಂತರವನ್ನು ತಗ್ಗಿಸಲು ಈ ಮಲ್ಟಿ-ಹಾಪ್ ಕ್ವಾಂಟಮ್ ನೆಟ್ವರ್ಕ್​ಗಳು ನೆರವಾಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:43 pm, Wed, 15 July 26

Follow Us