
ನವದೆಹಲಿ, ಆಗಸ್ಟ್ 25: ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯ ಗುರಿ ಸಾಧಿಸುವ ನಿಟ್ಟಿನಲ್ಲಿ, ಡಿಆರ್ಡಿಒ (DRDO) ಅಭಿವೃದ್ಧಿಪಡಿಸಿದ ಎಲ್ಲಾ ಸಾಂಪ್ರದಾಯಿಕ ಕ್ಷಿಪಣಿ (Conventional Missile Systems) ತಂತ್ರಜ್ಞಾನವನ್ನು ಭಾರತೀಯ ರಕ್ಷಣಾ ಉದ್ಯಮಕ್ಕೆ ಹಸ್ತಾಂತರಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅನುಮೋದನೆ ನೀಡಿದ್ದಾರೆ. ನಿಗದಿತ ಅರ್ಹತೆಗಳು, ಪ್ರಮಾಣಪತ್ರಗಳು ಮತ್ತು ನಿಯಂತ್ರಕ ಅಗತ್ಯತೆಗಳಿಗೆ ಒಳಪಟ್ಟು, ಭಾರತೀಯ ಮೂಲದ ಕಂಪನಿಗಳು ದೇಶದೊಳಗೆ ಈ ಮಿಸೈಲ್ ಸಿಸ್ಟಂಗಳನ್ನು ತಯಾರಿಸಲು ಇದು ಅವಕಾಶ ಮಾಡಿಕೊಡುತ್ತದೆ.
ಕ್ಷಿಪಣಿಗಳು ಅಭಿವೃದ್ಧಿ ಹಂತದಿಂದ ಕೈಗಾರಿಕಾ ಮಟ್ಟದ ಉತ್ಪಾದನಾ ಹಂತಕ್ಕೆ (Industrial Production) ಸುಲಭವಾಗಿ ಬದಲಾಗಲು ಈ ನಿರ್ಧಾರ ನೆರವಾಗಲಿದೆ.
ಎಕ್ಸ್ನಲ್ಲಿ ಬಂದ ಪೋಸ್ಟ್
ಇದನ್ನೂ ಓದಿ: ಫ್ಯಾಕ್ಟರಿ ಸಕ್ಕರೆ ಬೆಲೆ ಶೇ. 18 ಕುಸಿತ; ಕಿಲೋಗೆ 55 ರೂಗೆ ಇಳಿಕೆ; ಏನು ಕಾರಣ?
ಇದನ್ನೂ ಓದಿ: ಸುಂಕರಹಿತವಾಗಿ 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಅವಕಾಶ; ಸಕ್ಕರೆ ಬೆಲೆ ಏರಿಕೆ ತಡೆಯಲು ಸರ್ಕಾರದ ಕ್ರಮ
ಬಾಹ್ಯಾಕಾಶ ಕ್ಷೇತ್ರದಲ್ಲೂ ಸರ್ಕಾರ ಇದೇ ತಂತ್ರ ಅನುಸರಿಸುತ್ತಿದೆ. ಇಸ್ರೋ, ಎಡಿಆರ್ ಸಂಸ್ಥೆಗಳು ಅಭಿವೃದ್ಧಿಪಡಿಸಿದ ರಾಕೆಟ್ ಇತ್ಯಾದಿ ಕೆಲ ತಂತ್ರಜ್ಞಾನವನ್ನು ಉದ್ಯಮಕ್ಕೆ ಹಸ್ತಾಂತರಿಸುತ್ತವೆ. ಖಾಸಗಿ ಸಂಸ್ಥೆಗಳೂ ಕೂಡ ರಾಕೆಟ್ಗಳನ್ನು ತಯಾರಿಸುತ್ತಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 5:24 pm, Tue, 25 August 26