NPS Rule Change: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ; ನ್ಯಾಷನಲ್ ಪೆನ್ಷನ್ ಸ್ಕೀಮ್ ಸದಸ್ಯರಿಗೆ ಖುಷಿ ಸುದ್ದಿಯಾ?

National Pension System: ನ್ಯಾಷನಲ್ ಪೆನ್ಷನ್ ಸ್ಕೀಮ್​ನ ಚಂದಾದಾರರು ನಿವೃತ್ತಿ ಬಳಿಕ ತಮಗೆ ಬೇಕಾದ ಮೊತ್ತವನ್ನು ನಿಯಮಿತವಾಗಿ ಹಿಂಪಡೆಯುವ ಅವಕಾಶ ನೀಡುವಂತಹ ನಿಯಮವೊಂದನ್ನು ಸೇರಿಸಲಾಗುತ್ತಿದೆಯಂತೆ.

NPS Rule Change: ಪಿಂಚಣಿ ಯೋಜನೆಯಲ್ಲಿ ಮಹತ್ವದ ಬದಲಾವಣೆ ಸಾಧ್ಯತೆ; ನ್ಯಾಷನಲ್ ಪೆನ್ಷನ್ ಸ್ಕೀಮ್ ಸದಸ್ಯರಿಗೆ ಖುಷಿ ಸುದ್ದಿಯಾ?
ನ್ಯಾಷನಲ್ ಪೆನ್ಷನ್ ಸಿಸ್ಟಂ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 22, 2023 | 3:49 PM

ನಿವೃತ್ತಿ ನಂತರ ಪಿಂಚಣಿ ರೂಪದಲ್ಲಿ ಲಭ್ಯ ಇರುವ ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ (NPS- National Pension System) ಮಹತ್ವದ ಬದಲಾವಣೆಯೊಂದು ಆಗಲಿದೆ ಎಂಬಂತಹ ಸುದ್ದಿ ಇದೆ. ಎನ್​ಪಿಎಸ್ ಖಾತೆದಾರರು ನಿವೃತ್ತಿ ನಂತರ ಹಂತ ಹಂತವಾಗಿ ಹಣವನ್ನು ಹಿಂಪಡೆಯುವ ಅವಕಾಶ ನೀಡುವಂತೆ ನಿಯಮ ಬದಲಾವಣೆ ಆಗುವ ಸಾಧ್ಯತೆ ಇದೆ. ಮುಂದಿನ ಕ್ವಾರ್ಟರ್​ನೊಳಗೆಯೇ, ಅಂದರೆ ಸೆಪ್ಟಂಬರ್ ತಿಂಗಳೊಳಗೆಯೇ ಈ ಬದಲಾವಣೆ ಆಗಬಹುದು. ಪಿಂಚಣಿ ನಿಧಿಗಳ ಪ್ರಾಧಿಕಾರ ಪಿಎಫ್​ಆರ್​ಡಿಎ ಸಂಸ್ಥೆಯ ಛೇರ್ಮನ್ ದೀಪಕ್ ಮೊಹಾಂತಿ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಮಾತನಾಡುತ್ತಾ ಈ ವಿಚಾರವನ್ನು ತಿಳಿಸಿದ್ದಾರೆ. ಈ ಸ್ಕೀಮ್​ನಲ್ಲಿ ಸಿಸ್ಟಮ್ಯಾಟಿಕ್ ಲಂಪ್ಸಮ್ ವಿತ್​ಡ್ರಾಯಲ್ (SLW- Systematic Lumpsum Withdrawal) ಅಂಶವನ್ನು ಸೇರಿಸುವ ಆಲೋಚನೆ ಪ್ರಾಧಿಕಾರದ್ದಾಗಿದೆ. ಇದೇನಾದರೂ ಜಾರಿಯಾದರೆ ನ್ಯಾಷನಲ್ ಪೆನ್ಷನ್ ಸಿಸ್ಟಂ ಹೆಚ್ಚು ಜನಸ್ನೇಹಿ ಮತ್ತು ಜನಪ್ರಿಯವಾಗಬಹುದು.

ಎಸ್​ಎಲ್​ಡಬ್ಲ್ಯೂ ಅವಕಾಶ ಇದ್ದರೆ ನ್ಯಾಷನಲ್ ಪೆನ್ಷನ್ ಸಿಸ್ಟಂ ಸದಸ್ಯರು 60 ವರ್ಷ ದಾಟಿದ ಬಳಿಕ ತಮ್ಮ ನಿಧಿಯಲ್ಲಿರುವ ಹಣವನ್ನು ಹಂತ ಹಂತವಾಗಿ ಹಿಂಪಡೆಯಬಹುದು. ತಿಂಗಳಿಗೊಮ್ಮೆಯೋ, ಮೂರು ತಿಂಗಳಿಗೊಮ್ಮೆಯೋ, ಆರು ತಿಂಗಳಿಗೊಮ್ಮೆಯೋ ಅಥವಾ ವರ್ಷಕ್ಕೊಮ್ಮೆಯೋ ಎನ್​ಪಿಎಸ್ ಖಾತೆಯಲ್ಲಿನ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. 60 ವರ್ಷದಿಂದ 75 ವರ್ಷ ವಯಸ್ಸಿನವರೆಗೆ ಈ ಅವಕಾಶ ಕೊಡಲಾಗುತ್ತದೆ. ಈ ಕಾಲಾವಧಿಯಲ್ಲೂ ಎನ್​ಪಿಎಸ್ ನಿಧಿಯಲ್ಲಿರುವ ಹಣಕ್ಕೆ ಯಥಾಪ್ರಕಾರ ಲಾಭಾಂಶ ಜಮೆ ಆಗುವುದು ಮುಂದುವರಿಯುತ್ತಿರುತ್ತದೆ.

ಇದನ್ನೂ ಓದಿAmrit Kalash Deposit Scheme: ಎಸ್​ಬಿಐ ಅಮೃತ್ ಕಳಶ್ ಡೆಪಾಸಿಟ್ ಸ್ಕೀಮ್; ಇನ್ನೊಂದು ವಾರ ಮಾತ್ರ ಅವಕಾಶ

ಏನಿದು ನ್ಯಾಷನಲ್ ಪೆನ್ಷನ್ ಸಿಸ್ಟಂ?

ಇದು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯನ್ನು ಪಿಎಫ್​ಆರ್​ಡಿಎ ನಿಭಾಯಿಸುತ್ತದೆ. ನಿವೃತ್ತಿ ನಂತರದ ಜೀವನ ಭದ್ರತೆಗೆಂದು ರೂಪಿಸಲಾದ ಸ್ಕೀಮ್ ಇದು. ಷೇರುಪೇಟೆ ಜೋಡಿತವಾದ ಈ ಯೋಜನೆ ಇಪಿಎಫ್, ಪಿಪಿಎಫ್ ಇತ್ಯಾದಿ ರಿಟೈರ್ಮೆಂಟ್ ಸ್ಕೀಮ್​ಗಿಂತ ಹೆಚ್ಚು ಲಾಭದಾಯಕ ಎನಿಸಿದೆ.

ನ್ಯಾಷನಲ್ ಪೆನ್ಷನ್ ಸಿಸ್ಟಂನಲ್ಲಿ ಎಸ್​ಎಲ್​ಡಬ್ಲ್ಯೂ ಅವಕಾಶವನ್ನು ಸಕ್ರಿಯಗೊಳಿಸಲು ಸದಸ್ಯರು ತಮ್ಮ ಹಣ ವಿತ್​ಡ್ರಾ ಮಾಡುವ ಅವಧಿಯನ್ನು ತಿಳಿಸಿ ಮನವಿ ಮಾಡಿಕೊಳ್ಳಬೇಕು. ಆದರೆ, ಗಮನಿಸಬೇಕಾದ ಸಂಗತಿ ಎಂದರೆ ಒಮ್ಮೆ ನೀವು ಎಸ್​ಎಲ್​ಡಬ್ಲ್ಯೂ ಆಪ್ಷನ್ ಸಕ್ರಿಯಗೊಳಿಸಿದಲ್ಲಿ ಟಯರ್ 1 ಖಾತೆಗೆ ಹಣ ಜಮೆ ಮಾಡಲು ಸಾಧ್ಯವಾಗುವುದಿಲ್ಲ.

ಇದನ್ನೂ ಓದಿEPF Claim: ಉದ್ಯೋಗಿ ಸತ್ತಾಗ ಅವರ ಇಪಿಎಫ್ ಹಣಕ್ಕೆ ನಾಮಿನಿ ಕ್ಲೈಮ್ ಮಾಡುವುದು ಹೇಗೆ?

ಎನ್​ಪಿಎಸ್​ನಲ್ಲಿ ಎರಡು ರೀತಿಯ ಖಾತೆಗಳಿರುತ್ತವೆ. ಟಯರ್ 1 ಮತ್ತು ಟಯರ್ 2 ಖಾತೆಗಳಿರುತ್ತವೆ. ಟಯರ್ 1 ಖಾತೆಯಲ್ಲಿ ಹಣ ಹಿಂಪಡೆಯುವುದಕ್ಕೆ ನಿರ್ಬಂಧಗಳಿರುತ್ತವೆ. ಟಯರ್ 2 ಖಾತೆಯಲ್ಲಿ ಫಂಡ್​ಗಳನ್ನು ಹಿಂಪಡೆಯುವ ಹಲವು ಅವಕಾಶಗಳಿರುತ್ತವೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್