ಅಪ್ಪನ ಆಸ್ತಿ ಮಲತಾಯಿ ಮಗಳ ಪಾಲು; ಕೋರ್ಟ್ ಮೆಟ್ಟಿಲೇರಿದ ಮಗನಿಗೆ ಸೋಲು
ಕೌಟುಂಬಿಕ ಆಸ್ತಿ ವ್ಯಾಜ್ಯವೊಂದರಲ್ಲಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಒಬ್ಬ ವ್ಯಕ್ತಿಯ ಆತನ ನಿಧನದ ನಂತರ ಎರಡನೇ ಪತ್ನಿಗೆ ವರ್ಗಾವಣೆ ಆಗಿ ಆ ಬಳಿಕ ಆ ಮಹಿಳೆಯ ಮಗಳ ಪಾಲಾಗಿದೆ. ಇನ್ನೊಂದೆಡೆ, ವ್ಯಕ್ತಿಯ ಮೊದಲ ಪತ್ನಿಯ ಮಗ ಈಗ ಆಸ್ತಿಯ ವಾರಸುದಾರ ತಾನು ಎಂದು ಹೇಳಿ ಕೋರ್ಟ್ ಮೆಟ್ಟಿಲೇರಿದ್ದರು. ತೀರ್ಪು ಆತನ ಮಲತಂಗಿಯ ಪರವಾಗಿ ಬಂದಿದೆ.

ನವದೆಹಲಿ, ಅಕ್ಟೋಬರ್ 6: ತನ್ನ ತಂದೆಯ ಹೆಸರಿನಲ್ಲಿದ್ದ ಆಸ್ತಿಯು ತನ್ನ ಮಲತಾಯಿಯ (Step-mother) ಮಗಳ ಹೆಸರಿಗೆ ವರ್ಗಾವಣೆ ಆಗಿರುವುದನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲು ಏರಿದ್ದ ಯುವಕನಿಗೆ ಸೋಲುಂಟಾಗಿದೆ. ಹಿಂದೂ ಉತ್ತರಾಧಿಕಾರ ಕಾಯ್ದೆ ಮತ್ತು ಮಹಿಳೆಯರ ಆಸ್ತಿ ಹಕ್ಕಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪ್ರಮುಖ ತೀರ್ಪೊಂದನ್ನು ನೀಡಿದೆ. ತಂದೆಯ ಮರಣಾನಂತರ ಅವರ ಸ್ವಯಾರ್ಜಿತ/ಸ್ವಂತ ಆಸ್ತಿಯನ್ನು ಮಲತಾಯಿ (Step-mother) ತನ್ನ ಸ್ವಂತ ಮಗಳಿಗೆ ದಾನಪತ್ರ ವಿಲ್ ಮೂಲಕ ವರ್ಗಾಯಿಸಿ, ಆಕೆ ಅದನ್ನು ಮೂರನೇ ವ್ಯಕ್ತಿಗೆ ಮಾರಾಟ ಮಾಡಿದ ಪ್ರಕರಣ ಇದಾಗಿದೆ. ಆಸ್ತಿಯಲ್ಲಿ ಪೂರ್ಣ ಪಾಲು ಕೋರಿ ಮೂಲ ಆಸ್ತಿದಾರನ ಮಗ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಇದು ಕರ್ನಾಟಕದ ತೇರದಾಳ ಗಂಗಾರಾಮ್ ಎನ್ನುವವರ ಪುತ್ರ ಗಣಪತಿ ಅವರು ಸೋಲನುಭವಿಸಿದ ಪ್ರಕರಣ. ಈ ಪ್ರಕರಣದ ಹಿನ್ನೆಲೆ ಹೀಗಿದೆ:
ಫಿರ್ಯಾದುದಾರನ ಹೆಸರು ತೇರದಾಳ ಗ್ರಾಮದ ಗಣಪತಿ. ಇವರ ತಂದೆ ಗಂಗಾರಾಮ್ 1949ರಲ್ಲಿ ನಿಧನರಾಗಿರುತ್ತಾರೆ. ಇದಾದ ಬಳಿಕ ಅವರ ಎರಡನೇ ಪತ್ನಿ ಅಥವಾ ಗಣಪತಿಯವರ ಮಲತಾಯಿ ಕಾಶಿಬಾಯಿ ಅವರು ತಮ್ಮ ಪತಿ ಗಂಗಾರಾಮ್ ಅವರ ಆಸ್ತಿಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡಿರುತ್ತಾರೆ. ಕಾಶಿಬಾಯಿ 1986ರಲ್ಲಿ ಸಾಯುವ ಮುನ್ನ ತಮ್ಮ ಹೆಸರಲ್ಲಿದ್ದ ಆಸ್ತಿಯನ್ನು ತಮ್ಮ ಸ್ವಂತ ಮಗಳಾದ ಶಕುಂತಳಾಗೆ ನೀಡಿ ವಿಲ್ ಬರೆದಿಟ್ಟಿರುತ್ತಾರೆ.
ಇದನ್ನೂ ಓದಿ: ಶೇ. 8ರ ಆರ್ಥಿಕ ಬೆಳವಣಿಗೆ ದರದ ಹೊಸ್ತಿಲಲ್ಲಿ ಭಾರತ: ಪಿಎಂ ಮುಖ್ಯ ಕಾರ್ಯದರ್ಶಿ ಶಕ್ತಿಕಾಂತ ದಾಸ್
ಗಣಪತಿಯವರ ಮಲತಂಗಿಯಾಗಿರುವ ಶಕುಂತಲಾ ಅವರು ತಮ್ಮ ಹೆಸರಿಗೆ ಆಸ್ತಿ ಮ್ಯೂಟೇಶನ್ ಮಾಡಿಸಿಕೊಳ್ಳುತ್ತಾರೆ. ಆಗ ಮಾತ್ರ ಗಣಪತಿ ಅವರಿಗೆ ಆಸ್ತಿಗಳ ಮಾಲಕತ್ವವ ಬದಲಾಗಿರುವುದು ಗೊತ್ತಾಗುತ್ತದೆ. ಕೋರ್ಟ್ನಲ್ಲಿ ಕೇಸ್ ಹಾಕುತ್ತಾರೆ. ತನ್ನ ಅಪ್ಪನ ಎರಡು ಆಸ್ತಿಗಳಿಗೆ ತಾನೇ ನಿಜವಾದ ವಾರಸುದಾರ ಎಂದು ಕೋರ್ಟ್ಗೆ ತಿಳಿಸುತ್ತಾರೆ. ಆದರೂ ಕೂಡ ಗಣಪತಿ ಪರವಾಗಿ ಕೋರ್ಟ್ ತೀರ್ಪು ಬರುವುದಿಲ್ಲ.
ತಂದೆಯ ಆಸ್ತಿ ಮಗನ ಬದಲು ಮಲತಾಯಿಗೆ ಹೋಗಲು ಹೇಗೆ ಸಾಧ್ಯ?
1956ರ ಹಿಂದೂ ಉತ್ತರಾಧಿಕಾರ ಕಾಯ್ದೆ ಪ್ರಕಾರ, ತಂದೆಯ ಆಸ್ತಿಗೆ ಮಗ ಹಕ್ಕುದಾರನಾಗಿರುತ್ತಾನೆ. ಆದರೆ, ಗಂಗಾರಾಮ್ ಸಾವನ್ನಪ್ಪಿದ್ದು 1949ರಲ್ಲಿ. ಹೀಗಾಗಿ, ಕಾಶಿಬಾಯಿ ಅವರು 1937ರ ಹಿಂದೂ ಮಹಿಳಾ ಆಸ್ತಿ ಹಕ್ಕು ಕಾಯ್ದೆ ಪ್ರಕಾರ ಗಂಡನ ಆಸ್ತಿ ವರ್ಗಾವಣೆ ಮಾಡಿಸಿಕೊಂಡಿರುತ್ತಾರೆ. ಹೀಗಾಗಿ, ಕಾಶಿಬಾಯಿ ತನ್ನ ಆಸ್ತಿಯನ್ನು ಮಗಳಿಗೆ ವಿಲ್ ಮಾಡಿ ಕೊಡುವ ಕಾನೂನು ಹಕ್ಕು ಹೊಂದಿರುತ್ತಾರೆ. ಅಲ್ಲದೆ, ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 14(1) ಪ್ರಕಾರ, ಕಾಯ್ದೆಗೆ ಮುಂಚೆ ಆಸ್ತಿಯನ್ನು ಹೊಂದಿರುವ ಮಹಿಳೆಯು ಆ ಆಸ್ತಿಗೆ ಪೂರ್ಣ ಹಕ್ಕುದಾರಳಾಗಿರುತ್ತಾಳೆ.
ಇದನ್ನೂ ಓದಿ: ಯುಪಿಐ ಪಾವತಿಗಳಿಗೆ ಎಂಡಿಆರ್; ಶೇಕಡವಾರು ಶುಲ್ಕ, ಫ್ಲ್ಯಾಟ್ ಶುಲ್ಕ; ಸಣ್ಣ ವರ್ತಕರೆಂದರೆ ಯಾರು? ಹಲವು ಅನುಮಾನಗಳಿಗೆ ಉತ್ತರ
ಈ ಅಂಶಗಳು ಗಣಪತಿ ಅವರ ಅರ್ಜಿ ತಿರಸ್ಕೃತಗೊಳ್ಳಲು ಕಾರಣವಾಗಿವೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




