ಕೊವಿಡ್ 19 ಲಸಿಕೆ ಹಾಕಿಸಿಕೊಂಡವರಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಲ್ಲಿ ಎಫ್​ಡಿ ಮೇಲೆ ಹೆಚ್ಚುವರಿ ಬಡ್ಡಿ

ಕೊರೊನಾ ಲಸಿಕೆ ಹಾಕಿಸಿಕೊಂಡವರಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಿಂದ ಎಫ್​ಡಿ ಬಡ್ಡಿ ದರವನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ. ಯಾವ ಬ್ಯಾಂಕ್​ಗಳು ನೀಡುತ್ತಿವೆ ಮತ್ತು ಬಡ್ಡಿ ಎಷ್ಟು ಎಂಬ ವಿವರಣೆ ಇಲ್ಲಿದೆ.

ಕೊವಿಡ್ 19 ಲಸಿಕೆ ಹಾಕಿಸಿಕೊಂಡವರಿಗೆ ಸರ್ಕಾರಿ ಸ್ವಾಮ್ಯದ ಬ್ಯಾಂಕ್​ಗಳಲ್ಲಿ ಎಫ್​ಡಿ ಮೇಲೆ ಹೆಚ್ಚುವರಿ ಬಡ್ಡಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 08, 2021 | 10:49 PM

ಕೊವಿಡ್ 19 ಲಸಿಕೆ ಹಾಕಿಸಿಕೊಳ್ಳುವುದನ್ನು ಉತ್ತೇಜಿಸುವ ಪ್ರಯತ್ನದ ಭಾಗವಾಗಿ ಸರ್ಕಾರ ಸ್ವಾಮ್ಯದ ಕೆಲವು ಬ್ಯಾಂಕ್​ಗಳು ವಿಶೇಷ ಯೋಜನೆ ಘೋಷಿಸಿವೆ. ಯಾರು ಚುಚ್ಚುಮದ್ದು ಪಡೆದಿರುತ್ತಾರೋ ಅವರಿಗೆ ಹೆಚ್ಚಿನ ಬಡ್ಡಿಯನ್ನು ಘೋಷಣೆ ಮಾಡಿವೆ. ಯಾರು ತಮ್ಮ ಲಸಿಕೆ ಹಾಕಿಸಿಕೊಂಡ ಪ್ರಮಾಣಪತ್ರಗಳನ್ನು ತೋರಿಸುತ್ತಾರೋ ಅಂಥವರಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ. ಸೀಮಿತ ಅವಧಿಗೆ ಈ ಆಫರ್ ಇರಲಿದೆ. ಜೂನ್ 21ರಿಂದ ಎಲ್ಲ ರಾಜ್ಯಗಳಲ್ಲೂ ವಯಸ್ಕರಿಗೆ ಕೇಂದ್ರ ಸರ್ಕಾರದಿಂದ ಕೊವಿಡ್- 19 ವಿರುದ್ಧ ಉಚಿತ ಚುಚ್ಚುಮದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದ್ದು, ಇಂಥ ಸನ್ನಿವೇಶದಲ್ಲಿ ಈ ಆಫರ್ ಬಂದಿದೆ. ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆಯನ್ನಾದರೂ ಪಡೆದಿದ್ದಲ್ಲಿ, ಅಂಥವರು 999 ದಿನಗಳ ಅವಧಿಗೆ ಫಿಕ್ಸೆಡ್ ಡೆಪಾಸಿಟ್ ಮಾಡಿದಲ್ಲಿ ಕೋಲ್ಕತ್ತಾ ಮೂಲದ ಯುಕೋ ಬ್ಯಾಂಕ್​ನಿಂದ 30 ಬೇಸಿಸ್ ಪಾಯಿಂಟ್ಸ್ (ಬಿಪಿಎಸ್) ಹೆಚ್ಚು ಬಡ್ಡಿಯನ್ನು ಆಫರ್ ಮಾಡಲಾಗುತ್ತಿದೆ.

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಿಂದ ಮಾಮೂಲಿಗಿಂತ 25 ಬೇಸಿಸ್ ಪಾಯಿಂಟ್, ಹಿರಿಯ ನಾಗರಿಕರಿಗೆ ಶೇ 0.50ರಷ್ಟು ಹೆಚ್ಚುವರಿಯಾಗಿ ಬಡ್ಡಿ ನೀಡಲಾಗುತ್ತದೆ. ಈ ಯೋಜನೆಗೆ “ಇಮ್ಯುನ್ ಇಂಡಿಯಾ ಡೆಪಾಸಿಟ್ ಸ್ಕೀಮ್” ಎಂದು ಹೆಸರಿಸಲಾಗಿದೆ. ಮೆಚ್ಯೂರಿಟಿ ಅವಧಿ 1,111 ದಿನದ್ದಾಗಿರುತ್ತದೆ. ದೇಶದಲ್ಲಿ ಕ್ಯುಮುಲೇಟಿವ್ ಡೋಸ್​ಗಳ ಸಂಖ್ಯೆ 23.61 ಕೋಟಿ ಆಗಿದೆ. 18ರಿಂದ 44 ವರ್ಷ ವಯಸ್ಸಿನೊಳಗಿನವರದು ಇನ್ನೇನು ವಿವಿಧ ರಾಜ್ಯಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶುರುವಾಗಬೇಕಿದೆ. ಅಂದಹಾಗೆ ಜನವರಿ 16, 2021ರಂದು ಹೆಲ್ತ್​ ಕೇರ್ ವರ್ಕರ್​​ಗಳೊಂದಿಗೆ ಕೊವಿಡ್- 19 ಲಸಿಕೆ ಅಭಿಯಾನ ಶುರುವಾಯಿತು. ಆ ನಂತರ ಫ್ರಂಟ್ ಲೈನ್ ವರ್ಕರ್ಸ್ ಕವರ್ ಆಯಿತು.

ಅದಾಗಿ ಕೆಲವು ವಾರಗಳಿಗೆ ಸರ್ಕಾರದಿಂದ ಹೊಸ ಮಾರ್ಗದರ್ಶಿ ಸೂತ್ರಗಳನ್ನು ತರಲಾಯಿತು. 60 ವರ್ಷ ಮೇಲ್ಪಟ್ಟವರು ಹಾಗೂ ಕೆಲವು ಆರೋಗ್ಯ ಪರಿಸ್ಥಿತಿಗಳನ್ನು ಗಮನಿಸಿ 45 ವರ್ಷ ಮೇಲ್ಪಟ್ಟವರಿಗಾಗಿ ತರಲಾಯಿತು. ಏಪ್ರಿಲ್​ ತಿಂಗಳಲ್ಲಿ 45 ವರ್ಷ ಮೇಲ್ಪಟ್ಟವರು ಎಲ್ಲರೂ ಚುಚ್ಚುಮದ್ದು ಪಡೆಯುವುದಕ್ಕೆ ಅರ್ಹರು ಎಂದು ಘೋಷಿಸಲಾಯಿತು. ಮೇ ತಿಂಗಳಲ್ಲಿ ಭಾರತದಲ್ಲಿ ಎಲ್ಲ ವಯಸ್ಕರಿಗೂ ಲಸಿಕೆ ಹಾಕುವುದಕ್ಕೆ ಆರಂಭಿಸಲಾಯಿತು. ಹೀಗೆ ಘೋಷಣೆ ಮಾಡಿದ ಕೆಲವೇ ದೇಶಗಳಲ್ಲಿ ಭಾರತ ಕೂಡ ಒಂದಾಯಿತು.

ಇದನ್ನೂ ಓದಿ: Corona Vaccine: ಕೊರೊನಾ ಲಸಿಕೆ ಪಡೆಯುವ ಮೊದಲು ಮತ್ತು ನಂತರ ಪಾಲಿಸಬೇಕಾದ ಅಂಶಗಳೇನು? ಇಲ್ಲಿದೆ ವಿವರ

(PSU banks offering additional interest on fixed deposits of people who got corona vaccine)