ಯಾವ ಇನ್ಶೂರೆನ್ಸ್ ಬೆಸ್ಟ್? ಖರೀದಿಸುವಾಗ ನಿಮ್ಮ ಮೊದಲ ಆಯ್ಕೆ ಇದಾಗಿರಲಿ

| Updated By: Rakesh Nayak Manchi

Updated on: May 17, 2022 | 12:59 PM

ವಿಮಾ ಪಾಲಿಸಿಯನ್ನು ನೇರವಾಗಿ ವಿಮೆ ಕಂಪನಿಯಿಂದಲೇ ಖರೀದಿಸಬಹುದು. ಪ್ರತಿಯೊಂದು ವಿಮಾ ಕಂಪನಿ ಅದರದ್ದೇ ಆದ ಮಾರಾಟ ಕಚೇರಿಗಳನ್ನು ಹೊಂದಿದೆ. ಆನ್​ಲೈನ್ ಮೂಲಕವೂ ಖರೀದಿಸಬಹುದು.

ಯಾವ ಇನ್ಶೂರೆನ್ಸ್ ಬೆಸ್ಟ್? ಖರೀದಿಸುವಾಗ ನಿಮ್ಮ ಮೊದಲ ಆಯ್ಕೆ ಇದಾಗಿರಲಿ
ಸಾಂದರ್ಭಿಕ ಚಿತ್ರ
Follow us on

ಪ್ರಸ್ತುತ ಹತ್ತಾರು ಕಂಪನಿಗಳ ಇನ್ಶೂರೆನ್ಸ್​(Insurance)ಗಳನ್ನು ಕಾಣಬಹುದು. ಒಂದೊಮ್ಮೆ ನಾವು ಇನ್ಶೂರೆನ್ಸ್ ಖರೀದಿಸಬೇಕು ಅಂತ ಇದ್ದಾಗ ವಿಧವಾದ ಇನ್ಶೂರೆನ್ಸ್​ಗಳನ್ನ ನೋಡಿ ಗೊಂದಲಕ್ಕೀಡಾಗುತ್ತೇವೆ. ಯಾವ ಇನ್ಶೂರೆನ್ಸ್ ಬೆಸ್ಟ್? ಯಾವುದನ್ನು ಖರೀದಿಸಲಿ? ಯಾವುದರಲ್ಲಿ ಖರೀದಿಸಲಿ ಎಂಬಿತ್ಯಾದಿ ಪ್ರಶ್ನೆಗಳು ಉದ್ಭವಿಸುತ್ತದೆ. ವಿಮೆ ಏಜೆಂಟರು(Insurance Agent)ಗಳು ಏನೋ ಹೇಳುತ್ತಾರೆ, ನೀವು ಪಡೆಯುವ ಮನಿಬ್ಯಾಕ್ ಮೊತ್ತ ನನ್ನ ಕಮಿಷನ್​ಗೆ ಸಮ ಅಂತಾನೂ ಹೇಳುತ್ತಾರೆ. ಹೀಗಿದ್ದಾಗ ನಿಮ್ಮ ಎಲ್ಲಾ ಗೊಂದಲಗಳಿಗೆ ಈ ಸುದ್ದಿಯ ಮೂಲಕ ಉತ್ತರ ನೀಡಲಾಗುತ್ತದೆ. ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ವಿಮೆ ಖರೀದಿಸುವ ಮುನ್ನ ವಿಮಾ ಪಾಲಿಸಿಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗುತ್ತದೆ. ಈಗ ಹೇಳಲು ಹೊರಟಿರುವ ವಿಚಾರಗಳು ನಿಮ್ಮನ್ನು ಸರಿಯಾದ ವಿಮೆ ಖರೀದಿಸುವಂತೆ ಮಾಡಲಿದೆ. ಅವುಗಳು ಈ ಕೆಳಗಿನಂತಿವೆ.

  • ಇನ್ಶೂರೆನ್ಸ್ ಖರೀದಿಸುವುದಾದರೆ ನಿಮ್ಮ ಮೊದಲ ಆಯ್ಕೆ ಇನ್ಶುರೆನ್ಸ್ ವೆಬ್ ಅಗ್ರಿಗೇಟರ್ಸ್ ಆಗಿರಲಿ. ಇದು ಶೇ.100ರಷ್ಟು ಡಿಜಿಟಲ್ ಆಗಿದೆ. ಪ್ರಸ್ತುತ ಸುಮಾರು 22 ವಿವಿಧ ವೆಬ್ ಅಗ್ರಿಗೇಟರ್​ಗಳು ದೇಶದಲ್ಲಿದ್ದು, ಇವು ಮಾರ್ಚ್ 2021ರ ವರೆಗೆ 72,59,123 ವಿಮಾ ಪಾಲಿಸಿಗಳನ್ನು ಮಾರಾಟ ಮಾಡಿವೆ. ಇದರ ಒಟ್ಟು ಪ್ರಿಮೀಯಂ ಮೊತ್ತ 4,169 ಕೋಟಿ ರೂಪಾಯಿ. ಅಗ್ರಿಗ್ರೇಟರ್​ಗಳು ಕಂಪನಿಗಳು ತೆಗೆದುಕೊಳ್ಳುವ ಕಮಿಷನ್​ನಿಂದ ಹಣ ಗಳಿಸುತ್ತಾರೆ. ಇವೆಲ್ಲವೂ ಆನ್​ಲೈನ್​ನಲ್ಲಿ ಲಭ್ಯವಿದೆ. ಗೊಂದಲಗಳಿದ್ದರೆ ಕಾಲ್ ಸೆಂಟರ್​ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.
  • ಎರಡನೇ ಆಯ್ಕೆ ವಿಮಾ ಏಜೆಂಟ್. ಈ ಏಜೆಂಟರ್​ಗಳು ವಿಮಾ ಕಂಪನಿಗಳೊಂದಿಗೆ ಒಪ್ಪಂದ ಹೊಂದಿದ್ದಾರೆ. ಐಆರ್ ಡಿಎಐನ ವಾರ್ಷಿಕ ವರದಿಯ ಪ್ರಕಾರ, ಸಾಮಾನ್ಯ, ಜೀವ ಹಾಗೂ ಆರೋಗ್ಯ ವಿಮೆ ಏಜೆಂಟರ ಒಟ್ಟು ಸಂಖ್ಯೆ ದೇಶದಲ್ಲಿ 38.77ಲಕ್ಷ ಇದೆ. ಇವರೆಲ್ಲರು ಐಆರ್​ಡಿಎನೊಂದಿಗೆ ನೋಂದಾಯಿತರಾಗಿದ್ದಾರೆ. ಈ ವ್ಯಕ್ತಿಗಳು ಸ್ನೇಹಿತರು ಹಾಗೂ ಸಂಬಂಧಿಕರು ಎಂದು ಹೇಳಿ ಖರೀದಿಸಲು ಹೋಗಬೇಡಿ. ಬದಲಾಗಿ ಅವರಿಗೆ ಇರುವ ಅನುಭವದ ಜೊತೆಗೆ ಅವರ ಸಾಧನೆಗಳ ಬಗ್ಗೆ ತಿಳಿದುಕೊಳ್ಳಬೇಕು.
  • ವಿಮಾ ಬ್ರೋಕರ್​ಗಳು ಮೂರನೇ ಆಯ್ಕೆಯಾಗಿರಲಿ. ಮಾರ್ಚ್ 2021ರ ವೇಳೆಗೆ ದೇಶದಲ್ಲಿ ಐಆರ್​ಡಿಎಐನಿಂದ 486 ಲೈಸೆನ್ಸ್ ಹೊಂದಿರುವ ಬ್ರೋಕರ್​ಗಳಿದ್ದಾರೆ. ಇವರು ನಿಮಗೆ ಸಲಹೆ ನೀಡುವ ಜೊತೆಗೆ ಎಲ್ಲ ರೀತಿಯ ಪೇಪರ್ ವರ್ಕ್ ಸಹ ಮಾಡುತ್ತಾರೆ.
  • ಬ್ಯಾಂಕುಗಳು ವಿಮಾ ಕಂಪನಿಗಳ ಕಾರ್ಪೋರೇಟ್ ಏಜೆಂಟ್​ಗಳಾಗಿ ಕಾರ್ಯ ನಿರ್ವಹಿಸುತ್ತವೆ. ಜೀವವಿಮೆ ಪಾಲಿಸಿ, ಗುಂಪು ವಿಮೆ ಪಾಲಿಸಿ ಹಾಗೂ ಆರೋಗ್ಯ ವಿಮೆ ಪಾಲಿಸಿಗಳನ್ನು ನಿಮ್ಮ ಖಾತೆಯೊಂದಿಗೆ ಹೊಂದಿಸಿ, ಮಾರಾಟ ಮಾಡುತ್ತವೆ.

Published On - 10:12 am, Tue, 17 May 22