
ನವದೆಹಲಿ, ಜೂನ್ 28: ಕಳೆದ ಬಾರಿಯ ಹಣಕಾಸು ವರ್ಷದಲ್ಲಿ ಎಫ್ಎಟಿಎಫ್ (Financial Action Task Force) ನಡೆಸಿದ ಮ್ಯುಚುವಲ್ ಇವಾಲ್ಯುಯೇಶನ್ನಲ್ಲಿ ಭಾರತ ಗಮನಾರ್ಹ ಸಾಧನೆ ತೋರಿದೆ. ಮನಿ ಲಾಂಡರಿಂಗ್ ಅಥವಾ ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದಕರಿಗೆ ಹಣ ವರ್ಗಾವಣೆಯ ಕಾರ್ಯಗಳನ್ನು ನಿಗ್ರಹಿಸಲು ಭಾರತ ಮಾಡುತ್ತಿರುವ ಪ್ರಯತ್ನಗಳನ್ನು ಎಫ್ಎಟಿಎಫ್ ಗುರುತಿಸಿದೆ. ಸಿಂಗಾಪುರದಲ್ಲಿ ಇಂದು ಮುಕ್ತಾಯಗೊಂಡ ಎಫ್ಎಟಿಎಫ್ ಸರ್ವಸದಸ್ಯರ ಸಭೆಯಲ್ಲಿ ಭಾರತದ ಮ್ಯುಚುವಲ್ ಇವ್ಯಾಲ್ಯುಯೇಶನ್ ರಿಪೋರ್ಟ್ ಅನ್ನು ಸ್ವೀಕರಿಸಲಾಗಿದೆ.
ಮ್ಯೂಚುಲ್ ಇವ್ಯಾಲ್ಯುಯೇಶನ್ ರಿಪೋರ್ಟ್ನಲ್ಲಿ ಭಾರತ ಮಾಡಿರುವ ಕಾರ್ಯಗಳನ್ನು ಗುರುತಿಸಲಾಗಿದೆ. ಭಾರತವನ್ನು ‘ರೆಗ್ಯುಲರ್ ಫಾಲೋ ಅಪ್’ ಕೆಟಗರಿಗೆ ಸೇರಿಸಲಾಗಿದೆ. ಜಿ20 ರಾಷ್ಟ್ರಗಳ ಪೈಕಿ ನಾಲ್ಕು ದೇಶಗಳು ಮಾತ್ರವೇ ಈ ಕೆಟಗರಿಗರಿಗೆ ಸೇರ್ಪಡೆಯಾಗಿರುವುದು ಇಲ್ಲಿ ಗಮನಾರ್ಹ.
ಭ್ರಷ್ಟಾಚಾರ, ವಂಚನೆ ಮತ್ತು ವ್ಯವಸ್ಥಿತ ಅಪರಾಧಗಳಿಂದ ಬಂದ ಹಣದ ಅಕ್ರಮ ವರ್ಗಾವಣೆಯೂ ಸೇರಿದಂತೆ ಮನಿ ಲಾಂಡರಿಂಗ್ ಮತ್ತು ಟೆರರ್ ಫೈನಾನ್ಸಿಂಗ್ನ ಅಪಾಯಗಳನ್ನು ಕಡಿಮೆ ಮಾಡಲು ಭಾರತ ಪ್ರಯತ್ನಿಸಿದೆ.
ನಗದು ಆಧಾರಿತ ಆರ್ಥಿಕತೆಯಿಂದ ಡಿಜಿಟಲ್ ಆರ್ಥಿಕತೆಗೆ ಪರಿವರ್ತನೆ ಆಗಿರುವುದು ಮನಿ ಲಾಂಡರಿಂಗ್ ಅಪಾಯವನ್ನು ಕಡಿಮೆ ಮಾಡಿದೆ. ಜನ್ ಧನ್, ಆಧಾರ್ ಮತ್ತು ಮೊಬೈಲ್ ಈ ಮೂರು ಅಂಶಗಳನ್ನೊಳಗೊಂಡಿರುವ ವ್ಯವಸ್ಥೆಯಿಂದಾಗಿ ಇವತ್ತು ಹಣಕಾಸು ವಹಿವಾಟು ಕಣ್ತಪ್ಪಿಹೋಗದಂತಾಗಿದೆ. ಈ ಮೂಲಕ ಅಕ್ರಮ ಹಣ ವರ್ಗಾವಣೆ ಸಾಧ್ಯತೆಯನ್ನು ಭಾರತ ಕಡಿಮೆ ಮಾಡಿದೆ ಎಂದು ಎಫ್ಎಟಿಎಫ್ನ ಮ್ಯೂಚುಲ್ ಇವಾಲ್ಯುಯೇಶನ್ ವರದಿಯಲ್ಲಿ ಪ್ರಶಂಸಿಸಲಾಗಿದೆ.
ಇದನ್ನೂ ಓದಿ: ಜಿಯೋ ದರ ಹೆಚ್ಚಳ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್ಐಎಲ್ ಮಿಂಚು; ಮಾರುಕಟ್ಟೆ ಬಂಡವಾಳ ದಾಖಲೆಯ 21 ಲಕ್ಷ ಕೋಟಿ ರೂಗೆ ಏರಿಕೆ
ಎಫ್ಎಟಿಎಫ್ ಮ್ಯುಚುವಲ್ ಇವಾಲ್ಯುಯೇಶನ್ನಲ್ಲಿ ಭಾರತದ ಸಾಧನೆಯನ್ನು ಗುರುತಿಸಲಾಗಿರುವುದು ಬಹಳ ಮುಖ್ಯ ಎನಿಸುತ್ತದೆ. ಇದು ಭಾರತದ ಹಣಕಾಸು ವ್ಯವಸ್ಥೆಯ ಒಟ್ಟಾರೆ ಸ್ಥಿರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸುತ್ತದೆ. ಇಂಥ ಒಳ್ಳೆಯ ರೇಟಿಂಗ್ಗಳು ಭಾರತದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುತ್ತದೆ. ಜಾಗತಿಕ ಹಣಕಾಸು ಮಾರುಕಟ್ಟೆಯ ಅವಕಾಶ ಭಾರತಕ್ಕೆ ಹೆಚ್ಚು ಸುಲಭವಾಗಿ ಪ್ರಾಪ್ತಿಯಾಗುತ್ತದೆ. ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆ ಜಾಗತಿಕವಾಗಿ ವ್ಯಾಪಿಸುವ ಕೆಲಸ ಸುಲಭವಾಗುತ್ತದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 6:18 pm, Fri, 28 June 24