Money: ತಪ್ಪಾಗಿ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದೀರಾ? ಏನು ಮಾಡಬೇಕು? ಸ್ವತಃ ಎಸ್​ಬಿಐ ಕೊಟ್ಟ ಸಲಹೆಗಳು ಇಲ್ಲಿವೆ

What To Do When Money Gone to Wrong Account: ಬ್ಯಾಂಕ್ ಮೂಲಕವೋ ಅಥವಾ ಯುಪಿಐ ಪೇಮೆಂಟ್ ಮಾಡುವಾಗಲೂ ಜನರು ತಪ್ಪಾಗಿ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡುವುದುಂಟು. ಇಂಥ ಸಂದರ್ಭದಲ್ಲಿ ಹಣ ವಾಪಸ್ ಪಡೆಯಲು ಸಾಧ್ಯವಾ? ಎಸ್​ಬಿಐ ಹೇಳಿದ ಸಲಹೆ ಇಲ್ಲಿದೆ...

Money: ತಪ್ಪಾಗಿ ಬೇರೆ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದೀರಾ? ಏನು ಮಾಡಬೇಕು? ಸ್ವತಃ ಎಸ್​ಬಿಐ ಕೊಟ್ಟ ಸಲಹೆಗಳು ಇಲ್ಲಿವೆ
ಹಣ ವರ್ಗಾವಣೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 23, 2023 | 5:55 PM

ನಾವು ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುವಾಗ ಕೆಲವೊಮ್ಮೆ ತಪ್ಪಾದ ಅಕೌಂಟ್ ನಂಬರ್​ಗೆ (Money Transferred To Wrong Account) ಕಳುಹಿಸಿಬಿಡುವ ಸಾಧ್ಯತೆ ಇದೆ. ಇಂಥ ಹಲವಾರು ಪ್ರಕರಣಗಳು ಈ ಹಿಂದೆ ಆಗಿದ್ದಿದೆ. ಹೀಗೆ ತಪ್ಪಾಗಿ ಕಳುಹಿಸಿದ ಹಣವನ್ನು ವಾಪಸ್ ಪಡೆಯಲು ಜನರು ಹರಸಾಹಸ ಪಡುವುದುಂಟು. ಅಷ್ಟಾದರೂ ಹಣ ವಾಪಸ್ ಬರದೇ ಹತಾಶರಾಗಿರುವುದುಂಟು. ಬ್ಯಾಂಕನ್ನು ಸಂಪರ್ಕಿಸುವುದೋ, ಖಾತೆದಾರರನ್ನು ಸಂಪರ್ಕಿಸುವುದೋ ಏನೇ ಮಾಡಿದರೂ ಕೆಲವೊಮ್ಮೆ ಹಣ ಮರಳುವುದಿಲ್ಲ. ಎಸ್​ಬಿಐನ ಗ್ರಾಹರೊಬ್ಬರು ಈ ಸಮಸ್ಯೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಧ್ವನಿ ಎತ್ತಿದ್ದರು. ‘ನಾನು ಬೇರೆ ಖಾತೆಯೊಂದಕ್ಕೆ ತಪ್ಪಿ ಹಣ ಕಳುಹಿಸಿದ್ದೆ. ಬ್ಯಾಂಕಿಗೆ ಎಲ್ಲಾ ವಿವರಗಳನ್ನು ಕೊಟ್ಟಿದ್ದೆ. ಆದರೂ ಕೂಡ ಹಣ ವಾಪಸಾತಿ ಬಗ್ಗೆ ಏನೂ ಮಾಹಿತಿ ನನಗೆ ಸಿಕ್ಕಿಲ್ಲ. ದಯವಿಟ್ಟು ಸಹಾಯ ಮಾಡಿ’ ಎಂದು ರವಿ ಅಗರ್ವಾಲ್ ಎಂಬುವವರು ಸರಣಿ ಟ್ವೀಟ್​ಗಳನ್ನು ಮಾಡಿದ್ದರು. ಇದಕ್ಕೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ವಿಚಾರದಲ್ಲಿ ಕೆಲವಿಷ್ಟು ಸಲಹೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ರೂಪದಲ್ಲಿ ಕೊಟ್ಟಿದೆ. ತಪ್ಪಾಗಿ ಬೇರೆ ಖಾತೆಗೆ ಹಣ ವರ್ಗಾವಣೆ ಆದಾಗ ಏನು ಮಾಡಬೇಕು ಎಂಬ ವಿವರ ಇಲ್ಲಿದೆ….

ಹಂತ 1: ನಿಮ್ಮ ಖಾತೆ ಇರುವ ಬ್ಯಾಂಕ್ ಬ್ರ್ಯಾಂಚ್ ಸಂಪರ್ಕಿಸಿ

ನೀವು ಒಂದು ವೇಳೆ ಬೇರೆ ಬ್ಯಾಂಕ್ ಖಾತೆಗೆ ತಪ್ಪಾಗಿ ಹಣ ಕಳುಹಿಸಿದ್ದರೆ ಆಗ ನಿಮ್ಮ ಖಾತೆ ಇರುವ ಶಾಖಾ ಕಚೇರಿಯನ್ನು ಸಂಪರ್ಕಿಸಬೇಕು. ಬಳಿಕ ನೀವು ಹಣ ಕಳುಹಿಸಿದವರ ಖಾತೆಯ ಬ್ಯಾಂಕ್ ಅನ್ನು ಅದು ಸಂಪರ್ಕಿಸಿ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸುತ್ತದೆ.

ಹಂತ 2: ಎಸ್​ಬಿಐನ ಸಿಆರ್​ಸಿಎಫ್ ಪೋರ್ಟಲ್ ಸಂಪರ್ಕ

ಬ್ಯಾಂಕ್ ಶಾಖೆಯಿಂದ ನಿಮ್ಮ ಹಣವನ್ನು ಮರಳಿ ಕೊಡಿಸಲು ಆಗಲಿಲ್ಲವೆಂದರೆ ನೀವು ಎಸ್​ಬಿಐನ ಸಿಆರ್​ಸಿಎಫ್ ಪೋರ್ಟಲ್​ನಲ್ಲಿ ದೂರು ಸಲ್ಲಿಸಬಹುದು. ಪೋರ್ಟಲ್ ವಿಳಾಸ ಇಂತಿದೆ

crcf.sbi.co.in/ccf

  • ಇಲ್ಲಿ ಕಸ್ಟಮರ್ ರಿಕ್ವೆಸ್ಟ್ ಅಂಡ್ ಕಂಪ್ಲೇಂಟ್ ಅಡಿಯಲ್ಲಿ ಇರುವ ರೈಸ್ ರಿಕ್ವೆಸ್ಟ್/ಕಂಪ್ಲೇಂಟ್ ಟೈಪ್ಸ್​ನ ಆಯ್ಕೆಗಳಲ್ಲಿ ರೈಸ್ ಕಂಪ್ಲೇಂಟ್ ಅನ್ನು ಆಯ್ಕೆ ಮಾಡಿ.
  • ಕೆಳಗೆ ಪರ್ಸನಲ್ ಸೆಗ್ಮೆಂಟ್/ಇಂಡಿವಿಜುನಲ್ ಕಸ್ಟಮ್ ಎಂದಿರುವ ಮೊದಲ ಆಯ್ಕೆ ಆರಿಸಿ.
  • ನಿಮ್ಮ ಖಾತೆ ಸಂಖ್ಯೆ ನಮೂದಿಸಿ ಕ್ಯಾಪ್ಚಾ ಕೋಡ್ ಹಾಕಿ, ಸೆಂಡ್ ಓಟಿಪಿ ಒತ್ತಿರಿ.
  • ಬ್ಯಾಂಕ್ ಖಾತೆಗೆ ಜೋಡಿತವಾದ ನಿಮ್ಮ ಮೊಬೈಲ್ ನಂಬರ್​ಗೆ ಒಟಿಪಿ ಬರುತ್ತದೆ. ಅದರಿಂದ ಲಾಗಿನ್ ಆಗಿ.
  • ಈ ಮೂಲಕ ನೀವು ದೂರು ಕೊಡಬಹುದು.

ನಿಮ್ಮ ಹಣ ಮರಳುವ ಖಾತ್ರಿ ಇಲ್ಲ

ನೀವು ಒಮ್ಮೆ ತಪ್ಪಾಗಿ ಬೇರೆ ಖಾತೆಗೆ ಹಣ ವರ್ಗಾವಣೆ ಮಾಡಿದರೆ ಅದಕ್ಕೆ ಬ್ಯಾಂಕ್ ಜವಾಬ್ದಾರವಾಗುವುದಿಲ್ಲ. ನಿಮ್ಮ ಖಾತೆ ಇರುವ ಬ್ಯಾಂಕ್ ಶಾಖಾ ಕಚೇರಿಯನ್ನು ಸಂಪರ್ಕಿಸಿದರೆ ಅದು ಹಣ ವಾಪಸ್ ತರಲು ಯತ್ನಿಸಬಹುದೇ ಹೊರತು ಅದು ನಿಶ್ಚಿತವಾಗಿ ವಾಪಸ್ ಬರುತ್ತದೆಂದು ಖಾತ್ರಿ ಇಲ್ಲ. ನೀವು ಹಣ ಕಳುಹಿಸಿರುವ ವ್ಯಕ್ತಿಯನ್ನು ಸಂಪರ್ಕಿಸಿ ಅವರಿಗೆ ಮನವಿ ಮಾಡಿ ಹಣ ವಾಪಸ್ ಪಡೆದುಕೊಳ್ಳುವ ಒಂದು ಮಾರ್ಗ ಇದೆ.

ಇದನ್ನೂ ಓದಿNPS Rule Change: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ; ನ್ಯಾಷನಲ್ ಪೆನ್ಷನ್ ಸ್ಕೀಮ್ ಸದಸ್ಯರಿಗೆ ಖುಷಿ ಸುದ್ದಿಯಾ?

ತಪ್ಪಾಗಿ ಹಣ ವರ್ಗಾವಣೆ ಆಗುವ ಬಗ್ಗೆ ಆರ್​ಬಿಐ ಏನು ಹೇಳುತ್ತೆ?

ಬ್ಯಾಂಕ್​ನ ಬ್ರ್ಯಾಂಚ್​ನಿಂದಾಗಲೀ ಅಥವಾ ಡಿಜಿಟಲ್ ಅಗಲೀ ಖಾತೆಯಿಂದ ಖಾತೆಗೆ ಹಣ ವರ್ಗಾವಣೆ ಮಾಡುವಾಗ ಫಲಾನುಭವಿಯ (ಸ್ವೀಕೃತ ಖಾತೆದಾರ) ಹೆಸರನ್ನು ಕಡ್ಡಾಯವಾಗಿ ಬರೆಯಬೇಕು. ಆದರೆ, ಖಾತೆ ನಂಬರ್​ಗೆ ಹೆಚ್ಚು ಅವಲಂಬನೆ ಇರುತ್ತದೆ. ಫಲಾನುಭವಿಯ ಹೆಸರನ್ನು ಅವರ ಬ್ಯಾಂಕ್ ಒಂದು ಮಾನದಂಡವಾಗಿ ಪರಿಗಣಿಸಬಹುದು ಅಷ್ಟೇ ಎಂದು ಅರ್​ಬಿಐನ ನಿಯಮ ಹೇಳುತ್ತದೆ.

ಹೀಗಾಗಿ, ವಹಿವಾಟಿನಲ್ಲಿ ದಿಕ್ಕೆಟ್ಟ ನಿಮ್ಮ ಹಣಕ್ಕೆ ನೀವೇ ಜವಾಬ್ದಾರರಾಗಿರುತ್ತೀರಿ. ಬ್ಯಾಂಕುಗಳು ನಿಮ್ಮ ಹಣ ವಾಪಸ್ ಕೊಡಿಸಲು ಪ್ರಯತ್ನ ಪಡಬಹುದಾದರೂ ನಿಮಗೆ ಅವು ಖಾತ್ರಿ ಕೊಡಲಾರವು ಎಂಬುದು ಇಲ್ಲಿ ಮುಖ್ಯ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ