Airtel Recharge Plan: ಜಿಯೋ ಬೆನ್ನಲ್ಲೇ ಏರ್ಟೆಲ್​ನಿಂದಲೂ ಬೆಲೆ ಹೆಚ್ಚಳ; ಗ್ರಾಹಕರ ಕೈಸುಡಲಿದೆ ಮೊಬೈಲ್ ಬಿಲ್

Airtel hikes mobile tariffs: ರಿಲಾಯನ್ಸ್ ಜಿಯೋ ಮೊಬೈಲ್ ಧ್ವನಿಕರೆ ಮತ್ತು ಡಾಟಾ ದರಗಳನ್ನು ಹೆಚ್ಚಿಸಿದ ಬೆನ್ನಲ್ಲೇ ಏರ್ಟೆಲ್ ಕೂಡ ಬೆಲೆ ಏರಿಕೆ ಮಾಡಿದೆ. ಏರ್ಟೆಲ್ ಸಂಸ್ಥೆ ವಿವಿಧ ಪ್ಲಾನ್​ಗಳಿಗೆ ಶೇ. 11ರಿಂದ ಶೇ. 21ರವರೆಗೂ ದರ ಹೆಚ್ಚಳ ಮಾಡಿದೆ. ರಿಲಾಯನ್ಸ್ ಜಿಯೋ ಶೇ. 12ರಿಂದ ಶೇ. 27ರವರೆಗೂ ಏರಿಕೆ ಮಾಡಿ ದರ ಪರಿಷ್ಕರಣೆ ಮಾಡಿದೆ. ಜಿಯೋ ಮತ್ತು ಏರ್ಟೆಲ್ ಹೊಸ ದರಗಳು ಜುಲೈ 3ರಂದು ಜಾರಿಗೆ ಬರಲಿದೆ.

Airtel Recharge Plan: ಜಿಯೋ ಬೆನ್ನಲ್ಲೇ ಏರ್ಟೆಲ್​ನಿಂದಲೂ ಬೆಲೆ ಹೆಚ್ಚಳ; ಗ್ರಾಹಕರ ಕೈಸುಡಲಿದೆ ಮೊಬೈಲ್ ಬಿಲ್
ಏರ್ಟೆಲ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 28, 2024 | 10:37 AM

ನವದೆಹಲಿ, ಜೂನ್ 28: ಹತ್ತು ವರ್ಷಗಳ ಹಿಂದೆ ರಿಲಾಯನ್ಸ್ ಜಿಯೋ ಅಗ್ಗದ ದರಕ್ಕೆ ಮೊಬೈಲ್ ಮತ್ತು ಡಾಟಾ ನೀಡಿ ಬೆಲೆ ಸಮರಕ್ಕೆ ಅಡಿ ಇಟ್ಟಿತ್ತು. ಇದೀಗ ಬೆಲೆ ಏರಿಕೆಯಲ್ಲೂ ಮುಂದಾಳತ್ವ ವಹಿಸಿದೆ. ಮುಕೇಶ್ ಅಂಬಾನಿ ಮಾಲಕತ್ವದ ರಿಲಾಯನ್ಸ್ ಜಿಯೋ ನಿನ್ನೆ ವಿವಿಧ ಪ್ಲಾನ್​ಗಳಿಗೆ ಶೇ. 27ರವರೆಗೂ ಬೆಲೆ ಏರಿಕೆ ಮಾಡಿದೆ. ಇದರ ಬೆನ್ನಲ್ಲೇ ಏರ್ಟೆಲ್ ಕೂಡ ಶೇ. 21ರವರೆಗೂ ಬೆಲೆ ಏರಿಸಲು ನಿರ್ಧರಿಸಿದೆ. ಎರಡೂ ಟೆಲಿಕಾಂ ಆಪರೇಟರ್​ಗಳ ಹೊಸ ದರಗಳು ಜುಲೈ 3ರಿಂದ ಜಾರಿಗೆ ಬರಲಿವೆ.

ರಿಲಾಯನ್ಸ್ ಜಿಯೋದ ದರ ಏರಿಕೆ ಶೇ. 12ರಿಂದ ಆರಂಭವಾಗಿ ಶೇ. 27ರವರೆಗೂ ಇದೆ. ಏರ್ಟೆಲ್​ನ ಏರಿಕೆಯು ಶೇ. 11ರಿಂದ ಆರಂಭವಾಗಿ ಶೇ. 21ರವರೆಗೂ ಇದೆ.

ಏರ್ಟೆಲ್​ನ ಪರಿಷ್ಕೃತ ಪ್ರೀಪೇಯ್ಡ್ ಪ್ಲಾನ್​ಗಳು (ಜುಲೈ 3ರಿಂದ ಜಾರಿ)

ಅನ್​ಲಿಮಿಟೆಡ್ ವಾಯ್ಸ್ ಪ್ಲಾನ್:

  • 179ರಿಂದ 199 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 455ರಿಂದ 509 ರೂಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)
  • 1,799 ರೂನಿಂದ 1,999 ರೂಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಇದನ್ನೂ ಓದಿ: Jio New Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್‌..ರಿಚಾರ್ಜ್ ದರ ಭಾರೀ ಏರಿಕೆ: ಯಾವ ಪ್ಲ್ಯಾನ್​ಗೆ ಎಷ್ಟು? ಇಲ್ಲಿದೆ ವಿವರ

ಏರ್ಟೆಲ್ ಪ್ರೀಪೇಡ್ ನಿತ್ಯದ ಡಾಟಾ ಪ್ಲಾನ್​ಗಳು

  • 265 ರೂನಿಂದ 299 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 299 ರೂನಿಂದ 349 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 359ರೂನಿಂದ 409 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 399ರೂನಿಂದ 449 ರೂಗೆ ಹೆಚ್ಚಳ (28 ದಿನ ವ್ಯಾಲಿಡಿಟಿ)
  • 479ರೂನಿಂದ 579 ರೂಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)
  • 549 ರೂನಿಂದ 649 ರೂಗೆ ಹೆಚ್ಚಳ (56 ದಿನ ವ್ಯಾಲಿಡಿಟಿ)
  • 719 ರೂನಿಂದ 859 ರೂಗೆ ಹೆಚ್ಚಳ (84 ದಿನ ವ್ಯಾಲಿಡಿಟಿ)
  • 839ರೂನಿಂದ 979 ರೂಗೆ ಬೆಲೆ ಹೆಚ್ಚಳ (84 ದಿನ ವ್ಯಾಲಿಡಿಟಿ)
  • 2,999ರೂನಿಂದ 3,599 ರೂಗೆ ಹೆಚ್ಚಳ (365 ದಿನ ವ್ಯಾಲಿಡಿಟಿ)

ಏರ್ಟೆಲ್ ಪರಿಷ್ಕೃತ ಡಾಟಾ ಆಡಾನ್​ಗಳ ದರ

  • ಒಂದು ಜಿಬಿ ಹೆಚ್ಚುವರಿ ಡಾಟಾಗೆ 19ರೂನಿಂದ 22ರೂಗೆ ಹೆಚ್ಚಳ (1 ದಿನ ವ್ಯಾಲಿಡಿಟಿ)
  • ಎರಡು ಜಿಬಿ ಹೆಚ್ಚುವರಿ ಡಾಟಾ ದರ 29 ರೂನಿಂದ 33 ರೂಗೆ ಹೆಚ್ಚಳ (1 ದಿನ ವ್ಯಾಲಿಡಿಟಿ)
  • ನಾಲ್ಕು ಜಿಬಿ ಹೆಚ್ಚುವರಿ ಡಾಟಾಗೆ 65ರೂನಿಂದ 77 ರೂಗೆ ಬೆಲೆ ಹೆಚ್ಚಳ (ಪ್ಲಾನ್ ಕಾಲಮಿತಿಯವರೆಗೂ ವ್ಯಾಲಿಡಿಟಿ)

ಇದನ್ನೂ ಓದಿ: 5ಜಿ ಸ್ಪೆಕ್ಟ್ರಂ ಹರಾಜು; ಮಾರಾಟವಾದ್ದರಲ್ಲಿ ಏರ್ಟೆಲ್ ಸಿಂಹಪಾಲು; ವೊಡಾಫೋನ್​ಗಿಂತಲೂ ಜಿಯೋ ಖರೀದಿಸಿದ್ದು ಕಡಿಮೆ

ಏರ್ಟೆಲ್ ಪೋಸ್ಟ್​ಪೇಡ್ ಪರಿಷ್ಕೃತ ದರ

  • 399 ರೂ ಪ್ಲಾನ್ ಬೆಲೆ 449 ರೂಗೆ ಏರಿಕೆ
  • 499 ರೂ ಪ್ಲಾನ್ ಬೆಲೆ 549 ರೂಗೆ ಏರಿಕೆ
  • 599 ರೂ ಪ್ಲಾನ್ ಬೆಲೆ 699 ರೂಗೆ ಏರಿಕೆ
  • 999 ರೂ ಪ್ಲಾನ್ ಬೆಲೆ 1,199 ರೂಗೆ ಏರಿಕೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ