ಜಿಯೋ ದರ ಹೆಚ್ಚಳ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್​ಐಎಲ್ ಮಿಂಚು; ಮಾರುಕಟ್ಟೆ ಬಂಡವಾಳ ದಾಖಲೆಯ 21 ಲಕ್ಷ ಕೋಟಿ ರೂಗೆ ಏರಿಕೆ

RIL share price go higher: ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್​ನ ಮಾರುಕಟ್ಟೆ ಬಂಡವಾಳ ಜೂನ್ 28, ಶುಕ್ರವಾರ 21 ಲಕ್ಷ ಕೋಟಿ ರೂ ದಾಟಿದೆ. ಈ ಮಟ್ಟದ ಷೇರುಸಂಪತ್ತು ಹೊಂದಿದ ಮೊದಲ ಕಂಪನಿ ಆರ್​ಐಎಲ್ ಆಗಿದೆ. ನಿನ್ನೆಯಷ್ಟೇ ಜಿಯೋ ತನ್ನ ವಿವಿಧ ಮೊಬೈಲ್ ಪ್ಲಾನ್​ಗಳ ದರ ಪರಿಷ್ಕರಣೆ ಮಾಡಿತ್ತು. ಅದರ ಜೊತೆಗೆ ವಿವಿಧ ಬ್ರೋಕರೇಜ್ ಸಂಸ್ಥೆಗಳು ರಿಲಾಯನ್ಸ್ ಬಗ್ಗೆ ಸಕಾರಾತ್ಮಕ ಅಭಿಪ್ರಾಯ ನೀಡಿವೆ.

ಜಿಯೋ ದರ ಹೆಚ್ಚಳ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್​ಐಎಲ್ ಮಿಂಚು; ಮಾರುಕಟ್ಟೆ ಬಂಡವಾಳ ದಾಖಲೆಯ 21 ಲಕ್ಷ ಕೋಟಿ ರೂಗೆ ಏರಿಕೆ
ರಿಲಾಯನ್ಸ್
Follow us
|

Updated on:Jun 28, 2024 | 1:01 PM

ನವದೆಹಲಿ, ಜೂನ್ 28: ರಿಲಾಯನ್ಸ್ ಇಂಡಸ್ಟ್ರೀಸ್ ಷೇರುಸಂಪತ್ತು (Market cap) ಇಂದು ಶುಕ್ರವಾರ ದಾಖಲೆ ಬರೆದಿದೆ. ಬೆಳಗಿನ ಒಂದು ಅವಧಿಯಲ್ಲಿ ಆರ್​ಐಎಲ್ ಷೇರುಬೆಲೆ 3,129 ರೂ ಮಟ್ಟಕ್ಕೆ ಹೋಗಿತ್ತು. ಮಧ್ಯಾಹ್ನ 12:30ರ ವೇಳೆಗೆ 3,112 ರೂಗೆ ಏರಿತ್ತು. ಇದರೊಂದಿಗೆ ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಇಂಡಸ್ಟ್ರೀಸ್​ನ ಒಟ್ಟು ಮಾರುಕಟ್ಟೆ ಬಂಡವಾಳ ಅಥವಾ ಷೇರುಸಂಪತ್ತು 21 ಲಕ್ಷ ಕೋಟಿ ರೂ ಗಡಿ ದಾಟಿದೆ. ಈ ಮಟ್ಟದ ಮಾರ್ಕೆಟ್ ಕ್ಯಾಪ್ ಹೊಂದಿರುವ ಏಕೈಕ ಕಂಪನಿ ಆರ್​ಐಎಲ್.

ರಿಲಾಯನ್ಸ್ ಜಿಯೋ ದರ ಹೆಚ್ಚಳದ ಪರಿಣಾಮ…

ರಿಲಾಯನ್ಸ್ ಜಿಯೋ ಇನ್ಫೋಕಾಮ್ ಸಂಸ್ಥೆ ನಿನ್ನೆ ಗುರುವಾರ ಸಂಜೆ ಮೊಬೈಲ್ ದರಗಳನ್ನು ಹೆಚ್ಚಿಸಿದೆ. ಶೇ. 27ರವರೆಗೂ ಬೆಲೆ ಹೆಚ್ಚಳ ಮಾಡಿದೆ. ಜುಲೈ 3ಕ್ಕೆ ಹೊಸ ದರಗಳು ಅನ್ವಯ ಆಗುತ್ತವೆ. ಜಿಯೋ ನಿರ್ಧಾರದ ಬೆನ್ನಲ್ಲೇ ಏರ್ಟೆಲ್ ಕೂಡ ದರ ಪರಿಷ್ಕರಣೆ ಮಾಡಿದೆ. ಟೆಲಿಕಾಂ ಕಂಪನಿಗಳು ಹಲವಾರು ತಿಂಗಳುಗಳಿಂದಲೂ ಡಾಟಾ ದರ ಏರಿಕೆಗೆ ಅಣಿಯಾಗಿದ್ದವು. ಹೀಗಾಗಿ, ಈ ಬೆಳವಣಿಗೆ ಹೆಚ್ಚಿನ ಜನರಿಗೆ ಶಾಕ್ ತಂದಿಲ್ಲ.

ಇನ್ನು, ಮೊಬೈಲ್ ದರಗಳ ಏರಿಕೆಯಿಂದ ಟೆಲಿಕಾಂ ಕಂಪನಿಗಳಿಗೆ ಹೆಚ್ಚು ಲಾಭ ತರುವುದರಿಂದ ಷೇರು ಮಾರುಕಟ್ಟೆಯೂ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆ ಇತ್ತು. ಆದರೆ, ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾದ ಷೇರುಗಳ ಬೆಲೆ ಇಂದು ಕಡಿಮೆಗೊಂಡಿದೆ. ರಿಲಾಯನ್ಸ್ ಜಿಯೋ ಷೇರು ಮಾರುಕಟ್ಟೆಯಲ್ಲಿ ಇಲ್ಲ. ರಿಲಾಯನ್ಸ್ ಇಂಡಸ್ಟ್ರೀಸ್​ನ ಷೇರುಬೆಲೆ ಹೆಚ್ಚಳಕ್ಕೆ ಟೆಲಿಕಾಂ ದರಗಳ ಏರಿಕೆ ಕಾರಣವಾ ಎಂಬುದು ಸ್ಪಷ್ಟವಾಗಿಲ್ಲ.

ಇದನ್ನೂ ಓದಿ: Airtel Recharge Plan: ಜಿಯೋ ಬೆನ್ನಲ್ಲೇ ಏರ್ಟೆಲ್​ನಿಂದಲೂ ಬೆಲೆ ಹೆಚ್ಚಳ; ಗ್ರಾಹಕರ ಕೈಸುಡಲಿದೆ ಮೊಬೈಲ್ ಬಿಲ್

ರೇಟಿಂಗ್ ಸಂಸ್ಥೆಗಳಿಂದ ಉತ್ತಮ ನಿರೀಕ್ಷೆ…

ರಿಲಾಯನ್ಸ್ ಇಂಡಸ್ಟ್ರೀಸ್​ನ ಷೇರುಬೆಲೆ ಮುಂದಿನ ಮೂರು ವರ್ಷದಲ್ಲಿ ಶೇ. 18ರಿಂದ ಶೇ 26ರ ದರದಲ್ಲಿ ಬೆಳೆಯಬಹುದು ಎಂದು ಜೆಫರೀಸ್ ಎಂಬ ಬ್ರೋಕರೇಜ್ ಸಂಸ್ಥೆ ಅಭಿಪ್ರಾಯಪಟ್ಟಿದೆ. ಸದ್ಯೋಭವಿಷ್ಯದಲ್ಲಿ ಆರ್​ಐಎಲ್​ನ ಷೇರುಬೆಲೆ 3,580 ರೂ ತಲುಪಬಹುದು ಎಂದು ನಿರೀಕ್ಷಿಸಿ ಟಾರ್ಗೆಟ್ ಇಟ್ಟಿದೆ. ಕೆಲ ದಿನಗಳ ಹಿಂದೆ ಆ ಷೇರಿಗೆ 3,380 ರೂ ಟಾರ್ಗೆಟ್ ಪ್ರೈಸ್ ನಿಗದಿ ಮಾಡಿತ್ತು. ಈಗ 200 ರನಷ್ಟು ನಿರೀಕ್ಷೆ ಹೆಚ್ಚಿಸಿದೆ.

ಜೆಫರೀಸ್ ಮಾತ್ರವಲ್ಲ ಇತರ ರೇಟಿಂಗ್ ಏಜೆನ್ಸಿಗಳೂ ರಿಲಾಯನ್ಸ್ ಬಗ್ಗೆ ಆಶಾದಾಯಕವಾಗಿವೆ. ಮಾರ್ಗನ್ ಸ್ಟಾನ್ಲೀ ಸಂಸ್ಥೆ ರಿಲಾಯನ್ಸ್ ಷೇರಿಗೆ ‘ಓವರ್​ವೈಟ್’ ರೇಟಿಂಗ್ ಕೊಟ್ಟಿದ್ದು, 3,046 ರೂ ಪ್ರೈಸ್ ಟಾರ್ಗೆಟ್ ಇಟ್ಟಿದೆ.

ಇದನ್ನೂ ಓದಿ: Jio New Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್‌..ರಿಚಾರ್ಜ್ ದರ ಭಾರೀ ಏರಿಕೆ: ಯಾವ ಪ್ಲ್ಯಾನ್​ಗೆ ಎಷ್ಟು? ಇಲ್ಲಿದೆ ವಿವರ

ರಿಲಾಯನ್ಸ್ ಷೇರುಗಳ ಬಗ್ಗೆ ಸ್ಪಂದಿಸಿರುವ 35 ಬ್ರೋಕರೇಜ್ ಸಂಸ್ಥೆಗಳ ಪೈಕಿ, 28 ಸಂಸ್ಥೆಗಳು ಹೂಡಿಕೆದಾರರಿಗೆ ‘ಬಯ್’ ರೆಕಮೆಂಡೇಶನ್ ಕೊಟ್ಟಿವೆ. ಅಂದರೆ, ಷೇರು ಖರೀದಿಸಬಹುದು ಎಂದು ಶಿಫಾರಸು ಮಾಡಿವೆ. ಎರಡು ರೇಟಿಂಗ್ ಸಂಸ್ಥೆಗಳು ಮಾತ್ರವೇ ‘ಸೆಲ್’ ರೆಕಮೆಂಡೇಶನ್ ಮಾಡಿವೆ. ಉಳಿದ ಐದು ಸಂಸ್ಥೆಗಳು ‘ಹೋಲ್ಡ್’ ಶಿಫಾರಸು ಮಾಡಿವೆ. ಹೋಲ್ಡ್ ಎಂದರೆ ಈಗಾಗಲೇ ರಿಲಾಯನ್ಸ್ ಷೇರು ಖರೀದಿಸಿರುವ ಹೂಡಿಕೆದಾರರು ಅದನ್ನು ಹಾಗೇ ಇಟ್ಟುಕೊಳ್ಳಬೇಕು ಎಂಬುದು ಸಲಹೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:00 pm, Fri, 28 June 24

ತಾಜಾ ಸುದ್ದಿ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ದ್ರಾವಿಡ್ ಭಾವನಾತ್ಮಕ ಸಂಭ್ರಮಾಚರಣೆ ಹೇಗಿದೆ ನೋಡಿ
T20 World Cup: ಶಾಂಪೆನ್​ ಬಾಟಲ್​ ಓಪನ್​ ಮಾಡಿ ಸಂಭ್ರಮಿಸಿದ ನಾಯಕ ರೋಹಿತ್
T20 World Cup: ಶಾಂಪೆನ್​ ಬಾಟಲ್​ ಓಪನ್​ ಮಾಡಿ ಸಂಭ್ರಮಿಸಿದ ನಾಯಕ ರೋಹಿತ್
ಗೆಳೆಯರೊಟ್ಟಿಗೆ ಮ್ಯಾಚ್ ವೀಕ್ಷಿಸಿದ ಕಿಚ್ಚ, ಸಂಭ್ರಮಿಸಿದ್ದು ಹೀಗೆ
ಗೆಳೆಯರೊಟ್ಟಿಗೆ ಮ್ಯಾಚ್ ವೀಕ್ಷಿಸಿದ ಕಿಚ್ಚ, ಸಂಭ್ರಮಿಸಿದ್ದು ಹೀಗೆ
T20 World Cup: ವಿಶ್ವಕಪ್​ ಹಿಡಿದು ಸಂಭ್ರಮಿಸಿದ ರಾಹುಲ್​ ದ್ರಾವಿಡ್
T20 World Cup: ವಿಶ್ವಕಪ್​ ಹಿಡಿದು ಸಂಭ್ರಮಿಸಿದ ರಾಹುಲ್​ ದ್ರಾವಿಡ್
ಲೇಟೆಸ್ಟ್ ಫೀಚರ್ಸ್​ ಜತೆಗೆ ಮಾರುಕಟ್ಟೆಗೆ ಬಂತು ನೋಕಿಯಾ ಮೊಬೈಲ್
ಲೇಟೆಸ್ಟ್ ಫೀಚರ್ಸ್​ ಜತೆಗೆ ಮಾರುಕಟ್ಟೆಗೆ ಬಂತು ನೋಕಿಯಾ ಮೊಬೈಲ್
Daily Horoscope: ಈ ರಾಶಿಯ ಪ್ರೇಮಿಗಳು ದೂರವಾಗುವ ಸಾಧ್ಯತೆ ಇದೆ
Daily Horoscope: ಈ ರಾಶಿಯ ಪ್ರೇಮಿಗಳು ದೂರವಾಗುವ ಸಾಧ್ಯತೆ ಇದೆ