ಭಾರತಕ್ಕೆ ಅಂಬಾನಿ ಬಾಸಾ? ಇಲಾನ್ ಪ್ರಶ್ನೆಗೆ, ಮತ್ತೊಬ್ಬರಿದ್ದಾರೆ ನೋಡಿ ಎಂದ ರಾಹುಲ್; ಕಾಂಗ್ರೆಸ್ ದಿಕ್ಕೆಟ್ಟಿದೆ ಎಂದ ಸಚಿವ ಸಿಂದಿಯಾ

ಸ್ಟಾರ್‌ಲಿಂಕ್ ಇಂಟರ್ನೆಟ್ ಲೈಸೆನ್ಸ್ ವಿಚಾರದಲ್ಲಿ ಪ್ರಧಾನಿ ಮೋದಿ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿರುಗೇಟು ನೀಡಿದ್ದಾರೆ. ಭಾರತದ ಉಪಗ್ರಹ ನೀತಿ ಸ್ಪಷ್ಟವಾಗಿದ್ದು, ಯಾವುದೇ ಏಕಸ್ವಾಮ್ಯಕ್ಕೆ ಅವಕಾಶವಿಲ್ಲ ಎಂದು ಸಿಂಧಿಯಾ ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್​ನವರಿಗೆ ಅವರು ಎಡಕ್ಕೆ ಹೋಗುತ್ತಿದ್ದೇವೋ, ಬಲಕ್ಕೆ ಹೋಗುತ್ತಿದ್ದೇವೋ ಗೊತ್ತಾಗಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಭಾರತಕ್ಕೆ ಅಂಬಾನಿ ಬಾಸಾ? ಇಲಾನ್ ಪ್ರಶ್ನೆಗೆ, ಮತ್ತೊಬ್ಬರಿದ್ದಾರೆ ನೋಡಿ ಎಂದ ರಾಹುಲ್; ಕಾಂಗ್ರೆಸ್ ದಿಕ್ಕೆಟ್ಟಿದೆ ಎಂದ ಸಚಿವ ಸಿಂದಿಯಾ
ರಾಹುಲ್ ಗಾಂಧಿ
Image Credit source: PTI

Updated on: Oct 09, 2026 | 6:11 PM

ನವದೆಹಲಿ, ಅಕ್ಟೋಬರ್ 9: ಸ್ಟಾರ್​ಲಿಂಕ್​ನ ಸೆಟಿಲೈಟ್ ಇಂಟರ್ನೆಟ್ ಸೇವೆಗೆ ಭಾರತದಲ್ಲಿ ತಡೆಯಾಗುತ್ತಿದೆ ಎನ್ನುವ ಇಲಾನ್ ಮಸ್ಕ್ ಅವರ ಆರೋಪದ ಬೆಂಕಿಗೆ ರಾಹುಲ್ ಗಾಂಧಿ ತುಪ್ಪ ಸುರಿದಿದ್ದಾರೆ. ಇದರ ಬೆನ್ನಲ್ಲೇ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರು ಕಾಂಗ್ರೆಸ್ ಪಕ್ಷದ ಧೋರಣೆಯನ್ನು ಕಟುವಾಗಿ ಟೀಕಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ‘ಇಂಡಿಯಾ ಮೊಬೈಲ್ ಕಾಂಗ್ರೆಸ್ 2026’ (IMC 2026) ಮೇಳದಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಪಕ್ಷದ ಈ ದ್ವಿಮುಖ ನಿಲುವನ್ನು ತೀವ್ರವಾಗಿ ಲೇವಡಿ ಮಾಡಿದ್ದಾರೆ.

“ಕಾಂಗ್ರೆಸ್ ಪಕ್ಷಕ್ಕೆ ತಾವು ಎಡಕ್ಕೆ ಹೋಗುತ್ತಿದ್ದೇವೋ ಅಥವಾ ಬಲಕ್ಕೆ ಹೋಗುತ್ತಿದ್ದೇವೋ ಎಂಬುದರ ಬಗ್ಗೆಯೇ ಸ್ಪಷ್ಟತೆಯಿಲ್ಲ. ಆರಂಭದಲ್ಲಿ ಒಬ್ಬ ಉದ್ಯಮಿಗೆ (ಮಸ್ಕ್/ಸ್ಟಾರ್‌ಲಿಂಕ್) ಲೈಸೆನ್ಸ್ ಸಿಗುತ್ತಿದೆ ಎಂದು ತಗಾದೆ ತೆಗೆದಿದ್ದ ಕಾಂಗ್ರೆಸ್, ಈಗ ಅದೇ ಉದ್ಯಮಿಗೆ ಲೈಸೆನ್ಸ್ ಸಿಗುತ್ತಿಲ್ಲ ಎಂದು ಆತನ ಪರವಾಗಿ ಮಾತನಾಡುತ್ತಿದೆ!” ಎಂದು ಸಿಂದಿಯಾ ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಅಮೆರಿಕದ ಪರ್ಮ್ ನಿರ್ಬಂಧಕ್ಕೆ ಭಾರತ ತೀಕ್ಷ್ಣ ಪ್ರತಿಕ್ರಿಯೆ; ಈ ಕ್ರಮದಿಂದ ಎರಡೂ ದೇಶಕ್ಕೆ ಒಳಿತಲ್ಲ- ಕೇಂದ್ರ ವಿದೇಶಾಂಗ ಸಚಿವಾಲಯ ಹೇಳಿಕೆ

ಇಲಾನ್ ಮಸ್ಕ್, ರಾಹುಲ್ ಗಾಂಧಿ ಸ್ಟಾರ್​ಲಿಂಕ್ ಜುಗಲ್ಬಂದಿ ಏನು?

ಭಾರತದಲ್ಲಿ ಸ್ಟಾರ್​ಲಿಂಕ್ ಸೇವೆಗೆ ತಡೆಯೊಡ್ಡಲು ನಿರ್ದಿಷ್ಟ ಉದ್ಯಮಿ ಯತ್ನಿಸಿದ್ದಾರೆ ಎಂದು ಇಲಾನ್ ಮಸ್ಕ್ ಹೇಳಿದ್ದಾರೆ. ಮತ್ತೊಂದು ಟ್ವೀಟ್​ನಲ್ಲಿ ಅವರು, ‘ಸ್ಟಾರ್​ಲಿಂಕ್​ಗೆ 165 ದೇಶಗಳಲ್ಲಿ ಲೈಸೆನ್ಸ್ ಸಿಕ್ಕಿದೆ. ಭಾರತದಲ್ಲಿ ಯಾಕೆ ಸಿಕ್ಕಿಲ್ಲ? ಅಂಬಾನಿ ಭಾರತದ ನಿಜವಾದ ಬಾಸಾ?’ ಎಂದು ನೇರವಾಗಿ ರಿಲಾಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಹೆಸರನ್ನೇ ಎತ್ತಿದ್ದಾರೆ ಇಲಾನ್ ಮಸ್ಕ್.

ಇದಕ್ಕೆ ರಾಹುಲ್ ಗಾಂಧಿ ಕೊಟ್ಟ ಉತ್ತರ ಮತ್ತಷ್ಟು ಕುತೂಹಲಕಾರಿಯಾಗಿದೆ. ‘ಭಾರತಕ್ಕೆ ಸ್ವಾಗತ ಇಲಾನ್. ಮತ್ತೊಬ್ಬ ವ್ಯಕ್ತಿ ನಿಮ್ಮ ಕಣ್ಣಿಗೆ ಬೀಳಬಹುದು, ಕಾಯಿರಿ’ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ. ಇದಕ್ಕೆ ಇಲಾನ್ ಮಸ್ಕ್ ರಾಹುಲ್ ಗಾಂಧಿಗೆ ಧನ್ಯವಾದ ಹೇಳಿದ್ದಾರೆ.

ಅಷ್ಟಕ್ಕೂ ರಾಹುಲ್ ಅವರು ಹೇಳಿದ ಆ ಇನ್ನೊಬ್ಬ ವ್ಯಕ್ತಿ ಗೌತಮ್ ಅದಾನಿ ಇರಬಹುದು.

ಇದನ್ನೂ ಓದಿ: ಅಮೆರಿಕದ ಗ್ರೀನ್ ಕಾರ್ಡ್ ವ್ಯವಸ್ಥೆ ರದ್ದತಿಗೆ ನಾಸ್ಕಾಮ್ ಆಕ್ಷೇಪ; ವಲಸೆ ಬೇರೆ, ಕುಶಲ ತಂತ್ರಜ್ಞರ ಹರಿವು ಬೇರೆ ಎಂದ ನಾಸ್ಕಾಮ್

ಸರ್ಕಾರದಿಂದ ಈಗಾಗಲೇ ಮೂರು ಸಂಸ್ಥೆಗಳಿಗೆ ಅನುಮತಿ

ಭಾರತ ಸರ್ಕಾರವು ಸೆಟಿಲೈಟ್ ಇಂಟರ್ನೆಟ್ ನೀತಿಯಲ್ಲಿ ಅತ್ಯಂತ ಸ್ಪಷ್ಟವಾಗಿದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಸ್ಪಷ್ಟಪಡಿಸಿದ್ದಾರೆ. ದೇಶದಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಏಕಸ್ವಾಮ್ಯಕ್ಕೆ (Monopoly) ಅವಕಾಶವಿಲ್ಲ. ಈಗಾಗಲೇ ಭಾರತ ಸರ್ಕಾರವು ಮೂರು ಪ್ರಮುಖ ಸಂಸ್ಥೆಗಳಿಗೆ (ಒನ್‌ವೆಬ್, ಜಿಯೋ ಹಾಗೂ ಸ್ಟಾರ್‌ಲಿಂಕ್ ಒಳಗೊಂಡಂತೆ ಅರ್ಹ ಪಟ್ಟಿಯಲ್ಲಿರುವ ಸಂಸ್ಥೆಗಳು) ಲೈಸೆನ್ಸ್ ಪ್ರಕ್ರಿಯೆ ಆರಂಭಿಸಲು ಅನುಮೋದನೆ ನೀಡಿದೆ.

ಯಾವುದೇ ವಿದೇಶಿ ಅಥವಾ ದೇಶೀಯ ಕಂಪನಿಯಾಗಿದ್ದರೂ, ಭಾರತದ ರಾಷ್ಟ್ರೀಯ ಭದ್ರತಾ ಮಾನದಂಡಗಳು (Security Protocols) ಮತ್ತು ಟ್ರಾಯ್ (TRAI) ನಿಯಮಾವಳಿಗಳನ್ನು ಕಡ್ಡಾಯವಾಗಿ ಪೂರೈಸಲೇಬೇಕು. ಎಲ್ಲಾ ಭದ್ರತಾ ತಪಾಸಣೆಗಳಲ್ಲಿ ಉತ್ತೀರ್ಣರಾದ ನಂತರವೇ ಸ್ಪೆಕ್ಟ್ರಮ್ ಹಂಚಿಕೆ (Revenue-sharing basis) ನಡೆದು ಕಾರ್ಯಾಚರಣೆಗೆ ಅನುಮತಿ ನೀಡಲಾಗುವುದು ಎಂದು ಅವರು ಹೇಳಿದರು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:02 pm, Fri, 9 October 26

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us