Fixed Deposits: ಎಸ್​ಬಿಐ Vs ಐಸಿಐಸಿಐ ಬ್ಯಾಂಕ್ Vs ಎಚ್​ಡಿಎಫ್​ಸಿ ಬ್ಯಾಂಕ್ Vs ಆಕ್ಸಿಸ್​ ಬ್ಯಾಂಕ್​ ಎಫ್​ಡಿ ಬಡ್ಡಿದರಗಳ ವಿವರ

| Updated By: Srinivas Mata

Updated on: Jul 10, 2021 | 1:19 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್​ಬಿಐ), ಐಸಿಐಸಿಐ ಬ್ಯಾಂಕ್, ಎಚ್​ಡಿಎಫ್​ಸಿ ಬ್ಯಾಂಕ್ ಮತ್ತು ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಎಫ್​ಡಿಯನ್ನು ನೀಡುತ್ತವೆ. ವಿವಿಧ ಬ್ಯಾಂಕ್​ಗಳ ಎಫ್​ಡಿ ಬಡ್ಡಿ ದರಗಳು ಠೇವಣಿ ಮೊತ್ತ, ಠೇವಣಿ ಅವಧಿ ಮತ್ತು ಠೇವಣಿದಾರರ ವಯಸ್ಸು ಇತ್ಯಾದಿಗಳಿಂದ ಬದಲಾಗುತ್ತವೆ.

Fixed Deposits: ಎಸ್​ಬಿಐ Vs ಐಸಿಐಸಿಐ ಬ್ಯಾಂಕ್ Vs ಎಚ್​ಡಿಎಫ್​ಸಿ ಬ್ಯಾಂಕ್ Vs ಆಕ್ಸಿಸ್​ ಬ್ಯಾಂಕ್​ ಎಫ್​ಡಿ ಬಡ್ಡಿದರಗಳ ವಿವರ
ಸಾಂದರ್ಭಿಕ ಚಿತ್ರ
Follow us on

ನಿಶ್ಚಿತ ಠೇವಣಿ (Fixed Deposits) ಎಂಬುದು ಬ್ಯಾಂಕ್​ಗಳು ನೀಡುವ ಹೂಡಿಕೆಯ ಪ್ರಾಡಕ್ಟ್. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank Of India), ಐಸಿಐಸಿಐ ಬ್ಯಾಂಕ್ (ICICI Bank), ಎಚ್​ಡಿಎಫ್​ಸಿ ಬ್ಯಾಂಕ್ (HDFC Bank) ಮತ್ತು ಆಕ್ಸಿಸ್ ಬ್ಯಾಂಕ್ (Axis Bank) 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಎಫ್​ಡಿಯನ್ನು ನೀಡುತ್ತವೆ. ವಿವಿಧ ಬ್ಯಾಂಕ್​ಗಳ ಎಫ್​ಡಿ ಬಡ್ಡಿ ದರಗಳು ಠೇವಣಿ ಮೊತ್ತ, ಠೇವಣಿ ಅವಧಿ ಮತ್ತು ಠೇವಣಿದಾರರ ವಯಸ್ಸು ಇತ್ಯಾದಿಗಳಿಂದ ಬದಲಾಗುತ್ತವೆ. ಆದ್ದರಿಂದ, ನಿಮ್ಮ ಹಣವನ್ನು ಟರ್ಮ್ ಡೆಪಾಸಿಟ್​ನಲ್ಲಿ ಇಡುವ ಮೊದಲು ವಿವಿಧ ಬ್ಯಾಂಕುಗಳು ನೀಡುವ ಬಡ್ಡಿ ದರಗಳನ್ನು ಹೋಲಿಸುವುದು ಯಾವಾಗಲೂ ಉತ್ತಮ.

ಎಸ್​ಬಿಐ ಇತ್ತೀಚಿನ ಎಫ್ ಡಿ ದರಗಳು
7 ದಿನಗಳಿಂದ 10 ವರ್ಷಗಳ ಮಧ್ಯದ ಎಸ್​ಬಿಐ ಎಫ್​ಡಿಗಳು ಸಾಮಾನ್ಯ ಗ್ರಾಹಕರಿಗೆ ಶೇ. 2.9ರಿಂದ ಶೇ. 5.4ರಷ್ಟು ನೀಡಲಿದೆ. ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ 50 ಬೇಸಿಸ್ ಪಾಯಿಂಟ್​ಗಳನ್ನು (ಬಿಪಿಎಸ್) ಹೆಚ್ಚುವರಿಯಾಗಿ ಪಡೆಯುತ್ತಾರೆ. ಈ ದರಗಳು 8 ಜನವರಿ 2021ರಿಂದ ಜಾರಿಗೆ ಬಂದಿದೆ.

7ರಿಂದ 45 ದಿನಗಳು – ಶೇ 2.9
46ರಿಂದ 179 ದಿನಗಳು- ಶೇ 3.9
180 ದಿನಗಳಿಂದ 210 ದಿನಗಳು- ಶೇ 4.4
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – ಶೇ 4.4
1 ವರ್ಷದಿಂದ 2 ವರ್ಷಕ್ಕಿಂತ ಕಡಿಮೆ – ಶೇ 5

ಎಚ್​ಡಿಎಫ್​ಸಿ ಬ್ಯಾಂಕ್ ಇತ್ತೀಚಿನ ಎಫ್​ಡಿ ದರಗಳು
ಎಚ್​ಡಿಎಫ್​ಸಿ ಬ್ಯಾಂಕ್ 7 ದಿನಗಳಿಂದ 10 ವರ್ಷಗಳ ನಡುವೆ ಮೆಚ್ಯೂರಿಟಿ ಆಗುವ ಠೇವಣಿಗಳ ಮೇಲೆ ಶೇ. 2.50ರಿಂದ ಶೇ.5.50ರ ವರೆಗೆ ಬಡ್ಡಿ ನೀಡುತ್ತದೆ. ಈ ದರಗಳು 21 ಮೇ 2021ರಿಂದ ಜಾರಿಯಲ್ಲಿವೆ. ಎಚ್​ಡಿಎಫ್​ಸಿ ಬ್ಯಾಂಕ್ ಹಿರಿಯ ನಾಗರಿಕರಿಗೆ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಎಫ್​ಡಿಗಳ ಮೇಲೆ ಶೇ. 3ರಿಂದ ಶೇ. 6.25ರವರೆಗೆ ಬಡ್ಡಿ ದರಗಳನ್ನು ನೀಡುತ್ತದೆ.

7 – 14 ದಿನಗಳು ಶೇ 2.50
15 – 29 ದಿನಗಳು ಶೇ 2.50
30 – 45 ದಿನಗಳು ಶೇ 3
61 – 90 ದಿನಗಳು ಶೇ 3
91 ದಿನಗಳು – 6 ತಿಂಗಳು ಶೇ 3.5
6 ತಿಂಗಳು 1 ದಿನ – 9 ತಿಂಗಳು ಶೇ 4.4
9 ತಿಂಗಳು 1 ದಿನ < 1 ವರ್ಷ ಶೇ 4.4
1 ವರ್ಷ – ಶೇ 4.9
1 ವರ್ಷ 1 ದಿನ – 2 ವರ್ಷ ಶೇ 4.9
2 ವರ್ಷ 1 ದಿನ – 3 ವರ್ಷ ಶೇ 5.15
3 ವರ್ಷ 1 ದಿನ- 5 ವರ್ಷ ಶೇ 5.30
5 ವರ್ಷ 1 ದಿನ – 10 ವರ್ಷ ಶೇ 5.50

ಐಸಿಐಸಿಐ ಬ್ಯಾಂಕ್ ಇತ್ತೀಚಿನ ಎಫ್ ಡಿ ದರಗಳು
ಐಸಿಐಸಿಐ ಬ್ಯಾಂಕ್ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲೆ ಶೇ. 2.5ರಿಂದ ಶೇ. 5.50ರವರೆಗೆ ಬಡ್ಡಿ ದರಗಳನ್ನು ನೀಡುತ್ತದೆ. ಈ ದರಗಳು ಅಕ್ಟೋಬರ್ 21ರಿಂದ ಅನ್ವಯ ಆಗಿವೆ. ಹಿರಿಯ ನಾಗರಿಕರು ಇತರರಿಗಿಂತ 50 ಬೇಸಿಸ್ ಪಾಯಿಂಟ್ (ಬಿಪಿಎಸ್) ಹೆಚ್ಚಿನ ಬಡ್ಡಿ ದರವನ್ನು ಪಡೆಯುತ್ತಾರೆ.

7 ದಿನಗಳಿಂದ 14 ದಿನಗಳು – ಶೇ 2.50
15 ದಿನಗಳಿಂದ 29 ದಿನಗಳು – ಶೇ 2.50
30 ದಿನಗಳಿಂದ 45 ದಿನಗಳು – ಶೇ 3
46 ದಿನಗಳಿಂದ 60 ದಿನಗಳು – ಶೇ 3
61 ದಿನಗಳಿಂದ 90 ದಿನಗಳವರೆಗೆ- ಶೇ 3
91 ದಿನಗಳಿಂದ 120 ದಿನಗಳು – ಶೇ 3.5
121 ದಿನಗಳಿಂದ 184 ದಿನಗಳು – ಶೇ 3.5
185 ದಿನಗಳಿಂದ 210 ದಿನಗಳು – ಶೇ 4.40
211 ದಿನಗಳಿಂದ 270 ದಿನಗಳು – ಶೇ 4.40
271 ದಿನಗಳಿಂದ 289 ದಿನಗಳು – ಶೇ 4.40
290 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ – ಶೇ 4.40
1 ವರ್ಷದಿಂದ 389 ದಿನಗಳು – ಶೇ 4.9
390 ದಿನಗಳಿಂದ < 18 ತಿಂಗಳುಗಳು – ಶೇ 4.9
18 ತಿಂಗಳುಗಳಿಂದ 2 ವರ್ಷಗಳವರೆಗೆ – ಶೇ 5
2 ವರ್ಷ 1 ದಿನದಿಂದ 3 ವರ್ಷ – ಶೇ 5.15
3 ವರ್ಷ 1 ದಿನದಿಂದ 5 ವರ್ಷ – ಶೇ 5.35
5 ವರ್ಷ 1 ದಿನದಿಂದ 10 ವರ್ಷ – ಶೇ 5.50

ಆಕ್ಸಿಸ್ ಬ್ಯಾಂಕ್ ಎಫ್ ಡಿ ದರಗಳು
ಖಾಸಗಿ ವಲಯದ ಆಕ್ಸಿಸ್ ಬ್ಯಾಂಕ್ 7 ದಿನಗಳಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಅವಧಿ ಠೇವಣಿಗಳ ಮೇಲೆ ಶೇ 2.50 ರಿಂದ ಶೇ 5.75 ಬಡ್ಡಿ ದರವನ್ನು ನೀಡುತ್ತದೆ. ಈ ದರಗಳು 26 ಜೂನ್ 2021 ರಿಂದ ಜಾರಿಗೆ ಬಂದಿದೆ.
7 ದಿನಗಳಿಂದ 14 ದಿನ- ಶೇ 2.50
15 ದಿನಗಳಿಂದ 29 ದಿನಗಳು- ಶೇ 2.50
30 ದಿನಗಳಿಂದ 45 ದಿನಗಳು- ಶೇ 3
46 ದಿನಗಳಿಂದ 60 ದಿನಗಳು- ಶೇ 3
61 ದಿನಗಳು < 3 ತಿಂಗಳು- ಶೇ 3
3 ತಿಂಗಳು < 4 ತಿಂಗಳು- ಶೇ 3.5
4 ತಿಂಗಳು < 5 ತಿಂಗಳು- ಶೇ 3.5
5 ತಿಂಗಳು < 6 ತಿಂಗಳು- ಶೇ 3.5
6 ತಿಂಗಳು < 7 ತಿಂಗಳು- ಶೇ 4.40
7 ತಿಂಗಳು < 8 ತಿಂಗಳು- ಶೇ 4.40
8 ತಿಂಗಳು < 9 ತಿಂಗಳು- ಶೇ 4.40
9 ತಿಂಗಳು < 10 ತಿಂಗಳು- ಶೇ 4.40
10 ತಿಂಗಳು < 11 ತಿಂಗಳು- ಶೇ 4.40
11 ತಿಂಗಳು < 11 ತಿಂಗಳು 25 ದಿನಗಳು- ಶೇ 4.40
11 ತಿಂಗಳು 25 ದಿನಗಳು < 1 ವರ್ಷ- ಶೇ 4.40
1 ವರ್ಷ < 1 ವರ್ಷ 5 ದಿನಗಳು- ಶೇ 5.10%
1 ವರ್ಷ 5 ದಿನಗಳು < 1 ವರ್ಷ 11 ದಿನಗಳು- ಶೇ 5.15
1 ವರ್ಷ 11 ದಿನಗಳು < 1 ವರ್ಷ 25 ದಿನಗಳು- ಶೇ 5.10
1 ವರ್ಷ 25 ದಿನಗಳು < 13 ತಿಂಗಳು- ಶೇ 5.10
13 ತಿಂಗಳು < 14 ತಿಂಗಳು- ಶೇ 5.10
14 ತಿಂಗಳು < 15 ತಿಂಗಳು- ಶೇ 5.10
15 ತಿಂಗಳು < 16 ತಿಂಗಳು- ಶೇ 5.10
16 ತಿಂಗಳು < 17 ತಿಂಗಳು- ಶೇ 5.10
17 ತಿಂಗಳು < 18 ತಿಂಗಳು- ಶೇ 5.10
18 ತಿಂಗಳು < 2 ವರ್ಷಗಳು- ಶೇ 5.25
2 ವರ್ಷ < 30 ತಿಂಗಳು- ಶೇ 5.40
30 ತಿಂಗಳು < 3 ವರ್ಷ- ಶೇ 5.40
3 ವರ್ಷ < 5 ವರ್ಷ- ಶೇ 5.40
5 ವರ್ಷಗಳಿಂದ 10 ವರ್ಷ- ಶೇ 5.75

ಇದನ್ನೂ ಓದಿ: SBI Savings Plus: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಿಗೆ ಈ ಉಳಿತಾಯ ಖಾತೆ ಮೇಲೆ ಹೆಚ್ಚು ಬಡ್ಡಿ

(Here is the comparison of India’s major banks FD rate of interest including SBI, HDFC Bank, ICICI Bank, Axis Bank)