Forex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

|

Updated on: Jun 25, 2023 | 10:19 AM

India's Forex Rises: ಫಾರೆಕ್ಸ್ ಮೀಸಲು ನಿಧಿ ಜೂನ್ 16ಕ್ಕೆ ಅಂತ್ಯಗೊಂಡ ವಾರದಲ್ಲಿ 2.35 ಬಿಲಿಯನ್ ಡಾಲರ್​ನಷ್ಟು ಏರಿಕೆ ಆಗಿದೆ. ಇದರಲ್ಲಿ ವಿದೇಶೀ ಕರೆನ್ಸಿ ಸಂಪತ್ತಿನಲ್ಲೇ 2.578 ಬಿಲಿಯನ್ ಡಾಲರ್ ಹೆಚ್ಚಾಗಿದೆ. ಚಿನ್ನದ ಆಸ್ತಿ ಕಡಿಮೆ ಆಗಿದೆ.

Forex Reserve: ಭಾರತದ ಫಾರೆಕ್ಸ್ ಮೀಸಲು ನಿಧಿ ಒಂದು ವಾರದಲ್ಲಿ 2.35 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ
ವಿದೇಶೀ ವಿನಿಮಯ ಮೀಸಲು ನಿಧಿ
Follow us on

ನವದೆಹಲಿ: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಜೂನ್ 16ಕ್ಕೆ ಅಂತ್ಯಗೊಂಡ ವಾರದಲ್ಲಿ 2.35 ಬಿಲಿಯನ್ ಡಾಲರ್​ನಷ್ಟು (ಸುಮಾರು 19,000 ಕೋಟಿ ರೂ) ಮೊತ್ತ ಹೆಚ್ಚಳವಾಗಿದೆ. ಇದರ ಹಿಂದಿನ ವಾರದಲ್ಲಿ 1.318 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ನಿಧಿ ಕಡಿಮೆ ಅಗಿತ್ತು. ಒಟ್ಟಾರೆ ಜೂನ್ 16ಕ್ಕೆ ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ ಫಂಡ್​ನಲ್ಲಿ ಒಟ್ಟು 596.098 ಬಿಲಿಯನ್ ಡಾಲರ್ (ಸುಮಾರು 48.86 ಲಕ್ಷ ಕೋಟಿ ರೂಪಾಯಿ) ಭರ್ತಿಯಾಗಿದೆ. ಇದು ಆರ್​ಬಿಐ ಬಿಡುಗಡೆ ಮಾಡಿದ ಸಾಪ್ತಾಹಿಕ ಅಂಕಿಅಂಶಗಳ ವರದಿಯಲ್ಲಿ ಇದೆ.

ಫಾರೆಕ್ಸ್ ಮೀಸಲು ನಿಧಿಯಲ್ಲಿ ನಾಲ್ಕು ಅಂಶಗಳು ಇರುತ್ತವೆ. ವಿದೇಶೀ ಕರೆನ್ಸಿ ಸಂಪತ್ತು, ಚಿನ್ನ, ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಮತ್ತು ಐಎಂಎಫ್​ನೊಂದಿಗಿನ ಮೀಸಲು ಸ್ಥಾನ ಇವು ನಾಲ್ಕು ಅಂಶಗಳು ಸೇರಿ ಫಾರೆಕ್ಸ್ ಮೀಸಲು ನಿಧಿಯನ್ನು ಗಣಿಸಲಾಗುತ್ತದೆ. ಇದರಲ್ಲಿ ವಿದೇಶೀ ಕರೆನ್ಸಿ ಸಂಪತ್ತು ಬಹಳ ಮುಖ್ಯವಾದ ಭಾಗ. ಜೂನ್ 16ಕ್ಕೆ ಅಂತ್ಯಗೊಂಡ ವಾರದಲ್ಲಿ ವಿದೇಶೀ ಕರೆನ್ಸಿ ಸಂಪತ್ತು 2.578 ಬಿಲಿಯನ್ ಡಾಲರ್​ನಷ್ಟು ಹೆಚ್ಚಾಗಿ 527.651 ಬಿಲಿಯನ್ ಡಾಲರ್​ನಷ್ಟಿದೆ. ಅಂದರೆ ಫಾರೀನ್ ಕರೆನ್ಸಿ ಅಸೆಟ್​ಗಳು 43.3 ಲಕ್ಷ ಕೋಟಿ ರೂನಷ್ಟಿವೆ.

ಇದನ್ನೂ ಓದಿElectricity Tariff Rules: ದಿನದ ಬೇರೆ ಬೇರೆ ಹೊತ್ತಿನಲ್ಲಿ ವಿದ್ಯುತ್ ಬಳಕೆಗೆ ಬೇರೆ ಬೇರೆ ದರ ಅನ್ವಯ: ಹೊಸ ಮಾದರಿ ಬಿಲ್ ವ್ಯವಸ್ಥೆಗೆ ಕೇಂದ್ರ ಕ್ರಮ

ಸ್ಪೆಷಲ್ ಡ್ರಾಯಿಂಗ್ ರೈಟ್ಸ್ (ಎಸ್​ಡಿಆರ್) 62 ಮಿಲಿಯನ್ ಡಾಲರ್​ನಷ್ಟು ಹೆಚ್ಚಾದರೆ, ಐಎಂಎಫ್​ನೊಂದಿಗಿನ ಭಾರತದ ಮೀಸಲು ಸ್ಥಾನ 34 ಮಿಲಿಯನ್​ನಷ್ಟು ಹೆಚ್ಚಾಗಿದೆ. ಫಾರೆಕ್ಸ್ ರಿಸರ್ವ್​ನ ಮೂರು ಭಾಗಗಳು ಹೆಚ್ಚಳವಾದರೆ ಚಿನ್ನದ ಮೀಸಲು ನಿಧಿ ಇಳಿಕೆಯಾಗಿದೆ. ವಿದೇಶೀ ಕರೆನ್ಸಿ ಅಸ್ತಿ ಬಳಿಕ ಫಾರೆಕ್ಸ್ ನಿಧಿಯಲ್ಲಿ ಚಿನ್ನ ಪ್ರಮುಖ ಅಂಶ. ಇದು ಆ ವಾರದಂದು 324 ಬಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಒಟ್ಟು ಚಿನ್ನದ ಮೀಸಲು 45.049 ಬಿಲಿಯನ್ ಡಾಲರ್​ನಷ್ಟು ಇದೆ ಎಂದು ರಿಸರ್ವ್ ಬ್ಯಾಂಕ್ ವರದಿಯಲ್ಲಿ ತಿಳಿದುಬರುತ್ತದೆ.

2021ರಲ್ಲಿ ದಾಖಲೆಯ ಮಟ್ಟದಲ್ಲಿತ್ತು ಫಾರೆಕ್ಸ್ ರಿಸರ್ವ್ಸ್

2021ರ ಅಕ್ಟೋಬರ್ ತಿಂಗಳಲ್ಲಿ ಭಾರತದ ಫಾರೀನ್ ಎಕ್ಸ್​ಚೇಂಜ್ ರಿಸರ್ವ್ಸ್ 645 ಬಿಲಿಯನ್ ಡಅಲರ್​ನಷ್ಟು ಇತ್ತು. ಅದು ಸಾರ್ವಕಾಲಿಕ ಗರಿಷ್ಠ ಸಂಗ್ರಹ ಎಂಬ ದಾಖಲೆಗೆ ಬಾಜನವಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಈ ಮೀಸಲು ನಿಧಿಯಲ್ಲಿ ಬಹುತೇಕ ಸತತವಾಗಿ ಇಳಿಕೆ ಆಗುತ್ತಿದೆಯಾದರೂ ಅಪಾಯ ಎನಿಸುವಷ್ಟು ಮಟ್ಟಕ್ಕೆ ಬಂದಿಲ್ಲ.

ಇದನ್ನೂ ಓದಿMoney: ತಪ್ಪಾಗಿ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದೀರಾ? ಏನು ಮಾಡಬೇಕು? ಸ್ವತಃ ಎಸ್​ಬಿಐ ಕೊಟ್ಟ ಸಲಹೆಗಳು ಇಲ್ಲಿವೆ

ಡಾಲರ್ ಹಾಗೂ ಇತರ ವಿದೇಶೀ ಕರೆನ್ಸಿಗಳ ಎದುರು ರುಪಾಯಿಯನ್ನು ರಕ್ಷಿಸಲು ಆರ್​ಬಿಐ ಈ ಫಾರೆಕ್ಸ್ ನಿಧಿಯನ್ನು ಬಳಸುತ್ತದೆ. ಡಾಲರ್ ವೃದ್ಧಿಸಿದಾಗೆಲ್ಲಾ ರುಪಾಯಿ ಮೌಲ್ಯ ತೀರಾ ಕುಸಿಯದಂತೆ ತಡೆಯಲು ಈ ನಿಧಿ ಸಹಾಯವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ