ನವದೆಹಲಿ, ಜೂನ್ 18: ಬಸ್, ಮೆಟ್ರೋ ಇತ್ಯಾದಿಯಲ್ಲಿ ಇರುವಂತೆ ಹೆದ್ದಾರಿ ಟೋಲ್ಗಳಿಗೂ ಪಾಸ್ ಸಿಸ್ಟಂ ಬರುತ್ತಿದೆ. ಫಾಸ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಸಿಸ್ಟಂ (FASTag based annual pass) ಅನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಈ ಪಾಸ್ ಸ್ಕೀಮ್ ಅನ್ನು ಘೋಷಿಸಿದ್ದಾರೆ. ‘ಮೂರು ಸಾವಿರ ರೂ ಬೆಲೆಯ ಫಾಸ್ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಅನ್ನು ಪರಿಚಯಿಸುತ್ತಿದ್ದೇವೆ’ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.
ಕಮರ್ಷಿಯಲ್ ವಾಹನಗಳಿಗೆ ಈ ಪಾಸ್ ಲಭ್ಯ ಇರೋದಿಲ್ಲ. ಕಮರ್ಷಿಯಲ್ ಅಲ್ಲದ ಕಾರ್, ಜೀಪ್, ವ್ಯಾನ್ ಇತ್ಯಾದಿ ಖಾಸಗಿ ವಾಹನಗಳಿಗೆ (Non commercial private cars) ಮಾತ್ರ ಇದು ಸಿಗುತ್ತದೆ. 2025ರ ಆಗಸ್ಟ್ 15ರಿಂದ ಈ ಫಾಸ್ಟ್ಯಾಗ್ ಪಾಸ್ ವಿತರಣೆ ನಡೆಯಲಿದೆ. ಒಂದು ಪಾಸ್ ಬೆಲೆ 3,000 ರೂ ಇರಲಿದೆ. ಪಾಸ್ ಆ್ಯಕ್ಟಿವೇಟ್ ಆಗಿ ಒಂದು ವರ್ಷದವರೆಗೆ ಸಿಂಧು (valid) ಇರುತ್ತದೆ. ಆದರೆ, 200 ಟ್ರಿಪ್ ಮಿತಿ ಇರುತ್ತದೆ.
Important Announcement 📢
🔹In a transformative step towards hassle-free highway travel, we are introducing a FASTag-based Annual Pass priced at ₹3,000, effective from 15th August 2025. Valid for one year from the date of activation or up to 200 trips—whichever comes…
— Nitin Gadkari (@nitin_gadkari) June 18, 2025
ದೇಶದಲ್ಲಿ ಯಾವುದೇ ಭಾಗದಲ್ಲೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತವಾಗಿ ವಾಹನಗಳಲ್ಲಿ ಹೋಗಲು ಈ ವಾರ್ಷಿಕ ಪಾಸ್ ಅನುವು ಮಾಡಿಕೊಡುತ್ತದೆ. ಈ ಪಾಸ್ ಸ್ಕೀಮ್ನಲ್ಲಿ ವರ್ಷಕ್ಕೆ 200 ಟ್ರಿಪ್ ಮಿತಿ ಎಂದು ಹೇಳಲಾಗಿದೆ. ಆದರೆ, ಒಂದು ಟ್ರಿಪ್ ಎಂದರೆ ಏನೆಂದು ಸಚಿವರು ಇಲ್ಲಿ ಸ್ಪಷ್ಟಪಡಿಸಿಲ್ಲ. ಒಂದು ಟೋಲ್ ಪ್ಲಾಜಾ ದಾಟಿದರೆ ಅದನ್ನು ಒಂದು ಟ್ರಿಪ್ ಎಂದು ಪರಿಗಣಿಸಲಾಗಬಹುದು.
ಇದನ್ನೂ ಓದಿ: ಗಮನಿಸಿ, ಐಸಿಐಸಿಐ ಬ್ಯಾಂಕ್ನ ಎಟಿಎಂ ಟ್ರಾನ್ಸಾಕ್ಷನ್, ಕ್ಯಾಷ್ ಡೆಪಾಸಿಟ್ ಇತ್ಯಾದಿ ಶುಲ್ಕಗಳಲ್ಲಿ ಬದಲಾವಣೆ
ಫಾಸ್ಟ್ಯಾಗ್ ಆಧಾರಿತವಾದ ವಾರ್ಷಿಕ ಪಾಸ್ ಅನ್ನು ಆನ್ಲೈನ್ನಲ್ಲೇ ಪಡೆಯಬಹುದು. ರಾಜಮಾರ್ಗ್ ಯಾತ್ರಾ ಆ್ಯಪ್ನಲ್ಲಿ, ಎನ್ಎಚ್ಎಐ ವೆಬ್ಸೈಟ್, ಹಾಗು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ (MoRTH) ವೆಬ್ಸೈಟ್ಗಳಲ್ಲಿ ಶೀಘ್ರದಲ್ಲೇ ಈ ಪಾಸ್ ಪಡೆಯಲು ಲಿಂಕ್ ಪ್ರಕಟವಾಗಲಿದೆ. ಅಲ್ಲಿ ಪಾಸ್ ಅನ್ನು ಆ್ಯಕ್ಟಿವೇಟ್ ಮಾಡುವ ಮತ್ತು ರಿನಿವಲ್ ಮಾಡುವ ಅವಕಾಶ ನೀಡಲಾಗಿರುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 2:11 pm, Wed, 18 June 25