Elon Musk: ಪ್ರಧಾನಿ ಮೋದಿಯನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವ ಎಲಾನ್ ಮಸ್ಕ್

|

Updated on: Apr 10, 2023 | 5:46 PM

87.7 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ ಅತಿ ಹೆಚ್ಚು ಫಾಲೋ ಮಾಡುತ್ತಿರುವ ವಿಶ್ವ ನಾಯಕರಲ್ಲಿ ಒಬ್ಬರು. ಇದೀಗ ಮೋದಿಯನ್ನು ಟ್ವಿಟರ್​ ಸಿಇಒ ಎಲಾನ್ ಮಸ್ಕ್ ಫಾಲೋ ಮಾಡುತ್ತಿದ್ದಾರೆ

Elon Musk: ಪ್ರಧಾನಿ ಮೋದಿಯನ್ನು ಟ್ವಿಟರ್‌ನಲ್ಲಿ ಫಾಲೋ ಮಾಡುತ್ತಿರುವ ಎಲಾನ್ ಮಸ್ಕ್
ಮೋದಿ ಮತ್ತು ಎಲಾನ್ ಮಸ್ಕ್
Follow us on

ವಾಷಿಂಗ್ಟನ್: ಟ್ವಿಟರ್​ ಸಿಇಒ ಎಲಾನ್ ಮಸ್ಕ್ (Elon Musk) ಅವರು ಮೈಕ್ರೋಬ್ಲಾಗಿಂಗ್ ಸೈಟ್ ಟ್ವಿಟರ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ( Narendra Modi) ಅವರನ್ನು ಫಾಲೋ ಮಾಡುತ್ತಿದ್ದಾರೆ. ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಕೇವಲ 195 ಜನರನ್ನು ಮಾತ್ರ ಫಾಲೋ ಮಾಡುತ್ತಿರುವ ಎಲಾನ್ ಮಸ್ಕ್ 134.3 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಮಾರ್ಚ್ ಕೊನೆಯಲ್ಲಿ ಎಲಾನ್ ಮಸ್ಕ್, ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಹಿಂದಿಕ್ಕಿ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಇದೀಗ 87.7 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿರುವ ಪ್ರಧಾನಿ ಮೋದಿ ಅವರನ್ನು ಟ್ವಿಟರ್‌ನಲ್ಲಿ ಅತಿ ಹೆಚ್ಚು ಫಾಲೋ ಮಾಡುತ್ತಿರುವ ವಿಶ್ವ ನಾಯಕರಲ್ಲಿ ಒಬ್ಬರು. ಜಾಗತಿಕವಾಗಿ ಹೆಚ್ಚು ಫಾಲೋವರ್ಸ್ ಹೊಂದಿರುವ 4ನೇ ವಿಶ್ವ ನಾಯಕ ಪ್ರಧಾನಿ ಮೋದಿ. ಭಾರತದ ಪ್ರಧಾನಿಯನ್ನು ಹೊರತುಪಡಿಸಿ, ಯುಕೆ ಪ್ರಧಾನಿ ರಿಷಿ ಸುನಕ್, ಮಾಜಿ ಯುಎಸ್ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ.

ಎಲಾನ್ ಮಸ್ಕ್ ಪ್ರಧಾನಿ ಮೋದಿಯನ್ನು ಫಾಲೋ ಮಾಡುತ್ತಿರುವ ಸುದ್ದಿ ಟ್ವಿಟರ್‌ನಲ್ಲಿ ಚರ್ಚೆಗೆ ಕಾರಣವಾಗಿದೆ. ಎಲಾನ್ ಮಸ್ಕ್ ಪ್ರಧಾನಿ ಮೋದಿಯನ್ನು ಫಾಲೋ ಮಾಡುತ್ತಿದ್ದಾರೆ ಎಂದರೆ ಶೀಘ್ರದಲ್ಲೇ ಟೆಸ್ಲಾ ಭಾರತಕ್ಕೆ ಬರಲಿದೆ ಎಂಬುದಕ್ಕೆ ಇದು ಸೂಚನೆಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಬಳಕೆದಾರರು ಹೇಳುತ್ತಿದ್ದಾರೆ. ಎಲೋನ್ ಮಸ್ಕ್ ನರೇಂದ್ರ ಮೋದಿ ಅವರನ್ನು ಫಾಲೋ ಮಾಡಲು ಕಾರಣವೇನು? ಎಂದು ಒಬ್ಬ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: Elon Musk Twitter Deal: ಟ್ವಿಟ್ಟರ್​ ಜತೆ ಒಪ್ಪಂದ ಕೊನೆಗೊಳಿಸುವ ಬಗ್ಗೆ ಎಲಾನ್ ಮಸ್ಕ್ ಪತ್ರ ಹೇಳುವುದೇನು?

ಧನ್ಯವಾದ ಎಲೋನ್ ಮಸ್ಕ್, ನಮ್ಮ ಪ್ರಧಾನಿ ಮೋದಿ ನಮ್ಮ ದೇಶದ ಉತ್ತಮ, ಸಮೃದ್ಧ, ಪ್ರಗತಿಶೀಲ ಮತ್ತು ಜನರ ಜೀವನವನ್ನು ಸುಧಾರಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿ, ಅವರನ್ನು ನೀವು ಫಾಲೋ ಮಾಡುತ್ತಿರುವುದು ಖುಷಿ ವಿಚಾರ, ಅವರು ಇಂದಿನ ಮಕ್ಕಳಿಗೆ ಉತ್ತಮ ಭವಿಷ್ಯದ ಜೀವನವನ್ನು ರೂಪಿಸಲು ಶ್ರಮಿಸುತ್ತಿದ್ದಾರೆ ಎಂದು ಒಬ್ಬ ಬಳಕೆದಾರ ಹೇಳಿದ್ದಾರೆ.

ಎಲೋನ್ ಮಸ್ಕ್ ಅಕ್ಟೋಬರ್ 27, 2022 ರಂದು ಟ್ವಿಟರ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು, ಈ ಸಮಯದಲ್ಲಿ ಎಲೋನ್ ಮಸ್ಕ್ ಸುಮಾರು 110 ಮಿಲಿಯನ್ ಬಳಕೆದಾರರನ್ನು ಹೊಂದಿದ್ದರು. ಅವರು ಜವಾಬ್ದಾರಿ ವಹಿಸಿಕೊಂಡ ಐದು ತಿಂಗಳೊಳಗೆ 133 ಮಿಲಿಯನ್‌ಗೆ ಏರಿಕೆ ಕಂಡಿತ್ತು. ಬರಾಕ್ ಒಬಾಮಾ ಮತ್ತು ಜಸ್ಟಿನ್ ಬೈಬರ್ ನಂತರ ಅವರು ಮೂರನೇ ಅತಿ ಹೆಚ್ಚು ಫಾಲೋವರ್ಸ್ ಟ್ವಿಟರ್ ಬಳಕೆದಾರರಾಗಿದ್ದರು.

Published On - 5:46 pm, Mon, 10 April 23