ಭಾರತದ ಚಂದ್ರಯಾನ ಯೋಜನೆ ಬಗ್ಗೆ ವಿಶ್ವಶ್ರೀಮಂತ ಇಲಾನ್ ಮಸ್ಕ್ ಪ್ರತಿಕ್ರಿಯೆ ವಿಶೇಷವಾದುದು

|

Updated on: Aug 23, 2023 | 5:43 PM

Elon Musk reaction on Chadrayaan-3: ಭಾರತದ ಮೂರನೇ ಚಂದ್ರಯಾನ ಯೋಜನೆ ಬಗ್ಗೆ ಜಾಗತಿಕವಾಗಿ ಚರ್ಚಿತವಾಗುತ್ತಿದೆ. ಸ್ಪೇಸ್​ಎಕ್ಸ್ ಸಂಸ್ಥಾಪಕ ಇಲಾನ್ ಮಸ್ಕ್ ಕೂಡ ಈ ಚರ್ಚೆಯಲ್ಲಿ ಪಾಲ್ಗೊಂಡು ಭಾರತದ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದಾರೆ.

ಭಾರತದ ಚಂದ್ರಯಾನ ಯೋಜನೆ ಬಗ್ಗೆ ವಿಶ್ವಶ್ರೀಮಂತ ಇಲಾನ್ ಮಸ್ಕ್ ಪ್ರತಿಕ್ರಿಯೆ ವಿಶೇಷವಾದುದು
ಚಂದ್ರಯಾನ
Follow us on

ನವದೆಹಲಿ, ಆಗಸ್ಟ್ 23: ಭಾರತದ ಮೂರನೇ ಚಂದ್ರಯಾನ ಯೋಜನೆ (Chadrayaan-3) ವಿಶ್ವಾದ್ಯಂತ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಎರಡನೇ ಚಂದ್ರಯಾನದಂತೆ ಈಗ ಮೂರನೇ ಯಾನವೂ ಕೂಡ ಅದರ ಬಜೆಟ್ ವಿಚಾರ ಸಂಬಂಧ ಚರ್ಚಿತವಾಗುತ್ತಿದೆ. ಇಸ್ರೋದಿಂದ ಕಳುಹಿಸಲಾಗಿರುವ ಚಂದ್ರಯಾನ-3 ಯೋಜನೆಯ ಒಟ್ಟು ವೆಚ್ಚ ಸುಮಾರು 75 ಮಿಲಿಯನ್ ಡಾಲರ್ ಮಾತ್ರ. ಅಂದರೆ ಸುಮಾರು 615 ಕೋಟಿ ರೂ ಮಾತ್ರವೇ. ಬಾಲಿವುಡ್​ನ ಇಂಟರ್​ಸ್ಟೆಲ್ಲಾರ್ ಸಿನಿಮಾದ (Interstellar Movie) ಬಜೆಟ್ ಗಾತ್ರವೇ 165 ಮಿಲಿಯನ್ ಡಾಲರ್ (ಸುಮಾರು 1,500 ಕೋಟಿ ರೂ) ಇದೆ. ಒಂದು ಹಾಲಿವುಡ್ ಮುಖ್ಯವಾಹಿನಿ ಸಿನಿಮಾಗೆ ಆಗುವ ವೆಚ್ಚಕ್ಕಿಂತಲೂ ಚಂದ್ರಯಾನ ಅಗ್ಗ ಎನಿಸಿದೆ. ಈ ವಿಚಾರ ಎಕ್ಸ್ ತಾಣದಲ್ಲಿ (ಟ್ವಿಟ್ಟರ್) ವೈರಲ್ ಆಗುತ್ತಿದ್ದು ಬಹಳ ಜನರು ಕಾಮೆಂಟ್ ಮಾಡುತ್ತಿದ್ದಾರೆ.

ಎಕ್ಸ್ ಮುಖ್ಯಸ್ಥ ಇಲಾನ್ ಮಸ್ಕ್ ಅವರು ಇಂಥದ್ದೊಂದು ಚರ್ಚೆಯಲ್ಲಿ ಭಾಗಿಯಾಗಿರುವುದು ವಿಶೇಷ. ಮಂಗಳ ಗ್ರಹದಲ್ಲಿ ಮಾನವನ ವಸಾಹತು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡಿರುವ ಇಲಾನ್ ಮಸ್ಕ್ ಭಾರತದ ಚಂದ್ರಯಾಣ-3 ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

‘ಇಂಟರ್​ಸ್ಟೆಲ್ಲಾರ್ ಸಿನಿಮಾಗಿಂತಲೂ (165 ಮಿಲಿಯನ್ ಡಾಲರ್) ಭಾರತದ ಚಂದ್ರಯಾನ-3 (75 ಮಿಲಿಯನ್ ಡಾಲರ್) ಯೋಜನೆಯ ಬಜೆಟ್ ಕಡಿಮೆ ಇರುವುದು ನಿಜಕ್ಕೂ ಸೋಜಿಗ’ ಎಂದು ನ್ಯೂಸ್​ಥಿಂಕ್ ಎಂಬ ಎಕ್ಸ್ ಖಾತೆಯಿಂದ ಟ್ವೀಟ್ ಆಗಿತ್ತು. ಇದಕ್ಕೆ ಇಲಾನ್ ಮಸ್ಕ್ ಸ್ಪಂದಿಸಿದ್ದು, ‘ಭಾರತಕ್ಕೆ ಇದರಿಂದ ಒಳ್ಳೆಯದು’ ಎಂದು ಹೇಳಿ ಕೊನೆಯಲ್ಲಿ ಭಾರತದ ಬಾವುಟದ ಇಮೋಜಿ ಹಾಕಿದ್ದಾರೆ.


ಇದನ್ನೂ ಓದಿ: Chandrayaan 3: ಇಂದು ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-3 ರ ಸಾಫ್ಟ್ ಲ್ಯಾಂಡಿಂಗ್ ತಪ್ಪಿದರೆ ಮುಂದೇನು?

ಭಾರತದ ಎರಡನೇ ಚಂದ್ರಯಾನ ಚಂದ್ರನ ಕಕ್ಷೆಯನ್ನು ತಲುಪಿದರೂ ಲ್ಯಾಂಡರ್ ಅನ್ನು ಇಳಿಸುವಾಗ ವೈಫಲ್ಯವಾಗಿ ಅದು ನೆಲಕ್ಕೆ ಅಪ್ಪಳಿಸಿ ಹಾಳಾಗಿಹೋಗಿತ್ತು. ಈಗ ಮೂರನೇ ಚಂದ್ರಯಾನವನ್ನು ಬಹಳ ಎಚ್ಚರಿಕೆಯಿಂದ ರೂಪಿಸಿ ಕಳುಹಿಸಲಾಗಿದೆ. ಈ ಲೇಖನ ಬರೆಯುವ ಹೊತ್ತಿನಲ್ಲಿ ಲ್ಯಾಂಡರ್ ಅನ್ನು ಇಳಿಸುವ ಕಾರ್ಯ ಶುರುವಾಗಿತ್ತು. ಇಡೀ ವಿಶ್ವದಲ್ಲಿ ಯಾರೂ ಇಳಿಯದ ಚಂದ್ರನ ಇನ್ನೊಂದು ಬದಿಗೆ ಭಾರತದ ನೌಕೆ ಇಳಿಯುತ್ತಿದೆ. ರಷ್ಯಾ ಕೂಡ ಇದೇ ಸೌತ್ ಪೋಲ್​ನಲ್ಲಿ ಲ್ಯಾಂಡಿಂಗ್​ಗೆ ಯತ್ನಿಸಿ ವಿಫಲವಾಗಿತ್ತು. ಭಾರತ ಯಶಸ್ವಿಯಾದರೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶವಾಗಲಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ