SBIದಿಂದ ಎಟಿಎಂ ನಗದು ವಿಥ್​ಡ್ರಾ, ಚೆಕ್​ ಬುಕ್ ನಿಯಮಾವಳಿ, ಶುಲ್ಕಗಳ ಬದಲಾವಣೆ ಮುಂದಿನ ತಿಂಗಳಿಂದ

ಸ್ಟೇಟ್ ಬ್ಯಾಂಕ್​ ಆಫ್ ಇಂಡಿಯಾದಿಂದ ಮುಂದಿನ ತಿಂಗಳಿಂದ ಅನ್ವಯ ಆಗುವಂತೆ ನಗದು ವಿಥ್​ಡ್ರಾ, ಚೆಕ್​ ಬುಕ್ ಮತ್ತು ಇತರ ನಿಯಮಾವಳಿಗಳು ಬದಲಾವಣೆಗಳಾಗಲಿವೆ.

SBIದಿಂದ ಎಟಿಎಂ ನಗದು ವಿಥ್​ಡ್ರಾ, ಚೆಕ್​ ಬುಕ್ ನಿಯಮಾವಳಿ, ಶುಲ್ಕಗಳ ಬದಲಾವಣೆ ಮುಂದಿನ ತಿಂಗಳಿಂದ
ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಎಸ್‌ಬಿಐ ಎರಡು ಖಾತೆಗಳನ್ನು ಒದಗಿಸುತ್ತದೆ - ಪೆಹ್ಲಾಕದಮ್ ಮತ್ತು ಪೆಹ್ಲಿಉಡಾನ್. ಇವೆರಡನ್ನು ವಿಶೇಷವಾಗಿ ಮಕ್ಕಳಿಗಾಗಿಯೇ ರೂಪಿಸಲಾಗಿದೆ. ಪೆಹ್ಲಾಕದಮ್ ಉಳಿತಾಯ ಖಾತೆಯನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯಾವುದೇ ಮಗು ತೆರೆಯಬಹುದು. ಈ ಉಳಿತಾಯ ಖಾತೆಯು ಪೋಷಕರು ಮತ್ತು ಮಗುವಿನ ಜಂಟಿ ಖಾತೆಯಾಗಿದ್ದು, ಅಲ್ಲಿ ಪೋಷಕರು ಸೆಕೆಂಡರಿ ಖಾತೆದಾರರಾಗಿರುತ್ತಾರೆ ಮತ್ತು ಮಗು ಪ್ರಾಥಮಿಕ ಹೋಲ್ಡರ್ ಆಗಿರುತ್ತದೆ. ಸಾಮಾನ್ಯ ಉಳಿತಾಯ ಖಾತೆಯಂತೆ, ಈ ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಮಾನದಂಡಗಳಿಲ್ಲ. ಮೊಬೈಲ್ ಬ್ಯಾಂಕಿಂಗ್ ಮತ್ತು ಚೆಕ್ ಪುಸ್ತಕಗಳ ವಿತರಣೆಯಂತಹ ವೈಶಿಷ್ಟ್ಯಗಳು ಎರಡರಲ್ಲೂ ಲಭ್ಯವಿವೆ. ಓವರ್ ಡ್ರಾಫ್ಟ್, ಎಟಿಎಂ ಸೌಲಭ್ಯ ಮತ್ತು ಇತರ ಹೂಡಿಕೆ ಆಯ್ಕೆಗಳನ್ನು ಈ ಖಾತೆಗಳೊಂದಿಗೆ ಸೇರಿಸಲಾಗಿದೆ.
Follow us
TV9 Web
| Updated By: Srinivas Mata

Updated on:Jun 08, 2021 | 1:54 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಎಟಿಎಂಗಳು ಮತ್ತು ಬ್ಯಾಂಕ್​ ಶಾಖೆಯಿಂದ ನಗದು ವಿಥ್​ಡ್ರಾಗೆ ಸಂಬಂಧಿಸಿದಂತೆ ನಿಯಮಾವಳಿಗಳು ಹಾಗೂ ಶುಲ್ಕದಲ್ಲಿ ಬದಲಾವಣೆಗಳು ಮಾಡುವುದಕ್ಕೆ ಎಲ್ಲ ಸಿದ್ಧತೆ ನಡೆದಿದೆ. ಈ ಹೊಸ ನಿಯಮಾವಳಿಗಳು ಮುಂದಿನ ತಿಂಗಳಿಂದ ಜಾರಿಗೆ ಬರಲಿದೆ ಎಂದು ಈ ಹಿಂದೆ ಬ್ಯಾಂಕ್​ನಿಂದ ತಿಳಿಸಲಾಗಿತ್ತು. ಹೊಸ ಶುಲ್ಕಗಳು ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ (BSBD) ಖಾತೆದಾರರಿಗೆ ಅನ್ವಯ ಆಗುತ್ತದೆ. ಎಟಿಎಂನಲ್ಲಿ ನಗದು ವಿಥ್​ಡ್ರಾ ಶುಲ್ಕದಿಂದ ಚೆಕ್​ಬುಕ್ ಮತ್ತು ಹಣಕಾಸೇತರ ವಹಿವಾಟುಗಳ ತನಕ ಬರಲಿರುವ ಹೊಸ ನಿಯಮಾವಳಿಗಳ ಮಾಹಿತಿ ಇಲ್ಲಿದೆ.

ಏನಿದು ಎಸ್​ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಅಕೌಂಟ್? ಎಸ್​ಬಿಐ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಡೆಪಾಸಿಟ್ ಖಾತೆಯು ಇರುವುದು ಬಡವರಿಗಾಗಿ. ಯಾವುದೇ ಶುಲ್ಕ ಅಥವಾ ದರವನ್ನು ವಿಧಿಸದೆ ಅವರಿಗೆ ಉಳಿತಾಯವನ್ನು ಆರಂಭಿಸುವುದನ್ನು ಉತ್ತೇಜಿಸುವುದಕ್ಕೆ ಈ ಖಾತೆ ಇದೆ. ಇದನ್ನು ಶೂನ್ಯ ಬ್ಯಾಲೆನ್ಸ್ ಖಾತೆ ಎನ್ನಲಾಗುತ್ತದೆ. ಬಿಎಸ್​ಬಿಡಿ ಖಾತೆದಾರರಿಗೆ ಕನಿಷ್ಠ ಬ್ಯಾಲೆನ್ಸ್ ಅಥವಾ ಗರಿಷ್ಠ ಬ್ಯಾಲೆನ್ಸ್ ಅಂತಿಲ್ಲ. ಎಸ್​ಬಿಐನಿಂದ ಬೇಸಿಕ್ ರುಪೇ ಎಟಿಎಂ-ಕಮ್-ಡೆಬಿಟ್ ಕಾರ್ಡ್ ಅನ್ನು ಬಿಎಸ್​ಬಿಡಿ ಖಾತೆದಾರರಿಗೆ ನೀಡಲಾಗುತ್ತದೆ. ವೈಯಕ್ತಿಕವಾಗಿ ಯಾರ ಬಳಿ ಕೆವೈಸಿ ದಾಖಲಾತಿಗಳು ಇರುತ್ತವೆಯೋ ಅವರು ಬಿಎಸ್​ಬಿಡಿ ಖಾತೆಯನ್ನು ಎಸ್​ಬಿಐನಲ್ಲಿ ತೆರೆಯಬಹುದು.

ಎಸ್​ಬಿಐ ಎಟಿಎಂನಿಂದ ನಗದು ವಿಥ್​ಡ್ರಾ ನಿಯಮಾವಳಿಗಳು ಬಿಎಸ್​ಬಿಡಿ ಖಾತೆದಾರರಿಗೆ ನಾಲ್ಕು ಉಚಿತ ನಗದು ವಿಥ್​ಡ್ರಾ ಲಭ್ಯ ಇವೆ- ಇದರಲ್ಲಿ ಎಟಿಎಂಗಳು ಮತ್ತು ಬ್ಯಾಂಕ್​ ಶಾಖೆಗಳು ಎರಡೂ ಸೇರಿ ಒಂದು ತಿಂಗಳಲ್ಲಿ ಇಷ್ಟು ಅವಕಾಶ ಇದೆ. ಆ ಉಚಿತ ಮಿತಿಯ ನಂತರದಲ್ಲಿ ಬ್ಯಾಂಕ್​ನಿಂದ ಪ್ರತಿ ವಹಿವಾಟಿಗೆ ರೂ. 15 ಹಾಗೂ ಜಿಎಸ್​ಟಿ ಅನ್ವಯಿಸುತ್ತದೆ. ಶುಲ್ಕವು ಖಾತೆ ಹೊಂದಿರುವ ಹೋಮ್ ಬ್ರ್ಯಾಂಚ್ ಮತ್ತು ಎಟಿಎಂಗಳು ಮತ್ತು ಎಸ್​ಬಿಐ ಎಟಿಂಗಳಿಗೆ ಹೊರತಾದ ಕಡೆಗೆ ಅನ್ವಯ ಆಗುತ್ತದೆ.

ಚೆಕ್ ಬುಕ್ ಶುಲ್ಕಗಳು: ಬಿಎಸ್​ಬಿಡಿ ಖಾತೆದಾರರಿಗೆ ಬ್ಯಾಂಕ್​ನಿಂದ 10 ಚೆಕ್ ಲೀವ್ಸ್​ ಅನ್ನು ಒಂದು ಹಣಕಾಸಿನ ವರ್ಷದಲ್ಲಿ ನೀಡಲಾಗುತ್ತದೆ. ಅದಾದ ನಂತರ ಚೆಕ್​ಗಳಿಗೆ ದರ ವಿಧಿಸಲಾಗುತ್ತದೆ. 1) 10 ಚೆಕ್ ಲೀವ್ಸ್​ಗೆ ರೂ. 40 ಶುಲ್ಕ ಹಾಗೂ ಜತೆಗೆ ಜಿಎಸ್​ಟಿ

2) 25 ಚೆಕ್ ಲೀವ್ಸ್​ಗೆ ರೂ. 75 ಶುಲ್ಕ ಹಾಗೂ ಜಿಎಸ್​ಟಿ

3) ತುರ್ತು ಚೆಕ್​ ಬುಕ್​ಗೆ ರೂ. 50 ಶುಲ್ಕ ಪ್ಲಸ್ ಜಿಎಸ್​ಟಿ ಆಗುತ್ತದೆ. ಅದಕ್ಕೆ 10 ಲೀವ್ಸ್ ಬರುತ್ತದೆ.

ಆದರೆ, ಹಿರಿಯ ನಾಗರಿಕರಿಗೆ ಚೆಕ್​ ಬುಕ್​ಗಳ ಮೇಲಿನ ಈ ಹೊಸ ಸೇವೆಗೆ ಯಾವುದೇ ಶುಲ್ಕ ಇಲ್ಲ. ಹೋಮ್​ ಬ್ರ್ಯಾಂಚ್ (ಖಾತೆ ಇರುವ) ಅಥವಾ ಅಲ್ಲಿಂದ ಹೊರಗಿನ ಶಾಖೆಯಲ್ಲಿ ಬಿಎಸ್​ಬಿಡಿ ಖಾತೆಯ ಯಾವುದೇ ಹಣಕಾಸೇತರ ವ್ಯವಹಾರಗಳಿಗೆ ಬ್ಯಾಂಕ್​ನಿಂದ ಶುಲ್ಕ ಇರುವುದಿಲ್ಲ. ವರ್ಗಾವಣೆ ಕೂಡ ಶಾಖೆ ಮತ್ತು ಪರ್ಯಾಯ ಚಾನೆಲ್​ಗಳಲ್ಲಿ ಬಿಎಸ್​ಬಿಡಿ ಖಾತೆದಾರರಿಗೆ ಉಚಿತವಾಗಿರುತ್ತದೆ.

ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಗ್ರಾಹಕರು ಹೋಮ್ ಬ್ರ್ಯಾಂಚ್​ ಅಲ್ಲದ ಕಡೆ ಹಣ ವಿಥ್​ಡ್ರಾ ಮಾಡುವ ಮಿತಿಯನ್ನು ಸಹ ಹೆಚ್ಚಿಸಲಾಗಿದೆ. ಕೊರೊನಾ ಸಂದರ್ಭದಲ್ಲಿ ಗ್ರಾಹಕರನ್ನು ಬೆಂಬಲಿಸುವ ಉದ್ದೇಶದಿಂದ ಹೋಮ್​ ಬ್ರ್ಯಾಂಚ್​ ಅಲ್ಲದ ಕಡೆಯೂ ಚೆಕ್​ ಅಥವಾ ವಿಥ್​ಡ್ರಾ ಫಾರ್ಮ್ ಮೂಲಕ ನಗದು ವಿಥ್​ಡ್ರಾ ಮಾಡುವ ಮಿತಿಯನ್ನು ಏರಿಕೆ ಮಾಡಲಾಗಿದೆ. ಈ ಬಗ್ಗೆ ಬ್ಯಾಂಕ್​ನಿಂದಲೂ ಟ್ವೀಟ್ ಮಾಡಲಾಗಿದೆ. ಇನ್ನು ಒಂದು ದಿನಕ್ಕೆ ಚೆಕ್ ಬಳಸಿ ನಗದು ವಿಥ್​ಡ್ರಾ ಮಾಡುವ ಮಿತಿಯನ್ನು ರೂ. 50,000ದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದೆ. ವಿಥ್​ಡ್ರಾ ಫಾರ್ಮ್ ಹಾಗೂ ಪಾಸ್​ಬುಕ್ ಜತೆಗೆ ಒಂದು ದಿನಕ್ಕೆ ನಗದು ವಿಥ್​ ಡ್ರಾ ಮಾಡುವ ಮಿತಿ ರೂ. 25,000ಕ್ಕೆ ಹೆಚ್ಚಿಸಲಾಗಿದೆ. ಥರ್ಡ್​ ಪಾರ್ಟಿ ನಗದು ವಿಥ್​ ಡ್ರಾ ಅನ್ನು ಒಂದು ತಿಂಗಳಿಗೆ (ಚೆಕ್​ ಮಾತ್ರ ಬಳಸಿ) ರೂ. 50,000ಕ್ಕೆ ನಿಗದಿ ಮಾಡಲಾಗಿದೆ. ವಿಥ್​ಡ್ರಾ ಫಾರ್ಮ್ ಮೂಲಕ ನಗದು ಡ್ರಾ ಮಾಡುವುದಕ್ಕೆ ಅವಕಾಶ ಇಲ್ಲ ಎಂದು ಬ್ಯಾಂಕ್ ತಿಳಿಸಿದೆ. ಪರಿಷ್ಕೃತ ಮಿತಿ ಸೆಪ್ಟೆಂಬರ್ 30ರ ತನಕ ಇದೆ.

ಇದನ್ನೂ ಓದಿ: SBI KYC: ಆನ್​ಲೈನ್​ನಲ್ಲಿ ಎಸ್​ಬಿಐ ಕೆವೈಸಿ ಅಪ್​ಡೇಟ್​ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?

(SBI will change cheque book and cash withdrawal rules from next month. Here is the details)

Published On - 1:52 pm, Tue, 8 June 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ