Jio New Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್‌..ರಿಚಾರ್ಜ್ ದರ ಭಾರೀ ಏರಿಕೆ: ಯಾವ ಪ್ಲ್ಯಾನ್​ಗೆ ಎಷ್ಟು? ಇಲ್ಲಿದೆ ವಿವರ

Reliance Jio hiked Recharge: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಾದ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ಬಿಗ್​ ಶಾಕ್​ವೊಂದನ್ನು ನೀಡಿದೆ. ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಮೇಲೆ 20% ದರ ಹೆಚ್ಚಿಸಿದೆ. ಎರಡೂವರೆ ವರ್ಷಗಳ ಬಳಿಕ ಜಿಯೋ ಪ್ರಿಪೇಯ್ಡ್ ಬೆಲೆಗಳಲ್ಲಿ ಮೊದಲ ಬಾರಿಗೆ ಏರಿಕೆ ಕಂಡಿದೆ. ಹಾಗಾದ್ರೆ, Jio ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ದರ ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ? ಎನ್ನುವ ವಿವರ ಇಲ್ಲಿದೆ.

Jio New Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್‌..ರಿಚಾರ್ಜ್ ದರ ಭಾರೀ ಏರಿಕೆ: ಯಾವ ಪ್ಲ್ಯಾನ್​ಗೆ ಎಷ್ಟು? ಇಲ್ಲಿದೆ ವಿವರ
ಜಿಯೋ
Follow us
| Updated By: Digi Tech Desk

Updated on:Jun 28, 2024 | 9:36 AM

ನವದೆಹಲಿ, (ಜೂನ್ 27): ಭಾರತದ ಪ್ರಮುಖ ಟೆಲಿಕಾಂ ಕಂಪನಿ ರಿಲಯನ್ಸ್‌ ಜಿಯೋ ತನ್ನ ಎಲ್ಲಾ ರಿಚಾರ್ಜ್‌ ಪ್ಲ್ಯಾನ್‌ಗಳ ಹೆಚ್ಚಳವನ್ನು ಘೋಷಣೆ ಮಾಡಿದೆ.  ಹೊಸ ಪ್ಲ್ಯಾನ್‌ಗಳು ಜುಲೈ 3 ರಿಂದ ಜಾರಿಗೆ ಬರಲಿದೆ ಎಂದು ಕಂಪನಿ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಈ ಹಿಂದೆ 155 ರೂಪಾಯಿ ರಿಚಾರ್ಜ್‌ ಪ್ಲ್ಯಾನ್‌ ಜುಲೈ 3 ರಿಂದ 189 ರೂಪಾಯಿಗೆ ಏರಲಿದೆ. ಇದರಲ್ಲಿ ಶೇ. 22ರಷ್ಟು ಏರಿಕೆಯಾಗಿದೆ. ದೇಶದಲ್ಲಿ ಗರಿಷ್ಠ ಪ್ರಮಾಣದ ಮೊಬೈಲ್‌ ಗ್ರಾಹಕರನ್ನು ಹೊಂದಿರುವ ಜಿಯೋ ತಮ್ಮ 19 ಪ್ಲ್ಯಾನ್‌ಗಳಿಗೆ ಬೆಲೆ ಏರಿಕೆ ಮಾಡಿದೆ. ಇದರಲ್ಲಿ 17 ಪ್ರೀಪೇಡ್‌ ಪ್ಲ್ಯಾನ್‌ಗಳಾಗಿದ್ದು, ಎರಡು ಪೋಸ್ಟ್‌ಪೇಡ್‌ ಪ್ಲ್ಯಾನ್‌ಗಳಾಗಿವೆ. ಯಾವೆಲ್ಲಾ ಪ್ಲ್ಯಾನ್‌ಗಳ ಬೆಲೆ ಏರಿಕೆ ಮಾಡಲಾಗಿದೆ ಎನ್ನುವ ವಿವರ ಈ ಕೆಳಗಿನಂತಿದೆ.

ಇದನ್ನೂ ಒದಿ: Mobile Number: ನಿಮ್ಮ ನಂಬರ್​ಗೆ ರಿಚಾರ್ಜ್ ಮಾಡದಿದ್ರೆ ಎಷ್ಟು ದಿನಗಳಲ್ಲಿ ಆ ನಂಬರ್ ಬೇರೆಯವರಿಗೆ ನೀಡಲಾಗುತ್ತದೆ?

ಹಿಂದೆ ಎಷ್ಟಿತ್ತು? ಈಗ ಎಷ್ಟಾಗುತ್ತೆ?

155 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ 189 ರೂಪಾಯಿಗೆ ಬದಲಾಗಿದ್ದರೂ ವ್ಯಾಲಿಡಿಟಿ ಮಾತ್ರ 28 ದಿನಗಳಿಗೆ ಇರಲಿದೆ. ಇನ್ನು 209 ರೂಪಾಯಿಯ ರಿಚಾರ್ಜ್‌ ಪ್ಲ್ಯಾನ್‌ 249 ರೂಪಾಯಿ ಆಗಲಿದೆ. ಇದರಲ್ಲಿ 40 ರೂಪಾಯಿ ಏರಿಕೆಯಾಗಿದೆ. ಇದರ ವ್ಯಾಲಿಡಿಟಿ ಕೂಡ 28 ದಿನ ಇರಲಿದೆ. ಇನ್ನು ಡೇಟಾ ಬೆನಿಫಿಟ್‌ಗಳಲ್ಲಿ ಈ ಪ್ಲ್ಯಾನ್‌ನಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅನಿಯಮಿತ 5G ಡೇಟಾವನ್ನು ನೀಡುತ್ತಿದ್ದ ರೂ 239 ಯೋಜನೆಯು ಇನ್ನು ಮುಂದೆ ಹಾಗರ ಇರೋದಿಲ್ಲ. 239 ಪ್ಲಾನ್ ಈಗ ರೂ 299 ವೆಚ್ಚವಾಗಲಿದೆ ಮತ್ತು 28 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈಗ ಅನಿಯಮಿತ 5G ಡೇಟಾವು ದಿನಕ್ಕೆ 2GB ಮತ್ತು ಅದಕ್ಕಿಂತ ಹೆಚ್ಚಿನ ಯೋಜನೆಗಳಲ್ಲಿ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಗಮನಿಸಬೇಕಿದೆ. ಹೊಸ ಯೋಜನೆಗಳು ಜುಲೈ 3, 2024 ರಿಂದ ಜಾರಿಗೆ ಬರಲಿವೆ. ರಿಲಯನ್ಸ್ ಜಿಯೋ ಕೂಡ ಹೊಸ ಸೇವೆಗಳನ್ನು ಪ್ರಾರಂಭಿಸಿದೆ.

Reliance Jio announces tariff hike from July 3, announces new Unlimited 5G data plans. Details here

Jio JioSafe ಮತ್ತು Jio Translate ಆರಂಭ

ಪ್ಲ್ಯಾನ್‌ಗೆ ಬೆಲೆ ಏರಿಕೆಯೊಂದಿಗೆ ಜಿಯೋ JioSafe ಮತ್ತು JioTranslate ಅನ್ನು ಘೋಷಿಸಿದೆ. JioSafe ಕರೆ, ಸಂದೇಶ ಕಳುಹಿಸುವಿಕೆ, ಫೈಲ್ ವರ್ಗಾವಣೆ ಮತ್ತು ಹೆಚ್ಚಿನವುಗಳಿಗಾಗಿ ಕ್ವಾಂಟಮ್-ಸುರಕ್ಷಿತ ಸಂವಹನ ಅಪ್ಲಿಕೇಶನ್ ಆಗಿದೆ ಮತ್ತು ತಿಂಗಳಿಗೆ 199 ರೂ.ಗೆ ಲಭ್ಯವಿರುತ್ತದೆ. JioTranslate ಎಂಬುದು ಧ್ವನಿ ಕರೆ, ಧ್ವನಿ ಸಂದೇಶ, ಪಠ್ಯ ಮತ್ತು ಚಿತ್ರವನ್ನು ತಿಂಗಳಿಗೆ 99 ರೂಪಾಯಿಗಳಿಗೆ ಭಾಷಾಂತರಿಸಲು ಬಹು-ಭಾಷಾ ಸಂವಹನ ಅಪ್ಲಿಕೇಶನ್ ಆಗಿದೆ. ಜಿಯೋ ತನ್ನ ಬಳಕೆದಾರರು ತಿಂಗಳಿಗೆ 298 ರೂಪಾಯಿ ಮೌಲ್ಯದ ಈ ಎರಡೂ ಅಪ್ಲಿಕೇಶನ್‌ಗಳನ್ನು ಒಂದು ವರ್ಷದವರೆಗೆ ಸಂಪೂರ್ಣವಾಗಿ ಉಚಿತವಾಗಿ ಪಡೆಯುತ್ತಾರೆ ಎಂದು ತಿಳಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:28 pm, Thu, 27 June 24

ತಾಜಾ ಸುದ್ದಿ