AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫ್ಯಾಕ್ಟರಿ ಸಕ್ಕರೆ ಬೆಲೆ ಶೇ. 18 ಕುಸಿತ; ಕಿಲೋಗೆ 55 ರೂಗೆ ಇಳಿಕೆ; ಏನು ಕಾರಣ?

Sugar ex-mill prices down by 18pc to Rs 55 per KG: ಎಕ್ಸ್-ಮಿಲ್ ಸಕ್ಕರೆ ಬೆಲೆ ಒಂದು ಕಿಲೋಗೆ 55 ರೂಗೆ ಇಳಿದಿದೆ. ಶೇ. 18ರಷ್ಟು ಸಕ್ಕರೆ ಬೆಲೆ ಕುಸಿದಿದೆ. ಎಕ್ಸ್-ಮಿಲ್ ಸಕ್ಕರೆ ಬೆಲೆ ಎಂದರೆ ಸಕ್ಕರೆ ಕಾರ್ಖಾನೆ ವಿಧಿಸುವ ಬೆಲೆಯಾಗಿರುತ್ತದೆ. ದೇಶದ ಆಂತರಿಕ ಬೇಡಿಕೆಗಿಂತ ಸಕ್ಕರೆ ದಾಸ್ತಾನು ಹೆಚ್ಚು ಇದ್ದರೂ ರೀಟೇಲ್ ಬೆಲೆ ಬಹಳ ಹೆಚ್ಚಿತ್ತು. ಸರ್ಕಾರ ವಿವಿಧ ಕ್ರಮ ಕೈಗೊಂಡ ಪರಿಣಾಮ ಬೆಲೆಗಳು ಇಳಿದಿವೆ.

ಫ್ಯಾಕ್ಟರಿ ಸಕ್ಕರೆ ಬೆಲೆ ಶೇ. 18 ಕುಸಿತ; ಕಿಲೋಗೆ 55 ರೂಗೆ ಇಳಿಕೆ; ಏನು ಕಾರಣ?
ಸಕ್ಕರೆ ಕಾರ್ಖಾನೆ ಬಳಿ ಇರುವ ಕಬ್ಬಿನ ಟ್ರಕ್Image Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 25, 2026 | 4:12 PM

Share

ನವದೆಹಲಿ, ಆಗಸ್ಟ್ 25: ಆಮದು ನಿಯಮಗಳ ಸಡಿಲಿಕೆ ಮತ್ತು ಕಟ್ಟುನಿಟ್ಟಿನ ದಾಸ್ತಾನು ಮಿತಿ ಜಾರಿಯಾದ ಬೆನ್ನಲ್ಲೇ, ದೇಶದಲ್ಲಿ ಸಕ್ಕರೆ ಫ್ಯಾಕ್ಟರಿ ದರಗಳು (Ex-Mill Prices) ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿವೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ (Food Secretary) ತಿಳಿಸಿದ್ದಾರೆ. ಸಕ್ಕರೆ ಗಿರಣಿಗಳಿಂದ ಹೊರಬರುವ ಸಕ್ಕರೆಯ ದರವು ಶೇ. 18% ರಷ್ಟು ಕುಸಿದಿದೆ. ಅದರ ಬೆಲೆ ಪ್ರತಿ ಕೆಜಿಗೆ ₹55 ಕ್ಕೆ ತಲುಪಿದೆ.

ಸರ್ಕಾರದ ಕಟ್ಟುನಿಟ್ಟಿನ ಕ್ರಮದ ಪ್ರಭಾವ: ಸುಂಕ ರಹಿತ ಆಮದಿಗೆ (Duty-Free Import) ಅವಕಾಶ ನೀಡಿರುವುದು ಮತ್ತು ಕಾಳಸಂತೆ/ಕೃತಕ ಅಭಾವ ತಡೆಯಲು ಜಾರಿಗೆ ತಂದ ದಾಸ್ತಾನು ಮಿತಿ (Curbs on Hoarding) ಈ ಬೆಲೆ ಇಳಿಕೆಗೆ ಮುಖ್ಯ ಕಾರಣವಾಗಿದೆ.

ಸಕ್ಕರೆ ಗಿರಣಿ ಬೆಲೆ ಅಥವಾ ಎಕ್ಸ್ ಮಿಲ್ ಬೆಲೆ ಎಂದರೇನು?

ಸಕ್ಕರೆ ಕಾರ್ಖಾನೆಗಳು ಒಂದು ಕೆಜಿ ಸಕ್ಕರೆ ಉತ್ಪಾದನೆಗೆ ವಿಧಿಸುವ ದರ ಇದು. ಫ್ಯಾಕ್ಟರಿಯಿಂದ ಹೊರಹೋಗುವ ಮುನ್ನ ಇರುವ ದರ. ತೆರಿಗೆ, ಸಾಗಣೆ, ಕಮಿಷನ್ ಇತ್ಯಾದಿ ವೆಚ್ಚವೆಲ್ಲವೂ ಸೇರ್ಪಡೆಯಾಗುವ ಮುನ್ನ ಇರುವ ದರ.

ಇದನ್ನೂ ಓದಿ: ಸುಂಕರಹಿತವಾಗಿ 10 ಲಕ್ಷ ಟನ್ ಕಚ್ಚಾ ಸಕ್ಕರೆ ಆಮದಿಗೆ ಅವಕಾಶ; ಸಕ್ಕರೆ ಬೆಲೆ ಏರಿಕೆ ತಡೆಯಲು ಸರ್ಕಾರದ ಕ್ರಮ

ಕೃತಕ ಬೆಲೆ ಏರಿಕೆಗೆ ತಡೆ: ಸಕ್ಕರೆ ಗಿರಣಿಗಳು ಇದುವರೆಗೆ ಕೃತಕವಾಗಿ ಬೆಲೆಗಳನ್ನು ಹೆಚ್ಚಿಸಿದ್ದವು. ಕಳೆದ ವಾರವಷ್ಟೇ ಗಿರಣಿ ಸಕ್ಕರೆ ದರ ಕಿಲೋಗೆ 67 ರೂಗೆ ಏರಿತ್ತು. ಆದರೆ ಸರ್ಕಾರದ ದಿಢೀರ್ ನಿರ್ಧಾರದಿಂದ ಮಾರುಕಟ್ಟೆಯಲ್ಲಿ ಸಕ್ಕರೆಯ ಪೂರೈಕೆ ಹೆಚ್ಚಾಗಿ ಬೆಲೆಗಳು ನಿಯಂತ್ರಣಕ್ಕೆ ಬಂದಿವೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಕಡಿಮೆ ಆಗಬಹುದು ಎಂದು ಆಹಾರ ಕಾರ್ಯದರ್ಶಿ ಸ್ಪಷ್ಟಪಡಿಸಿದ್ದಾರೆ.

ಚಿಲ್ಲರೆ ಮಾರುಕಟ್ಟೆಗೆ ಶೀಘ್ರವೇ ಲಾಭ: ಎಕ್ಸ್‌-ಮಿಲ್ ಬೆಲೆಗಳು ಕಡಿಮೆಯಾಗಿರುವುದರಿಂದ, ಮುಂಬರುವ ದಿನಗಳಲ್ಲಿ ಹೋಲ್‌ಸೇಲ್ ಮತ್ತು ಚಿಲ್ಲರೆ (Retail) ಮಾರುಕಟ್ಟೆಯಲ್ಲೂ ಸಕ್ಕರೆ ದರ ಕಡಿಮೆಯಾಗಿ ಸಾರ್ವಜನಿಕರಿಗೆ ಅನುಕೂಲವಾಗಲಿದೆ.

ಸಾಕಷ್ಟು ಸಕ್ಕರೆ ದಾಸ್ತಾನು ಇದ್ದರೂ ಹೆಚ್ಚಿದ್ದ ಬೆಲೆ

2025-26ರ ಮಾರುಕಟ್ಟೆ ವರ್ಷದಲ್ಲಿ (2025ರ ಅಕ್ಟೋಬರ್​ನಿಂದ 2026ರ ಸೆಪ್ಟೆಂಬರ್) ಸಕ್ಕರೆ ದಾಸ್ತಾನು 343 ಲಕ್ಷ ಟನ್​ಗಳಷ್ಟು ಆಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ಸಕ್ಕರೆ ಸಂಗ್ರಹ 306 ಲಕ್ಷ ಟನ್ ಆಗಿತ್ತು. ನಿರೀಕ್ಷೆಗಿಂತ ಕಡಿಮೆ ಸಕ್ಕರೆ ದಾಸ್ತಾನು ಆದರೂ ಕೂಡ ದೇಶದ ಆಂತರಿಕ ಸಕ್ಕರೆ ಬೇಡಿಕೆಗಿಂತಲೂ ಹೆಚ್ಚೇ ಇದೆ. ಭಾರತದಲ್ಲಿ ದೇಶೀಯವಾಗಿ ವರ್ಷಕ್ಕೆ 280-285 ಲಕ್ಷ ಟನ್​ಗಳಷ್ಟು ಸಕ್ಕರೆಗೆ ಬೇಡಿಕೆ ಇದೆ.

ಇದನ್ನೂ ಓದಿ: ಭಾರತದಿಂದ ಇನ್ನೂ 8-9 ವ್ಯಾಪಾರ ಒಪ್ಪಂದಗಳಿಗೆ ಮಾತುಕತೆ ಚಾಲನೆಯಲ್ಲಿ: ಪಿಯೂಷ್ ಗೋಯಲ್

ಬೇಡಿಕೆ ಪೂರೈಕೆ ಮಾಡುವಷ್ಟು ಸಂಗ್ರಹ ಇದ್ದರೂ, ಫ್ಯಾಕ್ಟರಿಗಳು ಹೆಚ್ಚು ಸಕ್ಕರೆ ದಾಸ್ತಾನು ಮಾಡಿಕೊಂಡಿದ್ದರಿಂದ ರೀಟೇಲ್ ಬೆಲೆ ಏರಿಕೆ ಆಗಿತ್ತು. ಈಗ ಸರ್ಕಾರ ಕಚ್ಚಾ ಸಕ್ಕರೆ ಆಮದಿಗೆ ಉತ್ತೇಜನ ನೀಡಿರುವುದು, ಹಾಗು ದಾಸ್ತಾನು ನಿರ್ಬಂಧಗಳನ್ನು ಹಾಕಿರುವುದು ಬೆಲೆ ನಿಯಂತ್ರಣ ಸಾಧ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗುಡ್ ನ್ಯೂಸ್: ಶಿವರಾಮ ಕಾರಂತ ಬಡಾವಣೆ ನಿವೇಶನ ಹಂಚಿಕೆಗೆ ಡೇಟ್ ಫಿಕ್ಸ್​​
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಗದಗದ ಕೆಂಚಲಾಪೂರದಲ್ಲಿ ಸದ್ದಿಲ್ಲದೆ ಸರ್ಕಾರಿ ಕನ್ನಡ ಶಾಲೆಗಳಿಗೆ ಬೀಗ?
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
ಪ್ರಶ್ನೆಪತ್ರಿಕೆ ಸೋರಿಕೆ, ನೇಮಕಾತಿ ವಿಳಂಬಕ್ಕೆ ವಿದ್ಯಾರ್ಥಿಗಳ ರಣಕಹಳೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
KRS ಡ್ಯಾಂಗೆ ಮುತ್ತಿಗೆ: ವಾಟಾಳ್ ನಾಗರಾಜ್ ಘೋಷಣೆ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ಎಬಿವಿಪಿ ಪ್ರತಿಭಟನೆ ವೇಳೆ ಮಾಧ್ಯಮದವರ ಮೇಲೆ ಪೊಲೀಸರ ದರ್ಪ
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
ರಸ್ತೆ ಮಧ್ಯೆ ಕಬ್ಬಿನ ಲಾರಿ ಅಡ್ಡಗಟ್ಟಿದ 10ಕ್ಕೂ ಹೆಚ್ಚು ಕಾಡಾನೆಗಳ ಹಿಂಡು!
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್