ಹಣಕಾಸು ಅಕ್ರಮ ತಡೆಯಲು ಭಾರತ ಕೈಗೊಂಡ ಕ್ರಮಕ್ಕೆ ಎಫ್​ಎಟಿಎಫ್ ಮೆಚ್ಚುಗೆ; ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತ

FATF report on Mutual Evaluation of India: 2023-24ರ ಹಣಕಾಸು ವರ್ಷದ ಸಾಲಿನಲ್ಲಿ ಎಫ್​ಎಟಿಎಫ್ ನಡೆಸಿದ ಮ್ಯುಚುವಲ್ ಇವಾಲ್ಯುಯೇಶನ್​ನ ವರದಿಯಲ್ಲಿ ಮನಿ ಲಾಂಡರಿಂಗ್ ನಿಗ್ರಹಕ್ಕೆ ಭಾರತ ತೆಗೆದುಕೊಂಡ ಕ್ರಮಗಳನ್ನು ಪ್ರಶಂಸಿಸಲಾಗಿದೆ. ಮ್ಯುಚುವಲ್ ಇವಾಲ್ಯುಯೇಶನ್ ರಿಪೋರ್ಟ್ ಅನ್ನು ಸಿಂಗಾಪುರದಲ್ಲಿ ನಡೆದ ಎಫ್​ಎಟಿಎಫ್ ಪ್ಲೀನರಿಯಲ್ಲಿ ಸ್ವೀಕರಿಸಲಾಗಿದೆ. ಭಾರತವನ್ನು ರೆಗ್ಯುಲರ್ ಫಾಲೋ ಅಪ್ ಕೆಟಗರಿಗೆ ಹಾಕಲಾಗಿದೆ. ಜಿ20 ಗುಂಪಿನಲ್ಲಿ ಈ ಗೌರವ ಪಡೆದಿರುವುದು ನಾಲ್ಕು ದೇಶಗಳು ಮಾತ್ರವೇ.

ಹಣಕಾಸು ಅಕ್ರಮ ತಡೆಯಲು ಭಾರತ ಕೈಗೊಂಡ ಕ್ರಮಕ್ಕೆ ಎಫ್​ಎಟಿಎಫ್ ಮೆಚ್ಚುಗೆ; ವಿಶ್ವದ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಭಾರತ
ಎಫ್​ಎಟಿಎಫ್
Follow us
|

Updated on:Jun 28, 2024 | 6:22 PM

ನವದೆಹಲಿ, ಜೂನ್ 28: ಕಳೆದ ಬಾರಿಯ ಹಣಕಾಸು ವರ್ಷದಲ್ಲಿ ಎಫ್​ಎಟಿಎಫ್ (Financial Action Task Force) ನಡೆಸಿದ ಮ್ಯುಚುವಲ್ ಇವಾಲ್ಯುಯೇಶನ್​ನಲ್ಲಿ ಭಾರತ ಗಮನಾರ್ಹ ಸಾಧನೆ ತೋರಿದೆ. ಮನಿ ಲಾಂಡರಿಂಗ್ ಅಥವಾ ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದಕರಿಗೆ ಹಣ ವರ್ಗಾವಣೆಯ ಕಾರ್ಯಗಳನ್ನು ನಿಗ್ರಹಿಸಲು ಭಾರತ ಮಾಡುತ್ತಿರುವ ಪ್ರಯತ್ನಗಳನ್ನು ಎಫ್​ಎಟಿಎಫ್ ಗುರುತಿಸಿದೆ. ಸಿಂಗಾಪುರದಲ್ಲಿ ಇಂದು ಮುಕ್ತಾಯಗೊಂಡ ಎಫ್​ಎಟಿಎಫ್ ಸರ್ವಸದಸ್ಯರ ಸಭೆಯಲ್ಲಿ ಭಾರತದ ಮ್ಯುಚುವಲ್ ಇವ್ಯಾಲ್ಯುಯೇಶನ್ ರಿಪೋರ್ಟ್ ಅನ್ನು ಸ್ವೀಕರಿಸಲಾಗಿದೆ.

ಮ್ಯೂಚುಲ್ ಇವ್ಯಾಲ್ಯುಯೇಶನ್ ರಿಪೋರ್ಟ್​ನಲ್ಲಿ ಭಾರತ ಮಾಡಿರುವ ಕಾರ್ಯಗಳನ್ನು ಗುರುತಿಸಲಾಗಿದೆ. ಭಾರತವನ್ನು ‘ರೆಗ್ಯುಲರ್ ಫಾಲೋ ಅಪ್’ ಕೆಟಗರಿಗೆ ಸೇರಿಸಲಾಗಿದೆ. ಜಿ20 ರಾಷ್ಟ್ರಗಳ ಪೈಕಿ ನಾಲ್ಕು ದೇಶಗಳು ಮಾತ್ರವೇ ಈ ಕೆಟಗರಿಗರಿಗೆ ಸೇರ್ಪಡೆಯಾಗಿರುವುದು ಇಲ್ಲಿ ಗಮನಾರ್ಹ.

ಭ್ರಷ್ಟಾಚಾರ, ವಂಚನೆ ಮತ್ತು ವ್ಯವಸ್ಥಿತ ಅಪರಾಧಗಳಿಂದ ಬಂದ ಹಣದ ಅಕ್ರಮ ವರ್ಗಾವಣೆಯೂ ಸೇರಿದಂತೆ ಮನಿ ಲಾಂಡರಿಂಗ್ ಮತ್ತು ಟೆರರ್ ಫೈನಾನ್ಸಿಂಗ್​ನ ಅಪಾಯಗಳನ್ನು ಕಡಿಮೆ ಮಾಡಲು ಭಾರತ ಪ್ರಯತ್ನಿಸಿದೆ.

ನಗದು ಆಧಾರಿತ ಆರ್ಥಿಕತೆಯಿಂದ ಡಿಜಿಟಲ್ ಆರ್ಥಿಕತೆಗೆ ಪರಿವರ್ತನೆ ಆಗಿರುವುದು ಮನಿ ಲಾಂಡರಿಂಗ್ ಅಪಾಯವನ್ನು ಕಡಿಮೆ ಮಾಡಿದೆ. ಜನ್ ಧನ್, ಆಧಾರ್ ಮತ್ತು ಮೊಬೈಲ್ ಈ ಮೂರು ಅಂಶಗಳನ್ನೊಳಗೊಂಡಿರುವ ವ್ಯವಸ್ಥೆಯಿಂದಾಗಿ ಇವತ್ತು ಹಣಕಾಸು ವಹಿವಾಟು ಕಣ್ತಪ್ಪಿಹೋಗದಂತಾಗಿದೆ. ಈ ಮೂಲಕ ಅಕ್ರಮ ಹಣ ವರ್ಗಾವಣೆ ಸಾಧ್ಯತೆಯನ್ನು ಭಾರತ ಕಡಿಮೆ ಮಾಡಿದೆ ಎಂದು ಎಫ್​ಎಟಿಎಫ್​ನ ಮ್ಯೂಚುಲ್ ಇವಾಲ್ಯುಯೇಶನ್ ವರದಿಯಲ್ಲಿ ಪ್ರಶಂಸಿಸಲಾಗಿದೆ.

ಇದನ್ನೂ ಓದಿ: ಜಿಯೋ ದರ ಹೆಚ್ಚಳ ಬೆನ್ನಲ್ಲೇ ಷೇರುಪೇಟೆಯಲ್ಲಿ ಆರ್​ಐಎಲ್ ಮಿಂಚು; ಮಾರುಕಟ್ಟೆ ಬಂಡವಾಳ ದಾಖಲೆಯ 21 ಲಕ್ಷ ಕೋಟಿ ರೂಗೆ ಏರಿಕೆ

ಈ ವರದಿಯಿಂದ ಭಾರತಕ್ಕೆ ಏನು ಉಪಯೋಗ?

ಎಫ್​ಎಟಿಎಫ್ ಮ್ಯುಚುವಲ್ ಇವಾಲ್ಯುಯೇಶನ್​ನಲ್ಲಿ ಭಾರತದ ಸಾಧನೆಯನ್ನು ಗುರುತಿಸಲಾಗಿರುವುದು ಬಹಳ ಮುಖ್ಯ ಎನಿಸುತ್ತದೆ. ಇದು ಭಾರತದ ಹಣಕಾಸು ವ್ಯವಸ್ಥೆಯ ಒಟ್ಟಾರೆ ಸ್ಥಿರತೆ ಮತ್ತು ಸಮಗ್ರತೆಯನ್ನು ಖಚಿತಪಡಿಸುತ್ತದೆ. ಇಂಥ ಒಳ್ಳೆಯ ರೇಟಿಂಗ್​ಗಳು ಭಾರತದ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೂಡಿಕೆದಾರರ ವಿಶ್ವಾಸ ಹೆಚ್ಚಿಸುತ್ತದೆ. ಜಾಗತಿಕ ಹಣಕಾಸು ಮಾರುಕಟ್ಟೆಯ ಅವಕಾಶ ಭಾರತಕ್ಕೆ ಹೆಚ್ಚು ಸುಲಭವಾಗಿ ಪ್ರಾಪ್ತಿಯಾಗುತ್ತದೆ. ಭಾರತದ ಯುಪಿಐ ಪೇಮೆಂಟ್ ವ್ಯವಸ್ಥೆ ಜಾಗತಿಕವಾಗಿ ವ್ಯಾಪಿಸುವ ಕೆಲಸ ಸುಲಭವಾಗುತ್ತದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Fri, 28 June 24

ತಾಜಾ ಸುದ್ದಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?
ಭಾರತ ಫೈನಲ್​ ಮ್ಯಾಚ್​ ಗೆಲುವಿಗೆ ಈ ಐದು ಕಾರಣಗಳು, ಯಾವುವು ಗೊತ್ತಾ?